Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
’ಎದೆಗಾತಿ’ಯಾಗಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೊಕ್ಕ ಸಿನಿ ತಾರೆಯರು!
ಯಾರೇನೇ ಹೇಳಲಿ, ಸಿನಿಮಾ ತಾರೆಯರು ಅಂದರೆ ಜನರಲ್ಲಿ ಒಂದು ತರಹದ ಆಕರ್ಷಣೆ. ಕೆಲವರಿಗಂತೂ ದೇವರ ಸಮಾನ. ತಮಿಳುನಾಡಿನಲ್ಲಂತೂ ತಾರೆಯರಿಗೆ ಮಂದಿರವನ್ನೇ ಕಟ್ಟಿದ್ದಾರೆ. ಹಿಂದೆ ತರುಣರು ತಮ್ಮ ಕೋಣೆಯ ಗೋಡೆಯಲ್ಲಿ ತಾರೆಯರ ಚಿತ್ರವನ್ನು ಅಂಟಿಸಿಕೊಳ್ಳುತ್ತಿದ್ದರೆ ಇಂದಿನ ತರುಣರು ತಮ್ಮ ಮೊಬೈಲಿನ ವಾಲ್ ಪೇಪರ್ ಆಗಿಸಿಕೊಂಡಿದ್ದಾರೆ. ಸಿನಿಮಾ ತಾರೆಯರ ಮನೆಮಾತನ್ನು ಗುಟ್ಟು ಮಾಡಲಿಕ್ಕೆಂದೇ ಹಲವಾರು ಗಾಸಿಪ್ ಮ್ಯಾಗಜಿನ್‌ಗಳೂ ಬೇಕಾದಷ್ಟಿವೆ. ನಿದ್ದೆ ಕೆಡಿಸಿದ ಸೆಲೆಬ್ರಿಟಿಗಳ ಬ್ರಾ ಲೆಸ್ ಟ್ರೆಂಡ್!
ಆದರೆ ಈ ಸರಕಿಗೆ ಹೆಚ್ಚಿನ ಬಣ್ಣ ನೀಡುತ್ತಿದ್ದರೆ ಮಾತ್ರ ತಾರೆಯರು ಹೆಚ್ಚು ಕಾಲ ಕಣದಲ್ಲಿರಬಹುದು. ಇದೇ ಕಾರಣಕ್ಕೆ ತಾರೆಯರು ತಮ್ಮ ರೂಪ ಲಾವಣ್ಯ ಹಾವ ಭಾವಗಳಿಗೆ ಬಹಳ ಹೆಚ್ಚಿನ ಮಹತ್ವ ನೀಡುತ್ತಾರೆ. ಇದಕ್ಕಾಗಿ ಊಟ, ಆಟವನ್ನೂ ಸರಿಯಾದ ಕ್ರಮದಲ್ಲಿ ಅನುಸರಿಸಿ ಆರೋಗ್ಯವನ್ನು ಉಳಿಸಿಕೊಳ್ಳುತ್ತಾರೆ. ವಿಶೇಷವಾಗಿ ತಾರಾಮಣಿಯರು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಹಲವು ಮಾರ್ಪಾಡುಗಳಿಗೂ ತಯಾರಾಗುತ್ತಾರೆ. ನೋಡಿ, ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಮದುವೆ ಮುರಿದು ಬೀಳುವುದು
ಉದಾಹರಣೆಗೆ ತನ್ನ ಮೊಂಡು ಮೂಗನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಸರಿಪಡಿಸಿಕೊಂಡ ಶ್ರೀದೇವಿ. ಅಂತೆಯೇ ವಕ್ಷಸೌಂದರ್ಯವನ್ನು ಹೆಚ್ಚಿಸಲು ಇಂದು ಸಿಲಿಕೋನ್ ಎಂಬ ಕೃತಕ ವಸ್ತುವನ್ನು ಎದೆಯಡಿಗೆ ಸ್ಥಾಪಿಸಿ ನೋಡುವವರ ಹೃದಯ ಬಡಿತ ಹೆಚ್ಚಿಸಲು ಕಾರಣರಾಗುತ್ತಾರೆ. ಫೇಮಸ್ ಬಾಲಿವುಡ್ ಸೆಲೆಬ್ರಿಟಿಗಳ ಇಷ್ಟದ ಆಹಾರಗಳು
ಕೃತಕಸ್ತನ ಅಳವಡಿಕೆ ಅಥವಾ breast implant ಎಂದು ಕರೆಯಲ್ಪಡುವ ಈ ಶಸ್ತ್ರಚಿಕಿತ್ಸೆ ಕೊಂಚ ದುಬಾರಿಯಾದರೂ ಇದನ್ನು ಅಳವಡಿಸಿಕೊಂಡು ಎದೆಗಾತಿಯರಾದವಲ್ಲಿ ವಿದೇಶೀ ನಟಿ ಕಿಮ್ ಕರ್ದಾಶಿಯಾನ್ ಪ್ರಮುಖರು. ಇದೇ ದಾರಿ ತುಳಿದ ಕೆಲವು ಬಾಲಿವುಡ್ ತಾರೆಯರ ಬಗ್ಗೆ ಕೆಲವು ವಿವರಗಳನ್ನು ನೀಡಿದ್ದೇವೆ, ಮುಂದೆ ಓದಿ....

ಸುಶ್ಮಿತಾ ಸೇನ್
ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಭಾರತೀಯ ತಾರೆಯರಲ್ಲಿ ಸುಶ್ಮಿತಾ ಸೇನ್ ಮೊದಲಿಗರು. ಇವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಬಳಿಕ ಇವರ ಆತ್ಮವಿಶ್ವಾಸ ಬಹಳಷ್ಟು ಹೆಚ್ಚಿದ್ದು ಮುಂದೆ ಅವರು ಸಾಧಿಸಿದ್ದೆಲ್ಲಾ ಇತಿಹಾಸವಾಗಿದೆ.

ಬಿಪಾಷಾ ಬಸು
ಈ ಪಟ್ಟಿಯಲ್ಲಿ ಬರುವ ಎರಡನೆಯ ಹೆಸರು ಬಿಪಾಷಾ ಬಸುರವರದ್ದು. ಕೊಂಚ ತಡವಾಗಿ ಮದುವೆಯಾದ ಇವರು 2004ರಲ್ಲಿ ಈ ಶಸ್ತ್ರಕ್ರಿಯೆಗೆ ಒಳಗಾದರು. ಇದಕ್ಕೂ ಮುನ್ನ ಇವರ ಅಂಗಸೌಷ್ಟವ ಕೊಂಚ ಕುಂದಿದ್ದು ಇದೊಂದು ಕೊರತೆಯಂತೆ ಅನ್ನಿಸಿತ್ತು. ಆದರೆ ಅಂಗಸೌಷ್ಟವ ಉತ್ತಮಗೊಳಿಸಿದ ಬಳಿಕ ಜೀವನದಲ್ಲಿ ಹೆಚ್ಚಿನ ಸಂತೋಷ ಮತ್ತು ಯಶಸ್ಸನ್ನು ಗಳಿಸಿದ್ದಾರೆ.

ಕಂಗನಾ
ಎದೆಯಳತೆ ಕೊಂಚ ಕಡಿಮೆ ಎಂಬುದೊಂದು ಬಿಟ್ಟರೆ ಉಳಿದಂತೆ ಈಕೆ ರಂಭೆಯೇ ಎಂಬ ಕುಹಕವನ್ನು ಕೇಳಿ ತಡೆಯಲಾಗದೇ ಕೃತಕಸ್ತನ ಅಳವಡಿಕೆಗೆ ಚಿಂತಿಸತೊಡಗಿದರು. ಕೆಲವರ್ಷಗಳ ಬಳಿಕ ಅವರ ದೇಹಕ್ಕೆ ಒಪ್ಪುವ ವಕ್ಷಸಂಪತ್ತನ್ನು ಹೊತ್ತು ಕೆಂಪು ರತ್ನಗಂಬಳಿಯ ಮೇಲೆ ನಡೆದು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದರು.

ರಾಖಿ ಸಾವಂತ್
ಇತ್ತೀಚೆಗೆ ಪ್ರಧಾನಿ ಮೋದಿಯವರ ಚಿತ್ರದ ಮುದ್ರಣವಿದ್ದ ಉಡುಪನ್ನು ಧರಿಸಿ ವ್ಯಾಪಕ ಟೀಕೆಗೆ ಒಳಗಾಗಿದ್ದ ನಟಿ ರಾಖಿ ಸಾವಂತ್ ತಮ್ಮ ಎಡಬಿಡಂಗಿಗಳಿಂದಲೇ ಮಾಧ್ಯಮಕ್ಕೆ ಹೆಚ್ಚು ಪರಿಚಿತರು. ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಹೊತ್ತಿನಲ್ಲಿಯೇ ಎಲ್ಲರೆದುರು ತಮ್ಮ ಎದೆಯ ಸಂಪತ್ತು ಕೃತಕ ಎಂದು ಒಪ್ಪಿಕೊಂಡು ನಿಜವಾದ ಎದೆಗಾರಿಕೆ ತೋರಿದ್ದರು. ಆದರೆ ವೈದ್ಯರು ಆರೋಗ್ಯದ ಕಾರಣದಿಂದ ಕೃತಕ ಸ್ತನಗಳನ್ನು ನಿವಾರಿಸಲೇಬೇಕು, ಇಲ್ಲದಿದ್ದರೆ ಪ್ರಾಣಕ್ಕೆ ಆಪಾಯ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಈಗ ಮತ್ತೆ ತಮ್ಮ ನಿಜವಾದ ಸೌಂದರ್ಯಕ್ಕೆ ಮರಳಿದ್ದಾರೆ.

ಆಯೆಶಾ ಟಕಿಯಾ
ಯಾರಿಗೂ ಏನೂ ಹೇಳದೇ, ಯಾವ ಸುದ್ದಿಯೂ ಇಲ್ಲದೇ ಒಮ್ಮೆಲೇ ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡು ಅಚ್ಚರಿ ಮೂಡಿಸಿದ ಆಯೆಶಾ ಟಕಿಯಾ ತಮ್ಮ ಹೊಸ ಅಂಗಸೌಷ್ಟವವನ್ನು ತೋರುವುದರಲ್ಲಿಯೇ ಹೆಚ್ಚಿನ ಅಸ್ಥೆ ವಹಿಸಿದ್ದಾರೆ. ಇವರ ಹಿಂದಿನ ಮೈಮಾಟವನ್ನು ಗಮನಿಸಿದವರು ಈಗ ಇವರು ಪಡೆದಿರುವ ಭಾರೀ ಗಾತ್ರದ ಸೌಷ್ಟವನ್ನು ಕಂಡು ಮೆಚ್ಚುವುದೋ, ಗಾಬರಿಯಾಗುವುದೋ ಎಂಬ ಗೊಂದಲದಲ್ಲಿದ್ದಾರೆ.

ಶ್ರೀದೇವಿ
ತಮ್ಮ ತಾರುಣ್ಯವನ್ನು ಬಹಳ ಕಾಲ ಕಾಪಾಡಿಕೊಂಡು ಬಂದ ಕೆಲವೇ ತಾರೆಯರಲ್ಲಿ ಶ್ರೀದೇವಿ ಒಬ್ಬರು. ತಮ್ಮ ಮೂಗಿನ ಹೊರತಾಗಿ ವಕ್ಷಸಂಪತ್ತನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚಿಸಿಕೊಂಡ ಶ್ರೀದೇವಿ ಇತರರಿಗೆ ಒಂದು ಮಾದರಿಯಾಗಿದ್ದಾರೆ.

ಮಲ್ಲಿಕಾ ಶೆರಾವತ್
ತೆಳ್ಳಗೆ ಬಳುಕುವ ಅಂಶಸೌಷ್ಟವ ಹೊಂದಿರುವ ಮಲ್ಲಿಕಾರವರ ಆಕರ್ಷಕ ವಕ್ಷಸ್ತಲ ಎಷ್ಟೋ ಕಾಲದವರೆಗೆ ಅಭಿಮಾನಿಗಳ ಚರ್ಚೆಯ ವಿಷಯವಾಗಿತ್ತು. ತಮ್ಮ ಸೊಟ್ಟಗಾಗಿದ್ದ ಮೂಗು ಮತ್ತು ತುಟಿಯ ಶಸ್ತ್ರಚಿಕಿತ್ಸೆಯ ಜೊತೆಗೇ ಇದನ್ನೂ ಮಾಡಿಸಿಕೊಂಡೆ ಎಂದು ಅವರೇ ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಬರೇ ಹೇಳುವುದಲ್ಲ, ತಮ್ಮ ಎಲ್ಲಾ ಉಡುಪುಗಳಲ್ಲಿ ವಕ್ಷಸೀಳನ್ನು ತೋರ್ಪಡಿಸುತ್ತಲೂ ಬಂದಿದ್ದಾರೆ.

ಪೂನಂ ಪಾಂಡೆ
ಬಾಲಿವುಡ್‌ನ ರಾಣಿಯ ಪಟಕ್ಕೆ ಅರ್ಹರೋ ಅಲ್ಲವೋ ಎಂದು ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪೂನಂ ಪಾಂಡೆಯವರೂ ಈ ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆ. ತಾನು ಮಾಡಿಸಿಕೊಂಡೇ ಇಲ್ಲ, ಇವು ನಿಜವಾದ ಆಸ್ತಿ ಎಂದು ಇವರು ಎಷ್ಟೇ ಅವಲತ್ತುಕೊಂಡರೂ ಚಾಣಾಕ್ಷ ಚಿತ್ರಗ್ರಾಹಕರು ಹಿಂದಿನ ಮತ್ತು ಇಂದಿನ ಚಿತ್ರಗಳಲ್ಲಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿ ಆಸ್ತಿ ಕೃತಕ ಎಂದು ಸಾಬೀತುಪಡಿಸಿದ್ದಾರೆ.

ಶಿಲ್ಪಾ ಶೆಟ್ಟಿ
ದೇಸೀ ದೀವಾ ಎಂದೇ ಪ್ರಖ್ಯಾತಿ ಗಳಿಸಿದ್ದ ತುಳುನಾಡ ಬೆಡಗಿ ಶಿಲ್ಪಾ ಶಿಟ್ಟಿಯವರು ತಮ್ಮ ಸೌಂದರ್ಯ ವೃದ್ಧಿಸಲು ಹಲವಾರು ಶಸ್ತ್ರಕ್ರಿಯೆಗೆ ಒಳಗಾಗಿದ್ದಾರೆ. ಮೂಗು, ದವಡೆ ಮತ್ತು ಸ್ತನಗಳ ಸಹಿತ ಹಲವಾರು ಚಿಕ್ಕಪುಟ್ಟು ಶಸ್ತ್ರಕ್ರಿಯೆಗೆ ಒಳಗಾಗಿದ್ದ ಇವರು ತಮ್ಮ ಕೃತಕಸ್ತನ ಅಳವಡಿಕೆಯ ಬಗ್ಗೆ ಪತ್ರಿಕೆಗಳು ಬರೆದಾಗ ಒಂದಿಷ್ಟೂ ವಿಚಲಿತರಾಗದೇ ನಗುಮುಖದಿಂದಲೇ ಎಲ್ಲರನ್ನೂ ಎದುರಿಸಿ ತಮ್ಮ ನಿಜವಾದ ಎದೆಗಾರಿಕೆಯನ್ನು ತೋರಿದ್ದರು.



Click it and Unblock the Notifications











