Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಇವೆಲ್ಲಾ ಪ್ಲಾಸ್ಟಿಕ್ ಸರ್ಜರಿ ಮಹಿಮೆ! ಹೀಗೂ ಉಂಟೇ..?
ಮುಂದುವರಿದಿರುವ ವೈದ್ಯಕೀಯ ಲೋಕದಲ್ಲಿ ಇಂದಿನ ದಿನಗಳಲ್ಲಿ ಏನು ಬೇಕಾದರೂ ಮಾಡಬಹುದಾಗಿದೆ. ಎಷ್ಟೇ ಕಷ್ಟದ ಶಸ್ತ್ರಚಿಕಿತ್ಸೆಗಳಾದರೂ ಅದು ಸಾಮಾನ್ಯವೆನ್ನುವಂತಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೃದಯವನ್ನು ತೆಗೆದುಕೊಂಡು ಹೋಗಿ ಜೋಡಿಸುವ ದಿನಗಳು ಇವು. ಇಂತಹ ಶಸ್ತ್ರಚಿಕಿತ್ಸೆ ವೇಳೆ ಕೆಲವು ಸಲ ತಪ್ಪುಗಳು ನಡೆಯುವುದು ಸಹಜ. ಕೆಲವೊಂದು ಸಲ ಇದನ್ನು ಸರಿಪಡಿಸಬಹುದು. ಮತ್ತೆ ಕೆಲವೊಮ್ಮೆ ಜೀವನಪರ್ಯಂತ ರೋಗಿಯನ್ನು ಕಾಡುತ್ತಿರುತ್ತದೆ.
ಅದರಲ್ಲೂ ಪ್ಲಾಸ್ಟಿಕ್ ಸರ್ಜರಿಯಲ್ಲಿ ತಪ್ಪುಗಳು ಆದಾಗ ಅದರಿಂದ ರೋಗಿ ಪಡುವ ಕಷ್ಟ, ಎದುರಿಸುವಂತಹ ಪರಿಸ್ಥಿತಿಯನ್ನು ಹೇಳತೀರದು. ಜೀವನವಿಡಿ ಅವರು ನರಕಯಾತನೆ ಅನುಭವಿಸಬೇಕಾಗುತ್ತದೆ. ಆದಂತಹ ತಪ್ಪುಗಳನ್ನು ತಿದ್ದಿಕೊಳ್ಳಲು ವೈದ್ಯರು ಮತ್ತಷ್ಟು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆದರೆ ಎಲ್ಲವೂ ಸಫಲವಾಗುವುದಿಲ್ಲ. ಈ ಲೇಖನದಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಕೆಲವು ವ್ಯಕ್ತಿಗಳ ಬಗ್ಗೆ ನಾವು ತಿಳಿದುಕೊಳ್ಳುವ...

ಪೃಷ್ಠ ಮತ್ತು ಸೊಂಟದ ಇಂಜೆಕ್ಷನ್ ಚುಚ್ಚಿಸಿಕೊಂಡ ಮಹಿಳೆ
ಪೃಷ್ಠ ಮತ್ತು ಸೊಂಟದ ಇಂಜೆಕ್ಷನ್ ಗಾಗಿ ಮಹಿಳೆಯು ಸುಮಾರು 15 ಕೋಟಿ ವ್ಯಯಿಸಿದ್ದಾಳೆ. ಸಿಲಿಕಾನ್ ಹೊಂದಿರುವ ಇಂತಹ ಇಂಜೆಕ್ಷನ್ ಗಳಿಗೆ ತಾನು ದಾಸಳಾಗಿರುವ ಬಗ್ಗೆ ಎರಡು ಮಕ್ಕಳ ತಾಯಿ ಹೇಳಿಕೊಂಡಿದ್ದಾಳೆ. ತನ್ನ ಪುಸ್ತಕ `ಶಾಟ್ ಗರ್ಲ್ಸ್' ನಲ್ಲಿ ಅವಳು ಕಾಸ್ಮೆಟಿಕ್ ಕಾಳದಂಧೆಯ ಬಗ್ಗೆ ತಿಳಿಸಿದ್ದಾಳೆ.
Image courtesy

ನಕಲಿ ಸ್ತನ ಹೊಂದಿರುವ ಯುರೋಪ್ ನ ಮಹಿಳೆ
ಈ ಮಹಿಳೆ ಯುರೋಪ್ ನಲ್ಲಿ ಅತೀ ದೊಡ್ಡ ಸ್ತನ ಹೊಂದಿರುವ ದಾಖಲೆಯನ್ನು ಹೊಂದಿದ್ದಾಳೆ. ಆಕೆಗೆ ತನ್ನ ಸ್ತನವನ್ನು ಬಿ ಸೈಜ್ ಮಾಡಬೇಕೆನ್ನುವ ಹಂಬಲವಿತ್ತು. ಆದರೆ ಅದೀಗ ಝಡ್ ಸೈಜ್ ಗೆ ಬಂದು ನಿಂತಿದೆ. ಇದರಿಂದ ತೊಂದರೆಯಾಗುವುದಿಲ್ಲವೇ ಎಂದು ಕೇಳಿದಾಗ, ನನಗೆ ಹಾಗನಿಸುವುದಿಲ್ಲ ಎನ್ನುತ್ತಾಳಂತೆ!
Image courtesy

ಎತ್ತರಕ್ಕೆ ಬೆಳೆದ ಯುವಕ
ಅತ್ಯಂತ ಯಾತನದಾಯಕ ಶಸ್ತ್ರಚಿಕಿತ್ಸೆಯ ಬಳಿಕ ಯುವಕನು 6 ಇಂಚು ಎತ್ತರವಾಗಿದ್ದಾನೆ. ಕಾಲನ್ನು ಉದ್ದ ಮಾಡುವಂತಹ ಶಸ್ತ್ರಚಿಕಿತ್ಸೆಯ ಮೂಲಕ ಯುವಕನ ಎತ್ತರವನ್ನು ಹೆಚ್ಚಿಸಲಾಗಿದೆ. ಕುಳ್ಳಗೆ ಇರುವ ಯುವಕರು ಇಂದಿನ ದಿನಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆ ಮಾಡಿಸುತ್ತಿರುತ್ತಾರೆ.
Image courtesy

ಜೆಸ್ಸಿಕಾ ರಾಬ್ಬಿಟ್ ಆಗಲು ಬಯಸಿದ ಮಹಿಳೆ
ಇದನ್ನು ಆಸೆಯಲ್ಲ, ದುರಾಸೆಯೆನ್ನಬಹುದು. ಮಹಿಳೆಯು ಜೆಸ್ಸಿಕಾ ರಾಬ್ಬಿಟ್ ಆಗಲು ತನ್ನ ತುಟಿಗಳಿಗೆ ಸುಮಾರು 100 ಇಂಜೆಕ್ಷನ್ ಗಳನ್ನು ತೆಗೆದುಕೊಂಡಿದ್ದಾಳೆ. ತನ್ನ ತೆಳುವಾದ ತುಟಿಯಿಂದ ಅತೃಪ್ತಿ ಹೊಂದಿದ್ದ ಮಹಿಳೆ ಅದನ್ನು ದಪ್ಪ ಮಾಡಲು ಶಸ್ತ್ರಚಿಕಿತ್ಸೆಗೆ ಒಳಗಾದಳು. Image courtesy

ಪೃಷ್ಠದ ಮರುಜೋಡನೆ
ಪೃಷ್ಠದ ಮರುಜೋಡನೆಯ ಅತ್ಯಂತ ಆಘಾತಕಾರಿ ಶಸ್ತ್ರಚಿಕಿತ್ಸೆ ಇದಾಗಿದೆ. ಇದರಲ್ಲಿ ನಕಲಿ ವೈದ್ಯನೊಬ್ಬ ಮಹಿಳೆಗೆ ಸಿಮೆಂಟ್ ನ ಇಂಜೆಕ್ಷನ್ ನೀಡಿ ಪೃಷ್ಠವನ್ನು ಜೋಡಿಸಲು ಬಯಸಿದ್ದ. ಆತನನ್ನು ಬಂಧಿಸಲಾಗಿದೆ. ಇದಕ್ಕಾಗಿ ಆತ ಸಿಮೆಂಟ್, ಮಿನರಲ್ ಮತ್ತು ಫಿಕ್ಸ್ ಎ ಫ್ಲ್ಯಾಟ್ ಟಯರ್ ಮೆಂಡರ್ ಬಳಸಿದ್ದ. ತೆರೆದ ದೇಹದ ಭಾಗವನ್ನು ಜೋಡಿಸಲು ಆತ ಗಮ್ ಬಳಸಿದ್ದ. ಈ ಮಹಿಳೆ ಈಗ ತೀವ್ರ ಒತ್ತಡದಿಂದಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. Image courtesy

ವಲೆರಿಯಾ ಲುಕ್ಯನೊವಾ
ಈಕೆ ಬಾರ್ಬಿ ಗೊಂಬೆಯಂತೆ ಕಾಣಲು ಬಯಸಿ ತನ್ನ ಪಕ್ಕೆಲುಬುಗಳನ್ನು ತೆಗೆಸಿಕೊಂಡಳು. ಒಂದು ಕಾರ್ಟೂನ್ ಪಾತ್ರವನ್ನು ನೋಡಿ ತಮ್ಮ ದೇಹದ ಒಂದು ಭಾಗವನ್ನೇ ತೆಗೆಸುವಂತಹ ಹುಚ್ಚು ಜನರು ಈ ಭೂಮಿ ಮೇಲಿದ್ದಾರೆ ನೋಡಿ. ಪರಿಣಾಮಗಳು ಏನೇ ಆದರೂ ಆಕೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ. Image courtesy

ಮುಖಕ್ಕೆ ಕಾಂಕ್ರೀಟ್ ಇಂಜೆಕ್ಷನ್
ಈ ಬಡಪಾಯಿ ಮಹಿಳೆಯ ಗಲ್ಲದ ಮೇಲೆ ಕಾಂಕ್ರೀಟ್ ಇಂಜೆಕ್ಷನ್ ನೀಡಲಾಗಿದೆ. ಇದರಿಂದ ಆಕೆಯ ಮುಖಕ್ಕೆ ಸರಿಪಡಿಸಲಾರದಷ್ಟು ವಿಕಾರಗೊಂಡಿದೆ. ಈಗ ಗಲ್ಲದ ಮೇಲೆ ಕಲೆಗಳು, ಮೇಲ್ಡುಟಿಯು ಬಲೂನಿನಂತೆ ಉಬ್ಬಿಕೊಂಡು ಮಹಿಳೆಯು ವಿಕಾರವಾಗಿ ಕಾಣಿಸುತ್ತಿದ್ದಾಳೆ. Image courtesy



Click it and Unblock the Notifications











