For Quick Alerts
ALLOW NOTIFICATIONS  
For Daily Alerts

ಭೂಮಿಯ ಮೇಲಿನ ಸ್ವರ್ಗ, ನಮ್ಮ ಕಾಶ್ಮೀರ

By Manu
|

ಭಾರತದಲ್ಲಿ ನೋಡಲೇ ಬೇಕಾದ ಸುಂದರ ಸ್ಥಳಗಳಲ್ಲಿ ಕಾಶ್ಮೀರವು ಸಹ ಒಂದು. ಬಹಳಷ್ಟು ಜನರು ಇದನ್ನು ಭುವಿಯ ಸ್ವರ್ಗ ಎಂದು ಕರೆಯುತ್ತಾರೆ. ಕಾಶ್ಮೀರ ಎಂದರೆ ಮೊದಲು ಮಧುಚಂದ್ರಕ್ಕೆ ಹೋಗುವವರ ಪಾಲಿಗೆ ಮೊದಲ ಪ್ರಾಶಸ್ತ್ಯವಾಗಿತ್ತು. ಪ್ರವಾಸ ಕ್ಷೇತ್ರಗಳು ಮತ್ತು ತೀರ್ಥ ಯಾತ್ರೆಗೆ ಕಾಶ್ಮೀರವು ಹೇಳಿ ಮಾಡಿಸಿದ ಸ್ಥಳವಾಗಿತ್ತು. ಈಗಲೂ ಹಾಗೆಯೇ ಇದೆ, ಆದರೆ ಅದು ರಾಜಕೀಯ ಬೆಂಕಿಯಲ್ಲಿ ಬೇರೆಯಾಗಿ ಪರಿವರ್ತನೆಯಾಗಿದೆ ಅಷ್ಟೇ!. ಇರಲಿ ಬಿಡಿ ಕಾಶ್ಮೀರವು ಒಂದು ಕಾಲದಲ್ಲಿ ಸಿನಿಮಾ ಶೂಟಿಂಗ್‍ಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು.

ನಮ್ಮ ಕನ್ನಡ ಚಿತ್ರ, ಅಣ್ಣಾವ್ರ ಅಭಿನಯದ "ಶಂಕರ್ ಗುರು" ಮುಂತಾದ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಇಲ್ಲಿನ ಸೌಂದರ್ಯವನ್ನು ಸೆರೆ ಹಿಡಿಯಲು ಕ್ಯಾಮೆರಾ ಕಣ್ಣಿಗು ಸಾಲದು. ಇಂದಿಗೂ ಕ್ಯಾಮೆರಾದ ಕಣ್ಣಿಗೆ ಬೀಳದ ಕಾಶ್ಮೀರ ಇದೆ. ಏಕೆಂದರೆ ಎಲ್ಲಿಯೇ ಕ್ಯಾಮೆರಾ ಇಟ್ಟರು ಸುಂದರವಾಗಿ ಕಾಣುವ ಕಾಶ್ಮೀರವು ಕ್ಯಾಮೆರಾವನ್ನು ಸಹ ಮೋಸ ಮಾಡಿಬಿಡುತ್ತದೆ. ಇದು ಉತ್ಪ್ರೇಕ್ಷೆಯಲ್ಲ ಎಂದು ಯಾರು ಬೇಕಾದರು ಹೇಳಬಲ್ಲರು. ಜೀವನದಲ್ಲಿ ಒಮ್ಮೆಯಾದರು ಕಾಶ್ಮೀರಕ್ಕೆ ಹೋಗಿ ಬರಬೇಕು ಎಂಬುದು ಹೆಚ್ಚಿನವರ ಆಸೆಯಾಗಿರುತ್ತದೆ.

ಕಾಶ್ಮೀರಿ ಜನರು ಆತಿಥ್ಯಕ್ಕೆ ಹೆಸರಾದವರು. ಅವರು ತಮ್ಮ ಅತಿಥಿಗಳನ್ನು ಜಾತಿ, ಮತ ಮತ್ತು ಧರ್ಮಗಳನ್ನು ಲೆಕ್ಕಿಸದೆ ಸೇವೆಯನ್ನು ಸಲ್ಲಿಸುತ್ತಾರೆ. ಅವರು ಎಂದಿಗು ಅತಿಥಿಗಳನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಗುರುತು, ಪರಿಚಯ ಇಲ್ಲದವರನ್ನು ಸಹ ಅವರು ಹೇಗೆ ಉಪಚರಿಸುತ್ತಾರೆ ಎಂಬುದನ್ನು ನೋಡಬೇಕು ಎಂದರೆ ನೀವು ಕಾಶ್ಮೀರಕ್ಕೆ ಹೋಗಬೇಕು. ಸೌಂದರ್ಯಕ್ಕೆ ಹೆಸರಾಗಿರುವ ಈ ಕಣಿವೆ ರಾಜ್ಯವು ಹೂವುಗಳು, ಪರ್ವತಗಳು, ಸರೋವರಗಳು, ಕೆರೆ, ನದಿಗಳು ಮತ್ತು ಹಿಮದಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ.

ಮೊಘಲರು ತಮ್ಮ ಆಳ್ವಿಕೆಯ ಕಾಲದಲ್ಲಿ ಕಾಶ್ಮೀರವನ್ನು ಮತ್ತಷ್ಟು ಸುಂದರಗೊಳಿಸಿದರು. ಕಾಶ್ಮೀರದಲ್ಲಿ ಹಲವಾರು ಮೊಘಲ್ ಉದ್ಯಾನವನಗಳನ್ನು ಸಹ ಇವರು ನಿರ್ಮಿಸಿದರು. ಬನ್ನಿ ಕಾಶ್ಮೀರದ ಕುರಿತಾಗಿ ಇರುವ ಸೋಜಿಗದ ಸಂಗತಿಗಳನ್ನು ತಿಳಿದುಕೊಂಡು ಬರೋಣ. ಜಮ್ಮು ಮತ್ತು ಕಾಶ್ಮೀರ ರಾಜ್ಯವು ಎರಡು ರಾಜಧಾನಿಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಶ್ರೀನಗರ ರಾಜಧಾನಿಯಾದರೆ, ಚಳಿಗಾಲದಲ್ಲಿ ಇದಕ್ಕೆ ಜಮ್ಮು ರಾಜಧಾನಿಯಾಗಿರುತ್ತದೆ...

ಸಾಕ್ಷರತೆ ಪ್ರಮಾಣ

ಸಾಕ್ಷರತೆ ಪ್ರಮಾಣ

ಕಾಶ್ಮೀರದಲ್ಲಿ ಬಹುತೇಕ ಎಲ್ಲರು ವಿದ್ಯಾವಂತರೆ, ಇಲ್ಲಿ ಸಾಕ್ಷರತೆ ಪ್ರಮಾಣ ತುಂಬಾ ಹೆಚ್ಚಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ಒಟ್ಟಾರೆ ಸಾಕ್ಷರತೆ ಪ್ರಮಾಣವನ್ನು ಪರಿಗಣಿಸಿದರೆ ಕಾಶ್ಮೀರದ ಸರಾಸರಿ ಸಾಕ್ಷರತಾ ಪ್ರಮಾಣ ಹೆಚ್ಚಾಗಿರುತ್ತದೆ.

ಕಾಶ್ಮೀರ ಜನಸಂಖ್ಯೆ

ಕಾಶ್ಮೀರ ಜನಸಂಖ್ಯೆ

ಕಾಶ್ಮೀರದ ಜನಸಂಖ್ಯೆ 16 ಮಿಲಿಯನ್, ಇದು ವಿಶ್ವದ ಸುಮಾರು 133 ರಾಷ್ಟ್ರಗಳಿಗಿಂತ ಹೆಚ್ಚು ಎಂಬುದು ವಿಶೇಷ.

370 ನೇ ವಿಧಿ

370 ನೇ ವಿಧಿ

ಈ ವಿಧಿಯ ಅನ್ವಯ ಕಾಶ್ಮೀರದ ನಾಗರಿಕನಾಗದ ಹೊರತು, ಹೊರಗಿನವರು ಇಲ್ಲಿ ಭೂಮಿಯನ್ನು ಖರೀದಿಸುವಂತಿಲ್ಲ. ಈ ವಿಶೇಷ ಸ್ಥಾನಮಾನ ಈ ರಾಜ್ಯಕ್ಕಿದೆ.

ಪೌರತ್ವ ರದ್ದು

ಪೌರತ್ವ ರದ್ದು

ಒಂದು ವೇಳೆ ಜಮ್ಮು ಕಾಶ್ಮೀರದ ಮಹಿಳೆ ಅಥವಾ ಯುವತಿಯು ಭಾರತದ ಬೇರೆ ರಾಜ್ಯದ ಅಥವಾ ಬೇರೆ ದೇಶದ ವ್ಯಕ್ತಿಯನ್ನು ಮದುವೆಯಾದಲ್ಲಿ, ಅವರ ಪೌರತ್ವ ರದ್ದಾಗುತ್ತದೆ.

"ಲಕ್ಷ್ಮಿಯ ನಗರ"

ಶ್ರೀನಗರವನ್ನು "ಲಕ್ಷ್ಮಿಯ ನಗರ" ಎಂದು ಕರೆಯುತ್ತಾರೆ. ಈ ಸುಂದರ ನಗರವನ್ನು ನಿರ್ಮಿಸಿದವನು ಅಶೋಕ. ಜಮ್ಮುವು ಸುಮಾರು 3000 ವರ್ಷಗಳ ಹಿಂದೆ ನಿರ್ಮಾಣವಾಯಿತು.

ಧಾರ್ಮಿಕ ವೈವಿಧ್ಯತೆ

ಧಾರ್ಮಿಕ ವೈವಿಧ್ಯತೆ

ಕಾಶ್ಮೀರದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಹಿಂದೂಗಳ ಸಹ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಇನ್ನು ಜಮ್ಮು ಮತ್ತು ಲಡಾಖ್‌ನಲ್ಲಿ ಬೌದ್ಧರು ಹೆಚ್ಚಿಗೆ ಇದ್ದಾರೆ.

ಭಾರತದ ಮೊಟ್ಟ ಮೊದಲ ಸೂಪರ್‌ಸ್ಟಾರ್

ಭಾರತದ ಮೊಟ್ಟ ಮೊದಲ ಸೂಪರ್‌ಸ್ಟಾರ್

ಭಾರತದ ಮೊಟ್ಟ ಮೊದಲ ಸೂಪರ್‌ಸ್ಟಾರ್ ಎಂದು ಖ್ಯಾತಿ ಪಡೆದ, ಗಾಯಕ, ನಟರಾದ ಕೆ.ಎಲ್. ಸೈಗಲ್ ಹುಟ್ಟಿದ್ದು ಜಮ್ಮು ಕಾಶ್ಮೀರದಲ್ಲಿ ಎಂಬುದು ವಿಶೇಷ.

ಗಡಿಗಳು

ಗಡಿಗಳು

ಜಮ್ಮು ಮತ್ತು ಕಾಶ್ಮೀರವು ತನ್ನ ಗಡಿಯನ್ನು ನೆರೆಯ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಹಂಚಿಕೊಂಡಿದೆ. ಇದು ಎರಡು ವಿದೇಶಿ ಗಡಿಗಳನ್ನು ಹೊಂದಿರುವ ಏಕೈಕ ಭಾರತೀಯ ರಾಜ್ಯವಾಗಿದೆ.

English summary

Surprising Facts About The Heaven On Earth, Kashmir

Kashmir is one of the beautiful places in India, and most people relate it to heaven on earth. People say that there is a spiritual healing after vising Kashmir. It is true because it has been a place of many saints. Kashmir is a place where most movie shootings take place, as it is a land where nature's beauty can be found everywhere. Read on the article to find some amazing facts about Kashmir.
Story first published: Thursday, February 18, 2016, 11:55 [IST]
X
Desktop Bottom Promotion