Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಶರೀರದ ಮೇಲಿನ 'ಮಚ್ಚೆ'- ವ್ಯಕ್ತಿತ್ವದ ವಿವರ ನೀಡುವ ಕನ್ನಡಿ!
ಪ್ರತಿಯೊಬ್ಬರ ಶರೀರದ ಮೇಲೂ ಕೆಲವಾದರೂ ಮಚ್ಚೆಗಳಿರುತ್ತವೆ. ಕೆಲವು ಹುಟ್ಟಿನಿಂದಲೇ ಬಂದಿದ್ದರೆ (ಇವುಗಳಿಗೆ ಹುಟ್ಟುಮಚ್ಚೆ ಎಂದು ಕರೆಯುತ್ತಾರೆ) ಉಳಿದವು ಹುಟ್ಟಿದಾಗ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿದ್ದು ದೊಡ್ಡವರಾಗುತ್ತಿದ್ದಂತೆ ಗಾತ್ರದಲ್ಲಿ ಬೆಳೆದು ಬಳಿಕ ಕಾಣಿಸಿಕೊಳ್ಳುತ್ತವೆ.
ಕೆಲವು ಸೌಂದರ್ಯವನ್ನು ಹೆಚ್ಚಿಸಿದರೆ ಕೆಲವು ಇರಬಾರದ ಸ್ಥಳದಲ್ಲಿದ್ದು ಸೌಂದರ್ಯವನ್ನು ಕುಂದಿಸುತ್ತದೆ. ಹೆಚ್ಚಿನವರಿಗೆ ಮುಖದ ಮೇಲಿನ ಮಚ್ಚೆಯ ಬಗ್ಗೆ ದ್ವೇಷವಿದ್ದು ಇದನ್ನು ನಿವಾರಿಸಲು ಹೆಚ್ಚಿನ ಅಸ್ಥೆ ಹೊಂದಿರುತ್ತಾರೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?
ಆದರೆ ಹಿರಿಯರು ಮಚ್ಚೆಗಳಿದ್ದರೆ ಒಳ್ಳೆಯದು ಮತ್ತು ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತವೆ ಎಂದು ನಂಬಿದ್ದಾರೆ. ಹಲವು ಜ್ಯೋತಿಷಿಗಳೂ ಮಚ್ಚೆಯ ಸ್ಥಾನವನ್ನು ನೋಡಿ ಹಲವು ವಿಷಯಗಳನ್ನು ತಿಳಿಸಬಲ್ಲರು.
ಕೆಲವರು ಈ ಮಚ್ಚೆಗಳು ಸಮೃದ್ಧಿ ಮತ್ತು ಐಶ್ವರ್ಯದ ಪ್ರತೀಕವೆಂದೂ ನಂಬುತ್ತಾರೆ. ಮಚ್ಚೆಗಳು ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದೂ ನಂಬಲಾಗಿದೆ. ನಿಜವಾಗಿಯೂ ಮಚ್ಚೆಗಳು ನಮ್ಮ ವ್ಯಕ್ತಿತ್ವದ ವಿವರ ನೀಡುವ ಕನ್ನಡಿಗಳೇ? ಹಾಗಾದರೆ ಮುಂದೆ ಓದಿ.... ದೇಹದ ಮೇಲಿನ ಮಚ್ಚೆ, ನಿಮ್ಮ ಜಾತಕವನ್ನೇ ಬಿಚ್ಚಿಡುತ್ತದೆ!

ಬಲಭಾಗದ ಕೆನ್ನಯ ಮೇಲಿದ್ದರೆ
ಒಂದು ವೇಳೆ ಬಲಗೆನ್ನೆಯ ಮೇಲೆ ಸ್ಪಷ್ಟ, ವೃತ್ತಾಕಾರದ ಮತ್ತು ಗಾಢವರ್ಣದ ಮಚ್ಚೆ ಇದ್ದರೆ ಈ ವ್ಯಕ್ತಿ ತನ್ನ ವಿವಾಹದ ಬಳಿಕ ಶ್ರೀಮಂತನಾಗುವ/ಳಾಗುವ ಯೋಗವಿದೆ.

ತುಟಿಗಳ ಮೇಲಿದ್ದರೆ
ಒಂದು ವೇಳೆ ಹುಟ್ಟುಮಚ್ಚೆ ತುಟಿಯ ಮೇಲಿದ್ದರೆ ಇವರು ತಮ್ಮ ಜೀವನದಲ್ಲಿ ಸದಾ ಸಮೃದ್ಧಿ ಮತ್ತು ಧನವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಾಹಿತಿಗಳ ಪ್ರಕಾರ ಮೇಲ್ತುಟಿಯಲ್ಲಿ ಮಚ್ಚೆ ಇದ್ದವರು ಸಾಮಾನ್ಯವಾಗಿ ಹಠಮಾರಿಗಳಾಗಿರುತ್ತಾರೆ.

ಮೂಗಿನ ಮೇಲಿದ್ದರೆ
ಮೂಗಿನ ಮೇಲೆ, ಅದರಲ್ಲೂ ವಿಶೇಷವಾಗಿ ಮೂಗಿನ ಬಲಹೊಳ್ಳೆಯ ಮೇಲೆ ಮಚ್ಚೆ ಇದ್ದವರು ಜೀವನದಲ್ಲಿ ನಿಯಮಿತ ಏಳ್ಗೆ ಪಡೆಯುತ್ತಾ ಶ್ರೀಮಂತರಾಗುತ್ತಾರೆ. ಅಲ್ಲದೇ ಇವರು ಜಗತ್ತನ್ನೇ ಸುತ್ತುತ್ತಾರೆ. ವಿವಾಹದ ಬಳಿಕ ಇವರು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ.

ಪಾದದಲ್ಲಿ ಮಚ್ಚೆ ಇದ್ದರೆ
ಪಾದದಲ್ಲಿ ಮಚ್ಚೆ ಇದ್ದವರು ಸದಾ ಸಂಚರಿಸುತ್ತಿದ್ದು ವಿಶ್ವ ಪರ್ಯಟಕರಾಗಿರುತ್ತಾರೆ. ಈ ಸಂಚಾರ ಕಾರ್ಯನಿಮಿತ್ತವಲ್ಲದೇ ಹವ್ಯಾಸಿ ಮತ್ತು ರಜಾದಿನಗಳ ಸುತ್ತಾಟವೇ ಆಗಿರುತ್ತದೆ.

ಸೊಂಟದ ಮೇಲಿದ್ದರೆ
ಸೊಂಟದಲ್ಲಿ ಮಚ್ಚೆ ಇದ್ದವರು ಅತಿ ಅದೃಷ್ಟವಂತರು ಎಂದು ನಂಬಲಾಗಿದೆ. ಇದು ಸಮೃದ್ಧಿ ಮತ್ತು ಐಶ್ವರ್ಯದ ಸಂಕೇತವಾಗಿದೆ. ಆದರೆ ಐಶ್ವರ್ಯವಿದ್ದರೂ ಇವರು ಜೀವನದಲ್ಲಿ ತೃಪ್ತಿ ಸಂತುಷ್ಠಿಗಳಿಂದ ವಂಚಿತರಾಗಿರುತ್ತಾರೆ.

ಹಣೆಯ ಮಧ್ಯಭಾಗದಲ್ಲಿ
ಹಣೆಯ ಮಧ್ಯೆ ಅಂದರೆ ಶಿವನ ಮೂರನೆಯ ಕಣ್ಣು ಇರುವಲ್ಲಿ ಮಚ್ಚೆ ಇದ್ದರೆ ಇವರು ಜೀವನದಲ್ಲಿ ಬೇಗನೇ ಸ್ಥಿತವಂತರಾಗಿ ಹೆಚ್ಚಿನ ಪ್ರಯಾಣದ ಭಾಗ್ಯವನ್ನು ಪಡೆದಿರುತ್ತಾರೆ. ಇವರಿಗೆ ಸದಾ ಅಗತ್ಯಕ್ಕೂ ಹೆಚ್ಚಿನ ಆದಾಯವಿರುತ್ತದೆ.

ಬಲ ಹಸ್ತದ ಮೇಲಿದ್ದರೆ
ಒಂದು ವೇಳೆ ಹಸ್ತದಲ್ಲಿದ್ದರೆ, ಅದರಲ್ಲೂ ಹಸ್ತದ ಮೇಲ್ಭಾಗದಲ್ಲಿ (ಬೆರಳುಗಳ ಬುಡದಲ್ಲಿ) ಇದ್ದರೆ ಇವರಿಗೂ ಸದಾ ಧನದ ಆದಾಯ ನಿಯಮಿತವಾಗಿದ್ದು ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಹುಡುಕಿಕೊಂಡು ಬರುತ್ತದೆ.

ಗಲ್ಲದ ಮೇಲಿದ್ದರೆ
ಗಲ್ಲದ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಹೆಚ್ಚು ಜನಸಂಪರ್ಕ ಹೊಂದಿದ್ದು ಹೆಚ್ಚಾಗಿ ಧನವಂತರೂ ಆಗಿರುತ್ತಾರೆ. ಇವರ ಪರಿಚಯದ ವ್ಯಾಪ್ತಿಯಲ್ಲಿ ಕೆಲವೇ ನಂಬಿಕಸ್ತ ಜನರಿದ್ದು ಇವರಿಗಾಗಿ ಪ್ರಾಣಕ್ಕೆ ಪ್ರಾಣ ಕೊಡಲೂ ಸಿದ್ಧರಿರುತ್ತಾರೆ.



Click it and Unblock the Notifications