Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂತರ್ಜಾತಿ ವಿವಾಹವಾದ ಖ್ಯಾತ ಬಾಲಿವುಡ್ ತಾರೆಯರು
ಜಾತಿಪದ್ಧತಿ ಭಾರತದಲ್ಲಿ ಬಹಳ ಹಿಂದಿನಿಂದ ನಡೆದುಬಂದ ಸಂಪ್ರದಾಯ. ಅದರಲ್ಲೂ ಭಾರತದಲ್ಲಿದ್ದಷ್ಟು ಜಾತಿ ವೈವಿಧ್ಯ ಜಗತ್ತಿನ ಇನ್ನೆಲ್ಲೂ ಇರಲಾರದು. ಆದರೆ ಅಂತರ್ಜಾತೀಯ ವಿವಾಹವನ್ನು ಹಿಂದಿನಿಂದಲೂ ಭಾರತೀಯರು ತಮ್ಮ ಸಂಸ್ಕೃತಿಗೆ ವಿರುದ್ಧ ಎಂದೇ ನಂಬಿಕೊಂಡು ಬಂದಿದ್ದಾರೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕಂಡುಬಂದರೂ ಇವುಗಳನ್ನು ಸಮಾಜ ಒಪ್ಪಿಕೊಳ್ಳುವುದು ಮಾತ್ರ ಬಹಳ ವಿರಳ. ಅದರಲ್ಲೂ ಖ್ಯಾತನಾಮರು ಅಂತರ್ಜಾತೀಯ ವಿವಾಹವಾದರೆ ಇಡಿಯ ದೇಶವೇ ಆಡಿಕೊಳ್ಳುತ್ತದೆ, ಇದು ಅವರ ವೃತ್ತಿಪರ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!
ದಶಕಗಳ ಹಿಂದೆ ಇದು ಕದ್ದುಮುಚ್ಚಿ ನಡೆಯುವ ವ್ಯವಹಾರವಾಗಿತ್ತು. ಅದರಲ್ಲಿ ಕೆಲವರು ಮಾತ್ರ ದಿಟ್ಟತನ ತೋರಿ ಅಂತರ್ಜಾತೀಯ ವಿವಾಹವನ್ನು ಬಹಿರಂಗಪಡಿಸಿದರು. ಇದು ಇಂದಿನ ಪೀಳಿಗೆಗೆ ಒಂದು ಬುನಾದಿಯಾಯಿತು. ಪರಿಣಾಮವಾಗಿ ಇಂದು ಹಲವು ಖ್ಯಾತ ಬಾಲಿವುಡ್ ನಟ ನಟಿಯರು ತಾವು ಮೆಚ್ಚಿದ ವ್ಯಕ್ತಿಗಳನ್ನೇ ಅಂತರ್ಜಾತೀಯ ವಿವಾಹವಾಗಿ ಸುಖಮಯ ಜೀವನ ನಡೆಸುತ್ತಿದ್ದಾರೆ. ಬನ್ನಿ, ಈ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಜಿನೀಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್
ದಕ್ಷಿಣ ಭಾರತದಿಂದ ಹಿಂದಿ ಚಿತ್ರರಂಗಕ್ಕೆ ಲಗ್ಗೆಯಿಟ್ಟ ಸುರಸುಂದರಿಯರಲ್ಲಿ ಒಬ್ಬರಾದ ಜಿನೀಲಿಯಾ ಡಿಸೋಜಾರವರು ನಟ ಹಾಗೂ ಮಹಾರಾಷ್ಟ್ರದ ಪೂರ್ವ ಮುಖ್ಯ ಮಂತ್ರಿ ದಿವಂಗತ ವಿಲಾಸರಾವ್ ದೇಶ್ಮುಖ್ ರವರ ಪುತ್ರ ರಿತೇಶ್ ದೇಶ್ಮುಖ್ ರವರನ್ನು 3ನೇ ಫೆಬ್ರವರಿ, 2012 ರಂದು ವಿವಾಹವಾದರು.

ಜಿನೀಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್
ಇವರ ವಿವಾಹ ಅಂದು ಮರಾಠಿ ಸಂಪ್ರದಾಯದ ಪ್ರಕಾರ ನಡೆದರೆ ಮರುದಿನ ಚರ್ಚಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾದರು. 25ನೇ ನವೆಂಬರ್ ನಂದು ಅವರ ಪುತ್ರ ರಿಯಾನ್ ರಿತೇಶ್ ದೇಶ್ಮುಖ್ ನ ಜನನವಾಯಿತು.

ಅರ್ಜುನ್ ರಾಂಪಾಲ್ ಮತ್ತು ಮೆಹೆರ್ ಜೆಸಿಯಾ
1986ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತೆ ಮೆಹೆರ್ ಜೆಸಿಯಾ ರೂಪದರ್ಶಿಯಾದರೆ ಅರ್ಜುನ್ ರಾಂಪಾಲ್ ಬಾಲಿವುಡ್ ನಟರಾಗಿದ್ದಾರೆ. ಪರಸ್ಪರ ಆಕರ್ಷಿತರಾದ ಇಬ್ಬರೂ ಬಳಿಕ ವಿವಾಹವಾಗಲು ನಿರ್ಧರಿಸಿ 1998 ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಇಂದು ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. (ಮಾಹಿಕಾ ಮತ್ತು ಮಾಯಿರಾ). ಅರ್ಜುನ್ ಓರ್ವ ಸಿಖ್ ಸಂಪ್ರದಾಯಸ್ಥ ಕುಟುಂಬದಿಂದ ಬಂದವರಾಗಿದ್ದರೆ ಜೆಸಿಯಾ ಪಾರ್ಸಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಅರ್ಜುನ್ ರಾಂಪಾಲ್ ಮತ್ತು ಮೆಹೆರ್ ಜೆಸಿಯಾ
ಆದರೆ ಬಳಿಕ ಉಂಟಾದ ಮನಸ್ತಾಪದಿಂದ ಇತ್ತೀಚೆಗೆ ಅಂದರೆ 2015ರ ಕೊನೆಯ ತಿಂಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ಹೊಂದಿಕೊಳ್ಳಲು ಆರು ತಿಂಗಳ ಸಮಯಾವಕಾಶ ನೀಡಿದೆ. ಮುಂದಿನ ಕ್ರಮ ಏನಾಗುತ್ತದೆ ಎಂದು ಮುಂದಿನ ಕಾಲವೇ ಹೇಳಬೇಕಾಗಿದೆ.

ಅರ್ಬಾಝ್ ಖಾನ್ ಮತ್ತು ಮಲಾಯ್ಕಾ ಅರೋರಾ
ಅರ್ಬಾಝ್ ಖಾನ್ ಅಂತರ್ಜಾತೀಯ ವಿವಾಹದ ಹಿರಿಯರಿರುವ ಕುಟುಂಬಕ್ಕೆ ಸೇರಿದ್ದಾರೆ. ಬಾಲಿವುಡ್ ನಲ್ಲಿ ಖಾನ್ ಕುಟುಂಬ ಒಂದು ಪ್ರತಿಷ್ಠಿತ ಮತ್ತು ಪ್ರಭಾವಶಾಲಿಯಾಗಿದ್ದು ಈ ಕುಟುಂದ ಹಿರಿಯರಾದ ಸಲೀಂ ಖಾನ್, ಅಂದರೆ ಅರ್ಬಾಝ್ ಖಾನ್ ರವರ ತಂದೆ ಮುಸ್ಲಿಂ ಧರ್ಮೀಯರಾಗಿದ್ದು ಇವರಿಗೆ ಸುಶೀಲಾ ಚಾರಕ್ ಮತ್ತು ಹೆಲೆನ್ (ಹಿಂದಿ ಚಿತ್ರದ ಕ್ಯಾಬರೆ ನರ್ತಕಿ) ಎಂಬ ಇಬ್ಬರು ಪತ್ನಿಯರಿದ್ದಾರೆ. ಅರ್ಜಾಝ್ ಬಾಲಿವುಡ್ ನ ಪತ್ನಿ ಅತಿ ಜನಪ್ರಿಯ ಹಾಡು "ಛೈಂಯಾ ಛೈಂಯಾ" ದಲ್ಲಿ ತಾಳ ಹಾಕಿದ ಮಲಾಯ್ಕಾ ಅರೋರಾ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. 1998ರಲ್ಲಿ ವಿವಾಹವಾದ ಈ ಜೋಡಿಗೆ 2002ರಲ್ಲಿ ಅರ್ಹಾನ್ ಎಂಬ ಪುತ್ರ ಹುಟ್ಟಿದ್ದಾನೆ. ಈ ವೈವಿಧ್ಯತೆಯ ಕುಟುಂಬದಲ್ಲಿ ಸೊಸೆಯಾಗಿ ಬರಲು ಮಲಾಯ್ಕಾ ಪುಣ್ಯ ಮಾಡಿರಬೇಕು ಎಂದು ನಿಕಟವರ್ತಿಗಳು ತಿಳಿಸುತ್ತಾರೆ.

ಹೃತಿಕ್ ರೋಷನ್ ಮತ್ತು ಸುಜಾನ್ ಖಾನ್
ಹಿಂದಿ ಚಿತ್ರನಟ, ನಿರ್ದೇಶಕ ರಾಕೇಶ್ ರೋಷನ್ ರವರ ಪುತ್ರ ಹೃತಿಕ್ ರೋಷನ್ ಬಾಲಿವುಡ್ ನ ಅತಿ ಜನಪ್ರಿಯ ನಟ ಹಾಗೂ ಅದ್ಭುತ ನರ್ತಕರಾಗಿದ್ದಾರೆ. ತಮ್ಮ ಬಾಲ್ಯದ ಗೆಳತಿ, ನಟ ಸಂಜಯ್ ಖಾನ್ ರವರ ಪುತ್ರಿ ಸುಜಾನ್ ಖಾನ್ ರನ್ನು 20 ಡಿಸೆಂಬರ್ 2000ರಂದು ವಿವಾಹವಾದರು. ಹೃತಿಕ್ ಅಪ್ಪಟ ಪಂಜಾಬಿ ಕುಟುಂಬಕ್ಕೆ ಸೇರಿದರೆ ಸುಜಾನ್ ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಹೃತಿಕ್ ರೋಷನ್ ಮತ್ತು ಸುಜಾನ್ ಖಾನ್
ಬಾಲ್ಯದ ಗೆಳೆತನ ವಿವಾಹದಲ್ಲಿ ಮುಂದುವರೆದ ಬಳಿಕ ಈ ಜೋಡಿಗೆ ಹ್ರೇಹಾನ್ ಮತ್ತು ಹೃದಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ವಿಪರ್ಯಾಸವೆಂದರೆ ಈ ಜೋಡಿ ಹದಿನೇಳು ವರ್ಷಗಳಿಂದ ಒಡನಾಟದಲಿದ್ದು ಕಡೆಗೆ 1 ನವೆಂಬರ್ 2014ರಂದು ಬಾಂದ್ರಾ ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದಾರೆ.

ಆಮಿರ್ ಖಾನ್ ಮತ್ತು ಕಿರಣ್ ರಾವ್
ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾದ ಹಿಂದಿ ಚಿತ್ರನಟ ಆಮಿರ್ ಖಾನ್ ತಮ್ಮ ಚೊಚ್ಚಲ ಚಿತ್ರ 'ಕಯಾಮತ್ ಸೇ ಕಯಾಮತ್ ತಕ್' ಚಿತ್ರದ ಮೂಲಕ ಪಾದಾರ್ಪಣೆಗೂ ಮುನ್ನವೇ ರೀನಾ ದತ್ತಾರೊಂದಿಗೆ ವಿವಾಹವಾಗಿದ್ದರು.ಆದರೆ ಇವರು 2002ರಲ್ಲಿ ವಿಚ್ಛೇದನ ಪಡೆದರು. ಬಳಿಕ ಲಗಾನ್ ಚಿತ್ರದಲ್ಲಿ ಸಹನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಿರಣ್ ರಾವ್ ರವರನ್ನು ಕಂಡು ಮೋಹಿತರಾಗಿ 2011ರಲ್ಲಿ ವಿವಾಹ
ಬಂಧನಕ್ಕೊಳಗಾದರು.

ಕರೀನಾ ಕಪೂರ್, ಸೈಫ್ ಅಲಿ ಖಾನ್
ಬೇಬೋ ಎಂದೇ ಹಿಂದಿ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಕರೀನಾ ಕಪೂರ್ ರವರು ಖ್ಯಾತ ಪಂಜಾಬಿ ಕುಟುಂಬವಾದ ಕಪೂರ್ ಕುಟುಂಬದಲ್ಲಿ ಹುಟ್ಟಿದವರಾಗಿದ್ದಾರೆ. ಅತ್ತ ಸೈಫ್ ಆಲಿ ಖಾನ್ ಬಂಗಾಳಿಯ ಜನಪ್ರಿಯ ಮತ್ತು ಹಿಂದಿಯ ಖ್ಯಾತ ನಟಿ ಶರ್ಮಿಳಾ ಟಾಗೋರ್ ಮತ್ತು ಭಾರತದ ಕ್ರಿಕೆಟ್ ನಾಯಕ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ ರವರ ಪುತ್ರರಾಗಿದ್ದಾರೆ. ಸೈಫ್ ರವರು ಇದಕ್ಕೂ ಮುನ್ನ ಅಮೃತಾ ಸಿಂಗ್ ರೊಂದಿಗೆ ವಿವಾಹವಾಗಿ 2004ರಲ್ಲಿ ವಿಚ್ಚೇದನ ಪಡೆದಿದ್ದು ಈಗ ಕರೀನಾರೊಂದಿಗೆ ಅಂತರ್ಜಾತೀಯ ವಿವಾಹವಾಗುವುದು ಕರೀನಾ ಕುಟುಂಬಕ್ಕೆ ಇಷ್ಟವೇ ಇರಲಿಲ್ಲ.

ಕರೀನಾ ಕಪೂರ್, ಸೈಫ್ ಅಲಿ ಖಾನ್
ಇವರನ್ನು ಓಲೈಸಲು ತಮಗೆ ಸಾಧ್ಯವಾಗಲಿಲ್ಲ ಎಂದು ಸ್ವತಃ ಕರೀನಾರವರೇ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಅಕ್ಕ, ಹಿಂದಿ ನಟಿ ಕರಿಶ್ಮಾ ಕಪೂರ್ ರವರೇ ತಾಯಿಯನ್ನು ಓಲೈಸಿ ಈ ಜೋಡಿಯನ್ನು ಬೆಸೆಯಲು ಕಾರಣರಾದರು. ಬಳಿಕ 16ನೇ ಅಕ್ಟೋಬರ್ 2014ನಂದು ಏಳು ವರ್ಷಗಳ ಒಡನಾಟಕ್ಕೆ ವಿವಾಹದ ರೂಪ ನೀಡಿದರು.

ಶಾರುಖ್ ಖಾನ್ ಮತ್ತು ಗೌರಿ ಛಿಬ್ಬರ್
ಶಾರುಖ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರೆ ಗೌರಿಯವರು ಹಿಂದೂ ಬ್ರಾಹ್ಮಣ ಪಂಥಕ್ಕೆ ಸೇರಿದವರಾಗಿದ್ದಾರೆ. ಅಪ್ಪಟ ಸಸ್ಯಾಹಾರಿ ಹಾಗೂ ಮನೆಯಲ್ಲಿಯೇ ಮಂದಿರವೊಂದನ್ನು ಹೊಂದಿರುವ ಕುಟುಂಬದಿಂದ ಬಂದಿರುವ ಗೌರಿ ಶಾರುಖ್ ರನ್ನು ವಿವಾಹವಾಗಲು ಮುಂದಡಿಯಿಟ್ಟಾದ ಅವರ ತಂದೆ ಕರ್ನಲ್ ರಮೇಶ್ ಚಂದ್ರ ಛಿಬ್ಬರ್ ರವರಿಗೆ ಶಾರುಖ್ ರವರ ಬಗ್ಗೆ ಅಪಾರವಾದ ಅನುಮಾನಗಳಿದ್ದವು.

ಶಾರುಖ್ ಖಾನ್ ಮತ್ತು ಗೌರಿ ಛಿಬ್ಬರ್
ಜೀವನದಲ್ಲಿ ಸ್ಥಿರತೆ, ವೃತ್ತಿಜೀವನದಲ್ಲಿ ಖಾತರಿ ಒಂದೂ ಇಲ್ಲದ ಶಾರುಖ್ ರ ಬಗ್ಗೆ ಅವರಿಗೆ ಭರವಸೆ ಇಲ್ಲದ ಕಾರಣ ತಮ್ಮ ಮಗಳನ್ನು ನೀಡಲು ಅವರು ಒಪ್ಪಿರಲಿಲ್ಲ. ಆದರೆ ಇಬ್ಬರೂ ತಮ್ಮ ತಮ್ಮ ಪೋಷಕರನ್ನು ಓಲೈಸಿ 25ನೇ ಅಕ್ಟೋಬರ್ 1991ರಂದು ವಿವಾಹವಾದರು. ಈ ದಂಪತಿಗಳಿಗೆ ಇಂದು ಮೂವರು ಮಕ್ಕಳಿದ್ದಾರೆ. (ಅಬ್ರಾಮ್, ಆರ್ಯನ್ ಮತ್ತು ಸುಹಾನಾ). ದಾಂಪತ್ಯ ಜೀವನದ ರಜತಮಹೋತ್ಸವದ ಸಂಭ್ರಮದಲ್ಲಿರುವ ಈ ಜೋಡಿ ಇಂದಿಗೂ ತರುಣರಿಗೆ ಆದರ್ಶಪ್ರಾಯರಾಗಿದ್ದಾರೆ.

ಅಮೃತಾ ಅರೋರಾ ಮತ್ತು ಶಕೀಲ್ ಲಡಾಕ್
2009ರಲ್ಲಿ ಪತಿಪತ್ನಿಯರಾದ ಈ ಜೋಡಿ ಅಂತರ್ಜಾತೀಯ ಬಾಂಧವ್ಯಕ್ಕೆ ಒಂದು ಮಾದರಿಯಾಗಿದೆ. ಇವರ ಮದುವೆ ಮೊದಲು ಮಸೀದಿಯಲ್ಲಿ ನಿಖಾ ಮೂಲಕ ನಡೆಯಿತು, ಬಳಿಕ ಚರ್ಚ್ ನಲ್ಲಿಯೂ ಕ್ರೈಸ್ತ ಪದ್ದತಿಯ ಪ್ರಕಾರ ವಿವಾಹವಾಯಿತು. ಏಕೆಂದರೆ ಅಮೃತಾ ಅರೋರಾರವರು ಪಂಜಾಬಿ ಮತ್ತು ಕ್ರೈಸ್ತ ದಂಪತಿಗಳಿಗೆ ಹುಟ್ಟಿದ ಮಗಳಾಗಿದ್ದರೆ ಶಕೀಲ್ ಅಪ್ಪಟ ಮುಸ್ಲಿಂ ಸಂಪ್ರದಾಯದ ಮನೆತನದಲ್ಲಿ ಹುಟ್ಟಿದವರು. ಇವರ ಪ್ರಣಯದ ಕಾರಣ ಅಮೃತಾ ಗರ್ಭವತಿಯಾದ ಕಾರಣ ಅನಿವಾರ್ಯವಾಗಿ ವಿವಾಹವಾಗಬೇಕಾಯಿತು ಎಂದು ಗುಸುಗುಸು ಸಹಾ ಇದ್ದರೂ ಇವರು ಇದಕ್ಕೊಂದೂ ಸೊಪ್ಪು ಹಾಕದೇ ದಿಟ್ಟತನದಿಂದ ಈ ಟೀಕೆಗಳನ್ನೆಲ್ಲಾ ಎದುರಿಸಿ ಸುಖಜೀವನ ನಡೆಸುತ್ತಿದ್ದಾರೆ.

ಫರ್ಹಾ ಖಾನ್ ಮತ್ತು ಶಿರೀಷ್ ಕುಂದರ್
ಹಿಂದೂ ಮುಸ್ಲಿಂ ಬಾಂಧವ್ಯದ ಇನ್ನೊಂದು ಉದಾಹರಣೆಯಾದ ಈ ಜೋಡಿ ಚಿತ್ರವೊಂದರ ಚಿತ್ರೀಕರಣದ ಸಮಯದಲ್ಲಿ ಪರಸ್ಪರ ಭೇಟಿಯಾಗಿದ್ದರು. ಭೇಟಿ ಪರಿಚಯಕ್ಕೆ, ಪರಿಚಯ ಪ್ರೀತಿಗೆ, ಪ್ರೀತಿ ವಿವಾಹಕ್ಕೆ ಪರಿವರ್ತಿತವಾಗುವುದರಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. 9ನೇ ಡಿಸೆಂಬರ್ 2004ರಂದು ಮದುವೆಯಾದ ಈ ಜೋಡಿಯನ್ನು ಭಗವಂತನೂ ಹರಸಿ ತ್ರಿವಳಿ ಮಕ್ಕಳನ್ನು ದಯಪಾಲಿಸಿದ್ದಾನೆ. (ಒಂದು ಗಂಡು,ಎರಡು ಹೆಣ್ಣು).

ಫರ್ಹಾ ಖಾನ್ ಮತ್ತು ಶಿರೀಷ್ ಕುಂದರ್
ಫರ್ಹಾರವರು ಮೈ ಹೂಂ ನಾ ಎಂಬ ಹಿಂದಿ ಚಿತ್ರದ ನಿರ್ದೇಶಕಿಯಾಗಿದ್ದರೆ ಶಿರೀಷ್ ರವರು ಅದೇ ಚಿತ್ರದ ಸಂಕಲನಕಾರರಾಗಿದ್ದರು. ಇನ್ನೊಂದು ವಿಶೇಷವೆಂದರೆ ಫರ್ಹಾರಿಗಿಂತಲೂ ಶಿರೀಷ್ ಎಂಟು ವರ್ಷ ವಯಸ್ಸಿನಲ್ಲಿ ಚಿಕ್ಕವರು.



Click it and Unblock the Notifications