Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ನಂಬಿಕೆಯೇ ಬರುತ್ತಿಲ್ಲ! ಬಡತನ ಹೀಗೂ ಬರಬಹುದು...
ಎಲ್ಲಾ ಇದ್ದರೂ ಹಣವಿಲ್ಲವೆಂದಾದರೆ ಆಗ ಸಮಾಜದಲ್ಲಿ ಯಾವುದೇ ಮೌಲ್ಯವಿರುವುದಿಲ್ಲ. ಇಂದಿನ ದಿನಗಳಲ್ಲಿ ಹಣವೆನ್ನುವುದು ತುಂಬಾ ಮಹತ್ವ ಪಡೆದಿದೆ. ಶಾಲೆ, ಆಸ್ಪತ್ರೆ, ಹೋಟೆಲ್ ಹೀಗೆ ಪ್ರತಿಯೊಂದು ಕಡೆಯೂ ನಮಗೆ ಹಣ ಬೇಕೇಬೇಕು.
ಇದಕ್ಕಾಗಿ ನಾವು ಕಷ್ಟಪಟ್ಟು ದುಡಿದಂತಹ ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿಕೊಂಡು ಜಾಗ್ರತೆಯಿಂದ ಉಳಿಸುತ್ತಾ ಇರುತ್ತೇವೆ. ಆದರೆ ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಾಗಿ ನಾವು ಎಷ್ಟು ದುಡಿದರೂ ಹಣ ಕೈ ಬರುವುದಿಲ್ಲವೆಂದರೆ ನೀವು ನಂಬುತ್ತೀರಾ..? ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು
ಹೌದು, ಈ ಲೇಖನದಲ್ಲಿ ಇದರ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಸರಿಯಾಗಿ ತಿಳಿದುಕೊಂಡು ಮುಂದೆ ಅವುಗಳ ಬಗ್ಗೆ ಎಚ್ಚರಿಕೆ ವಹಿಸಿ. ಕೆಲವೊಂದು ವಸ್ತುಗಳು ನಿಮಗೆ ಬಡತವನ್ನು ಉಂಟುಮಾಡಬಹುದು. ನೀವು ಸ್ನೇಹಿತರಿಂದ ಪಡೆದಿರುವ ವಸ್ತುಗಳೇ ನಿಮಗೆ ಬಡತನ ತರಬಹುದು. ಇದರ ಬಗ್ಗೆ ಓದಿಕೊಳ್ಳಿ ಮತ್ತು ತಕ್ಷಣ ಎಚ್ಚೆತ್ತುಕೊಂಡು ನಿಮ್ಮ ಆರ್ಥಿಕ ಸಮಸ್ಯೆಯನ್ನು ಸುಧಾರಿಸಿಕೊಳ್ಳಿ...

ಪೆನ್
ಹೆಚ್ಚಾಗಿ ಯಾವುದೇ ಕಚೇರಿ ಅಥವಾ ಬ್ಯಾಂಕ್ ನಲ್ಲಿ ನಾವು ಬರೆಯಲು ಇತರರಿಂದ ಪೆನ್ ಪಡೆಯುತ್ತೇವೆ. ಆದರೆ ಇದನ್ನು ಹಿಂತಿರುಗಿಸಲು ಮರೆಯುತ್ತೇವೆ. ಇದು ಬಡತನವನ್ನು ಉಂಟುಮಾಡಬಹದು.

ಹಾಸಿಗೆ ಹಂಚಿಕೊಳ್ಳುವುದು
ಇದು ಸ್ವಲ್ಪ ವಿಲಕ್ಷಣವೆನಿಸಬಹುದು. ಆದರೆ ನಿಮ್ಮ ಸಂಗಾತಿಯೊಂದಿಗೆ ಹಾಸಿಗೆ ಹಂಚಿಕೊಳ್ಳಬಹುದು. ಸಂಗಾತಿಯನ್ನು ಬಿಟ್ಟು ಬೇರೆ ಯಾರೊಂದಿಗಾದರೂ ನೀವು ಹಾಸಿಗೆ ಹಂಚಿಕೊಂಡಲ್ಲಿ ಆಗ ಅದು ಪದೇ ಪದೇ ಜಗಳಕ್ಕೆ ಹಾಗೂ ಬಡತನಕ್ಕೆ ಕಾರಣವಾಗಬಹುದು.

ಕೈಗಡಿಯಾರ
ಬೇರೆಯವರಿಂದ ಪುಕ್ಕಟೆಯಾಗಿ ಪಡೆದಿರುವ ಕೈಗಡಿಯಾರವು ನಿಮಗೆ ದುರಾದೃಷ್ಟವನ್ನು ಉಂಟು ಮಾಡುವುದು ಮಾತ್ರವಲ್ಲದೆ ಬಡತನವನ್ನು ತರಲಿದೆ. ಕೈಗಡಿಯಾರವನ್ನು ಯಾವತ್ತೂ ಪುಕ್ಕಟೆಗೆ ಪಡೆಯಬೇಡಿ.

ಬಟ್ಟೆಗಳು
ಬೇರೆಯವರ ಬಟ್ಟೆ ಚೆನ್ನಾಗಿದ್ದರೆ ಅದನ್ನು ಪಡೆಯುವುದು ಸಾಮಾನ್ಯ. ಇದನ್ನು ಹೆಚ್ಚಿನವರು ಮಾಡುತ್ತಾ ಇರುತ್ತಾರೆ. ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಬಟ್ಟೆಯನ್ನು ನಾವು ಪಡೆದಿರುತ್ತೇವೆ. ಆದರೆ ಇದರಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಕಾಡಬಹುದು. ಇದನ್ನು ಆದಷ್ಟು ಕಡೆಗಣಿಸಿ.

ಹಣ
ಸಾಲವೇ ಸ್ನೇಹಕ್ಕೆ ಕತ್ತರಿ ಎನ್ನುವ ಮಾತಿದೆ. ಸಾಲವನ್ನು ಪಡೆಯುವುದರಿಂದ ಸಂಬಂಧವು ಹಾಳಾಗಬಹುದು. ಇಷ್ಟು ಮಾತ್ರವಲ್ಲದೆ ಇದರಿಂದ ನಿಮ್ಮ ಜೀವನದಲ್ಲಿ ಬಡತನ ಉಂಟಾಗಬಹುದು.

ತಾಜ್ ಮಹಲ್ ಫೋಟೋ
ತಾಜ್ ಮಹಲನ್ನು ನಾವು ಪ್ರೀತಿಯ ದ್ಯೋತಕವೆಂದು ನಂಬಿದ್ದೇವೆ. ಆದರೆ ಇದು ಮುಮ್ತಾಜ್‌ಳ ಸಮಾಧಿಯಾಗಿದೆ. ತಾಜ್ ಮಹಲ್ ಫೋಟೊ ಮನೆಯಲ್ಲಿದ್ದರೆ ಅದು ನಕಾರಾತ್ಮಕ ಅಂಶ ಮತ್ತು ಬಡತನ ತರಬಹುದು.

ಕರವಸ್ತ್ರ
ಇತರರ ಕರವಸ್ತ್ರವನ್ನು ಬಳಸುವುದು ಸ್ವಚ್ಛತೆಯ ದೃಷ್ಟಿಯಿಂದ ಖಂಡಿತವಾಗಿಯೂ ಒಳ್ಳೆಯದಲ್ಲ. ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಕೀಟಾಣುಗಳು ಇರುತ್ತದೆ. ಇದು ಅನಾರೋಗ್ಯ ಮತ್ತು ಬಡತನ ಉಂಟು ಮಾಡಬಹುದು. ಬೇರೆಯವರಿಂದ ಕರವಸ್ತ್ರ ಪಡೆಯದಿರುವುದು ತುಂಬಾ ಒಳ್ಳೆಯದು.



Click it and Unblock the Notifications