ಪುರುಷರೇ, ಲೈಫ್‌ನಲ್ಲಿ ಕೊಂಚ ಡಿಫರೆಂಟ್ ಆಗಿ ಯೋಚಿಸಿ!

By Manu

ಸಾಮಾನ್ಯವಾಗಿ ಪುರುಷರು ಹೊರಗೆ ತಿರುಗಾಡುತ್ತಿರಲು ಮತ್ತು ಹೊರಗಿನ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಅಂತೆಯೇ ಮಹಿಳೆಯರು ತಮ್ಮ ಮನೆ ಮತ್ತು ತಮ್ಮ ಕುಟುಂಬದಲ್ಲಿ ಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದರೆ ನಿತ್ಯದ ಚಟುವಟಿಕೆಯ ಹೊರತಾಗಿ ಕೆಲವು ಸಾಹಸ, ಶೌರ್ಯದ ಕೆಲಸಗಳನ್ನೂ ಮಾಡಲು ಇಚ್ಛಿಸುತ್ತಾರೆ. ಇದು ಅಗತ್ಯವೂ ಕೂಡಾ. ಏಕೆಂದರೆ ವೈವಿಧ್ಯತೆ ಇಲ್ಲದ ಜೀವನದಲ್ಲಿ ನೀರಸತೆ ತುಂಬಿಕೊಳ್ಳುತ್ತದೆ. ಬದಲಾವಣೆಗೆ ವಿಚಿತ್ರ ಆಕಾರದಲ್ಲಿ ಗಡ್ಡ ಹೆರೆದುಕೊಳ್ಳುವುದು, ವಿಚಿತ್ರವಾದ ಉಡುಪು ತೊಡುವುದು, ಕೊಂಚ ಬದಲಾವಣೆ ನೀಡಿದರೂ ತೃಪ್ತಿ ನೀಡುವುದಿಲ್ಲ.

ಕಸರತ್ತು ಮಾಡಿ ಮೈ ಹುರಿಗಟ್ಟಿಸಲು ಜಿಮ್ ಒಂದಕ್ಕೆ ಸೇರಿಕೊಂಡು ಕೊಂಚ ಸ್ನಾಯುಗಳನ್ನು ಬೆಳೆಸಿ ನಾಲ್ವರಿಗೆ ತೋರಿಸಲು ಗಿಡ್ಡ ಕೈಯ ಬಿಗಿಯಾದ ಟೀ ಶರ್ಟ್ ಧರಿಸುವ ಮೂಲಕ ಹಲವರು ಸಂತೃಪ್ತಿ ಹೊಂದುತ್ತಾರೆ. ಆದರೆ ಇದಕ್ಕಿಂತಲೂ ಹೆಚ್ಚಿನ ಸಂತೃಪ್ತಿ ಕೆಲವು ಚಟುವಟಿಕೆಗಳನ್ನು, ಅದರಲ್ಲೂ ಜೀವನದಲ್ಲಿ ಯಾವಾಗಲಾದರೊಂದು ಬಾರಿ ನಿರ್ವಹಿಸಬಹುದಾದ ಸಾಹಸಕಾರ್ಯದಿಂದ, ಪ್ರವಾಸದಿಂದ ಲಭ್ಯವಾಗುತ್ತದೆ. ಆದರೆ ಇದಕ್ಕೂ ಮಿಗಿಲಾಗಿ ನಾಲ್ವರಿಗೆ ಸಹಾಯವಾಗುವ, ಮಾನವ ಸಂಬಂಧಗಳನ್ನು ಬಲಪಡಿಸುವ, ಒಬ್ಬರ ಕಷ್ಟಗಳಿಗೆ ನೆರವಾಗುವ ಕಾರ್ಯಗಳು ಅಪಾರವಾದ ನೆಮ್ಮದಿ ಮತ್ತು ತೃಪ್ತಿಯನ್ನು ನೀಡುತ್ತದೆ. ಬನ್ನಿ ಇಂತಹ ಕೆಲವು ಚಟುವಟಿಕೆಗಳ ಬಗ್ಗೆ ನೋಡೋಣ....

ಪ್ರೀತಿ

ಪ್ರೀತಿ

ಪ್ರೀತಿಗೆ ಒಳಗಾಗುವುದು ಮತ್ತು ಒಬ್ಬರ ಮನದನ್ನನಾಗುವುದು ಮತ್ತು ಪ್ರೀತಿಯ ಆಳವನ್ನು ಅರಿಯುವುದು ಇಲ್ಲದಿದ್ದರೆ ಜೀವನದ ಮಹತ್ವದ ಏನನ್ನೋ ಕಳೆದುಕೊಂಡಂತೆ. ಇದು ಕೇವಲ ಗಂಡು ಹೆಣ್ಣಿನ ನಡುವಣ ಪ್ರೀತಿಗೆ ಸೀಮಿತವಾಗಿಲ್ಲ. ಇದರ ವ್ಯಾಪ್ತಿ ಆಕರ್ಷಣೆಗೂ ಮಿಗಿಲಾಗಿದ್ದು ಇದನ್ನು ಅರಿತಾಗ ಜೀವನದ ಮಜಲು ಏನೆಂದು ಅರಿವಾಗುತ್ತದೆ.

ಪ್ರಣಯ

ಪ್ರಣಯ

ಜೀವನದಲ್ಲಿ ಓರ್ವ ಸಂಗಾತಿ ಇದ್ದು ಪ್ರಣಯದಲ್ಲಿ ಭಾಗಿಯಾಗುವುದು ಆರೋಗ್ಯಕರವಾಗಿದೆ. ಪ್ರತಿಬಾರಿಯ ಸಮಾಗಮದಿಂದ ಈ ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಪ್ರಕಟಿಸುತ್ತದೆ.

ಜೀವನದಲ್ಲಿ ಸಾಧನೆ

ಜೀವನದಲ್ಲಿ ಸಾಧನೆ

ವ್ಯಕ್ತಿ ಜೀವನದಲ್ಲಿ ಏನಾದರೊಂದು ಇಲ್ಲದಿದ್ದುದನ್ನು ಸೃಷ್ಟಿಸುವುದರಲ್ಲಿ ಹೆಚ್ಚಿನ ತೃಪ್ತಿ ಪಡುತ್ತಾನೆ. ಮಕ್ಕಳಿಗಾಗಿ ಒಂದು ಚಿಕ್ಕ ಮೇಜಿನಿಂದ ಹಿಡಿದು ದೊಡ್ಡ ಕಟ್ಟಡದವರೆಗೆ, ವೃತ್ತಿಯಲ್ಲಿ ಉನ್ನತ ಸಾಧನೆ, ಎವರೆಸ್ಟ್ ಶಿಖರ ಹತ್ತುವುದು ಮೊದಲಾದ ಯಾವುದೇ ಕಾರ್ಯ ಅತೀವ ತೃಪ್ತಿ ನೀಡುತ್ತದೆ.

ಪ್ರವಾಸ

ಪ್ರವಾಸ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಗಾದೆಯೇ ಇದೆ. ಸುಮ್ಮನೆ ಒಂದೆಡೆ ಇದ್ದಲ್ಲಿ ಏನೂ ನೋಡಿದಂತಾಗುವುದಿಲ್ಲ. ಆದ್ದರಿಂದ ಕಾಲಕಾಲಕ್ಕೆ ಯಾವುದಾದರೊಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಭೇಟಿಯಾಗಿ ಹೊಸತನ್ನು ಕಲಿಯುವುದು ಉತ್ತಮ ಹವ್ಯಾಸವಾಗಿದೆ. ಇದಕ್ಕಾಗಿ ನಿಮ್ಮ ಗಳಿಕೆಯ ಕೊಂಚ ಭಾಗವನ್ನು ಮುಡಿಪಾಗಿರಿಸುವುದು ಅಗತ್ಯ.

ಓದುವಿಕೆ

ಓದುವಿಕೆ

ನಾವು ನೋಡುವುದಕ್ಕಿಂತಲೂ ಹೆಚ್ಚಾಗಿ ಓದುವುದರಿಂದ ಕಲಿಯುತ್ತೇವೆ. ಆದ್ದರಿಂದ ಕಲಿಕೆಯ ಮಾಧ್ಯಮವಾಗಿ ಪುಸ್ತಕಗಳನ್ನೇ ನೀಡಲಾಗುತ್ತದೆ. ಓದುವಿಕೆ ಸತತವಾಗಿರಬೇಕು ಹಾಗೂ ವಿವಿಧ ವಿಷಯಗಳನ್ನು ಒಳಗೊಂಡಿರಬೇಕು. ಶೀಘ್ರವೇ ಓದುವಿಕೆಯಲ್ಲಿ ಇರುವ ಮಹತ್ವದ ಅರಿವಾಗುತ್ತದೆ.

ಬರವಣಿಗೆ

ಬರವಣಿಗೆ

ಬರೆಯುವವರೆಲ್ಲರೂ ಲೇಖಕರಾಗಬೇಕಾಗಿಲ್ಲ. ಆದರೆ ನಿಮ್ಮ ಮನಸ್ಸಿಗೆ ತೋಚಿದ್ದನ್ನು ಗೀಚುತ್ತಾ, ನಿಮಗೆ ಹೊಳೆದ ವಿಷಯಗಳನ್ನು ವಿಮರ್ಶಿಸುತ್ತಾ ಬರಬೇಕು. ಕ್ರಮೇಣ ನಿಮ್ಮ ಯೋಚನೆಗಳು ಪದಗಳಾಗಿ, ನಿಮ್ಮ ಪದಗಳು ಗ್ರಂಥವಾಗಿ ಹೊಮ್ಮುತ್ತದೆ. ಇದಕ್ಕೆ ಕೊಂಚ ಪ್ರಯತ್ನ, ತಾಳ್ಮೆ ಮತ್ತು ಕೊಂಚ ಸಮಯ ಬೇಕು ಅಷ್ಟೇ.

ಭಯವನ್ನು ಎದುರಿಸುವುದು

ಭಯವನ್ನು ಎದುರಿಸುವುದು

ಸಾಮಾನ್ಯವಾಗಿ ನಮಗೆಲ್ಲರಿಗೂ ಸೋಲುವ ಭಯ ಇರುತ್ತದೆ. ಈ ಭಯದ ಕಾರಣ ನಾವು ಎಷ್ಟೋ ವಿಷಯಗಳನ್ನು ಪ್ರಯತ್ನಿಸಿರುವುದೇ ಇಲ್ಲ. ಇದಕ್ಕೆ ನಮಗೆ ಹಿಂದೆಂದೋ ಯಾರೋ ಹೇಳಿದ್ದ ಮಾತುಗಳೂ ಕಾರಣವಾಗಿರಬಹುದು. ಉದಾಹರಣೆಗೆ ನೀರಿನಿಂದ ದೂರ ಇರಿ, ಇಲ್ಲದಿದ್ದರೆ ಮುಳುಗಿ ಸಾಯುತ್ತೀರಿ ಎಂದು ಯಾರಾದರೂ ಹೇಳಿದ್ದರೆ ಈ ಭಯದಿಂದ ನೀರಿನ ಬಳಿ ಸುಳಿಯದೇ ಇರುವವರಿಗೆ ಈಜು ಎಲ್ಲಿಂದ ಬರಬೇಕು? ಬದಲಿಗೆ ಧೈರ್ಯವಾಗಿ ಈಜು ಕಲಿಯುವತ್ತ ಚಿತ್ತ ಹರಿಸಿದರೆ ಕೆಲವೇ ದಿನಗಳಲ್ಲಿ ಉತ್ತಮ ಈಜುಪಟುವಾಗಲು ಸಾಧ್ಯ.

Story first published: Thursday, February 25, 2016, 11:53 [IST]
X
Desktop Bottom Promotion