For Quick Alerts
ALLOW NOTIFICATIONS  
For Daily Alerts

ವಿಚಿತ್ರ ಅಂಗಗಳನ್ನು ಹೊಂದಿರುವ ಮಾನವ ಶರೀರಗಳು

By Super
|

ಈ ಜಗತ್ತಿನಲ್ಲಿ ಅತ್ಯಂತ ಕುತೂಹಲಕರ ಮತ್ತು ಅತ್ಯಂತ ನೋವುನೀಡುವ ಅನುಭವವೆಂದರೆ ಹೆರಿಗೆ. ಮಗುವೊಂದರ ತಾಯಿಯಾಗಲು ಪ್ರತಿ ಹೆಣ್ಣೂ ಬಯಸುತ್ತಾಳೆ. ದಂಪತಿಗಳ ಕುಡಿಯೊಂದು ಈ ಜಗತ್ತಿನಲ್ಲಿ ಕಣ್ಣು ಬಿಟ್ಟ ಕ್ಷಣ ಇಬ್ಬರಿಗೂ ಜೀವನವೇ ಸಾರ್ಥಕವಾದ ಕ್ಷಣವಾಗಿದೆ. ಮೊತ್ತ ಮೊದಲಾಗಿ ಎಲ್ಲರೂ ಗಮನಿಸುವುದು ಮಗುವಿನ ಆರೋಗ್ಯ ಮತ್ತು ಎಲ್ಲಾ ಅಂಗಗಳು ಸರಿಯಾಗಿವೆಯೇ ಎಂದು.

ಕೆಲವೊಮ್ಮೆ ಮಕ್ಕಳು ಹೆಚ್ಚುವರಿ ಅಂಗಗಳ ಜೊತೆಗೇ ಈ ಭೂಮಿಯ ಮೇಲೆ ಬರುತ್ತವೆ. ಉದಾಹರಣೆಗೆ ಆರು ಬೆರಳುಗಳು. ಇದು ಹೆಚ್ಚಿನ ಕಾಳಜಿಯ ವಿಷಯವಲ್ಲದಿದ್ದರೂ ಒಂದು ವೇಳೆ ಹೆಚ್ಚುವರಿ ಕಾಲುಗಳನ್ನು ಹೊಂದಿದ್ದರೆ? ಆಗ ದಂಪತಿಗಳ ಮತ್ತು ಮನೆಯ ಸದಸ್ಯರಿಗೆ ಆಘಾತಕಾರಿ ಸಂಗತಿಯಾಗಬಹುದು. ವೈದ್ಯ ವಿಜ್ಞಾನಕ್ಕೊಂದು ಸವಾಲೂ ಆಗಬಹುದು.

ಉದಾಹರಣೆಗೆ ರಾಜಸ್ಥಾನದಲ್ಲಿ ಹುಟ್ಟಿದ ಲಕ್ಷ್ಮಿ ತಾತ್ಮಾ ಎಂಬ ಮಗುವಿಗೆ ಎಂಟು ಕಾಲುಗಳಿದ್ದವು. ವಾಸ್ತವವಾಗಿ ಅವಳಿಯಾಗಿ ಹುಟ್ಟಬೇಕಿದ್ದ ಇಬ್ಬರು ಮಕ್ಕಳ ಅಂಗಗಳು ಬೆಸೆದು ಕೈಕಾಲುಗಳು ಮಾತ್ರ ಒಂದೇ ಮುಂಡಕ್ಕೆ ಅಂಟಿಕೊಂಡಂತಿದ್ದವು. ಈ ಮಗುವಿಗೆ ದೈವಿಕ ರೂಪವನ್ನು ನೀಡಿ ಬಹಳಷ್ಟು ಪ್ರಚಾರ ನೀಡಲಾಯಿತಾದರೂ ವೈದ್ಯವಿಜ್ಞಾನ ಇದನ್ನೊಂದು ಸವಾಲಾಗಿ ಪರಿಗಣಿಸಿ ಶಸ್ತ್ರಚಿಕಿತ್ಸೆಯ ಮೂಲಕ ಹೆಚ್ಚುವರಿ ಕೈಕಾಲುಗಳನ್ನು ನಿವಾರಿಸಿ ಹೊಸಜೀವನ ನೀಡಿತು. ಇಂತಹ ಹಲವು ಅಚ್ಚರಿಯ ಮತ್ತು ಹೆಚ್ಚುವರಿ ಅಂಗಗಳನ್ನು ಇಟ್ಟುಕೊಂಡು ಈ ಭೂಮಿಯ ಮೇಲೆ ಬಂದ ಹಲವು ಪ್ರಕರಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಮೂವತ್ತೊಂದು ಬೆರಳುಗಳ ಬಾಲಕ

ಮೂವತ್ತೊಂದು ಬೆರಳುಗಳ ಬಾಲಕ

ಚೀನಾದಲ್ಲಿ ಹುಟ್ಟಿದ ಒಂದು ಗಂಡುಮಗುವಿಗೆ ಒಟ್ಟು ಮೂವತ್ತೊಂದು ಬೆರಳುಗಳಿದ್ದವು. ಪ್ರತಿ ಕಾಲಿನಲ್ಲಿ ಎಂಟು ಮತ್ತು ಕೈಗಳಲ್ಲಿ ಏಳು ಮತ್ತು ಎಂಟು ಬೆರಳುಗಳನ್ನು ಹೊಂದಿದ್ದು ಕೈಬೆರಳುಗಳಲ್ಲಿ ಮೂರು ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದವು. 2010ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕನ ಹೆಚ್ಚುವರಿ ಬೆರಳುಗಳನ್ನು ನಿವಾರಿಸಿ ಇಂದು ಉಳಿದವರಂತೆ ಸಾಮಾನ್ಯ ಜೀವನ ನಡೆಸಲು ಆತನಿಗೆ ಸಾಧ್ಯವಾಗಿದೆ. Image courtesy

ಎಂಟು ಕಾಲುಗಳ ಬಾಲಕಿ

ಎಂಟು ಕಾಲುಗಳ ಬಾಲಕಿ

ಒಟ್ಟು ಎಂಟು ಕೈ ಕಾಲುಗಳನ್ನು ಹೊಂದಿದ್ದ ಲಕ್ಷ್ಮಿ ತಾತ್ಮಾಳನ್ನು ದೇವಿಯ ಅವತಾರವೆಂದೇ ಜನರು ತಿಳಿದು ಈಕೆಯ ದರ್ಶನಕ್ಕಾಗಿ ಮುಗಿಬೀಳುತ್ತಿದ್ದರು. ಬಡವರಾದ ತಂದೆತಾಯಿಗಳ ಪಾಲಿಗೆ ಈಕೆಯ ಆರೋಗ್ಯವೇ ಮುಖ್ಯವಾಗಿತ್ತು. ಆದ್ದರಿಂದ ಈಕೆಯನ್ನು ಪ್ರದರ್ಶನದ ವಸ್ತುವಾಗಿರಿಸಿ ಲಕ್ಷಾಂತರ ರೂಪಾಯಿ ಗಳಿಸುವ ಯೋಚನೆಯನ್ನೇ ಮಾಡದೇ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗುವಂತೆ ವೈದ್ಯರಲ್ಲಿ ಕರೆದುಕೊಂಡು ಬಂದರು. ಶಸ್ತ್ರಕ್ರಿಯೆಯ ಮೂಲಕ ಈಕೆಯ ಹೆಚ್ಚುವರಿ ಕೈ ಕಾಲುಗಳನ್ನು ನಿವಾರಿಸಿ ಇಂದು ಈಕೆ ಬೇರೆಯವರ ಜೊತೆಗೆ ಆಟವಾಡಲು ಶಾಲೆಗೆ ಹೋಗಲು ಸಾಧ್ಯವಾಗಿದೆ.

Image courtesy

ಪಾದದಲ್ಲೊಂದು ಮೊಲೆತೊಟ್ಟು ಇದ್ದ ಮಹಿಳೆ

ಪಾದದಲ್ಲೊಂದು ಮೊಲೆತೊಟ್ಟು ಇದ್ದ ಮಹಿಳೆ

ಸಾಮಾನ್ಯವಾಗಿ ಪ್ರತಿ ಮನುಷ್ಯರಲ್ಲಿಯೂ ಎರಡು ಚಾಚಿ ಅಥವಾ ಮೊಲೆತೊಟ್ಟುಗಳಿರುತ್ತವೆ. ಎಲ್ಲೋ ಅಪರೂಪಕ್ಕೆ ಕೆಲವರಲ್ಲಿ ಮೂರು ಇರುತ್ತವೆ. ಆದರೆ ಈ ಮೂರನೆಯ ತೊಟ್ಟು ಚಿಕ್ಕದಾಗಿದ್ದು ದೊಡ್ಡದೊಂದು ಮಚ್ಚೆ ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಕೊಂಚ ದೊಡ್ಡದಾಗಿದ್ದರೂ ಸೊಂಟದಿಂದ ಮೇಲೇ ಇವು ಕಾಣಿಸಿಕೊಳ್ಳುತ್ತವೆ. ಆದರೆ ಬ್ರಜಿಲ್ ದೇಶದ ಯುವತಿಯೊಬ್ಬರ ಪಾದದಡಿಯಲ್ಲಿ ಸರಿಸುಮಾರು ಎದೆಯ ಗಾತ್ರದ ಮತ್ತು ಸ್ಪಷ್ಟವಾದ ಚಾಚಿ ಇದ್ದು ಪ್ರಾಯಶಃ ವಿಶ್ವದ ಏಕಮಾತ್ರ ಮಹಿಳೆಯಾಗಿದ್ದಾರೆ. ಆಕೆ ನಡೆಯುವಾಗಲೀ ಒತ್ತಿದಾಗಲಿ ನೋವಾಗುವುದೇ ಇಲ್ಲವಾದ ಕಾರಣ ಆಕೆಗೆ ಇಪ್ಪತ್ತೆರಡು ವರ್ಷವಾಗುವವರೆಗೂ ಯಾರಿಗೂ ತೋರಿಸಿಯೇ ಇರಲಿಲ್ಲ. ಬಳಿಕವೇ ಈಕೆಯನ್ನು ಪರೀಕ್ಷಿಸಿದ ವೈದ್ಯರ ಮೂಲಕ ಈ ವಿಷಯ ಬಹಿರಂಗಗೊಂಡಿದೆ.

Image courtesy

ಎರಡು ಗರ್ಭದ್ವಾರಗಳ ಮಹಿಳೆ

ಎರಡು ಗರ್ಭದ್ವಾರಗಳ ಮಹಿಳೆ

ಸಾಮಾನ್ಯವಾಗಿ ಪ್ರತಿ ಮಹಿಳೆಗೆ ಒಂದೇ ಗರ್ಭದ್ವಾರವಿರುತ್ತದೆ. ಪ್ರಥಮ ಸಮಾಗಮದಲ್ಲಿ ಇದರ ದಾರಿಯಲ್ಲಿರುವ ಕನ್ಯಾಪೊರೆ ನಿವಾರಣೆಯಾಗಿ ಗರ್ಭಧಾರಣೆ ಸಾಧ್ಯವಾಗುತ್ತದೆ. ಆದರೆ ಕ್ಯಾಸಾಂಡ್ರಾ ಬ್ಯಾಂಕ್ಸನ್ ಎಂಬ ಯುವತಿಯ ದೇಹದಲ್ಲಿ ಎರಡು ಗರ್ಭದ್ವಾರ ಅಥವಾ ಜನನಾಂಗಗಳಿದ್ದುದು ಬೆನ್ನುನೋವಿನ ಕಾರಣಕ್ಕಾಗಿ ಆಕೆಯ ಮೂತ್ರಪಿಂಡಗಳನ್ನು ವೈದ್ಯರು ಪರೀಕ್ಷಿಸುವವರೆಗೆ ಆಕೆಗೆ ಗೊತ್ತೇ ಇರಲಿಲ್ಲ. ಆದರೆ ಇದೊಂದು ವರದಾನ ಎಂದು ಭಾವಿಸಿದ್ದವರಿಗೆ ನಿರಾಶೆ ಕಾದಿದೆ. ಏಕೆಂದರೆ ಇದರಿಂದ ಯಾವುದೇ ಅನುಕೂಲವಾಗಲೀ ಅಗತ್ಯವಾಗಲೀ ಇಲ್ಲದ ಕಾರಣ ಹೇಳಿಕೊಳ್ಳುವುದಕ್ಕೆ ಮಾತ್ರ ಉತ್ತಮವಾಗಿದೆ. uterus didelpys ಎಂಬ ಹೆಸರಿನ ಈ ವಿಚಿತ್ರ ತೊಂದರೆ ಇರುವ ಮಹಿಳೆ ಪ್ರಾಯಶಃ ಜಗತ್ತಿನಲ್ಲಿ ಇವರೊಬ್ಬರೇ ಇರಬಹುದು.

Image courtesy

ಬೆನ್ನಿನಲ್ಲಿ ಪಿಂಡಹೊತ್ತ ಬಾಲಕಿ

ಬೆನ್ನಿನಲ್ಲಿ ಪಿಂಡಹೊತ್ತ ಬಾಲಕಿ

ಚೀನಾದಲ್ಲಿ ಹುಟ್ಟಿದ ಯಿನ್ ಕ್ಸಿಂಗ್ ಎಂಬ ಬಾಲಕಿಯ ಬೆನ್ನಿನಲ್ಲಿ ಹುಟ್ಟಿದಾಗಿನಿಂದಲೂ ಒಂದು ವಿಚಿತ್ರವಾದ ಪಿಂಡವೊಂದು ಅಂಟಿಕೊಂಡಿತ್ತು. ಈಗಿನ್ನೂ ಮಗು, ಕೊಂಚ ದೊಡ್ಡದಾದ ಬಳಿಕ ನಿವಾರಿಸಿದರಾಯಿತು ಎಂದು ವೈದ್ಯರು ಹೇಳಿದ್ದರಿಂದ ಹಾಗೇ ಬಿಟ್ಟ ತಂದೆತಾಯಿಗಳಿಗೆ ಅಚ್ಚರಿ ಕಾದಿತ್ತು. ಮಗು ಬೆಳೆದಂತೆಯೇ ಬೆನ್ನಿನ ಪಿಂಡವೂ ದೇಹಕ್ಕನುಸಾರವಾದ ಗಾತ್ರದಲ್ಲಿ ಬೆಳೆಯತೊಡಗಿತು. ಅಷ್ಟೇ ಅಲ್ಲ, ಇದಕ್ಕೆ ಕೈಗಳು, ಮೊಲೆತೊಟ್ಟುಗಳು ಮೂಗು ಮೊದಲಾದ ಮನುಷ್ಯ ಅಂಗಗಳೂ ಮೂಡತೊಡಗಿದವು. ಬಳಿಕ ಎಚ್ಚೆತ್ತ ವೈದ್ಯ ತಂಡ ಈ ಹೆಚ್ಚುವರಿ ಅಂಗಗಳನ್ನು ಶಸ್ತ್ರಕ್ರಿಯೆಯಿಂದ ನಿವಾರಿಸಿ ಬಾಲಕಿಗೆ ಹೊಸಜೀವನ ನೀಡಿದರು. Image courtesy

ಎರಡು ಹೃದಯಗಳ ಪುರುಷ

ಎರಡು ಹೃದಯಗಳ ಪುರುಷ

ಇಟಲಿಯಲ್ಲಿ ಹುಟ್ಟಿದ ಈ ಯುವಕ ಚಿಕ್ಕಂದಿನಲ್ಲಿ ಎಲ್ಲರಂತೆಯೇ ಇದ್ದ. ಆದರೆ ನಿಧಾನವಾಗಿ ದೇಹದೊಳಗೆ ಇನ್ನೊಂದು ಹೃದಯವೂ ಬೆಳೆಯತೊಡಗಿ ಕಾರ್ಯನಿರ್ವಹಿಸಲೂ ತೊಡಗಿತು. ಆತನಿಗೆ ಬಿಡಿ, ಅವರ ವೈದ್ಯರಿಗೂ ಈ ಬಗ್ಗೆ ಗೊತ್ತಾಗಲೇ ಇಲ್ಲ. ಏಕೆಂದರೆ ಎರಡೂ ಹೃದಯಗಳು ಸರಿಸಮನಾಗಿ ಹೊಡೆದುಕೊಳ್ಳುತ್ತಿದ್ದವು. ಒಮ್ಮೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಸಿದ ಬಳಿಕವೇ ಈ ವಿಷಯ ವೈದ್ಯರಿಗೆ ತಿಳಿದುಬಂದಿತ್ತು. ಅಷ್ಟೇ ಅಲ್ಲ, ಇದೇ ಎರಡನೆಯ ಹೃದಯದ ಕಾರಣ ಆತ ಎರಡನೆಯ ಹೃದಯಾಘಾತದಿಂದಲೂ ಬದುಕುಳಿದ. Image courtesy

ನಾಲ್ಕು ಹೆಚ್ಚುವರಿ ಕಾಲುಗಳ ಬಾಲಕ

ನಾಲ್ಕು ಹೆಚ್ಚುವರಿ ಕಾಲುಗಳ ಬಾಲಕ

ಬಿಹಾರದ ದೀಪಕ್ ಪಾಸ್ವಾನ್ ಎಂಬ ಈ ಬಾಲಕನ ಎದೆಯಿಂದ ಬರೋಬ್ಬರಿ ನಾಲ್ಕು ಕಾಲುಗಳು ಜೋತಾಡುತ್ತಿದ್ದ ಕಾರಣ ಆತನ ಗ್ರಾಮದ ಜನರು ಈತನನ್ನು ಸೈತಾನನ ಅವತಾರ ಎಂದೇ ತಿಳಿದಿದ್ದರು. ಅದರಲ್ಲೂ ಎರಡು ಕಾಲುಗಳು ನೀಳವಾಗಿದ್ದು ಎದೆ ಸೀಳಿ ರಾಕ್ಷಸನೊಬ್ಬ ದೇಹದೊಳಗಿಂದ ಹೊರಗೆ ಬರುತ್ತಿದ್ದಂತಿತ್ತು. ಇದರ ಚಿಕಿತ್ಸಾ ವೆಚ್ಚ (ಐವತ್ತು ಸಾವಿರ ಪೌಂಡುಗಳು) ವನ್ನು ಭರಿಸಲಾಗದ ಕಾರಣ ಬಾಲಕನಿಗೆ ಹತ್ತು ಹನ್ನೆರಡು ವರ್ಷವಾದರೂ ಎಲ್ಲಿಯೂ ಚಿಕಿತ್ಸೆ ಲಭಿಸಿರಲೇ ಇಲ್ಲ. ಆದರೆ 2010ರ ಜೂನ್‌ನಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಉಚಿತವಾಗಿ ಈ ಹೆಚ್ಚುವರಿ ಅಂಗಗಳನ್ನು ನಿವಾರಿಸಿ ಬಾಲಕನಿಗೆ ಹೊಸಜೀವನ ನೀಡಿದ್ದಾರೆ. Image courtesy

ಬಾಲಕನಿಗೆ ಮುಖವಾಡದಂತಹ ಎರಡನೆಯ ಮುಖ

ಬಾಲಕನಿಗೆ ಮುಖವಾಡದಂತಹ ಎರಡನೆಯ ಮುಖ

ಚೀನಾದಲ್ಲಿ ಹುಟ್ಟಿದ ಕಾಂಕಾಂಗ್ ಎಂಬ ಬಾಲಕನ ಮುಖವನ್ನು ನೋಡಿದರೆ ಒಂದು ಮುಖದ ಮೇಲೆ ಇನ್ನೊಂದು ಮುಖವನ್ನು ಮುಖವಾಡದಂತೆ ಧರಿಸಿದಂತೆ ತೋರುತ್ತಿತ್ತು. transverse facial cleft ಎಂಬ ಹೆಸರಿನ ಅತ್ಯಪರೂಪ ತೊಂದರೆ ಇರುವ ಈ ಮಗುವಿಗೆ ಹದಿನಾಲ್ಕು ತಿಂಗಳು ತುಂಬಿದ ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಸಾಮಾನ್ಯ ರೂಪ ಪಡೆಯಲು ಸಾಧ್ಯವಾಗಿದೆ. ಇದೇ ತೊಂದರೆ ಇರುವ ಇನ್ನೊಂದು ಮಗು ವಿಯೆಟ್ನಾಂನಲ್ಲಿಯೂ ಜನಿಸಿದ್ದು ಸಂಘಸಂಸ್ಥೆಗಳ ಹಣಕಾಸಿನ ನೆರವಿನಿಂದ ಸಾಯ್ಗಾಂಗ್ ನಗರದ ಪ್ರಮುಖ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಹೊಸ ರೂಪ ನೀಡಲು ಸಾಧ್ಯವಾಗಿದೆ. Image courtesy


English summary

Strange Extra Body Parts That Were Found In Humans

There is no experience in this world that can be compared to an experience of giving birth. When the infant comes out into this big world, life seems perfect for the couple. But, what happens when you see that the little one as a special child or a child born with extra limbs? It can be a very sad thing to accept for the parents too. Well, in this article we are here to share the list of people who were born special having extra body parts. So, read on to find out about the people who were born with extra body parts and we're sure you would be amazed with the list of people with the extra growth.
X
Desktop Bottom Promotion