ಭಾರತದ ಇತಿಹಾಸ ಕಂಡ ಅತೀ ಬುದ್ಧಿವಂತ ವ್ಯಕ್ತಿಗಳು

By manu

ಭಾರತವೆಂದರೆ ಬಗೆದಷ್ಟೂ ಮುಗಿಯದ ಮಾಹಿತಿಗಳ ಗಣಿ. ಭಾರತದ ಬಗ್ಗೆ ಬರೆಯ ಹೊರಟರೆ ದಿನಕ್ಕೊಂದು ವಿಷಯ ತೆಗೆದುಕೊಂಡರೂ ಇಡಿಯ ಜೀವಮಾನದಲ್ಲಿಯೂ ಪೂರೈಸಲಾಗದಷ್ಟು ವಿಷಯಗಳಿವೆ. ಇದರಲ್ಲಿ ಬಹುತೇಕ ವಿಷಯಗಳು ಕುತೂಹಲಕಾರಿ, ಆಶ್ಚರ್ಯಕಾರಿ, ಪ್ರಶಂಸಾಕಾರಿ, ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯೂ ಆಗಿವೆ. ಭಾರತದ ಖ್ಯಾತ ವ್ಯಕ್ತಿಗಳ ಬಗ್ಗೆ ಪಟ್ಟಿಮಾಡಹೊರಟರೆ ಜಗತ್ತೇ ತಲೆಬಾಗಿಸುವಂತಹ, ಮೆಚ್ಚುವಂತಹ ಇವರ ಕೆಲಸ ಮತ್ತು ಬುದ್ಧಿಮತ್ತೆ ಆಶ್ಚರ್ಯಗೊಳಿಸುತ್ತದೆ. ಅರಳುವ ಕಮಲದಂತೆ ಮತ್ತೆ ಯಶಸ್ಸಿನ ಮೆಟ್ಟಿಲೇರಿದ ಧೀರರು...

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎಂದ ಮಹಾತ್ಮಾ ಗಾಂಧಿಯವರನ್ನು ಅಂದು ಇಡಿಯ ಜಗತ್ತು ಹುಬ್ಬೇರಿಸಿ ನೋಡಿತ್ತು. ಆದರೆ ಇದೇ ಮಾತುಗಳು ದೇಶಕ್ಕೆ ಸ್ವಾತಂತ್ರ್ಯ ನೀಡಲು ಪ್ರೇರಣೆಯಾದಾಗ ಮಾತ್ರ ಇಡಿಯ ಜಗತ್ತು ತಲೆಬಾಗಿತು. ಇವರಿಗೆ ವಿರುದ್ಧವಾಗಿ ಹಲವಾರು ಶಕ್ತಿಗಳು ಕೆಲಸಮಾಡಿದರೂ ಇವರ ದೃಢಸಂಕಲ್ಪ ಎಂದೂ ಬದಲಾಗದೇ ದಿಟ್ಟ ಹೆಜ್ಜೆಯಿಟ್ಟು ಗುರಿಯತ್ತ ಸಾಗಿದ ಪರಿ ಆದರ್ಶಪ್ರಾಯವಾಗಿದೆ. ಬನ್ನಿ, ಭಾರತ ಕಂಡ ಇಂತಹ ಆರು ಬುದ್ಧಿವಂತ ವ್ಯಕ್ತಿಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ:

ಚಾಣಕ್ಯ

ಚಾಣಕ್ಯ

ಭಾರತದ ಬುದ್ಧಿವಂತ ಎಂದಾಕ್ಷಣ ಹೆಚ್ಚಿನವರ ಮನದಲ್ಲಿ ಮೂಡುವ ಮೊದಲ ಚಿತ್ರವೆಂದರೆ ಚಾಣಕ್ಯನದ್ದು. ಆ ಕಾಲದಲ್ಲಿಯೇ ತನ್ನ ವಿಚಾರಗಳಿಂದ ಖ್ಯಾತನಾಗಿದ್ದ ಚಾಣಕ್ಯ ಭಾರತ ಕಂಡ ಓರ್ವ ಅಪ್ರತಿಮ ಅರ್ಥಶಾಸ್ತ್ರಜ್ಞ. ಚಾಣಕ್ಯನ ನೀತಿಗಳು ಎಂದೇ ಜನಜನಿತವಾಗಿರುವ ಈತನ ಮಾತುಗಳು ಸರ್ವಕಾಲಕ್ಕೂ ಸಲ್ಲುವಂತಹದ್ದಾಗಿವೆ. ಚಂದ್ರಗುಪ್ತ ಮೌರ್ಯನ ಖ್ಯಾತಿಯಲ್ಲಿ ಚಾಣಕ್ಯನ ವಿಚಾರಧಾರೆ ಇರುವ ಕಾರಣವೇ ಚಂದ್ರಗುಪ್ತ ಮೌರ್ಯನ ಹೆಸರೂ ಇತಿಹಾಸದಲ್ಲಿ ಪ್ರಖರಗೊಂಡಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Image courtesy-buzz.iloveindia.com

ಚಾಣಕ್ಯ

ಚಾಣಕ್ಯ

ಮೌರ್ಯ ಸಾಮ್ರಾಜ್ಯ ಕಟ್ಟಲು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಚಂದ್ರಗುಪ್ತನನ್ನು ಗಾದಿಯ ಮೇಲೆ ಕೂರಿಸಲು ಚಾಣಕ್ಯ ಹೆಣೆದ ತಂತ್ರ ಮತ್ತು ದೂರದೃಷ್ಟಿ ಎಂದಿಗೂ ಸಲ್ಲುವಂತಹದ್ದಾಗಿದೆ. ಚಂದ್ರಗುಪ್ತನ ಕಾಲದಲ್ಲಿ ಆತನ ಸಾಮ್ರಾಜ್ಯ ನಾಲ್ಕೂ ಕಡೆ ಆಗಾಧವಾಗಿ ವಿಸ್ತರಿಸಲು ಚಾಣಕ್ಯಕ ಬುದ್ಧಿಮತ್ತೆಯೇ ಪ್ರಮುಖ ಕಾರಣವಾಗಿದೆ.

courtesy- wikipedia.org

ಅಕ್ಬರ್

ಅಕ್ಬರ್

ಅಸಾಮಾನ್ಯ ಅಕ್ಬರ್ ("Akbar the Great") ಎಂಬ ಹೆಸರಿನಿಂದಲೇ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದ ಮೊಗಲ್ ಸಾಮ್ರಾಟ ಅಕ್ಬರ್ ತನ್ನ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಅತ್ಯಂತ ಬಲಶಾಲಿಯಾಗಿದ್ದ ಚಕ್ರವರ್ತಿಯಾಗಿದ್ದ. ತನ್ನ ಸಾವಿನವರೆಗೂ ಆಡಳಿತ ನಡೆಸಲು ಆತನ ಬುದ್ಧಿಮತ್ತೆಯೇ ಕಾರಣ. ಬೆಳಗ್ಗಿನ ಕಿರಣ ಇಂದಿನ ದಿನ ಹೇಗಿರಬಹುದು ಎಂದು ತಿಳಿಸುತ್ತವಂತೆ, ಅಂತೆಯೇ ಅಕ್ಬರ್‌ನ ಗುಣಗಳನ್ನು ಚಿಕ್ಕವಯಸ್ಸಿನಲ್ಲಿಯೇ ಕಾಣಬಹುದಿತ್ತು. ಆಳ್ವಿಕೆಯಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದ ಮೊಗಲರಲ್ಲಿಯೇ ಅಕ್ಬರ್ ಅತ್ಯಂತ ಕುಶಲ ಆಡಳಿತಗಾರ ಎಂದು ಹೆಸರಾಗಿದ್ದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

Courtesy -clickmyviews.com

ಅಕ್ಬರ್

ಅಕ್ಬರ್

ತನ್ನ ಜನತೆಯೊಂದಿಗೆ ಅಂದಿನ ಕಾಲದಲ್ಲಿ ಸಮಾನವಾಗಿ ಬೆರೆಯುತ್ತಾ, ಜನರ ಕಷ್ಟಸುಖಗಳನ್ನು ಅರಿಯುತ್ತಾ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ಈತ ಮಹಾನ್ ಆಗಿ ಹೊಮ್ಮಲು ಆತನ ನಿಷ್ಕಲ್ಮಶ ಹೃದಯವೇ ಕಾರಣ. ಅಂದರೆ ತನ್ನ ಪ್ರಜೆಗಳು ಯಾರೇ ಆಗಿರಲಿ, ಧರ್ಮ ನಿರಪೇಕ್ಷನಾಗಿ ಆತ ನೀಡುವ ನ್ಯಾಯ ಅಂದಿನ ಹಿಂದೂ ಹಾಗೂ ಮುಸಲ್ಮಾನರಲ್ಲಿ ಸಮಾನವಾಗಿದ್ದ ಕಾರಣ ಎಲ್ಲರಿಂದ ಗೌರವಿಸಲ್ಪಡುತ್ತಿದ್ದ. ಭಾರತದ ಇತಿಹಾಸದಲ್ಲಿಯೇ ಅಕ್ಬರನ ಕಾಳದ ಆಳ್ವಿಕೆ ಅತ್ಯಂತ ಸುಭಿಕ್ಷ ಕಾಲ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.

listdose.com

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ

ಸ್ವಾಭಿಮನಕ್ಕೆ ಇನ್ನೊಂದು ಹೆಸರು ಲಾಲ್ ಬಹಾದುರ್ ಶಾಸ್ತ್ರಿ. ಹೆಚ್ಚಿನವರು ಶಾಸ್ತ್ರಿ ಎಂಬುದು ಅವರ ಕುಟುಂಬ ಹೆಸರು ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ತಪ್ಪು. ಇದೊಂದು ಪದವಿಯೇ ಹೊರತು ಅವರ ಕುಟುಂಬ ಹೆಸರಲ್ಲ. ಲಾಲ್ ಬಹಾದುರ್ ಶ್ರೀವಾಸ್ತವ ಎಂಬದೇ ಅವರ ನೈಜ ಹೆಸರು. ಆದರೆ ಜಾತಿಸೂಚಕವಾದ ಈ ಹೆಸರು ತಮಗೆ ಇರಬಾರದು ಎಂದು ಹೈಸ್ಕೂಲಿನಲ್ಲಿದ್ದಾಗಲೇ ಅವರು ತೆಗೆಸಿಬಿಟ್ಟಿದ್ದರು. ಕೇವಲ ಐದಡಿಯ ಈ ವಾಮನ ಮೂರ್ತಿ ಭಾರತದ ಪ್ರಧಾನಿಯ ಹುದ್ದೆ ಪಡೆದಾಗ ಅವರು ಎದುರಾಳಿ ದೇಶಗಳಿಗೆ ನೀಡಿದ್ದ ಮಾತಿನ ಚಾಟಿಗಳು ಮಾತ್ರ ಅವರನ್ನು ದೈತ್ಯ ಸ್ಥಾನಕ್ಕೇರಿಸಿತು. ಅಪ್ಪಟ ಗಾಂಧಿವಾದಿಯಾಗಿದ್ದು ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದ ಇವರ ರಾಜಕೀಯ ಕೌಶಲ್ಯಗಳು ಇಂದಿಗೂ ಪ್ರಶಂಸನೀಯವಾಗಿದೆ.

ಲಾಲ್ ಬಹಾದುರ್ ಶಾಸ್ತ್ರಿ

ಲಾಲ್ ಬಹಾದುರ್ ಶಾಸ್ತ್ರಿ

ಇವರ ಸಲಹೆಯಂತೆ ಮುಂದುವರೆದ ಕಾರಣ ಲಭ್ಯವಾದ ಗೌರವ ಮತ್ತು ಯಶಸ್ಸುಗಳು ಮಾತ್ರ ಪ್ರಥಮ ಪ್ರಧಾನಿ ನೆಹರೂರವರಿಗೇ ಸಲ್ಲುತ್ತಿವೆ. ಶಾಸ್ತ್ರಿಯವರ ಕೌಶಲತೆ ಒರೆ ಹಚ್ಚಿದ್ದು ಭಾರತ ಪಾಕಿಸ್ತಾನದ ಸಮರದಲ್ಲಿ ಚೀನಾ ಸಮಯಸಾಧಕತನ ತೋರಿಸಿದಾಗ. ಭಾರತೀಯ ಸೈನ್ಯ ಅತ್ತ ಪಾಕಿಸ್ತಾನದ ಲಾಹೋರ್ ನತ್ತ ತೆರಳುತ್ತಿದ್ದರೆ ಚೀನಾ ಸುಳ್ಳು ಸುಳ್ಳೇ ಭಾರತೀಯ ಸೈನಿಕರು ಗಡಿಯೊಳಗೆ ಬಂದಿದ್ದಾರೆ ಯುದ್ದಕ್ಕೆ ತಯಾರಾಗಿ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದು. ಆಗ ಲಾಲ್ ಬಹಾದುರ್ ರವರು ದಿಟ್ಟತನದಿಂದ ಭಾರತೀಯರಾರೂ ಅಪ್ಪಣೆಯಿಲ್ಲದೇ ಚೀನಾ ಗಡಿ ಪ್ರವೇಶಿಸುವುದಿಲ್ಲ, ಯುದ್ದ ಮಾಡಲೇ ಬೇಕೆಂದಿದ್ದರೆ ಬನ್ನಿ, ನಾವು ತಯಾರಾಗಿದ್ದೇವೆ ಎಂಬ ಸಂದೇಶ ನೀಡಿದರು. ಒಂದು ವೇಳೆ ಚೀನಾ ಗಡಿ ಪ್ರವೇಶಿಸಿದ್ದರೆ ತೊಂದರೆ ಖಾತರಿಯಿತ್ತು. ಆದರೆ ಶಾಸ್ತ್ರಿಯವರ ದಿಟ್ಟ ಉತ್ತರ ಚೀನಾವನ್ನು ದಂಗುಬಡಿಸಿ ತೆಪ್ಪಗಿರಿಸಿತು.

ಅಂಬೇಡ್ಕರ್

ಅಂಬೇಡ್ಕರ್

ಭಾರತ ಕಂಡ ಅದ್ಬುತ ವ್ಯಕ್ತಿ ಎಂದರೆ ಅಂಬೇಡ್ಕರ್. ಭಾರತದ ಸಂವಿಧಾನದ ರೂವಾರಿಯಾಗಿರುವ ಇವರು ಖ್ಯಾತ ವಕೀಲರೂ, ರಾಜಕಾರಣಿಯೂ, ಸಮಾಜ ಸೇವಕರೂ ಆಗಿದ್ದರು. ಮಿಗಿಲಾಗಿ ಇವರು ದಲಿತ ಆರಾಧ್ಯದೈವವಾಗಿದ್ದಾರೆ. ಅವರು ಮಂಡಿಸಿದ ಭಾರತ ಸಂವಿಧಾನ ಇಂದಿಗೂ ಪ್ರಶ್ನಾತೀತವಾಗಿದ್ದು ಎಲ್ಲರೂ ಒಪ್ಪಿರುವಂತಹದ್ದಾಗಿದೆ.

ಅಂಬೇಡ್ಕರ್

ಅಂಬೇಡ್ಕರ್

ದಲಿತ ಚಳುವಳಿಯ ನಾಯಕರಾಗಿ ಇವರ ಕೊಡುಗೆ ಮಹತ್ವದ್ದಾಗಿದೆ. ಇದರ ಕಾರಣ ಒಂದು ಕಾಲದಲ್ಲಿ ದಲಿತರನ್ನು ಕಾಣುತ್ತಿದ್ದ ರೀತಿ ಬದಲಾಗಿ ದಲಿತರನ್ನೂ ಸಮಾನಸ್ಕಂದರನ್ನಾಗಿ ನೋಡಲು ಸಾಧ್ಯವಾಯಿತು. ಈ ಕೊಡುಗೆ ಅವರಿಗೆ ಅರ್ಹವಾದ "ಭಾರತ ರತ್ನ" ಪ್ರಶಸ್ತಿ ಪಡೆಯಲು ನೆರವಾಯಿತು.

ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧಿ

ರಾಷ್ಟ್ರಪಿತ ಎಂದೇ ಜನಜನಿತರಾಗಿರುವ ಮಹಾತ್ಮಾ ಗಾಂಧಿಯವರು ಇಂದಿಗೂ ಆದರ್ಶಪ್ರಾಯರಾಗಿದ್ದರೆ ಅದು ಅವರ ವಿಚಾರಗಳಿಂದಾಗಿ. ಕೇವಲ ಭಾರತವಲ, ಇಡಿಯ ವಿಶ್ವದ ಜನತೆ ಮೆಚ್ಚುವ ಮತ್ತು ಗೌರವ ಸೂಚಿಸುವ ವ್ಯಕ್ತಿಯಾಗಿದ್ದಾರೆ. ಒಂದು ಕಾಲದಲ್ಲಿ ಪ್ರಬಲ ಬ್ರಿಟಿಷರ ಬಂದೂಕಿನ ಎದುರು ನಿಃಶಸ್ತ್ರರಾದ ಭಾರತೀಯರಿಗೆ ಸ್ವಾತಂತ್ರ್ಯ ದೊರಕುವ ಸಂಭವವೇ ಇಲ್ಲ ಎಂದಿದ್ದಾಗ ಬಂದೂಕಿಗೆ ಎದುರಾಗಿ ಅವರಲ್ಲಿದ್ದ ಅಸ್ತ್ರವಾದರೂ ಯಾವುವು? ಅಹಿಂಸೆ ಮತ್ತು ಸತ್ಯಾಗ್ರಹ.

ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧಿ

ಭಾರತದಾದ್ಯಂತ ಲಕ್ಷಾಂತರ ಜನರನ್ನು ಅಹಿಂಸೆಯ ಶಸ್ತ್ರ ನೀಡಿ, ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷರಿಗೇ ಚಳಿಹುಟ್ಟಿಸಿದ ಇವರ ಪರಿ ಇತಿಹಾಸ ಹಿಂದೆಂದೂ ಕಂಡರಿಯದ ವಿಷಯವಾಗಿತ್ತು. ಆದರೆ ಮಹಾತ್ಮಾ ಗಾಂಧಿಯವರನ್ನು ನಂಬಿ ಸತ್ಯಾಗ್ರಹದಲ್ಲಿ ಧುಮುಕಿದ ಸ್ವತಂತ್ರ ಸೇನಾನಿಗಳ ದಿಟ್ಟ ಕ್ರಮದ ಪರಿಣಾಮವಾಗಿ ಇಂದು ನಾವು ಸ್ವಾತಂತ್ರ್ಯದ ಸವಿ ಉಣ್ಣುತ್ತಿದ್ದೇವೆ.

ನರೇಂದ್ರ ಮೋದಿ

ನರೇಂದ್ರ ಮೋದಿ

ಪ್ರಸ್ತುತ ದಿನದಲ್ಲಿ ಅತಿ ಬುದ್ದಿವಂತರ ಪಟ್ಟಿಯಲ್ಲಿ ಸೇರಿಸಬಹುದಾದ ಹೆಸರೆಂದರೆ ನರೇಂದ್ರ ದಾಮೋದರ ಮೋದಿ. ಗುಜರಾತ್ ನ ಮುಖ್ಯಮಂತ್ರಿಯಾಗಿ ರಾಜ್ಯ ಕಂಡ ಸುಭಿಕ್ಷತೆ ಒಂದೆರಡಲ್ಲ. ಆದರೆ ಗೋಧ್ರಾ ಕಾಂಡದಲ್ಲಿ ಬಂದ ಅವರ ಹೆಸರು ಈ ಖ್ಯಾತಿಯನ್ನು ಕಮರಿಸಲು ಸಾಧ್ಯವಾಗಲಿಲ್ಲ. ಒಟ್ಟು ಹದಿನೈದು ವರ್ಷಗಳ ಕಾಲ ಗುಜರಾತ್ ನ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಮೋದಿ ಹತ್ತು ಹಲವು ಪ್ರಗತಿ ಮತ್ತು ಬೆಳವಣಿಗೆಗಳಿಗೆ ಕಾರಣರಾದರು.

ನರೇಂದ್ರ ಮೋದಿ

ನರೇಂದ್ರ ಮೋದಿ

ಈ ಪ್ರಗತಿ ದೇಶಕ್ಕೂ ಅಗತ್ಯವಿದೆ ಎಂದು ಕಂಡ ಭಾರತೀಯರು ಕಳೆದ ಚುನಾವಣೆಯಲ್ಲಿ ಅತ್ಯಮೋಘ ಮತಗಳಿಂದ ಗೆಲ್ಲಿಸಿ ಪ್ರಧಾನಿಯಾಗಲು ನೆರವಾದರು. ಈ ಜಯದಲ್ಲಿ ಸುಮಾರು ಐದು ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಧೂಳೀಪಟವಾಗಿದ್ದುದು ಇತಿಹಾಸವಾಗಿದೆ. ಸ್ವತಃ ಪೊರಕೆ ಹಿಡಿದು ನಡೆಸಿದ ಸ್ವಚ್ಛತಾ ಅಭಿಯಾನದ ಕಾರಣ ದೇಶದೆಲ್ಲಡೆ ಜನರು ಪೊರಕೆ ಹಿಡಿದು ಸ್ವಚ್ಛಗೊಳಿಸಲು ನೆರವಾದುದು ಹಿಂದಿನ ಯಾವುದೇ ಪ್ರಧಾನಿ ಸಾಧಿಸದ ವಿಕ್ರಮವಾಗಿದೆ.


X
Desktop Bottom Promotion