Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಛಲದಂಕ ಮಲ್ಲ 'ಮಿಲ್ಕಾ ಸಿಂಗ್' ಜೀವನದ ಸಾಹಸಗಾಥೆ
ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಅದು ಒಂದು ಧರ್ಮ ಎಂಬ ಮಟ್ಟಿಗೆ ಬೆಳೆದು ನಿಂತಿದೆ. ಆದರೂ ಕೆಲವು ಅಥ್ಲೆಟ್‌ಗಳು ತಮ್ಮ ಪ್ರತಿಭೆಯಿಂದ ಭಾರತದ ಕ್ರೀಡಾಲೋಕಕ್ಕೆ ಸ್ವಲ್ಪ ವೈವಿಧ್ಯತೆಯನ್ನು ತಂದಿದ್ದಾರೆ. ಕುಸ್ತಿಯಲ್ಲಿ ಸುಶೀಲ್ ಕುಮಾರ್, ಬಾಕ್ಸಿಂಗ್‌ನಲ್ಲಿ ವಿಜೇಂದರ್, ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ, ರಾಜವರ್ಧನ್ ಸಿಂಗ್ ರಾಥೋಡ್, ವೇಟ್ ಲಿಫ್ಟಿಂಗ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಮುಂತಾದವರು ಭಾರತದ ಅಥ್ಲೆಟಿಕ್ ಮತ್ತು ಒಲಂಪಿಕ್ ಕ್ರೀಡಾ ಉತ್ಸವಗಳಲ್ಲಿ ನಮ್ಮ ದೇಶಕ್ಕೆ ಹಿರಿಮೆಯನ್ನು ತಂದಿದ್ದಾರೆ.
ಓಟದಲ್ಲಿ ನಮ್ಮ ದೇಶ ಹಿಂದೆ ಎಂಬ ಅಭಿಪ್ರಾಯಗಳು ಎಲ್ಲರಿಗು ಬಂದರು, ಇಬ್ಬರು ಈ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಒಬ್ಬರು ಪಿ.ಟಿ.ಉಷಾ ಮತ್ತೊಬ್ಬರು ನಮ್ಮ "ಹಾರುವ ಸಿಖ್" ಮಿಲ್ಖಾ ಸಿಂಗ್!. ಮಿಲ್ಖಾ ಸಿಂಗ್ ಎಂದರೆ ಅವರ ಹೆಸರು ಪೂರ್ತಿಯಾಗುವುದಿಲ್ಲ. ಹಾರುವ ಸಿಖ್ ಎಂದರೆ ಮಾತ್ರ ಅದು ಪೂರ್ಣಗೊಳ್ಳುತ್ತದೆ ಎಂಬ ಮಟ್ಟಿಗೆ ಅವರ ಹೆಸರಿನ ಜೊತೆಗೆ ಹಾರುವ ಸಿಖ್ ಎಂಬ ಹೆಸರು ಜನಜನಿತವಾಗಿದೆ.
ಇವರು ತಮ್ಮ ಓಟದ ಮೂಲಕ ದೇಶದ ಅಥ್ಲೆಟಿಕ್ಸ್ ರಂಗಕ್ಕೆ ಹೊಸ ಶಖೆಯನ್ನು ತಂದರು. ಬಡ ಕುಟುಂಬದಲ್ಲಿ ಜನಿಸಿದ ಇವರು, ಜೀವನೋಪಾಯವನ್ನು ಅರಸಿಕೊಂಡು ದೆಹಲಿಗೆ ಬಂದು ಭಾರತೀಯ ಸೈನ್ಯದಲ್ಲಿ ಸೇರಿದರು. ಆಮೇಲೆ ಜೀವನಕ್ಕಾಗಿ ಮತ್ತು ಸಾಧನೆಗಾಗಿ ಓಡಲು ಶುರು ಮಾಡಿದರು. ಓಟ ಇವೆರಡನ್ನು ಅವರಿಗೆ ನೀಡಿತು.
ಒಮ್ಮೆ ನಡೆದ ದೊಂಬಿಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡ ಇವರು ಪಾಕಿಸ್ತಾನದ ಜನರಲ್‌ರವರಿಂದ "ಹಾರುವ ಸಿಖ್" ಎಂಬ ಬಿರುದನ್ನು ಪಡೆದಿದ್ದಲ್ಲದೆ, ನಮ್ಮ ದೇಶದಲ್ಲಿ ಅವರ ಕುರಿತಾದ ಜೀವನ ಚರಿತ್ರೆಯನ್ನು ಒಳಗೊಂಡ ಒಂದು ಚಲನಚಿತ್ರವನ್ನು ಸಹ ನಿರ್ಮಿಸುವಂತಹ ಸಾಧನೆ ಮಾಡಿದರು. ನಿಜ ಮಿಲ್ಖಾ ಸಿಂಗ್‌ರವರು ನಿಜಕ್ಕೂ ಸ್ಫೂರ್ತಿದಾಯಕ ಜೀವನವನ್ನು ನಡೆಸಿದರು ಮತ್ತು ತಮ್ಮ ಸಾಧನೆಯ ಬಗ್ಗೆ ಜನರು ದೊಡ್ಡ ದೊಡ್ಡ ಆವೃತ್ತಿಗಳಷ್ಟು ಮಾತನಾಡಲು ಇವರು ಅವಕಾಶ ಮಾಡಿಕೊಟ್ಟರು. ಇವರ ಸಾಧನೆಯನ್ನು ಸರಳವಾಗಿ ಹೇಳಬೇಕೆಂದರೆ, ಇವರು ಭಾಗವಹಿಸಿದ 80 ಓಟದ ಪಂದ್ಯಗಳಲ್ಲಿ 77 ರಲ್ಲಿ ಇವರು ಗೆಲುವು ಸಾಧಿಸಿದರು. ಅಂತಹ ಮಹಾನ್ ಸಾಧಕರ ಕುರಿತಾಗಿ ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದೆ ಓದಿ...

ಕೋಮು ಗಲಭೆಯಲ್ಲಿ ಪೋಷಕರನ್ನು ಕಳೆದುಕೊಂಡರು
ಭಾರತ ಮತ್ತು ಪಾಕಿಸ್ತಾನ ವಿಭಜನೆಯ ನಂತರ ನಡೆದ ಕೋಮು ದಂಗೆಯಲ್ಲಿ ಮಿಲ್ಖಾ ಸಿಂಗ್ ತಮ್ಮ ಪೋಷಕರನ್ನು ಕಳೆದುಕೊಂಡರು. ಆಗ ಅವರ ವಯಸ್ಸು 12. ಅಂದು ಪ್ರಾಣ ಕಾಪಾಡಿಕೊಳ್ಳಲು ಓಡು ಎಂದು ಹೇಳಿದ ಅವರ ಪೋಷಕರ ಮಾತಿನಂತೆ ಓಡಲು ಶುರು ಮಾಡಿದ ಮಿಲ್ಖಾರು, ಮುಂದೆ ಜೀವನಕ್ಕಾಗಿ ಸಹ ಓಡಿ ಸಾಧನೆ ಮಾಡಿದರು.

ಸೇನೆಗೆ ಸೇರುವ ಹಂಬಲ
ಇವರು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. ಆದರೆ ಮೂರು ಬಾರಿ ಇವರನ್ನು ತಿರಸ್ಕರಿಸಲಾಯಿತು. ಆದರೆ ಛಲ ಬಿಡದ ಇವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಅಲ್ಲದೆ ಇಂಜಿನಿಯರಿಂಗ್ ಇಲಾಖೆಯಲ್ಲಿ ತಮ್ಮನ್ನು ತಾವು ನೊಂದಣಿ ಮಾಡಿಕೊಂಡರು.

1951ರಲ್ಲಿ ಕ್ರೀಡೆಯತ್ತ ಒಲವು...
1951ರಲ್ಲಿ ಇವರು ಸಿಖಂದರಾಬಾದಿನ ಇಎಮ್‌ಇ ಕೇಂದ್ರಕ್ಕೆ ಸೇರಿದಾಗ ಇವರಲ್ಲಿದ್ದ, ಕ್ರೀಡಾಪಟು ಬೆಳಕಿಗೆ ಬಂದಿತ್ತು, ಅಂದೇ ಛಲದಂಕ ಮಲ್ಲನಂತೆ ಹೋರಾಡಿ, ಜೀವನದಲ್ಲಿ ಸಾಧನೆಗೈಯುವ ಪಣತೊಟ್ಟರು

ತರಬೇತಿಯ ಸಂದರ್ಭದಲ್ಲಿ
ಆಯಾಸದ ಸಂದರ್ಭದಲ್ಲಿ (ಸೈನಿಕರು ಕಠಿಣ ಪರಿಶ್ರಮ ಪಡುತ್ತ ಕೆಲಸ ಮಾಡುವ ಸಂದರ್ಭ) ಇವರು ಚಲಿಸುತ್ತಿರುವ ಮೀಟರ್ ಗೇಜ್ ರೈಲುಗಳಿಗೆ ವಿರುದ್ಧವಾಗಿ ಓಡುತ್ತ ತರಬೇತಿಯನ್ನು ಪಡೆಯುತ್ತಿದ್ದರು. ಅಲ್ಲದೆತರಬೇತಿಯ ಸಂದರ್ಭದಲ್ಲಿ ಇವರು ರಕ್ತವನ್ನು ವಾಂತಿ ಮಾಡಿಕೊಳ್ಳುತ್ತಿದ್ದರು, ಮೂತ್ರದಲ್ಲಿ ಇವರಿಗೆ ರಕ್ತ ಕಾಣಿಸಿಕೊಳ್ಳುತ್ತಿತ್ತು.

ತರಬೇತಿಯ ಸಂದರ್ಭದಲ್ಲಿ
ಜೊತೆಗೆ ಕೆಲವೊಮ್ಮೆ ಇವರು ಪ್ರಜ್ಞೆಯನ್ನು ಸಹ ಕಳೆದುಕೊಳ್ಳುತ್ತಿದ್ದರು. ಆಗ ಕೆಲವೊಮ್ಮೆ ಇವರಿಗೆ ಆಮ್ಲಜನಕವನ್ನು ನೀಡಲಾಗುತ್ತಿತ್ತು. ಇನ್ನೂ ಕೆಲವೊಮ್ಮೆ ಇವರು ಆಸ್ಪತ್ರೆಯಲ್ಲಿ ಮರಣ ಶಯ್ಯೆಯಲ್ಲಿ ಮಲಗಿದ್ದರು. ಆದರೆ ಅಪ್ರತಿಮ ಸಾಧಕರಾದ ಇವರು ಈ ಪರಿಸ್ಥಿತಿಯನ್ನು ಗೆದ್ದು ಬಂದಿದ್ದರು.

ಮೊಟ್ಟ ಮೊದಲ ಸ್ಪರ್ಧಾತ್ಮಕ ಓಟ
ಇವರ ಮೊಟ್ಟ ಮೊದಲ ಸ್ಪರ್ಧಾತ್ಮಕ ಓಟದ ಸ್ಪರ್ಧೆಯು ಕ್ರಾಸ್ ಕಂಟ್ರಿ ರೇಸ್ ಆಗಿತ್ತು. 500 ಜನರಿದ್ದ ಈ ಸ್ಪರ್ಧೆಯಲ್ಲಿ ಇವರು 6 ನೇಯವರಾಗಿ ಸ್ಥಾನ ಪಡೆದರು. 1958 ರ ಏಶಿಯನ್ ಗೇಮ್ಸ್ ಸಂದರ್ಭದಲ್ಲಿ ಇವರು 400 ಮತ್ತು 200 ಮೀಟರ್ ಸ್ಪರ್ಧೆ ಎರಡರಲ್ಲೂ ಚಿನ್ನದ ಪದಕವನ್ನು ಪಡೆದರು. ಇವರು ಈ ಓಟಗಳನ್ನು ಕ್ರಮವಾಗಿ 21.6 ಮತ್ತು 47 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು.

ಮೊಟ್ಟ ಮೊದಲ ಚಿನ್ನದ ಪದಕ
1958 ರಲ್ಲಿ ನಡೆದ ಕಾರ್ಡಿಫ್ ಕಾಮನ್‌ವೆಲ್ತ್ ಗೇಮ್‌ನಲ್ಲಿ ಇವರು 400 ಮೀಟರ್ ರೇಸಿನಲ್ಲಿ ಕೇವಲ 46.16 ಸೆಕೆಂಡಿನಲ್ಲಿ ಗುರಿಯನ್ನು ತಲುಪಿದ್ದರು. ಇದು ಭಾರತ ಸ್ವಾತಂತ್ರ್ಯ ಪಡೆದ ನಂತರ್ ಭಾರತೀಯನೊಬ್ಬ ಕಾಮನ್‌ವೆಲ್ತ್ ಗೇಮ್‌ನಲ್ಲಿ ಗೆದ್ದ ಮೊಟ್ಟ ಮೊದಲ ಚಿನ್ನದ ಪದಕವಾಗಿತ್ತು.

ಸೇನೆಯಲ್ಲಿ ಭಡ್ತಿ
1958 ರ ಟೋಕಿಯೊ ಏಶಿಯನ್ ಗೇಮ್ಸ್ ನಂತರ ಸೇನೆಯಲ್ಲಿ ಇವರ ಸ್ಥಾನವನ್ನು ಸಿಪಾಯಿಯಿಂದ ಜೂನಿಯರ್ ಕಮೀಶನಡ್ ಆಫೀಸರ್ ಮಟ್ಟಕ್ಕೆ ಬಡ್ತಿಯನ್ನು ನೀಡಲಾಯಿತು.

ರೋಮ್ ಒಲಂಪಿಕ್ಸ್
1960 ರ ರೋಮ್ ಒಲಂಪಿಕ್ಸ್‌ನಲ್ಲಿ ಇವರು 400 ಮೀಟರ್ ಸ್ಪರ್ಧೆಯಲ್ಲಿ, ಎರಡನೆಯವರಾಗಿ ಗೆದ್ದು ಬಂದರು. ದುರದೃಷ್ಟವಶಾತ್ ಮಿಲ್ಖಾರವರು 1960 ರ ಒಲಂಪಿಕ್‌ನಲ್ಲಿ ಕೇವಲ 0.1 ಸೆಕೆಂಡ್‌ಗಳ ವ್ಯತ್ಯಾಸದಲ್ಲಿ ಕಂಚಿನ ಪದಕವನ್ನು ಕಳೆದುಕೊಂಡರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೋಮ್ ಒಲಂಪಿಕ್ಸ್
1960 ರ ಒಲಂಪಿಕ್‌ನಲ್ಲಿ ಇವರು ಅತ್ಯಂತ ಜನಪ್ರಿಯವಾಗಿದ್ದರು. ಕಾರಣ ಇವರ ಕೂದಲು ಮತ್ತು ಗಡ್ಡ. ಸಿಖ್ಖರ ಸಾಮಾನ್ಯ ಶೈಲಿಯಲ್ಲಿ ಗಡ್ಡ ಮತ್ತು ಕೂದಲು ಬೆಳೆಸಿದ್ದ ಇವರನ್ನು ರೋಮನ್ನರು ಒಬ್ಬ ಸನ್ಯಾಸಿಯಂತೆ ಕಾಣುತ್ತಿದ್ದರು. ಒಬ್ಬ ಸಾಧು ಅಥವಾ ಸನ್ಯಾಸಿ ಹೇಗೆ ಈ ಮಟ್ಟಿಗೆ ಓಟಗಾರನಾಗಬಲ್ಲ ಎಂದು ಅಚ್ಚರಿಪಡುತ್ತಿದ್ದರು. ಇವರು ತಲೆಗೆ ಸುತ್ತಿಕೊಳ್ಳುತ್ತಿದ್ದ ಟರ್ಬೈನ್ ಮತ್ತು ಪೇಟ ಸಹ ಅವರಿಗೆ ಫ್ಯಾಷನ್ ಆಗಿ ಕಾಣುತ್ತಿತ್ತು.

ಅಬ್ದುಲ್ ಖಾಲಿಕ್‌ರವರನ್ನು ಸೂಲಿಸಿದ ಹೆಗ್ಗಳಿಕೆ
1962 ರಲ್ಲಿ ಮಿಲ್ಖಾ ಸಿಂಗ್‌ರವರು ಪಾಕಿಸ್ತಾನದ ಅತ್ಯಂತ ವೇಗದ ಓಟಗಾರ ಅಬ್ದುಲ್ ಖಾಲಿಕ್‌ರವರನ್ನು ಸೋಲಿಸಿದರು. ಆಗ ಪಾಕಿಸ್ತಾನದ ಜನರಲ್ ಆಗಿದ್ದ, ಅಯೂಬ್ ಖಾನ್‌ರವರು ಇವರನ್ನು "ಹಾರುವ ಸಿಖ್" ಎಂದು ಬಿರುದು ನೀಡಿದರು.

ಮಾನವೀಯತೆ ಮೆರೆದ ಮಿಲ್ಖಾ
1999ರಲ್ಲಿ ಮಿಲ್ಖಾ ಸಿಂಗ್‌ರವರು ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್‌ನಲ್ಲಿ ಸೆಣಸುತ್ತ ಮರಣ ಹೊಂದಿದ ವೀರ ಯೋಧ ಹವಿಲ್ದಾರ್ ಬಿಕ್ರಂ ಸಿಂಗ್‌ರವರ ಮಗನನ್ನು ದತ್ತು ಪಡೆದುಕೊಂಡರು.

ತಿಹಾರ್ ಜೈಲಿಗೆ....
ಇವರು ಒಮ್ಮೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಾಗ ಸಿಕ್ಕಿ ಬಿದ್ದು ತಿಹಾರ್ ಜೈಲಿಗೆ ಕಳುಹಿಸಲ್ಪಟ್ಟಿದ್ದರು. ಆದರೆ ಆಗ ಅವರ ಸೋದರಿ ತಮ್ಮ ಒಡವೆಗಳನ್ನು ಮಾರಿ ಇವರಿಗೆ ಜಾಮೀನು ನೀಡಿದ್ದರು.

ತಮ್ಮ ಆತ್ಮಕತೆಯನ್ನು 1 ರೂಪಾಯಿಗೆ ಮಾರಿದರು
ಇವರು ತಮ್ಮ ಆತ್ಮಕತೆಯನ್ನು ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಾದ ಮೆಹ್ರಾರವರಿಗೆ ಕೇವಲ 1 ರೂಪಾಯಿಗೆ ಮಾರಿದರು. ಅದು "ಭಾಗ್ ಮಿಲ್ಕಾ ಭಾಗ್" ಎಂಬ ಚಲನಚಿತ್ರವಾಗಿ, ಸೂಪರ್ ಹಿಟ್ ಆಯಿತು.

ಕೊನೆಯ ಆಸೆ
ಇವರ ಕೊನೆಯ ಆಸೆ, ಒಲಂಪಿಕ್ ಪಂದ್ಯದಲ್ಲಿ ಓಟದಲ್ಲಿ ಭಾರತೀಯ ಹುಡುಗ ಅಥವಾ ಹುಡುಗಿ ಒಬ್ಬರು ಚಿನ್ನದ ಪದಕವನ್ನು ಗೆಲ್ಲುವುದನ್ನು ನೋಡಬೇಕಂತೆ.



Click it and Unblock the Notifications











