For Quick Alerts
ALLOW NOTIFICATIONS  
For Daily Alerts

ವಿಸ್ಮಯ ಜಗತ್ತು: ಅಸಹ್ಯಕರ ವಸ್ತುವಿಗೂ ಇಲ್ಲಿ ಬಹು ಬೇಡಿಕೆ!

By Manu
|

ವಿಶ್ವವೆನ್ನುವುದೇ ರೋಚಕ ಹಾಗೂ ಅಚ್ಚರಿ. ಇದರಲ್ಲಿರುವ ಜನರು ಅದಕ್ಕಿಂತಲೂ ರೋಚಕತೆ ಹೊಂದಿರುವವರು. ಅದರಲ್ಲೂ ವಿದೇಶೀಯರನ್ನು ಗಮನಿಸಿದರೆ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ರೋಚಕತೆ ಹುಡುಕುತ್ತಾ ಹೊರಡುತ್ತಾರೆ. ಇದರಿಂದ ಅವರು ಏನಾದರೊಂದು ಸಾಧನೆ ಮಾಡುತ್ತಾರೆ. ಭೂಮಿಯ ಮೇಲಿನ ವಿಸ್ಮಯ ಸ್ಥಳಗಳು- ಹೀಗೂ ಉಂಟೇ?

ಆದರೆ ಕೆಲವರಿಗೆ ಏನಾದರೊಂದು ಹುಚ್ಚು ಹವ್ಯಾಸ ಇರುತ್ತದೆ. ಇದಕ್ಕಾಗಿ ಅವರು ಎಷ್ಟು ಹಣ ಬೇಕಾದರೂ ವ್ಯಯಿಸುತ್ತಾರೆ. ಬೇಕಾದಷ್ಟು ಹಣ ಖಜಾನೆಯಲ್ಲಿರುವಾಗ ಕೆಲವೊಂದು ನಗಣ್ಯ ವಿಷಯಗಳಿಗೂ ಹಣ ಖರ್ಚು ಮಾಡುವುದು ದೊಡ್ಡ ವಿಷಯವೇನಲ್ಲ ಬಿಡಿ. ಆದರೆ ಇಲ್ಲಿ ಯಾವ ವಸ್ತುಗಳಿಗೆ ಹಣ ಖರ್ಚು ಮಾಡುತ್ತಿದ್ದಾರೆ ಎನ್ನುವುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಅಚ್ಚರಿಯ ಲೋಕದಲ್ಲಿ ಅಚ್ಚರಿಗಳು ಸಹಜ. ಇಂತವುಗಳನ್ನು ತಿಳಿದುಕೊಳ್ಳಲು ನೀವು ಮುಂದೆ ಓದಿಕೊಳ್ಳಿ...

ಸ್ಕಾರ್ಲೆಟ್ ಜಾನ್ಸನ್ ಬಳಸಿದ ಟಿಶ್ಯೂ

ಸ್ಕಾರ್ಲೆಟ್ ಜಾನ್ಸನ್ ಬಳಸಿದ ಟಿಶ್ಯೂ

ಇದಕ್ಕಿಂತ ದೊಡ್ಡ ಮಟ್ಟದ ಹುಚ್ಚಾಟ ಬೇರೇನಾದರೂ ಇದೆಯಾ ಹೇಳಿ. ಸ್ಕಾರ್ಲೆಟ್ ಜಾನ್ಸನ್ ಬಳಸಿದ ಟಿಶ್ಯೂ 5300 ಡಾಲರ್ ಗೆ ಮಾರಾಟವಾಗಿದೆ. ಕೆಲವು ಹುಚ್ಚು ಅಭಿಮಾನಿಗಳನ್ನು ಇದನ್ನು ಖರೀದಿಸಿರುವುದು ನಿಜ. ಆದರೆ ಹಣ ಮಾತ್ರ ಸಮಾಜ ಸೇವೆಗೆ ಹೋಗಲಿದೆ. ಬಳಸಿದ ಟಿಶ್ಯೂವನ್ನು ಯಾಕೆ ಮಾರುತ್ತಾರೆಂದೇ ಅರ್ಥವಾಗುತ್ತಿಲ್ಲ. Image courtesy

ಹಕ್ಕಿ ಗೂಡಿನ ಸೂಪ್

ಹಕ್ಕಿ ಗೂಡಿನ ಸೂಪ್

ಗೂಡಿನಿಂದ ಯಾವ ರೀತಿಯ ಸೂಪ್ ಮಾಡುತ್ತಾರೆ ಎಂದು ನೀವು ಕೇಳಬಹುದು. ಆದರೆ ಗೂಡಿನಲ್ಲಿ ಇರುವ ಗಟ್ಟಿಯಾದ ಲಾಲಾರಸದಿಂದ ಈ ಸೂಪ್ ಅನ್ನು ತಯಾರಿಸಲಾಗುತ್ತದೆ. ಒಂದು ಬೌಲ್ ಸೂಪ್‍ನ ಬೆಲೆ 40ರಿಂದ 60 ಡಾಲರ್ ಇದೆ. ಚೀನಾದಲ್ಲಿ ಇದು ಜನಪ್ರಿಯವಾಗಿದೆ ಮತ್ತು ಇದು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. Image courtesy

ತಿಮಿಂಗಿಲದ ವಾಂತಿ...!

ತಿಮಿಂಗಿಲದ ವಾಂತಿ...!

ಹಿಂದಿನ ಸ್ಲೈಡ್ ನಲ್ಲಿ ನಿಮಗೆ ವಾಕರಿಕೆ ಬಂದಿದ್ದರೆ ಇದನ್ನು ನೋಡಿ ಖಂಡಿತವಾಗಿಯೂ ವಾಂತಿ ಮಾಡಬಹುದು. ಯಾಕೆಂದರೆ ತಿಮಿಂಗಿಲದ ವಾಂತಿ 70 ಸಾವಿರ ಡಾಲರ್ ಗೆ ಮಾರಾಟವಾಗುತ್ತದೆ. ಇದು ತುಂಬಾ ಅಸಹ್ಯಕರ ಅನಿಸಿದರೂ ಇದು ಮಾರಾಟವಾಗಿರುವುದು ನಿಜ. Image courtesy

ಮಾನವ ಮಲ

ಮಾನವ ಮಲ

ವಾಂತಿ ಬಳಿಕ ಈಗ ಮಲದ ಸರದಿ ಬಂದಿದೆ. ಇದು ತುಂಬಾ ವಿಚಿತ್ರವೆಂದೆನಿಸಿದರೂ ತುಂಬಾ ಗಂಭೀರ ವ್ಯಾಪಾರವಾಗಿದೆ. ಪ್ರಾಣಕ್ಕೆ ಸಂಚಕಾರವನ್ನು ಉಂಟುಮಾಡುವ ಸಿ ಡಿಫಿಸಿಲ್ ಎನ್ನುವ ಬ್ಯಾಕ್ಟೀರಿಯಾ ಉಂಟುಮಾಡುವ ರೋಗವನ್ನು ಗುಣಪಡಿಸಲು ಇದನ್ನು ಬಲಸಲಾಗುತ್ತದೆ. ಆರೋಗ್ಯಕರವಾಗಿರುವ ವ್ಯಕ್ತಿಯ ಮಲವನ್ನು ಆಸ್ಪತ್ರೆಗಳಿಗೆ ಮಾರಲಾಗುತ್ತದೆ. ಇದಕ್ಕೆ ವರ್ಷಕ್ಕೆ 13 ಸಾವಿರ ಡಾಲರ್ ನೀಡಲಾಗುತ್ತದೆ. Image courtesy

ರಕ್ತದಿಂದ ಮುಖ ಶೃಂಗಾರ

ರಕ್ತದಿಂದ ಮುಖ ಶೃಂಗಾರ

ಹಾಲಿವುಡ್ ನಟಿ ಕಿಮ್ ಕರ್ದಶಿಯನ್ ರಕ್ತದಿಂದ ಮುಖವನ್ನು ಶೃಂಗಾರ ಮಾಡಿದಂತಹ ಫೋಟೊವನ್ನು ಪೋಸ್ಟ್ ಮಾಡಿದ್ದಳು. ಇದಕ್ಕೆ ಸುಮಾರು 950ರಿಂದ 1400 ಡಾಲರ್ ಖರ್ಚಾಗುತ್ತದೆ. ಈ ವಿಚಿತ್ರ ಪ್ರಕ್ರಿಯೆಯನ್ನು ವ್ಯಕ್ತಿಯ ತೋಳಿನ ರಕ್ತವನ್ನು ಬಳಸಿಕೊಂಡು ಮಾಡಲಾಗುತ್ತದೆ. ಕಿರುಬಿಲ್ಲೆಗಳನ್ನು ಚಪ್ಪಾಳೆಯಿಂದ ಬೇರ್ಪಡಿಸಲಾಗುತ್ತದೆ. ಇದು ತುಂಬಾ ದೀರ್ಘ ಪ್ರಕ್ರಿಯೆ. ತಮ್ಮದೇ ರಕ್ತದ ಫೇಶಿಯಲ್ ಮಾಡಿಸಿಕೊಳ್ಳುವುದು ಯಾರಿಗೆ ಇಷ್ಟವಿದೆಯೆಂದು ಹೇಳಿ? Image courtesy

ಆನೆಯ ಲದ್ದಿಯ ಬಿಯರ್

ಆನೆಯ ಲದ್ದಿಯ ಬಿಯರ್

ಆನೆಯ ಲದ್ದಿಯಿಂದ ಬಿಯರ್ ಮಾಡುವಾಗ ಏನು ಯೋಚಿಸಿರಬಹುದು ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿದೆ. ಇದರ ಜನಪ್ರಿಯತೆ ಎಷ್ಟಿದೆಯೆಂದರೆ ಒಂದು ಬಾಟಲ್ ಬಿಯರ್ ಗೆ ನೂರು ಡಾಲರ್ ಖರ್ಚು ಮಾಡಬೇಕು. Image courtesy

ಹಕ್ಕಿಯ ಹಿಕ್ಕೆಯ ಫೇಶಿಯಲ್

ಹಕ್ಕಿಯ ಹಿಕ್ಕೆಯ ಫೇಶಿಯಲ್

ಸೌಂದರ್ಯ ಕ್ಷೇತ್ರದಲ್ಲಿ ಇದು ತುಂಬಾ ಜನಪ್ರಿಯವಾಗಿರುವ ಫೇಶಿಯಲ್. ಇದನ್ನು ಮಾಡಲು ನಿಮಗೆ 180 ಡಾಲರ್ ಖರ್ಚಾಗುತ್ತದೆ. ಈ ವಿಚಿತ್ರ ಫೇಶಿಯಲ್ ಅನ್ನು ಯಾರು ಕಂಡುಹಿಡಿದಿದ್ದಾರೆಯಾ ಗೊತ್ತಿಲ್ಲ. ಅದರೆ ಅವರ ಮುಖಕ್ಕೆ ಹಕ್ಕಿ ಮಲ ವಿಸರ್ಜನೆ ಮಾಡಿದ ಬಳಿಕವೇ ಇದು ಜಾರಿಗೆ ಬಂದಿರಬಹುದು. Image courtesy

ಕೊಪಿ ಲುವಾಕ್ ಕಾಫಿ

ಕೊಪಿ ಲುವಾಕ್ ಕಾಫಿ

ಇದರ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಇಂಡೋನೇಶಿಯಾದಲ್ಲಿರುವ ಪುನುಗು ಬೆಕ್ಕಿನ ಹಿಕ್ಕೆಯಿಂದ ಇದನ್ನು ಮಾಡಲಾಗುತ್ತದೆ. ಬೆಕ್ಕುಗಳು ಕಾಫಿ ಹಣ್ಣುಗಳನ್ನು ತಿಂದು ಮಲ ವಿಸರ್ಜನೆ ಮಾಡಿದಾಗ ಕಾಫಿಯ ರುಚಿ ಮತ್ತಷ್ಟು ಹೆಚ್ಚುವುದಂತೆ. Image courtesy

ಕುರಿ ಹೊಕ್ಕಳಬಳ್ಳಿ ಫೇಶಿಯಲ್

ಕುರಿ ಹೊಕ್ಕಳಬಳ್ಳಿ ಫೇಶಿಯಲ್

ಇದನ್ನು ಓದಿ ನಿಮಗೆ ಅಸಹ್ಯವೆನಿಸಬಹುದು. ಆದರೆ ಇದು ನಿಜ. ಕುರಿಯ ಹೊಕ್ಕಳಬಳ್ಳಿಯನ್ನು ಬಳಸಿಕೊಂಡು ಫೇಶಿಯಲ್ ಮಾಡಲಾಗುತ್ತದೆ. ಇದರ ಬೆಲೆ 500 ಡಾಲರ್. ಇದು ಚರ್ಮದ ಪ್ರತಿರಕ್ಷಣೆಯನ್ನು ಹೆಚ್ಚಿಸಿ ಉರಿಯೂತ ಶಮನ ಮಾಡುತ್ತದೆ. ಎಲ್ಲಾ ಓಕೆ ಆದರೆ ಕುರಿ ಹೊಕ್ಕಳಬಳ್ಳಿ ಯಾಕೆ? Image courtesy

English summary

Most Disgusting Yet Expensive Things Around The World

These are the things that are really disgusting and the very thought of these expensive things might even make you puke! We're sure you would feel disgusted by the end of this article, as we bet you have never read or heard about these worse things that are so precious in this crazy world! Read on to find out more..
X
Desktop Bottom Promotion