Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಅಪರಾಧವೆಸಗಿ, ಜೈಲು ಸೇರಿದ ಬಾಲಿವುಡ್ ಸಿನಿತಾರೆಯರು
ಅಪರಾಧಜಗತ್ತಿನೊಂದಿಗೆ ಬಾಲಿವುಡ್ ನಂಟು ಬಹಳ ಹಿಂದಿನಿಂದಲೇ ನಡೆದುಬಂದಿದೆ. ಬಾಲಿವುಡ್‌ನಲ್ಲಿರುವ ಪ್ರಮುಖರು ಈ ವಿಷಯವನ್ನು ಅಲ್ಲಗಳೆಯುತ್ತಿದ್ದರೂ ಹಲವು ಪೋಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ನಡೆಸಿದ ಕಾರ್ಯಾಚರಣೆಯ ಮೂಲಕ ಈ ವಿಷಯ ಸತ್ಯ ಎಂದು ಸಾಬೀತುಪಡಿಸುತ್ತಾರೆ. ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!
ಹಲವು ಅಪರಾಧಗಳಲ್ಲಿ ಬಾಲಿವುಡ್ ನಟರ ಭಾಗೀದಾರಿಕೆ ಸಾಬೀತಾದ ಬಳಿಕ ಈ ಬಾಲಿವುಡ್ ನಟರು ಹಾಗೂ ಇತರ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದವರು ಜೈಲು ಸೇರಿದ್ದಾರೆ. ಈ ಪಟ್ಟಿಯಲ್ಲಿರುವ ಪ್ರಮುಖ ಸೆಲೆಬ್ರಿಟಿಗಳ ಬಗ್ಗೆ ಕೆಲವು ಮಾಹಿತಿಯನ್ನು ನೀಡಲಾಗಿದೆ ಮುಂದೆ ಓದಿ..

ಅಂಕಿತ್ ತಿವಾರಿ
ಆಶಿಖಿ 2 ಚಿತ್ರದ ಹಾಡುಗಳನ್ನು ಹಾಡಿ ಗಾನಪ್ರಿಯರ ಹೃದಯವನ್ನು ಗೆದ್ದಿದ್ದ ಈ ಅದ್ಭುತ ಯುವ ಹಾಡುಗಾರ ಅಂಕಿತ್ ತಿವಾರಿಯವರನ್ನು 8ನೇ ಮೇ 2015 ರಂದು ತಮ್ಮ ಗೆಳತಿಯನ್ನೇ ಬಲಾತ್ಕರಿಸಿದ ಆಪಾದನೆಯ ಮೇಲೆ ಬಂಧನಕ್ಕೊಳ ಪಡಿಸಲಾಯಿತು.

ಸೊನಾಲಿ ಬೇಂದ್ರೆ
ಧಾರ್ಮಿಕ ಕಾರಣಗಳಿಗಾಗಿ ನಟಿ ಸೋನಾಲಿ ಬೇಂದ್ರೆಯವರು ಜೈಲು ಸೇರಬೇಕಾಯಿತು. ಸಾಮಾನ್ಯವಾಗಿ ನಟಿಯರು ರೂಪದರ್ಶಿಯರೂ ಆಗಿದ್ದು ವಿವಿಧ ಮ್ಯಾಗಜಿನ್ ಗಳಿಗೆ ತಮ್ಮ ಭಾವಚಿತ್ರವನ್ನು ನೀಡುತ್ತಾರೆ. ಇಂತಹ ಒಂದು ಮ್ಯಾಗಜಿನ್ ಗೆ ನೀಡಿದ ಭಂಗಿ ಕೆಲವು ಧರ್ಮಗಳಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೊನಾಲಿ ಬೇಂದ್ರೆ
ಈ ದೂರಿನ ಅನ್ವಯ ಅವರನ್ನು ಕೆಲವುಸಮಯದ ವರೆಗೆ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದರು. ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!

ಜಾನ್ ಅಬ್ರಹಾಂ
ರೂಪದರ್ಶಿಯಾಗಿ ತಮ್ಮ ವೃತ್ತಿಬದುಕನ್ನು ಆರಂಭಿಸಿದ ಜಾನ್ ತಮ್ಮ ಅಡ್ಡಾದಿಡ್ಡಿ ವಾಹನ ಚಾಲನೆಗಾಗಿ ಬಂಧಿಸಲ್ಪಟ್ಟು ಜೈಲು ಸೇರಿದ್ದರು. ಅಲ್ಲದೇ 2006ರಲ್ಲಿ ಮುಂಬೈಯಲ್ಲಿ ತಮ್ಮ ಬೈಕ್ ಸವಾರಿ ಮಾಡುತ್ತಿದ್ದ ವೇಳೆ ಇಬ್ಬರಿಗೆ ಢಿಕ್ಕಿ ಹೊಡೆದು ಗಾಯಗೊಳಿಸಿದ ಆರೋಪವನ್ನೂ ಎದುರಿಸಿದ್ದರು.

ಶೈನಿ ಅಹುಜಾ
ತಮ್ಮ ಮನೆಯ ಪರಿಚಾರಿಕೆಯ ಮೇಲೆಯೇ ಬಲಾತ್ಕಾರ ಮಾಡಿದ ಆರೋಪದ ಮೇಲೆ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ ನಟ ಶೈನಿ ಅಹುಜಾ. ತಮ್ಮ ಮೇಲೆ ಬಲಾತ್ಕಾರವಾಗಿದೆ ಎಂದು ಹೇಳಿದ ಪರಿಚಾರಿಕೆಯ ಮಾತುಗಳನ್ನೇ ಪರಿಗಣಿಸಿ ಇವರಿಗೆ ಏಳುವರ್ಷ ಶಿಕ್ಷೆ ನೀಡಲಾಯಿತು. ಅದರೆ ಇದೊಂದು ಸಹಮತದ ಸಂಬಂಧವಾಗಿತ್ತೆಂದು ಶೈನಿ ಹೇಳಿದರೂ ನ್ಯಾಯಾಲಯ ಪರಿಚಾರಿಕೆಯ ಸಾಕ್ಷ್ಯವನ್ನೇ ಪರಿಗಣಿಸಿತು. ಬಳಿಕ ಪರಿಚಾರಿಕೆ ತಮ್ಮ ಮಾತನ್ನು ಬದಲಿಸಿ ಸಹಮತ ಇತ್ತೆಂದು ತಿಳಿಸಿದ ಬಳಿಕ ಪ್ರಕರಣ ತಿರುಗಿದ್ದು ಈಗ ಪರಿಚಾರಿಕೆಯ ಮೇಲೆಯೇ ಸುಳ್ಳು ಸಾಕ್ಷ್ಯ ಒದಗಿಸಿದ ಆರೋಪ ಹೊರಿಸಲಾಗಿದೆ. ವಿಚಾರಣೆ ಇನ್ನೂ ನಡೆಯುತ್ತಿದೆ.

ಮೋನಿಕಾ ಬೇಡಿ
ಖ್ಯಾತ ಭೂಗತ ಜಗತ್ತಿನ ದೊರೆ ಅಬು ಸಾಲೆಮ್ ನೊಂದಿಗೆ ನಿಕಟ ಸಂಬಂಧ ಹೊಂದಿರುವ ಮೋನಿಕಾ ಬೇಡಿ ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಜೈಲು ಸೇರಿದ್ದರು.

ಮೋನಿಕಾ ಬೇಡಿ
ಅಲ್ಲದೆ ಇವರಿಬ್ಬರನ್ನೂ ಪೋರ್ಚುಗಲ್ ನಲ್ಲಿ ಬಂಧಿಸಲಾಗಿತ್ತು. 2013ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಮೋನಿಕಾ ಈಗ ಟೀವಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಸೈಫ್ ಅಲಿ ಖಾನ್
ಛೋಟೆ ನವಾಬ್ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಹಾಗೂ ನಾದಿನಿ ಕರಿಶ್ಮಾ ಕಪೂರ್ ರೊಂಗಿದೆ ಒಮ್ಮೆ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಲು ಹೋಗಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೈಫ್ ಅಲಿ ಖಾನ್
ಈ ಸ್ಥಳದಲ್ಲಿ ಕ್ಷುಲ್ಲುಕ ಕಾರಣಕ್ಕೆ ಅಲ್ಲಿದ್ದ ಚಿಕ್ಕ ಹುಡುಗನೊಂದಿಗೆ ಮಾತಿಗೆ ಮಾತು ಬೆಳೆದು ಸೈಫ್ ಬಾಲಕನ ಮುಖಕ್ಕೆ ಗುದ್ದಿದ ಪರಿಣಾಮವಾಗಿ ಆತನ ಮೂಗಿನ ಮೂಳೆ ಮುರಿದಿತ್ತು. ಈ ಪ್ರಕರಣವನ್ನು ಕಣ್ಣಾರೆ ಕಂಡ ಸಾಕ್ಷಿಗಳು ಸತ್ಯ ನುಡಿದುದರ ಪರಿಣಾಮವಾಗಿ ಸೈಫ್ ಬಂಧನಕ್ಕೊಳಗಾಗಿ ಕೆಲಕಾಲ ಕಂಬಿ ಎಣಿಸಬೇಕಾಯಿತು.

ಸಂಜಯ್ ದತ್ತ್
ಒಂದಕ್ಕಿಂತ ಹೆಚ್ಚು ಬಾರಿ ಜೈಲು ಸೇರಿದವರೆಂದರೆ ನಟ ಸಂಜಯ್ ದತ್ತ್. ಅಕ್ರಮವಾಗಿ ಪರವಾನಿಗೆ ಇಲ್ಲದ ಮಾರಕಾಸ್ತ್ರಗಳನ್ನು ಹೊಂದಿದ್ದರೆಂಬ ಕಾರಣಕ್ಕೆ ಅವರನ್ನು ಪುಣೆಯ ಯೆರವಾಡಾ ಜೈಲಿಗೆ ಸೇರಿಸಲಾಗಿತ್ತು.

ಸಂಜಯ್ ದತ್ತ್
ಈ ಜೈಲಿನಿಂದ ಹೊರಬಂದರೂ ಬಳಿಕ ಮುಂಬೈ ಸ್ಪೋಟದಲ್ಲಿ ಉಪಯೋಗಿಸಲಾಗಿದ್ದ ಮಾರಕಾಸ್ತ್ರಗಳನ್ನು ಭಾರತದೊಳಕ್ಕೆ ತರಲು ಸಂಜಯ್ ನೆರವಾಗಿದ್ದರು ಎಂಬ ಮಾಹಿತಿ ಖಚಿತವಾದ ಬಳಿಕ ಇವರನ್ನು ಮತ್ತೊಮ್ಮೆ ಜೈಲಿಗೆ ಸೇರಿಸಲಾಗಿದೆ.

ಸಲ್ಮಾನ್ ಖಾನ್
ನ್ಯಾಯಾಲಯದಲ್ಲಿ ಒಂದಕ್ಕಿಂತ ಹೆಚ್ಚು ಪ್ರಕರಣಗಳಿಗೆ ಬೇಕಾಗಿರುವ ನಟ ಎಂದರೆ ಸಲ್ಮಾನ್ ಖಾನ್. ರಾಜಸ್ತಾನದಲ್ಲಿ ಕೆಲವು ಕೃಷ್ಣಮೃಗಗಳನ್ನು ಬೇಟೆಯಾಡಿದ ಕಾರಣಕ್ಕೆ ಅವರ ಮೇಲೆ ಮೊದಲ ಮೊಕದ್ದಮೆ ದಾಖಲಾಯಿತು. 2002ರಲ್ಲಿ ತಮ್ಮ ಭಾರೀ ವಾಹನವನ್ನು ಪಾನಮತ್ತರಾಗಿ ಫುಟ್ ಪಾಥ್ ಮೇಲೆ ಚಲಾಯಿಸಿ ಓರ್ವನ ಸಾವು ಹಾಗೂ ಮೂವರಿಗೆ ಮಾರಣಾಂತಿಕವಾಗಿ ಗಾಯಗೊಳಿಸಿದ ಇವರಿಗೆ ಐದು ವರ್ಷ ಸಜೆ ವಿಧಿಸಲಾಗಿತ್ತು.

ಸಲ್ಮಾನ್ ಖಾನ್
ಆದರೆ ಅವರ ಚಾಲಕ ತಾನೇ ವಾಹನ ಚಲಾಯಿಸುತ್ತಿದ್ದೆ ಎಂದು ಹೇಳಿದ ಕಾರಣ ಬಂಧನ ತಪ್ಪಿದ್ದರೂ ವಿಚಾರಣೆ ನಡೆಯುತ್ತಿತ್ತು. ಅಂತಿಮವಾಗಿ 2015 ಡಿಸೆಂಬರ್ ನಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇವರು ತಪ್ಪಿತಸ್ಥರಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿತು.



Click it and Unblock the Notifications