For Quick Alerts
ALLOW NOTIFICATIONS  
For Daily Alerts

ನಮ್ಮನ್ನು ಬೆಚ್ಚಿ ಬೀಳಿಸುವ ಕೆಲವೊಂದು ನಿಗೂಢ ಸತ್ಯಗಳು!

By Hemanth
|

ಭೂಮಿ ಮೇಲೆ ಹಲವಾರು ಘಟನೆಗಳು ನಡೆಯುತ್ತಾ ಇರುತ್ತದೆ. ಕೆಲವೊಂದರ ಬಗ್ಗೆ ನಮಗೆ ತಿಳಿದರೂ ಮತ್ತೆ ಕೆಲವು ತಿಳಿಯುವುದಿಲ್ಲ. ವಾಸ್ತವದಲ್ಲಿ ಕೆಲವು ವಿದ್ಯಮಾನಗಳು ಹೌದೆಂದು ಅನಿಸಿದರೂ ಅದರ ಹಿಂದಿರುವ ಸತ್ಯವನ್ನು ಅರಿಯಲು ಬಯಸುತ್ತೇವೆ. ಅಚ್ಚರಿಯ ಸಂಗತಿ- ಇವೆಲ್ಲಾ ಆಹಾರ ಸೇವಿಸುವಾಗ ನಡೆದ ಘಟನೆ!

ಈ ಲೇಖನದಲ್ಲಿನ ಕೆಲವೊಂದು ವಾಸ್ತವಗಳ ಬಗ್ಗೆ ತಿಳಿದರೆ ನೀವು ನಿಬ್ಬೆರಗಾಗುತ್ತೀರಿ. ಈ ವಾಸ್ತವಗಳು ಶೇ.100ರಷ್ಟು ಸತ್ಯ. ಈ ಸತ್ಯಗಳನ್ನು ತಿಳಿದುಕೊಳ್ಳುವ ಮೊದಲು ಸರಿಯಾಗಿ ತಯಾರಾಗಿ. ಯಾಕೆಂದರೆ ಕೆಲವೊಂದು ನಿಮ್ಮನ್ನು ಬೆಚ್ಚಿಬೀಳಿಸಬಹುದು. ಇದಕ್ಕಾಗಿ ಯಾವುದೇ ಕೆಲಸ ಮಾಡದೆ ಸುಮ್ಮನೆ ಕುಳಿತು ಇದನ್ನು ಓದುತ್ತಾ ಹೋಗಿ.

ವಾಸ್ತವ#1

ವಾಸ್ತವ#1

ಅಂತರಿಕ್ಷಕ್ಕೆ ಹೋಗುವ ಮೊದಲು ಅಂತರಿಕ್ಷಯಾನಿಗಳಿಗೆ ಧಾನ್ಯಗಳ ಸೇವನೆ ಮಾಡಲು ಅವಕಾಶವಿರುವುದಿಲ್ಲ. ಗ್ಯಾಸ್ ಉಂಟು ಮಾಡುವ ಆಹಾರ ಸೇವನೆಯಿಂದಾಗಿ ಅಂತರಿಕ್ಷಕ್ಕೆ ಹೋಗಲು ತಯಾರಿಸಿರುವ ಸೂಟ್‌ಗೆ ಹಾನಿಯಾಗಬಹುದು ಎನ್ನುವ ಕಾರಣಕ್ಕೆ ಅಂತರಿಕ್ಷ ಯಾನಿಗಳಿಗೆ ಗ್ಯಾಸ್ ಉಂಟುಮಾಡುವ ಪದಾರ್ಥಗಳು ವರ್ಜ್ಯ.

ವಾಸ್ತವ#2

ವಾಸ್ತವ#2

ಸರಾಸರಿ ವ್ಯಕ್ತಿಯೊಬ್ಬ ದಿನಕ್ಕೆ 15 ಸಲ ಬಾಯಿಯಿಂದ ಗ್ಯಾಸ್ ಹೊರಹಾಕುತ್ತಾನೆ. ಇದು ಅವರು ಹೂಸು ಬಿಡುವುದಕ್ಕಿಂತ ಸ್ವಲ್ಪ ಹೆಚ್ಚು. ಗ್ಯಾಸ್ ಬಿಡುವ ಮತ್ತೊಂದು ವಿಧಾನ ಇದಾಗಿದೆ.

ವಾಸ್ತವ#3

ವಾಸ್ತವ#3

ವ್ಯಕ್ತಿಯೊಬ್ಬ ಜೀವಮಾನದಲ್ಲಿ ಸರಾಸರಿ 3-4 ವರ್ಷ ಶೌಚಾಲಯದಲ್ಲಿ ಕುಳಿತುಕೊಳ್ಳುವುದರಲ್ಲೇ ಕಳೆಯುತ್ತಾನಂತೆ. ಇದು ವಾಸ್ತವ (ಮೊಬೈಲ್‌ನಲ್ಲಿ ಆಡುತ್ತಾ ಕುಳಿತುಕೊಳ್ಳುವವರನ್ನು ಲೆಕ್ಕಹಾಕಲಾಗಿಲ್ಲ.)

ವಾಸ್ತವ#4

ವಾಸ್ತವ#4

ದಿನಕ್ಕೆ ಹತ್ತು ಸಿಗರೇಟ್ ಸೇದುವ ವ್ಯಕ್ತಿಯ ಎರಡು ಹಲ್ಲುಗಳು ಹತ್ತು ವರ್ಷದೊಳಗೆ ಉದುರಿ ಬೀಳುತ್ತದೆಯಂತೆ. ಸಿಗರೇಟ್‌ನ್ನು ತ್ಯಜಿಸಲು ಇದು ಒಳ್ಳೆಯ ಕಾರಣ.

ವಾಸ್ತವ#5

ವಾಸ್ತವ#5

ಜಿರಳೆ ಸತ್ತ 18 ಗಂಟೆಗಳ ಬಳಿಕವೂ ಹೂಸಿ ಬಿಡುತ್ತಾ ಇರುತ್ತದೆಯಂತೆ. 15 ನಿಮಿಷಗಳಿಗೊಮ್ಮೆ ಅವು ಗ್ಯಾಸ್ ಹೊರಹಾಕುತ್ತದೆ ಎಂದು ಅಧ್ಯಯನಗಳು ಹೇಳಿವೆ.

ವಾಸ್ತವ#6

ವಾಸ್ತವ#6

ಚೀನಾದಲ್ಲಿರುವ ಕೆಲವು ಹೇರ್ ಬ್ಯಾಂಡ್ ಕಂಪೆನಿಗಳು ಬಳಸಿದ ಕಾಂಡೋಮ್‌ನಿಂದ ಹೇರ್ ಬ್ಯಾಂಡ್ ಮಾಡುತ್ತಾರಂತೆ. ಮುಂದಿನ ಸಲ ಹೇರ್ ಬ್ಯಾಂಡ್ ಅನ್ನು ಅಗಲ ಮಾಡಲು ಅದನ್ನು ಬಾಯಿಗೆ ಹಾಕಿಕೊಳ್ಳುವ ಮೊದಲೊಮ್ಮೆ ತೊಳೆಯಿರಿ.

ವಾಸ್ತವ#7

ವಾಸ್ತವ#7

ನೀವು ಸತತವಾಗಿ 6 ವರ್ಷ 9 ತಿಂಗಳ ಕಾಲ ಹೂಸು ಬಿಟ್ಟರೆ ಆಗ ಒಂದು ಪರಮಾಣು ಬಾಂಬ್‌ಗೆ ಆಗುವಷ್ಟು ಗ್ಯಾಸ್ ಅನ್ನು ನೀವು ಉತ್ಪಾದಿಸಿದ್ದೀರಿ ಎಂದರ್ಥ. ಇದನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಲ್ಲವೇ?

English summary

Things That Will Freak You Out!

Here are some of the gross facts that can make you go ewww!! Find out about the most disgusting facts that can blow your mind. We sure fact ...
Story first published: Wednesday, July 13, 2016, 11:28 [IST]
X
Desktop Bottom Promotion