Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಕೆ ಪಾನಮತ್ತಳಾಗಿದ್ದಳು, ಬಳಿಕ ಕ್ಯಾಬ್ ಏರಿದಳು! ಆಮೇಲೇನಾಯಿತು?
ಇತ್ತೀಚಿನ ವರದಿಯ ಪ್ರಕಾರ ಭಾರತದ ಅತಿ ಕ್ರೂರ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೆಯ ಸ್ಥಾನಕ್ಕೇರಿದೆ. ಈ ನಗರದ ಓರ್ವ ಹೆಣ್ಣುಮಗಳ ಕಥೆ ಓರ್ವ ಕ್ಯಾಬ್ ಚಾಲಕನ ಬದುಕನ್ನೇ ಬದಲಿಸಿತು. ನಾವೆಲ್ಲರೂ ಜೀವನದಲ್ಲಿ ಏನಾದರೊಂದು ಕನಸನ್ನು ಹೊತ್ತು ಜೀವಿಸುತ್ತಿರುತ್ತೇವೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವ ವಿಶ್ವದ ಪ್ರತಿಷ್ಠಿತ ರಾಷ್ಟ್ರಗಳು
ಆದರೆ ಪರಿಸ್ಥಿತಿ ನಮ್ಮ ಪರವಾಗಿ ಇಲ್ಲದುದಕ್ಕೆ ವಿಧಿಯನ್ನು ಹಳಿಯುತ್ತಾ ಜೀವನ ನೂಕುತ್ತಿದ್ದೇವೆ. ಈ ಜಗತ್ತಿನಲ್ಲಿ ನಾವೇ ಅತ್ಯಂತ ನತದೃಷ್ಟರು ಎಂದು ಭಾವಿಸಿದ್ದೇವೆ. ಆದರೆ ಇದು ನಿಜವೇ? ಇಲ್ಲೊಂದು ನೈಜಕಥೆ ಇದೆ. ಇದನ್ನು ಓದಿದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಖಂಡಿತಾ ಬದಲಿಸಿ ನೀವು ಈಗ ಇರುವ ಸ್ಥಿತಿಗಾಗಿ ದೇವರಿಗೆ ಧನ್ಯವಾದ ಅರ್ಪಿಸುವಿರಿ. ಇದು ಪಾನಮತ್ತ ಯುವತಿ ಮತ್ತು ಒಬ್ಬ ಕ್ಯಾಬ್ ಚಾಲಕನ ಕಥೆಯಾಗಿದ್ದು ಬರೆಯ ಒಂದು ಗಂಟೆಯಲ್ಲಿ ಮುಗಿಯುತ್ತದೆ. ಈ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ನೀಡುವ ಶಿಕ್ಷೆ ಹೇಗಿರುತ್ತೆ ನೋಡಿ
ಒಂದು ರಾತ್ರಿ ತುಂಬಾ ತಡವಾಗಿ ಕ್ಯಾಬ್ ಚಾಲಕನ ಮೊಬೈಲಿಗೆ ಸಮೀಪದ ಬಾರ್ ಒಂದರಿಂದ ಪ್ರಯಾಣಿಕರೊಬ್ಬರನ್ನು ಕರೆದೊಯ್ಯುವ ನಿರ್ದೇಶನ ಸಿಗುತ್ತದೆ. ಅಂತೆಯೇ ಆ ಬಾರ್ ಬಳಿಗೆ ಹೋದಾಗ ಓರ್ವ ಸುಂದರ ಯುವತಿ ಪೂರ್ಣ ಪಾನಮತ್ತ ಸ್ಥಿತಿಯಲ್ಲಿ ಆತನ ಕಾರು ಏರುತ್ತಾಳೆ. ಕಾರು ಮುಂದುವರೆಯುತ್ತದೆ. ಆಮೇಲೇನಾಯಿತು.....? ಆಕೆ ಸುರಕ್ಷಿತಳಾಗಿ ಮನೆ ಸೇರಿದಳೇ? ಈ ದೇಶಗಳಲ್ಲಿ ಮಹಿಳೆಯರಿಗೆ ನಯಾ ಪೈಸೆಯ ಮರ್ಯಾದಿ ಇಲ್ಲ!

ದೃಶ್ಯ#1
ಟ್ಯಾಕ್ಸಿ ಚಾಲಕ ಈ ಪಾನಮತ್ತ ಪ್ರಯಾಣಿಕನನ್ನು ಕಾರಿನಲ್ಲಿ ಕೂರಿಸಿದ್ದಾಗ ಆಕೆ ನಿಲ್ಲಲೂ ಆಗದಷ್ಟು ಪಾನಮತ್ತಳಾಗಿದ್ದಳು!

ದೃಶ್ಯ #2
ಈಕೆ ಪೂರ್ಣ ಪಾನಮತ್ತಳಾಗಿದ್ದ ಕಾರಣ ಕಾರಿನೊಳಗೇ ಈಕೆ ವಾಂತಿ ಮಾಡಿಕೊಳ್ಳಬಹುದೆಂದು ಚಾಲಕನಿಗೆ ದಿಗಿಲು ಹತ್ತಿತ್ತು. ಆದರೆ ಅದೃಷ್ಟವಶಾತ್ ಆಕೆ ಹಾಗೇನೂ ಮಾಡಲಿಲ್ಲ.

ದೃಶ್ಯ #3
ಚಾಲಕನೊಂದಿಗೆ ಮಾತನಾಡಿದ ಅವಳು ಪಾನಮತ್ತಳಾಗಿರುವುದಕ್ಕೆ ಕ್ಷಮೆ ಯಾಚಿಸಿದಳು. ತಾನು ಕುಳಿತ ಕಡೆಯ ಬಾಗಿಲಿನ ಕಿಟಕಿ ಗಾಜನ್ನು ಕೆಳಗಿಳಿಸಿ ಹೊರಗಿನ ತಣ್ಣಗಿನ ಗಾಳಿಯನ್ನು ಆಸ್ವಾದಿಸತೊಡಗಿದಳು.

ದೃಶ್ಯ #3
ತಂಗಾಳಿ ಆಕೆಯ ಬಿಡಿಯಾದ ತಲೆಗೂದಲನ್ನು ಜಲಪಾತದ ಧಾರೆಯಂತೆ ಹಾರಿಸುತ್ತಿತ್ತು. ಈಕೆ ಕ್ಷೇಮವಾಗಿದ್ದಾಳೆಯೇ ಎಂದು ಚಾಲಕ ಪದೇ ಪದೇ ಕನ್ನಡಿಯಲ್ಲಿ ನೋಡುತ್ತಿದ್ದ.

ದೃಶ್ಯ #4
ಈತನ ದಿಗಿಲನ್ನು ಗಮನಿಸಿದ ಆಕೆ ಭಯವಾಗುತ್ತಿದೆಯೇ ಎಂದು ಆತನಲ್ಲಿ ಕೇಳಿದಳು. ಈಕೆ ಕೇಳಿದ ಭಂಗಿಯಲ್ಲಿ ಆತ ಈಕೆ ನಾಟಕವಾಡುತ್ತಿಲ್ಲ, ನಿಜವಾಗಿಯೂ ಪಾನಮತ್ತಳಾಗಿದ್ದಾಳೆ ಎಂದು ಖಚಿತಪಡಿಸಿಕೊಂಡು ತಿಳಿಸಿದ "ಹೌದು, ನಿಜವಾಗಿಯೂ ತುಂಬಾ ಭಯವಾಗುತ್ತಿದೆ".

ದೃಶ್ಯ #5
ಆತನಿಗೆ ಉತ್ತರಿಸಿದ ಆಕೆ ತಣ್ಣಗಿನ ದನಿಯಲ್ಲಿ ಹೇಳಿದಳು "ನನಗೆ ಕ್ಯಾನ್ಸರ್ ಇದೆ" ಇದನ್ನು ಕೇಳಿದ ಚಾಲಕನ ಹೃದಯವೇ ನಿಂತು ಹೋದಂತಾಯಿತು.

ದೃಶ್ಯ #5
ತಕ್ಷಣ ಕಾರು ನಿಲ್ಲಿಸಿ ಆತ ಹಿಂದಿರುಗಿ ಆಕೆಯನ್ನು ದಿಟ್ಟಿಸಿ ನೋಡಿದ. ಆಕೆ ಮುಂದುವರೆಗೆ ತಾನು ಇನ್ನೇನು ಸಾಯುವ ದಿನ ನೋಡಲ್ಲಿದ್ದೇನೆ. ಆದರೆ ಈಗ ಕಾರು ಮುಂದುವರೆಸು ಎಂದಳು.

ದೃಶ್ಯ #6
ಕಾರು ಮುಂದುವರೆಯುತ್ತಿದ್ದಂತೆಯೇ ಆಕೆ ನಿಧಾನವಾಗಿ ತನ್ನ ಕಥೆ ಹೇಳಿದಳು. ಈ ಬಾರ್ ನಲ್ಲಿ ತನ್ನ ಸ್ನೇಹಿತರೊಂದಿಗೆ ತಾನು ಈ ಸ್ಥಳ ಬಿಟ್ಟು ಹೋಗುತ್ತಿರುವ ನಿಮಿತ್ತ ವಿದಾಯ ಪಾರ್ಟಿ ನೀಡುತ್ತಿದ್ದೆ ಎಂದು ತಿಳಿಸಿದಳು. ಆಕೆಯ ಸ್ನೇಹಿತರೆಲ್ಲರಿಗೂ ತನಗೆ ಹೊರಗೆ ಕೆಲಸ ಸಿಕ್ಕಿರುವ ಕಾರಣ ಈ ಉದ್ಯೋಗವನ್ನು ಬಿಟ್ಟು ಹೋಗುತ್ತಿದ್ದೇನೆ ಎಂದು ತಿಳಿಸಿದಳು.

ದೃಶ್ಯ #7
ಆದರೆ ಆಕೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರು ಆಕೆಯ ಈ ವಿದಾಯವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಇವರು ಈಕೆ ನಿಜವಾಗಿಯೂ ವಿದೇಶಕ್ಕೇ ಹೋಗುತ್ತಿದ್ದಾಳೆಂದು ತಿಳಿದುಕೊಂಡು ಪಾರ್ಟಿಯ ಮಜಾ ಅನುಭವಿಸಿದರು. ಕಥೆ ಮುಗಿಯುವ ವೇಳೆಗೆ ಕ್ಯಾಬ್ ಆಕೆಯ ಮನೆಯ ಹತ್ತಿರ ಬಂದಿತ್ತು.

ದೃಶ್ಯ #8
ಕಾರಿನಿಂದ ಇಳಿದ ಆಕೆ ತನ್ನನ್ನು ಇಲ್ಲಿ ಕ್ಷೇಮವಾಗಿ ತಂದು ಬಿಟ್ಟಿದುದಕ್ಕಾಗಿ ಧನ್ಯವಾದ ಅರ್ಪಿಸಿ ಆತನ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದಳು. ಆಕೆಯಿಂದ ಬಾಡಿಗೆ ಪಡೆದು ಮುಂದೆ ಹೊರಟ ಚಾಲಕ ದಾರಿಯಲ್ಲಿ ಕೊಂಚ ದೂರವೂ ಸಾಗಿರಲಿಲ್ಲ, ಅಲ್ಲಿಯೇ ನಿಲ್ಲಿಸಿಬಿಟ್ಟ.

ದೃಶ್ಯ #8
ಏಕೆಂದರೆ ಆಕೆಯ ಅಂತ್ಯಕಾಲದಲ್ಲಿಯೂ ನಗುತ್ತಾ ತನಗೆ ಶುಭವಾಗಲಿ ಎಂದು ಹಾರೈಸಿದ ಆಕೆಯ ಹೃದಯ ವೈಶಾಲ್ಯತೆಗೆ ಆತ ಮೂಕನಾದ. ಪ್ರಾಯಶಃ ಇದೇ ಆಕೆಯ ಜೀವನದ ಕೊನೆಯ ಪಾರ್ಟಿಯಾಗಿರಬಹುದು ಎಂಬ ಭಾವನೆ ಬರುತ್ತಿದ್ದಂತೆಯೇ ದುಃಖ ತಡೆಯಲಾರದೇ ಬಿಕ್ಕಿ ಬಿಕ್ಕಿ ಅತ್ತ.



Click it and Unblock the Notifications
