For Quick Alerts
ALLOW NOTIFICATIONS  
For Daily Alerts

ಹುಲಿಯ ದಾಳಿಗೆ ಒಳಗಾದವನ ಕಥೆ! ಇಂಥ ಸ್ಥಿತಿ ಯಾರಿಗೂ ಬಾರದಿರಲಿ

By Manu
|

ಹುಲಿಯ ಧಾಳಿಗೆ ಸಿಕ್ಕವರು ಜೀವಂತವಾಗಿ ಮತ್ತೆ ಸಿಗುವ ಸಾಧ್ಯತೆ ಅತ್ಯಂತ ಕಡಿಮೆ. ಇತಿಹಾಸವನ್ನು ಕೆದಕಿದರೆ ಹುಲಿಯೊಂದಿಗೆ ಹೋರಾಡಿ ಬದುಕಿ ಉಳಿದರವ ರೋಚಕ ಮತ್ತು ಮೈ ನವಿರೇಳುವ ಕಥೆಗಳೂ ಸಿಗುತ್ತವೆ. ಫ್ರೆಂಚ್ ಸ್ನೇಹಿತನೊಂದಿಗೆ ಬೇಟೆಗೆ ಹೋಗಿದ್ದಾಗ ಹುಲಿ ಎದುರಾದ ಸಮಯಕ್ಕೆ ಕೋವಿ ಬಿದ್ದರೂ, ಎದೆಗುಂದದೇ ತನ್ನ ಮೇಲೆ ಹಾರಿದ ಹುಲಿಯನ್ನು ಕೇವಲ ಕತ್ತಿಯಿಂದ ಎದುರಿಸಿ ಕೊಂದ ಕಾರಣಕ್ಕೇ ಟಿಪ್ಪು ಸುಲ್ತಾನನಿಗೆ ಮೈಸೂರಿನ ಹುಲಿ ಎಂಬ ಬಿರಿದು ಬಂದಿತ್ತು.

ಆದರೆ ಉಳಿದವರು ಟಿಪ್ಪೂ ಸುಲ್ತಾನನಷ್ಟು ಬಲಶಾಲಿ ಮತ್ತು ಮನೋಬಲವಿಲ್ಲದವರಾದುದರಿಂದ ಪ್ರಾಣವನ್ನೇ ಅರ್ಪಿಸಬೇಕಾಯಿತು ಅಥವಾ ಮಾರಣಾಂತಿಕವಾಗಿ ಗಾಯಗೊಂಡು ಬದುಕಿ ಉಳಿಯಬೇಕಾಯಿತು. ಹುಲಿಯ ಪಂಜಿಗೆ ಸಿಲುದ ಮನುಷ್ಯರ ಕೆನ್ನೆ ಮತ್ತು ಇತರ ಭಾಗದ ಚರ್ಮ ಕಾಗದ ಹರಿದಂತೆ ಹರಿದು ರಕ್ತ ಕೋಡಿಯಾಗಿ ಹರಿದಿತ್ತು.

ಈ ಪ್ರಾಣಾಂತಿಕ ಗಾಯಗಳನ್ನು ಹೊಲಿಗೆ ಹಾಕಿ ವ್ಯಕ್ತಿಯನ್ನು ಬದುಕಿಸಿದರೂ ಗಾಯದ ಕಲೆಗಳು ಶಾಶ್ವತವಾಗಿ ಉಳಿದು ಜೀವಮಾನವಿಡೀ ಎದುರಿಗೆ ಬಂದವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ನೀಡುತ್ತಾ ಹೈರಾಣಾಗುವ ಶಿಕ್ಷೆಗೆ ಒಳಗಾಗಬೇಕು. ಇಂತಹ ಒಂದು ಧಾಳಿಗೆ ಒಳಗಾಗಿ ಬದುಕಿ ಉಳಿದ ವ್ಯಕ್ತಿಯೊಬ್ಬ ಸುಮಾರು ಇಪ್ಪತ್ತು ವರ್ಷದವರೆಗೆ ಅಜ್ಞಾತನಾಗಿಯೇ ಉಳಿದ ಕಥೆಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

ಹುಲಿಯ ಪಂಜಿಗೆ ಸಿಲುಕಿದ ಈ ವ್ಯಕ್ತಿಯ ಮುಖದ ಸರಿಸುಮಾರು ಅರ್ಧ ಭಾಗ ಹರಿದು ಜೋಲುತ್ತಾ ಬಿದ್ದಿತ್ತು. ಹೇಗೋ ಮಾಡಿ ವೈದ್ಯರ ಬಳಿ ಕರೆತಂದು ಚಿಕಿತ್ಸೆ ನೀಡಿ ಹರಿದ ಭಾಗಗಳನ್ನೆಲ್ಲಾ ಜೋಡಿಸಿ ಹೊಲಿದರೂ ಭಯಾನಕವಾದ ಗಾಯದ ಗುರುತುಗಳು ಶಾಶ್ವತವಾಗಿ ಉಳಿದವು. ಹುಲಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಟವಾದ ಗುಣಗಳಿವು!

ಆಘಾತಕ್ಕೆ ಒಳಗಾಗಿ ಮುರಿದ ಮುಖದ ಮೂಳೆಗಳನ್ನು ಮತ್ತೆ ಮೊದಲಿನಂತಾಗಿಸಲು ಸಾಧ್ಯವಾಗದೇ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ವೈದ್ಯರು ಸರಿಪಡಿಸಿದರು. ಆದರೆ ಮುಖದ ಎಡಭಾಗ ಪೂರ್ಣವಾಗಿ ವಿರೂಪಗೊಂಡಿದ್ದು ಕಣ್ಣಿರುವಲ್ಲಿ ಕಿವಿ ಬಂದಿರುವ ಕಾರಣ ಈ ವ್ಯಕ್ತಿಯನ್ನು ಬೇರೆಯವರಿರಲಿ, ಸ್ವತಃ ತಾನೇ ನೋಡಲು ಹಿಂದೇಟು ಹಾಕುವಂತಾಗಿತ್ತು. ಇಂತಹ ಭಯಾನಕ ಧಾಳಿಗೆ ಒಳಗಾದ ವ್ಯಕ್ತಿ ನೆರೆಯ ಬಾಂಗ್ಲಾದೇಶದವರು. ಮುಂದಿನ ಸ್ಲೈಡ್ ಶೋಗಳಲ್ಲಿ ನೀಡಲಾಗಿರುವ ಚಿತ್ರಗಳು ನೈಜವಾಗಿದ್ದರೂ ಚಿತ್ತವನ್ನು ಕದಡಲು ಸಾಧ್ಯವಿರುವ ಕಾರಣ ಹೃದಯವನ್ನು ಮೊದಲೇ ಗಟ್ಟಿಯಾಗಿಸಿ.

ಈ ಘಟನೆ ನಡೆದದ್ದೆಲ್ಲಿ

ಈ ಘಟನೆ ನಡೆದದ್ದೆಲ್ಲಿ

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ಕಾಂಡ್ಲಾವನದಲ್ಲಿ ಹಶ್ಮೋತ್ ಅಲಿ ಎಂಬ ವ್ಯಕ್ತಿಯ ಮೇಲೆ ಈ ಧಾಳಿ ನಡೆದಿದೆ. ಈ ವನದಲ್ಲಿ ಭಾರೀ ಗಾತ್ರದ ಹುಲಿಗಳು ತಿರುಗಾಡುತ್ತಿದ್ದು ಅತಿ ಭಯಾನಕವೂ ಕುತಂತ್ರಿಗಳೂ, ಸದ್ದಿಲ್ಲದೇ ಹಿಂದಿನಿಂದ ಏಕಾಏಕಿ ಎರಗುವಂತಹವೂ ಆಗಿವೆ. ಆದರೆ ಮನುಷ್ಯರ ಮೇಲೆ ಧಾಳಿ ಎಸಗಿದ ಪ್ರಮಾಣ ಕಡಿಮೆ ಎಂದೇ ಹೇಳಬಹುದು.

ಹಶ್ಮೋತ್ ಮೇಲಿನ ಧಾಳಿ

ಹಶ್ಮೋತ್ ಮೇಲಿನ ಧಾಳಿ

ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಹಶ್ಮೋತ್ ಮೇಲೆ ನೇರವಾಗಿ ಧಾಳಿ ಮಾಡಿದ ಹುಲಿ ಭಾರೀ ರಭಸದಲ್ಲಿ ಪಂಜವನ್ನು ಬೀಸಿತ್ತು. ಆ ಉಗುರುಗಳಿಗೆ ಸಿಕ್ಕ ಹಶ್ಮೋತ್‌ನ ಮುಖದ ಎಡಭಾಗದ ದೊಡ್ಡ ತುಂಡೇ ಕಿತ್ತು ಬಂದಿತ್ತು. ಶ್ವಾಸಕೋಶವೇ ಹೊರಬರುವಂತೆ ಕಿರುಚಿ ನೆರವಿಗೆ ಆರ್ತಾನಾದ ಮಾಡಿದ್ದೊಂದೇ ಗೊತ್ತಿ ಆತನಿಗೆ. ಆದರೆ ಉಳಿದವರು ಸಕಾಲಕ್ಕೆ ಆಗಮಿಸಿ ಹುಲಿಯನ್ನು ಓಡಿಸಿದ್ದರಿಂದ ಬದುಕಿ ಬಂದ.

ಬದುಕಿ ಉಳಿದ ಅದೃಷ್ಟವಂತ

ಬದುಕಿ ಉಳಿದ ಅದೃಷ್ಟವಂತ

ಜೊತೆಯಲ್ಲಿದ್ದವರು ಧೃತಿಗೆಡದೇ ಹುಲಿಯನ್ನು ದೊಡ್ಡ ದನಿಗಳಿಂದ ಓಡಿಸಿದ್ದರು. ಸಾಮಾನ್ಯವಾಗಿ ಹುಲಿ ಏಕಾಂಗಿಗಳ ಮೇಲೆ ಧಾಳಿ ಮಾಡುತ್ತದೆ. ಗುಂಪು ಅಥವಾ ಸದ್ದು ಕಂಡುಬಂದರೇ ಹೆದರಿ ಪಲಾಯನ ಮಾಡುತ್ತದೆ. ಇದಕ್ಕೆ ಅಪವಾದ ಎಂದರೆ ಸಿಂಹ. ಇದೇ ಕಾರಣಕ್ಕೆ ಹುಲಿಯಷ್ಟು ಬಲಶಾಲಿಯಲ್ಲದಿದ್ದರೂ ಸಿಂಹಕ್ಕೇ ಕಾಡಿನ ರಾಜ ಎಂಬ ಬಿರುದು ಬಂದಿದೆ.

ಮುಖವನ್ನು ಉಳಿಸಲಾಗದ ಅಸಹಾಯಕತೆ

ಮುಖವನ್ನು ಉಳಿಸಲಾಗದ ಅಸಹಾಯಕತೆ

ಹುಲಿಯ ಧಾಳಿಗೆ ಒಳಗಾದ ಹಶ್ಮೋತ್ ನ ಮುಖ ನೋಡುವ ಸ್ಥಿತಿಯಲ್ಲಿಯೇ ಇರಲಿಲ್ಲ. ಕಣ್ಣು ಎಲ್ಲೋ ಬಿದ್ದುಹೋಗಿತ್ತು. ರಕ್ತ ಕಾಲುವೆಯಂತೆ ಹರಿಯತೊಡಗಿತ್ತು. ಇದೇ ಸ್ಥಿತಿಯಲ್ಲಿ ವೈದ್ಯರ ಬಳಿಗೆ ಹೊತ್ತು ತಂದಾಗ ಜೀವವೇ ಅಪಾಯದಲ್ಲಿತ್ತು. ಆದರೂ ವೈದ್ಯರು ತಮ್ಮ ಸಾಮರ್ಥ್ಯ ಮೀರಿ ಶ್ರಮಿಸಿ ಪ್ರಾಣ ಹೋಗದಂತೆ ಕಾಪಾಡಿ ಜಖಂಗೊಂಡಿದ್ದ ಮುಖಕ್ಕೆ ತಮ್ಮಿಂದ ಸಾಧ್ಯವಾದ ಚಿಕಿತ್ಸೆಯನ್ನು ನೀಡಿದರು. Image courtesy

ತನ್ನ ಮುಖವನ್ನೇ ನೋಡಬಯಸದ ಹಶ್ಮೋತ್

ತನ್ನ ಮುಖವನ್ನೇ ನೋಡಬಯಸದ ಹಶ್ಮೋತ್

ಕಾಲ ಕಳೆದಂತೆ ಗಾಯಗಳು ಮಾಗಿದರೂ ಮುಖದ ರೂಪ ಮಾತ್ರ ಸಾಮಾನ್ಯರು ಅರಗಿಸಿಕೊಳ್ಳಲಾಗದಷ್ಟು ವಿರೂಪಗೊಂಡಿತ್ತು. ಈತನನ್ನು ಕಂಡು ಹಿನ್ನಲೆ ಅರಿಯದೇ ಗೇಲಿ ಮಾಡಿದಾಗ ಮಾನಸಿಕವಾಗಿ ಬಹುವಾಗಿ ನೊಂದ ಹಶ್ಮೋತ್ ಇನ್ನೆಂದೂ ತನ್ನ ಮುಖವನ್ನು ಯಾರಿಗೂ ತೋರಲಾರೆ ಎಂದು ಅಂದೇ ಭೀಷ್ಮ ಪ್ರತಿಜ್ಞೆ ಮಾಡಿದರು. ಬಳಿಕ ಸರಿಸುಮಾರು ಇಪ್ಪತ್ತು ವರ್ಷಗಳವರೆಗೆ ಮನೆಯಿಂದ ಹೊರಗೇ ಕಾಲಿಡಲು ಅಂಜುತ್ತಿದ್ದರು. ಈ ಅವಧಿಯಲ್ಲಿ ಇವರು ಯಾರಿಗೂ ಕಾಣಿಸಿಕೊಂಡಿದ್ದು ಅತ್ಯಂತ ಕಡಿಮೆ ಎನ್ನಬಹುದು.

ಇಪ್ಪತ್ತು ವರ್ಷಗಳ ಬಳಿಕ ಸಮಾಜಕ್ಕೆ ಹಿಂದಿರುಗಿದ ಹಶ್ಮೋತ್

ಇಪ್ಪತ್ತು ವರ್ಷಗಳ ಬಳಿಕ ಸಮಾಜಕ್ಕೆ ಹಿಂದಿರುಗಿದ ಹಶ್ಮೋತ್

ಆದರೆ ಜನರ ಬಿರುನುಡಿಗಳು ತನ್ನನ್ನಲ್ಲದಿದ್ದರೂ ತನ್ನ ಮಕ್ಕಳನ್ನು ಬಾಧಿಸುತ್ತವೆ, ಇದರನ್ನು ಎದುರಿಸಿಯೇ ತೀರಬೇಕು ಎಂಬ ತೀರ್ಮಾನಕ್ಕೆ ಬಂದ ಹಶ್ಮೋತ್ ಈಗ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಮೀನು ಮಾರುತ್ತಾ ಬಾಳುತ್ತಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಇಪ್ಪತ್ತು ವರ್ಷಗಳ ಬಳಿಕ ಸಮಾಜಕ್ಕೆ ಹಿಂದಿರುಗಿದ ಹಶ್ಮೋತ್

ಇಪ್ಪತ್ತು ವರ್ಷಗಳ ಬಳಿಕ ಸಮಾಜಕ್ಕೆ ಹಿಂದಿರುಗಿದ ಹಶ್ಮೋತ್

ಹೆಚ್ಚಿನ ಸಮಯ ವಿರೂಪಗೊಂಡ ಮುಖದ ಮೇಲೆ ಕರ್ಚೀಫ್ ಒಂದನ್ನು ಆವರಿಸಿಕೊಂಡು ವ್ಯವಹರಿಸುತ್ತಾರೆ. ಆದರೆ ನೋಡ ಬಯಸುವವರಿಗೆ ಕರ್ಚೀಫು ಬಿಚ್ಚಿ ತಮ್ಮ ಮುಖವನ್ನು ನೋಡಲು ಬಿಡುತ್ತಾರೆ. ಈ ಬೆಳವಣಿಗೆ ಅದ್ಭುತವಾಗಿದ್ದು ಇವರ ಮುಂದಿನ ಜೀವನ ಸುಖಮಯವಾಗಿರಲು ಎಂದು ನಾವೆಲ್ಲರೂ ಹಾರೈಸೋಣ.

English summary

The Man Who Revealed His Face 20 Years After A Tiger Attack

We all have heard of many survival stories of people around the world. But hearing a survival story of a tiger attack victim is rather rare, as there are very few people who have escaped from these deadly jaws of death. The people who have survived a tiger attack have been forced to live a scarred life, as the scars of the tiger attack have caused a permanent impact on their lives.
X
Desktop Bottom Promotion