Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯ್ಯೋ, ಇವರಿಗೆ ಸ್ವಚ್ಛತೆ-ಅಸ್ವಚ್ಛತೆಯ ವ್ಯತ್ಯಾಸನೇ ಗೊತ್ತಿಲ್ಲ!
ಸುತ್ತಮುತ್ತಲಿನ ಪ್ರದೇಶವು ಸ್ವಚ್ಛವಾಗಿದ್ದರೆ ಮನಸ್ಸು ಕೂಡ ಸ್ವಚ್ಛವಾಗಿರುತ್ತದೆ ಎನ್ನುವ ಮಾತಿದೆ. ಇದು ನಿಜವೆನ್ನಬಹುದು. ಯಾಕೆಂದರೆ ಸ್ವಚ್ಛತೆ ಇಲ್ಲವೆಂದಾದರೆ ನಮ್ಮ ಮನಸ್ಸು ಕೆಡುವುದು ಮತ್ತು ಉದ್ವೇಗಗೊಳ್ಳುವುದು. ಇದರಿಂದಾಗಿಯೇ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಹೀಗಿನ ಕೇಂದ್ರ ಸರ್ಕಾರ ಕೂಡ ಸ್ವಚ್ಛತೆಯ ಬಗ್ಗೆ ಅಭಿಯಾನವನ್ನೇ ಆರಂಭಿಸಿದೆ. ಆದರೆ ಜನರು ಮಾತ್ರ ತಮಗಿದು ಸಂಬಂಧಿಸಿದಲ್ಲ ಎನ್ನುವಂತಿದ್ದಾರೆ. ಹಿಂದಿನ ಕಾಲದಿಂದಲೂ ಸ್ವಚ್ಛತೆ ಬಗ್ಗೆ ಜನರಲ್ಲಿ ಉತ್ತಮ ಭಾವನೆಯಿತ್ತು. ಯಾವಾಗ ಸ್ವಾಮಿ, ಇವರಿಗೆಲ್ಲಾ ಬುದ್ಧಿ ಬರೋದು..?
ರಾಜಮಹಾರಾಜರು ಕೂಡ ಸ್ವಚ್ಛತೆಗೆ ಗಮನ ಕೊಡುತ್ತಿದ್ದರು. ಆದರೆ ಕೆಲವು ದೇಶಗಳಲ್ಲಿ ಜನರು ಮತ್ತು ರಾಜಮನೆತವರು ಕೂಡ ವಿಲಕ್ಷಣವಾಗಿ ಸ್ವಚ್ಛತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು. ದಿನಾಲೂ ಸ್ನಾನ ಮಾಡುವುದು, ಹಲ್ಲುಜ್ಜುವುದು, ಶೌಚಾಲಯಕ್ಕೆ ಹೋದರೆ ಕೈ ತೊಳೆದುಕೊಳ್ಳುವುದು ಪ್ರಮುಖವಾಗಿರುವ ಸ್ವಚ್ಛತಾ ಕ್ರಮಗಳಾಗಿದೆ. ಈ ಲೇಖನದಲ್ಲಿ ವಿಚಿತ್ರವಾಗಿರುವ ಕೆಲವೊಂದು ಅಸ್ವಚ್ಛತಾ ಕ್ರಮಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿ ಆದರೆ ಪಾಲಿಸಬೇಡಿ!

ರೋಮನ್ನರ ಕಾಲದಲ್ಲಿ...
ಹಲ್ಲುಜ್ಜಲು ಇಲಿಯ ಮೆದುಳನ್ನು ಬಳಸುತ್ತಿದ್ದರು ಎಂದರೆ ಖಂಡಿತವಾಗಿಯೂ ತಿಂದಿದೆಲ್ಲವೂ ವಾಂತಿ ಮಾಡಿಕೊಳ್ಳಬೇಕಾಗಬಹುದು. ಆದರೆ ನಿಜವಾಗಿಯೂ ಹಲವಾರು ವರ್ಷಗಳ ಹಿಂದೆ ರೋಮನ್ನರು ಇದನ್ನು ಮಾಡುತ್ತಿದ್ದರು. ಈಗ ಯೋಚನೆ ಮಾಡಿದರೆ ವಾಕರಿಕೆ ಬರುತ್ತದೆ.

ಬಟ್ಟೆ ಬದಲಾಯಿಸುವುದೇ ಇಲ್ಲ!
ಸ್ವಚ್ಛತೆ ಕಾರಣದಿಂದಾಗಿ ನಾವೀಗ ದಿನಕ್ಕೊಂದು ಬಟ್ಟೆ ಧರಿಸುತ್ತೇವೆ. ಆದರೆ ಒಂದು ಕಾಲದಲ್ಲಿ ರಾಜರು ಕೂಡ ಬಟ್ಟೆ ಬದಲಾಯಿಸುತ್ತಲೇ ಇರಲಿಲ್ಲ. ಅವರಿಗೆ ಪ್ರತಿಯೊಂದು ಋತುವಿಗೆ ಒಂದೊಂದು ರೀತಿಯ ಬಟ್ಟೆಯಿರುತ್ತಿತ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕಸ ಬಿಸಾಡುವುದು
ಮನೆಯ ಹಿಂದುಗಡೆ ಕಸ ಬಿಸಾಡಲು ಹಲವಾರು ತಿಪ್ಪೆಗುಂಡಿಗಳನ್ನು ತೋಡಲಾಗುತ್ತಿತ್ತು. ಈ ಗುಂಡಿಗಳಲ್ಲಿ ಕಸವನ್ನು ಹಾಕುತ್ತಲಿದ್ದ ಕಾರಣದಿಂದಾಗಿ ಹಲವಾರು ರೀತಿಯ ಸೋಂಕು ರೋಗಗಳು ಮನೆಯವರನ್ನು ಭಾದಿಸುತ್ತಿತ್ತು.

ಮುಖ ತೊಳೆಯಲು ಮೂತ್ರ!
ಇದನ್ನು ಯಾರು ಯೋಚಿಸಿದ್ದಾರೆಯಾ ಗೊತ್ತಿಲ್ಲ. ತಾಜಾ ಮೂತ್ರವನ್ನು ಮುಖವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಬಳಸಲಾಗುತ್ತದೆ. ಇಂದಿನ ದಿನಗಳಲ್ಲಿಯೂ ಕೆಲವೊಂದು ಜನರು ಈಗಲೂ ಇದನ್ನು ಬಳಸುತ್ತಾರೆ. ಛೀ...ಗಲೀಜು.

ಕೂದಲು ಉದುರುವಿಕೆಗೆ ಕೋಳಿ ಹಿಕ್ಕೆ!
ಸಂಪೂರ್ಣವಾಗಿ ಬೋಳಾಗಿರುವ ತಲೆಗೆ ಕೋಳಿ ಹಿಕ್ಕೆಯನ್ನು ಪೊಟಾಶಿಯಂಗೆ ಸೇರಿಸಿಕೊಂಡು ತಲೆಬುರುಡೆಗೆ ಉಜ್ಜಿಕೊಳ್ಳಬೇಕು. ಇದರಿಂದ ಬೋಳು ತಲೆ ನಿವಾರಣೆಯಾಗುತ್ತದೆ. ಬೋಳು ತಲೆಯಲ್ಲಿ ಕೂದಲು ಬರಬೇಕಾದರೆ ಈ ರೀತಿಯೂ ಮಾಡಬೇಕೇ?

ತಿನ್ನುವಾಗ ಮಾತ್ರ ಕೈ ತೊಳೆಯುವುದು
ಊಟಕ್ಕೆ ಮೊದಲು ಕೈ ತೊಳೆಯುವುದು ಈಗಲೂ ತುಂಬಾ ಅಪರೂಪವಾಗಿದೆ. ಕೆಲವರು ಮಾತ್ರ ಆಹಾರ ತಿನ್ನುವ ಮೊದಲು ಕೈ ತೊಳೆಯುತ್ತಾರೆ. ಈ ಅಭ್ಯಾಸವನ್ನು ಕಡಿಮೆ ಜನರು ಪಾಲಿಸುತ್ತಾರೆ. ಕೇವಲ ಊಟಕ್ಕೆ ಮೊದಲು ಮಾತ್ರ ಕೈ ತೊಳೆಯುವುದು ಒಳ್ಳೆಯ ಕ್ರಮ. ಇದನ್ನು ಪಾಲಿಸಿಕೊಂಡು ಹೋಗಿ.



Click it and Unblock the Notifications
