For Quick Alerts
ALLOW NOTIFICATIONS  
For Daily Alerts

ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...

By Super Admin
|

ಅನೈತಿಕ ಸಂಬಂಧ ಕಾನೂನೂ ಬಾಹಿರವೂ ಧರ್ಮಬಾಹಿರವೂ ಆಗಿದೆ. ಸಮಾಜದ ಯಾವುದೇ ಧರ್ಮ, ಯಾವುದೇ ಪಂಗಡದಲ್ಲಿ ಇದಕ್ಕೆ ಯಾವುದೇ ಮಾನ್ಯತೆಯಾಗಲೀ ಗೌರವವಾಗಲೀ ಇಲ್ಲ. ಆದರೂ ವಿಶ್ವದಾದ್ಯಂತ ಅನೈತಿಕ ಸಂಬಂಧಗಳು ನಡೆಯುತ್ತಲೇ ಇವೆ. ಇನ್ನೊಂದು ಭಯಾನಕ ಸತ್ಯಸಂಗತಿ ಎಂದರೆ ಇಂದು ಜೈಲುಗಳಲ್ಲಿ ಕೊಳೆಯುತ್ತಿರುವ ಕೈದಿಗಳಲ್ಲಿ ಬಹುತೇಕ ಜನರು ನಡೆಸಿದ ಪಾತಕಗಳಿಗೆ ಅನೈತಿಕ ಸಂಬಂಧವೇ ಮೂಲವಾಗಿದೆ.

ಎಷ್ಟು ಎಂದರೆ ಸುಮಾರು ಶೇಖಡಾ ಅರವತ್ತರಷ್ಟು ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಭಾರತೀಯ ವಿಧಿನಿಯಮ ಐಪಿಸಿ-497 ಪ್ರಕಾರ ಇದಕ್ಕೆ ಐದು ವರ್ಷಗಳವರೆಗೆ ಶಿಕ್ಷೆಯೂ ಆಗಬಹುದು. ಇದರ ಪ್ರಕಾರ ಮದುವೆಯ ಸಂಬಂಧಕ್ಕೂ ಹೊರತಾಗಿ ಯಾವುದೇ ವ್ಯಕ್ತಿಯೊಂದಿಗೆ ಹೊಂದಿರುವ ದೈಹಿಕ ಸಂಬಂಧ ಕಾನೂನುಬಾಹಿರವಾಗಿದೆ. ಧರ್ಮಗಳು ಮತ್ತು ಕಾನೂನು ಈ ಕೃತ್ಯವನ್ನು ನಿಷೇಧಿಸಿದ್ದರೂ ಈ ಪ್ರಕರಣಗಳು ಪ್ರತಿ ಊರಿನಲ್ಲಿ, ಪ್ರತಿ ನಗರದಲ್ಲಿ ಏರುಗತಿಯಿಂದ ಮೇಲೇರುತ್ತಲೇ ಇದೆ.

ಅದರಲ್ಲೂ ಇತ್ತೀಚಿನ ತಂತ್ರಜ್ಞಾನದ ಕೊಡುಗೆಗಳಾದ ಮೊಬೈಲ್ ಇಂಟರ್ನೆಟ್ ಬಂದ ಮೇಲಂತೂ ಈ ಪರಿ ನಾಗಾಲೋಟ ಕಂಡಿದೆ. ದಂಪತಿಗಳ ನಡುವಣ ದೂರ ಹೆಚ್ಚುತ್ತಿದ್ದಂತೆಯೇ ಅನೈತಿಕ ಸಂಬಂಧದತ್ತ ಒಲವು ಹೆಚ್ಚುತ್ತಾ ಹೋಗುವುದು ಆಧುನಿಕ ಜೀವನದ ವಿಪರ್ಯಾಸವಾಗಿದೆ. ಈ ಸಂಬಂಧಗಳ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳೇನಾಗಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...


ಮಾಹಿತಿ #1

ಮಾಹಿತಿ #1

ಒಂದು ಸಂಶೋಧನೆಯ ಪ್ರಕಾರ 'ಸುರತದ ಸಾವು' (coital deaths) ಅಥವಾ ಕಾಮಾವಸ್ಥೆಯಲ್ಲಿದ್ದಾಗ ಸಂಭವಿಸಿದ ಸಾವುಗಳಲ್ಲಿ ಬಹುತೇಕ ಅಂದರೆ ಶೇಖಡಾ ತೊಂಭತ್ತೊಂಭತ್ತರಷ್ಟು ಅನೈತಿಕ ಸಂಬಂಧದ ಮೂಲಕವೇ ಆಗಿವೆ. ಏಕೆಂದರೆ ಈ ಸಮಯದಲ್ಲಿ ಯಾರಾದರೂ ನೋಡಿದರೆ? ತಾನು ತನ್ನ ಪತಿಗೆ/ಪತ್ನಿಗೆ ಮೋಸ ಮಾಡುತ್ತಿದ್ದೇನೆ / ಧರ್ಮಬಾಹಿರ / ಸಿಕ್ಕಿಬಿದ್ದರೆ / ಮೊದಲಾದ ಹತ್ತು ಹಲವು ವಿಚಾರಗಳು ಮನಸ್ಸಿನಲ್ಲಿ ಸುಳಿದು ಆ ಸಮಯದಲ್ಲಿ ಮೆದುಳಿನ ಮೇಲೆ ವಿಪರೀತವಾದ ಒತ್ತಡ ಬೀರಿ ಮೆದುಳು ಇದನ್ನು ತಾಳಿಕೊಳ್ಳಲಾಗದೇ ಮೆದುಳಿನ ರಕ್ತನಾಳಗಳು ಬಿರಿಯುತ್ತವೆ. ಇದರಿಂದ ತಕ್ಷಣವೇ ಸಾವು ಸಂಭವಿಸುತ್ತದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಸಾವನ್ನಪ್ಪಿದವರು ತಮ್ಮ ಜೀವನದ ಕಟ್ಟಕಡೆಯ ಕ್ಷಣಗಳನ್ನು ಕಳೆದ ವ್ಯಕ್ತಿಗಳು ಆ ದೇಶದ ಪ್ರಧಾನಿ, ಅಧ್ಯಕ್ಷ ಅಷ್ಟೇ ಏಕೆ ಪೋಪ್ ಸಹಾ ಆಗಿರುವುದು ದಾಖಲಾಗಿದೆ.

ಮಾಹಿತಿ #2

ಮಾಹಿತಿ #2

ಇನ್ನೊಂದು ಸಂಶೋಧನೆಯಲ್ಲಿ ತಮ್ಮ ಸಂಗಾತಿಗಳಿಗೆ ಮೋಸ ಮಾಡಿ ಅನೈತಿಕ ಸಂಬಂಧದ ಮೂಲಕ ಮೋಜು ಹೆಚ್ಚಿಸಿಕೊಳ್ಳಲು ವ್ಯವಹಾರ ನಿಮಿತ್ತ ಏರ್ಪಡಿಸಲಾದ ಬಿಸಿನೆಸ್ ಟ್ರಿಪ್ಪುಗಳು ಎಂದು ಹೆಚ್ಚಿನ ಜನರು ಒಪ್ಪಿಕೊಂಡಿದ್ದಾರೆ.

ಮಾಹಿತಿ#3

ಮಾಹಿತಿ#3

ಸಾಮಾನ್ಯವಾಗಿ ಆಸ್ಪ್ರತ್ರೆಗೆ ಮುರಿದ ಅಥವಾ ಘಾಸಿಗೊಳಗಾದ ಜನನಾಂಗದೊಂದಿಗೆ ಆಗಮಿಸಿದ ಪುರುಷರು ಇದು ಅನೈತಿಕ ಸಂಬಂಧದಲ್ಲಿ ತೋರಿದ ಆತುರ ಅಥವಾ ಅಸಮರ್ಪಕ ಭಂಗಿ ಅಥವಾ ಅಸಾಧ್ಯವಾದ ಪೌರುಷ ತೋರುವಾಗಲೇ ಸಂಭವಿಸಿದೆ ಎಂದು ಇಪ್ಪಿಕೊಂಡಿದ್ದಾರೆ.

ಮಾಹಿತಿ #4

ಮಾಹಿತಿ #4

ವಿವಾಹ ವಿಚ್ಛೇದನಕ್ಕೆ ಅನೈತಿಕ ಸಂಬಂಧ ಒಂದು ಪ್ರಮುಖ ಕಾರಣ. ಆದರೆ ಒಟ್ಟೂ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ ಹಣದ ವಿಷಯವಾಗಿ ನಡೆಯುವ ವಿಚ್ಚೇದನಗಳ ಸಂಖ್ಯೆ ಅನೈತಿಕ ಸಂಬಂಧದ ಕಾರಣದಿಂದಾದ ಸಂಖ್ಯೆಗಿಂತ ಹೆಚ್ಚಿದೆ. ಇದು ಏಕೆಂದರೆ ಹೆಚ್ಚಿನ ಪ್ರಸಂಗಗಳಲ್ಲಿ ಅನೈತಿಕ ಸಂಬಂಧಗಳು ಬೆಳಕಿಗೆ ಬಂದ ಬಳಿಕ ಇದನ್ನು ಸಮಾಪ್ತಿಗೊಳಿಸಿ ಪವಿತ್ರ ವಿವಾಹಬಂಧನವನ್ನು ಮುರಿಯದೇ ಮುಂದಿನ ಬದುಕನ್ನು ತಿದ್ದಿಕೊಂಡು ಬಾಳಲು ಹಿರಿಯರು ಮತ್ತು ನ್ಯಾಯಾಲಯ ಹೆಚ್ಚಿನ ಶ್ರಮ ವಹಿಸುವ ಕಾರಣ ಎಲ್ಲಾ ಅನೈತಿಕ ಸಂಬಂಧಗಳು ವಿಚ್ಛೇದನದಲ್ಲಿ ಕೊನೆಗೊಳ್ಳುವುದಿಲ್ಲ. ಆದರೆ ಹಣದ ವಿಷಯದಲ್ಲಿ ಮಾತ್ರ ಹಾಗಲ್ಲ.

ಮಾಹಿತಿ #5

ಮಾಹಿತಿ #5

ಇನ್ನೊಂದು ಸಂಶೋಧನೆಯ ಪ್ರಕಾರ ಮಾನಸಿಕ ವ್ಯಭಿಚಾರ ದೈಹಿಕ ವ್ಯಭಿಚಾರಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಏಕೆಂದರೆ ಸಂಬಂಧದಲ್ಲಿರುವ ಇಬ್ಬರು ವ್ಯಕ್ತಿಗಳಿಗೆ ಪರಸ್ಪರ ವಿಶ್ವಾಸ ಮತ್ತು ಆಪ್ತತೆ ಮಾನಸಿಕವಾಗಿಯೇ ಇರುತ್ತದೆಯೇ ವಿನಃ ದೈಹಿಕವಾಗಿ ಅಲ್ಲ. ಒಂದು ವೇಳೆ ಇಬ್ಬರಲ್ಲೊಬ್ಬರಾದರೂ ಗುಟ್ಟಾಗಿ ತಮ್ಮ ವ್ಯವಹಾರವನ್ನು ಕೇವಲ ಸಂದೇಶಗಳ ಮುಖಾಂತರ ನಡೆಸಿದರೂ ಇನ್ನೊಬ್ಬರಿಗೆ ಇದು ತಿಳಿದ ಬಳಿಕ ವೈಮನಸ್ಯ ಎದುರಾಗಿ ವಿಚ್ಚೇದನಕ್ಕೂ ಕಾರಣವಾಗಬಹುದು.

ಮಾಹಿತಿ#6

ಮಾಹಿತಿ#6

ಮತ್ತೊಂದು ಸಂಶೋಧನೆಯ ಪ್ರಕಾರ ಅನೈತಿಕ ವ್ಯವಹಾರ ಮತ್ತು ಅನೈತಿಕ ಸಂಬಂಧಗಳಿಗೆ ಒಳಗಾಗುವ ಮಹಿಳೆಯರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹೆಚ್ಚಿದೆ. ಏಕೆಂದರೆ ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಮಹಿಳೆಯರು ಹೆಚ್ಚು ಹಣವಂತರಾಗಿದ್ದಾರೆ.

ಮಾಹಿತಿ #7

ಮಾಹಿತಿ #7

ಮಗದೊಂದು ಮಾಹಿತಿಯ ಪ್ರಕಾರ 70%ರಷ್ಟು ಅನೈತಿಕ ಸಂಬಂಧಗಳು ಕೆಲಸದ ಸ್ಥಳದಲ್ಲಿಯೇ ಸಂಭವಿಸುತ್ತವೆ.


English summary

Shocking Facts About Secret Affairs!

Extra marital affairs are a crime. But still, they occur almost all over the world. To put it in a nut shell, when a married person gets into physical intimacy with someone outside the married relationship, it is known as extramarital affair or infidelity. Now, let us know about certain bizarre facts about such affairs.
X
Desktop Bottom Promotion