For Quick Alerts
ALLOW NOTIFICATIONS  
For Daily Alerts

  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರ ಡ್ಯಾನ್ಸ್! ವಿಡಿಯೋ ವೈರಲ್

  By Manu
  |

  ಓರ್ವ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸುವುದು ಎಂದರೆ ಯಾವುದೇ ತಪಸ್ಸಿಗೆ ಕಡಿಮೆ ಇರದ ಸಾಧನೆ, ಏಕಾಗ್ರತೆಯ ಅಗತ್ಯವಿದೆ. ಏಕೆಂದರೆ ಇಲ್ಲಿ ತಪ್ಪಿಗೆ ಅವಕಾಶವೇ ಇಲ್ಲ. ವೈದ್ಯರ ತಪ್ಪಿನಿಂದ ರೋಗಿ ಪರಂಧಾಮಕ್ಕೆ ಧಾವಿಸಬಹುದು. ಈ ಸಮಯದಲ್ಲಿ ವೈದ್ಯರಿಗೆ ಮನಸ್ಸನ್ನು ಬೇರೆಡೆ ಆಕರ್ಷಿಸುವ ಯಾವುದೇ ವಿಷಯ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಇರಲೇಬಾರದು.

  ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಯ ಹೊರಗೆ ಮಾತನಾಡುವುದು, ಸಂಗೀತ, ಮೊಬೈಲ್ ಇತ್ಯಾದಿ ಎಲ್ಲಕ್ಕೂ ನಿಷೇಧವಿದೆ. ಆದರೆ ಇಂತಹ ಒಂದು ಕೊಠಡಿಯಲ್ಲಿ ದಾದಿಯೊಬ್ಬರೊಂದಿಗೆ ಶಸ್ತ್ರಚಿಕಿತ್ಸಕ ವೈದ್ಯರು ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೇ ನರ್ತಿಸಿದ್ದು ಮಾತ್ರ ಅಚ್ಚರಿಯ ವಿಷಯವಾಗಿದೆ...!  'ಎದೆಗಾತಿ'ಯಾಗಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೊಕ್ಕ ಸಿನಿ ತಾರೆಯರು!

  ಹೌದು, ನಂಬಲೇ ಸಾಧ್ಯವಿಲ್ಲದ ಈ ಸಂಗತಿ ನಿಜವಾಗಿದೆ. ಇದಕ್ಕೆ ಪುರಾವೆಯಾಗಿ ವಿಡಿಯೋ ಮುದ್ರಣವನ್ನೂ ನೀವು ನೋಡಬಹುದು. ನಮ್ಮೆಲ್ಲರಿಗೂ ನಮ್ಮ ಕೆಲಸ ಇಷ್ಟದ ಸಂಗತಿಯಾಗಿದ್ದು ಈ ನಡುವೆ ಕೊಂಚ ಸಂಗೀತ ನರ್ತನ ಸಹ್ಯವಾಗಿದೆ. ಆದರೆ ಶಸ್ತ್ರಚಿಕಿತ್ಸೆಯಂತಹ ಅತ್ಯಂತ ಗಹನ ಮತ್ತು ಸೂಕ್ಷ್ಮ ವಿಷಯದ ಸಮಯದಲ್ಲಿ ಸಂಗೀತ ನರ್ತನ ಸರ್ವಥಾ ಸಲ್ಲದು. ಆದರೆ ನುರಿತ ಈ ತಜ್ಞರಿಗೆ ಈ ರೀತಿಯ ವರ್ತನೆ ಸರಿಯಾಗಿತ್ತೇ? ಹೆಚ್ಚಿನವರು ಇದನ್ನು ತಪ್ಪು ಎಂದೇ ಹೇಳುತ್ತಾರೆ.

   

  ಇಂದು ಸಾಮಾಜಿಕ ತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಕಡ್ಲೆಕಾಯಿ ಹಂಚಿಕೊಳ್ಳುವುದಕ್ಕಿಂತ ಸುಲಭವಾದ ಬಳಿಕ ತಮ್ಮನ್ನು ಹೆಚ್ಚಿನ ಜನರ ನಡುವೆ ಗುರುತಿಸಿಕೊಳ್ಳಲು ಚಿತ್ರ ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವು ವಿಧಾನಗಳು ಅಪಾಯಕಾರಿಯೂ ಆಗಿವೆ. ಉದಾಹರಣೆಗೆ ಅಪಾಯಕರ ಅಂಚಿನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು.   ಇವೆಲ್ಲಾ ಪ್ಲಾಸ್ಟಿಕ್ ಸರ್ಜರಿ ಮಹಿಮೆ! ಹೀಗೂ ಉಂಟೇ..?

  ಈ ವೈದ್ಯರೂ ತಮ್ಮ ಕೆಲಸದ ನಡುವೆ ನರ್ತಿಸಿ ಇದರ ವೀಡಿಯೋ ಮೂಲಕ ಜನಪ್ರಿಯತೆ ಗಳಿಸಿಕೊಳ್ಳಲು ಯತ್ನಿಸಿರಬಾರದೇಕೆ? ನಿಮ್ಮ ಅನುಮಾನವೂ ಇದೇ ಆಗಿದ್ದರೆ ಕೆಳಗಿನ ಮಾಹಿತಿ ನಿಮ್ಮ ಕುತೂಹಲ ತಣಿಸಲಿದೆ.....  

  ಈ ವಿಡಿಯೋ ಸಾಮಾಜಿಕ ತಾಣದಲ್ಲಿ ತಪ್ಪಿ ಬಂದಿದೆ

  ಈ ವಿಡಿಯೋ ಸಾಮಾಜಿಕ ತಾಣದಲ್ಲಿ ತಪ್ಪಿ ಬಂದಿದೆ

  ಈ ವೈದ್ಯರು 'ಮಹಿಳೆಯರನ್ನು ಘಾಸಿಗೊಳಿಸುತ್ತಿದ್ದಾರೆ' ಎಂಬ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ಗುಟ್ಟಾಗಿ ಈ ವಿಡಿಯೋಗಳನ್ನು ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ನಿಧಾನವಾಗಿ ಹರಿಬಿಟ್ಟಿದ್ದ. ಇದೊಂದೇ ಅಲ್ಲ, ಇದೇ ವೈದ್ಯರ ಇನ್ನೂ ಹಲವಾರು ವಿಡಿಯೋಗಳನ್ನು ತೆಗೆದಿದ್ದಾನೆ. Image courtesy

  ಈ ವಿಡಿಯೋವನ್ನು ಹರಿಬಿಟ್ಟಿದ್ದು ನಗರಪಾಲಿಕಾ ಕೌನ್ಸಿಲರ್

  ಈ ವಿಡಿಯೋವನ್ನು ಹರಿಬಿಟ್ಟಿದ್ದು ನಗರಪಾಲಿಕಾ ಕೌನ್ಸಿಲರ್

  ಕೊಲಂಬಿಯಾ ದೇಶದ ವಾಯುವ್ಯ ಪ್ರಾಂತದಲ್ಲಿರುವ ಮೆಡೆಲ್ಲಿನ್ ನಗರದ ಕೌನ್ಸಿಲರ್ ಆಗಿರುವ ಬರ್ನಾರ್ಡೋ ಅಲೆಜಾಂದ್ರೋ ಗುವೇರಾ ರವರು ಈ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಎಲ್ಲರ ಗಮನ ಸೆಳೆಯುವಂತೆ ಹರಿಬಿಟ್ಟಿದ್ದು ಈ ವೈದ್ಯರ ವಿರುದ್ಧ ಹಾಗೂ ಈ ರೀತಿಯ ಕೃತ್ಯ ಮತ್ತು ಅಜಾಗರೂಕತೆ ಎಸಗುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದ್ದಾರೆ. Image courtesy

  ಓರ್ವ ರೋಗಿ ಈ ವೈದ್ಯರನ್ನು ಗುರುತಿಸಿದ್ದಾರೆ

  ಓರ್ವ ರೋಗಿ ಈ ವೈದ್ಯರನ್ನು ಗುರುತಿಸಿದ್ದಾರೆ

  ಈ ವೈದ್ಯರ ಬಳಿ ಚಿಕಿತ್ಸೆ ಪಡೆದ ಮಹಿಳೆಯೊಬ್ಬರು ಈ ವಿಡಿಯೋವನ್ನು ಕಂಡು ಈ ವೈದ್ಯರನ್ನು ಕಂಡು ಗುರುತು ಹಿಡಿದಿದ್ದಾರೆ. ಈಕೆ ತಮ್ಮ ದೊಡ್ಡ ಹೊಟ್ಟೆ ಮತ್ತು ಸ್ತನಗಳ ಚಿಕಿತ್ಸೆ ನಡೆಸಲು ಈ ವೈದ್ಯರ ಬಳಿ ಬಂದಿದ್ದು ಶಸ್ತ್ರಚಿಕಿತ್ಸೆಯ ಬಳಿಕ ಮೂರೇ ದಿನದಲ್ಲಿ ಇವರ ಆರೋಗ್ಯ ಬಿಗಡಾಯಿಸಿತ್ತು.

  ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

  ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

  ವಿಶ್ವದಾದ್ಯಂತ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಪ್ರತಿಜ್ಞೆಯನ್ನು ಪಾಲಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ವೇಳೆ ರೋಗಿಗೆ ಅಗತ್ಯವಿರುವ ಎಲ್ಲಾ ರೀತಿಯ ನ್ಯಾಯ ಒದಗಿಸುವುದೂ ಈ ಪ್ರತಿಜ್ಞೆಯಲ್ಲಿ ಒಂದು.

  ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

  ಈ ಕ್ರಮ ವೈದ್ಯವಿಜ್ಞಾನಕ್ಕೇ ಅವಮಾನ

  ಈ ವೈದ್ಯರು ಶಸ್ತ್ರಚಿಕಿತ್ಸೆಯ ವೇಳೆ ನರ್ತಿಸುವುದು ವೈದ್ಯವೃತ್ತಿಗೇ ಅವಮಾನಕರವಾಗಿದೆ ಎಂದು ಹೆಚ್ಚಿನ ವೈದ್ಯರು ಅಭಿಪ್ರಾಯ ಪಡುತ್ತಾರೆ.

  ಈ ಪರಿಗೆ ದಂಗಾದ ಜನತೆ

  ಈ ಪರಿಗೆ ದಂಗಾದ ಜನತೆ

  ಯಾವಾಗ ಈ ವೀಡಿಯೋ ಜಾಲತಾಣದಲ್ಲಿ ಲಭ್ಯವಾಯಿತೋ, ಜನರು ಮನಸೋ ಇಚ್ಛೆ ಇದನ್ನು ರವಾನಿಸಿ ವೈದ್ಯರ ಕೃತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಕರ್ತವ್ಯದ ಸಮಯದಲ್ಲಿ ನರ್ತಿಸಿ ಕರ್ತವ್ಯಲೋಪ ಮಾಡಿದ ವೈದ್ಯರ ಮತ್ತು ಅವರೊಂದಿಗೆ ನರ್ತಿಸಿ ಸಹಯೋಗ ನೀಡಿದ ದಾದಿಯರ ವರ್ತನೆಯನ್ನು ಜಗತ್ತೇ ಖಂಡಿಸಿದೆ.

  ಈ ಪರಿಗೆ ದಂಗಾದ ಜನತೆ

  ಈ ಪರಿಗೆ ದಂಗಾದ ಜನತೆ

  ಇವರ ವಿರುದ್ಧ ತಕ್ಷಣ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ.

  ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ವಿಡಿಯೋ ನೋಡಿ ನೀವೇ ನಿರ್ಧರಿಸಿ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯಿರಿ.

   

  English summary

  The Doctor Who Danced During Surgery!

  Going under the knife and getting operated is such a big thing in itself and if a surgeon plays around at the operation bed, then imagine what could happen?? If you're confused with what we're discussing, then this is the case of a surgeon and a nurse who danced during a surgery!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more