For Quick Alerts
ALLOW NOTIFICATIONS  
For Daily Alerts

ಈ ಮಹಿಳೆಯರ ಅಸಾಮಾನ್ಯ ಸಾಧನೆಗೆ, ನಮ್ಮದೊಂದು ಸಲಾಂ...

By Arshad
|

ನಿಮ್ಮ ಸುತ್ತಮುತ್ತಲ ಜನರಲ್ಲಿ ಯಾರಾದರೂ ತಮ್ಮ ಜೀವನದ ನೆಚ್ಚಿನ ಕೆಲಸಕ್ಕಾಗಿ ಈಗಿರುವ ಕೆಲಸವನ್ನು ಬಿಟ್ಟರೆ ನೀವೇನು ಮಾಡುತ್ತೀರಿ? ಶುಭವಾಗಲಿ ಎಂದು ಹಾರೈಸಿ ಬೀಳ್ಕೊಡುತ್ತೀರಿ ತಾನೇ? ಆದರೆ ಕ್ರಿಸ್ ಕ್ರಿಸ್ಮನ್ ಎಂಬ ಚಿತ್ರಗ್ರಾಹಕರೊಬ್ಬರ ಮಹಿಳಾ ಸಹೋದ್ಯೋಗಿಯೊಬ್ಬರು ತಮ್ಮ ನೆಚ್ಚಿನ ಬಾಣಸಿಗ ಕೆಲಸಕ್ಕಾಗಿ ಈಗಿರುವ ಕೆಲಸವನ್ನು ಬಿಟ್ಟು ಹೋದ ಬಳಿಕ ಮಹಿಳೆಯರ ಇಚ್ಛಾಶಕ್ತಿಯ ಕುರಿತು ಅದಮ್ಯ ಕುತೂಹಲವುಂಟಾಗಿತ್ತು.

ಈ ಕುತೂಹಲ ಅವರ ಜೀವನವನ್ನೇ ಬದಲಿಸಿತು. ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆಯಲು ವರ್ಷಗಟ್ಟಲೇ ಹೋರಾಡುತ್ತಿದ್ದರೂ ಇಂದಿಗೂ ಫಲಕಾರಿಯಾಗಿಲ್ಲ. ಇಂದಿಗೂ ಸಮಾಜದಲ್ಲಿ ಮಹಿಳೆಯರು ಅಬಲೆಯರು ಎಂದೇ ಪರಿಗಣಿಸಲಾಗುತ್ತಿದೆ. ಆದರೆ ಕೆಲವು ಮಹಿಳೆಯರು ಕೆಲವು ಉದ್ಯೋಗಗಳು ಪುರುಷರಿಗೆ ಮಾತ್ರ ಎಂಬ ನಂಬಿಕೆಯನ್ನು ಒಪ್ಪದೇ ತಮಗೆ ಇಷ್ಟಬಂದ ಕೆಲಸವನ್ನು ಮಾಡುತ್ತಿದ್ದು ಜೀವನವನ್ನು ಸಾರ್ಥಕವಾಗಿಸಿಕೊಂಡಿದ್ದಾರೆ. ಆ್ಯಸಿಡ್ ದಾಳಿಯಾದರೂ, ಇವರು ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ

ಹೀಗೇ, ತಮ್ಮ ನೆಚ್ಚಿನ ಉದ್ಯೋಗವನ್ನು ಎಲ್ಲಾ ವಿರೋಧಗಳನ್ನು ಎದುರಿಸಿ ಪಡೆದಿರುವ ಮಹಿಳೆಯರ ಛಾಯಾಚಿತ್ರಗಳನ್ನು ತೆಗೆದಿರುವ ಕ್ರಿಸ್ಮನ್ ಇದೇ ಕಾರಣಕ್ಕೆ ಇಂದು ಖ್ಯಾತಿ ಪಡೆದಿದ್ದಾರೆ. ಬನ್ನಿ, ಇವರು ಯಾವ ಚಿತ್ರಗಳನ್ನು ತೆಗೆದಿದ್ದಾರೆ ಎಂಬುದನ್ನು ನೋಡೋಣ...

ಅದಿರು ಸಾಗಾಟ ಲಾರಿ ಚಾಲಕಿ

ಅದಿರು ಸಾಗಾಟ ಲಾರಿ ಚಾಲಕಿ

ಸುಮಾರು ಎಪ್ಪತ್ತು ಎಂಭತ್ತರ ದಶಕದಲ್ಲಿ ಕುದುರೆಮುಖದಲ್ಲಿ ಅದಿರು ಉದ್ಯೋಗ ಉತ್ತುಂಗದಲ್ಲಿದ್ದ ಸಮಯದಲ್ಲಿ ಅದಿರು ಸಾಗಿಸುವ ಭಾರೀ ಲಾರಿಗಳನ್ನು ನೋಡಿರಬಹುದು. (ಇದರ ಒಂದು ಟೈರ್ ಈಗಲೂ ಧರ್ಮಸ್ಥಳದ ಮ್ಯೂಸಿಯಂ ಎದುರು ಇದೆ). Haul Truck ಎಂದು ಕರೆಯಲಾಗುವ ಈ ಟ್ರಕ್ಕುಗಳು ಭಾರೀ ತೂಕ ಮತ್ತು ಭಾರೀ ಗಾತ್ರದ್ದಾಗಿದ್ದು ಇದರ ಒಂದು ಟೈರಿನ ವ್ಯಾಸ 4.028 ಮೀಟರ್ (13.22 ಅಡಿ). ಇಂತಹ ಭೀಮಗಾತ್ರದ ಟ್ರಕ್ ಚಲಾಯಿಸುವ ಉದ್ಯೋಗವನ್ನು ಲೀ ಆನ್ ಜಾನ್ಸನ್ ಎಂಬ ಮಹಿಳೆ ಆಯ್ದುಕೊಂಡಿದ್ದಾರೆ.

ಹಿರಿಯ ಭೂವಿಜ್ಞಾನಿ

ಹಿರಿಯ ಭೂವಿಜ್ಞಾನಿ

ಭೂವಿಜ್ಞಾನವೆಂದರೆ ನಿಕ್ಷೇಪ ಅಥವಾ ಭೂಮಿಯ ಮೇಲ್ಮೈ ಲಕ್ಷಣ ಹುಡುಕುತ್ತಾ ಗುಡ್ಡ ಕಾಡು ಮೇಡು ಅಲೆದು ಮನೆಯಿಂದ ಬಲುದಿನ ಹೊರಗೇ ಇರುವ ಉದ್ಯೋಗ. ಸಾಮಾನ್ಯವಾಗಿ ಪುರುಷರೂ ಹಿಂದೇಟು ಹಾಕುವ ಈ ಉದ್ಯೋಗವನ್ನು ಖುಷಿಯಿಂದಲೇ ನಿರ್ವಹಿಸುತ್ತಿದ್ದಾರೆ ಕ್ರಿಸ್ ಅಲ್ವಾರೆಜ್. ಈಗ ಅವರು ಹಿರಿಯ ಅಧಿಕಾರಿಯೂ ಆಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ

ಅಗ್ನಿಶಾಮಕ ದಳದ ಸಿಬ್ಬಂದಿ

ಅಗ್ನಿಶಾಮಕ ದಳದ ಕೆಲಸವೆಂದರೆ ಬೆಂಕಿಯೊಡನೆ ಸರಸ. ಆದರೆ ಮಿಂಡಿ ಗ್ಯಾಬ್ರಿಯೆಲ್ ಎಂಬುವರಿಗೆ ಬೆಂಕಿಯೊಡನೆ ಸರಸವಾಡುವುದೆಂದರೆ ಪಂಚಪ್ರಾಣ.

ಈಕೆ ಲಾಬ್ಸ್ಟರ್ ಏಡಿ ಹಿಡಿಯುವಾಕೆ...

ಈಕೆ ಲಾಬ್ಸ್ಟರ್ ಏಡಿ ಹಿಡಿಯುವಾಕೆ...

ಸ್ಯಾಡಿ ಸಾಮ್ಯುಯೆಲ್ಸ್ ಎಂಬ ಮಹಿಳೆ ಸಮುದ್ರದ ತಳದಿಂದ ಲಾಬ್ಸ್ಟರ್ ಎಂಬ ಕಡಲ ಏಡಿಯನ್ನು ಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ....

ಡಿಸೈನರ್ ಮತ್ತು ಬಡಗಿ

ಡಿಸೈನರ್ ಮತ್ತು ಬಡಗಿ

ಸಾಮಾನ್ಯವಾಗಿ ಬಡಗಿ ಅಥವಾ ಮರಗೆಲಸವನ್ನು ಪುರುಷರೇ ಮಾಡುತ್ತಾರೆ. ಆದರೆ ಮೀರಾ ನಾಕಾಶಿಮಾ ಎಂಬ ಮಹಿಳೆ ಸ್ವತಃ ಬಡಗಿ ಮಾತ್ರವಲ್ಲ, ತಮ್ಮ ಉಪಕರಣಗಳನ್ನು ತಾವೇ ಸ್ವತಃ ವಿನ್ಯಾಸಗೊಳಿಸುತ್ತಾರೆ. ಇವರಿಗೆ ತಮ್ಮ ಕೆಲಸವೆಂದರೆ ಪಂಚಪ್ರಾಣ.

ಹಂದಿ ಸಾಕಣೆ

ಹಂದಿ ಸಾಕಣೆ

ನ್ಯಾನ್ಸಿ ಪೋಲಿ ಎಂಬುವರು ತಮ್ಮ ಉದ್ಯೋಗವನ್ನು ಬಿಟ್ಟು ಸ್ಟ್ರೈಕರ್ ಫಾರ್ಮ್ಸ್ ಎಂಬಲ್ಲಿ ಹಂದಿಸಾಕಣೆ ನಡೆಸುತ್ತಿದ್ದಾರೆ. ನಿಮಗೆ ಅಭಿನಂದನೆಗಳು.

ಲೀಚ್ ಪ್ಯಾಡ್ ಎಂಬ ಸಾರಣೆಯಂತ್ರದ ಚಾಲಕಿ

ಲೀಚ್ ಪ್ಯಾಡ್ ಎಂಬ ಸಾರಣೆಯಂತ್ರದ ಚಾಲಕಿ

ಸಾಮಾನ್ಯವಾಗಿ ಗಣಿಗಳಲ್ಲಿ ಅದಿರನ್ನು ದೊಡ್ಡ ದೊಡ್ಡ ಸಾರಣೆಗಳಲ್ಲಿ ಶೋಧಿಸಬೇಕಾಗುತ್ತದೆ. ಇದಕ್ಕಾಗಿ ದೊಡ್ಡ ದೊಡ್ಡ ಯಂತ್ರಗಳಿದ್ದು ಇದರ ಚಾಲಕರು ಬಹುತೇಕ ಪುರುಷರೇ ಆಗಿರುತ್ತಾರೆ. ಆದರೆ ಅಪವಾದವೆಂಬಂತೆ ಕ್ಯಾರೋಲ್ ವಾರ್ನ್ ಎಂಬುವರು ಈ ಕೆಲಸವನ್ನು ಮಾಡುತ್ತಿದ್ದು ತೃಪ್ತಿ ಕಂಡುಕೊಂಡಿದ್ದಾರೆ.

ಮದ್ಯ ತಯಾರಿಕಾ ಘಟಕದ ಕೆಲಸ

ಮದ್ಯ ತಯಾರಿಕಾ ಘಟಕದ ಕೆಲಸ

ಸಾಮಾನ್ಯವಾಗಿ ಮದ್ಯ ತಯಾರಿಕಾ ಘಟಕದಲ್ಲಿ ಸದಾ ಮದ್ಯದ ವಾಸನೆ ಸೂಸುತ್ತಿದ್ದು ಹೆಚ್ಚಿನವರು ಈ ವಾಸನೆಗೇ ತಲೆತಿರುಗಿ ಬೀಳುತ್ತಾರೆ. ಇಂತಹ ಒಂದು ಘಟಕವಾದ ಸೆಂಟ್ ಬೆಂಜಮಿನ್ ಬ್ರೂವಿಂಗ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ-ಅಂದಗಾತಿಯೂ ಆಗಿರುವ ಕ್ರಿಸ್ಟಿನಾ ಬರ್ರಿಸ್.

ಸ್ಥಿರಾಸ್ತಿ ಅಭಿವರ್ಧಕಿ

ಸ್ಥಿರಾಸ್ತಿ ಅಭಿವರ್ಧಕಿ

ಪ್ರಾಪರ್ಟಿ ಡೆವೆಲಪರ್ ಎಂಬ ಕೆಲಸವನ್ನು ಓರ್ವ ಮಹಿಳೆ ನಿರ್ವಹಿಸಿದರೆ ಸ್ಥಿರಾಸ್ತಿ ಅಭಿವರ್ಧಕಿ ಎಂಬ ಹೊಸ ಕನ್ನಡದ ಅನುವಾದವನ್ನು ನೀಡಬಹುದು. ಏಕೆಂದರೆ ಇದುವರೆಗೆ ಕೇವಲ ಪುರುಷರೇ ಮಾಡಿಕೊಂಡು ಬರುತ್ತಿದ್ದ ಈ ಕೆಲಸವನ್ನು ಈಗ ಆಲಿಸನ್ ಗೋಲ್ಡ್ ಬ್ಲಂ ಎಂಬ ಮಹಿಳೆ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಪ್ರಾಣಿಗಳ ತೊಗಲು ಬೊಂಬೆ ತಯಾರಿಸುವಾಕೆ

ಪ್ರಾಣಿಗಳ ತೊಗಲು ಬೊಂಬೆ ತಯಾರಿಸುವಾಕೆ

ಮೈಸೂರು ಅರಮನೆ ಹಾಗೂ ಪ್ರಾಣಿ ಸಂಗ್ರಹಾಲಯದಲ್ಲಿ ಕೆಲವು ಪ್ರಾಣಿಗಳ ಚರ್ಮದೊಳಗೆ ಹುಲ್ಲು ತುಂಬಿಸಿ ನಿಜವಾದ ಪ್ರಾಣಿಯೇ ನಿಂತಿರುವಂತೆ ಮಾಡಿರುವುದನ್ನು ನೋಡಿರಬಹುದು. ಕೇವಲ ಚರ್ಮ, ಕೂದಲು ಕೊಂಬುಗಳು ನಿಜವಾಗಿದ್ದು ಕಣ್ಣು ಮೊದಲಾದವುಗಳನ್ನು ಕೃತಕವಾಗಿ ಅಳವಡಿಸಿ ಕೊಳೆಯದಂತೆ ಮಾಡಿ ಬೊಂಬೆಗಳನ್ನು ತಯಾರಿಸುವ ಕೆಲಸವೇ Taxidermy. ಈ ಕೆಲಸ ಮಾಡುವವರನ್ನು Taxidermist ಎನ್ನುತ್ತಾರೆ. ಇಂತಹ ಉದ್ಯೋಗವನ್ನು ಮಾಡುತ್ತಿರುವ ಬೆಥ್ ಬೆವೆರ್ಲಿಯರವಿಗೆ ಅಭಿನಂದನೆಗಳು.

All Image Courtesy

English summary

Photos That Prove There's Nothing A Woman Can't Do

There is nothing that a woman cannot do and these images just prove that! Check out the pictures which prove that women can do anything as compared to men.
Story first published: Saturday, December 24, 2016, 23:14 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more