Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣರಾಜ್ಯೋತ್ಸವ: ಭಾರತದ ಗಣರಾಜ್ಯ ಮತ್ತು ಸಂವಿಧಾನದ ಹಿಂದಿನ ಆಸಕ್ತಿಕರ ಸಂಗತಿಗಳು
ಭಾರತೀಯರೆಲ್ಲರಿಗೂ ಹೆಮ್ಮೆಯನ್ನು ತರುವಂತಹ ವಿಚಾರಗಳಲ್ಲಿ ನಮ್ಮ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಮಹತ್ವದ ಸ್ಥಾನವನ್ನು ನೀಡಬೇಕಾಗುತ್ತದೆ. ಅದರಲ್ಲೂ ರಾಷ್ಟ್ರ ಧ್ವಜ ನಮ್ಮ ಮುಂದೆ ಅಥವಾ ಕೈಯಲ್ಲಿ ಇದ್ದು, ರಾಷ್ಟ್ರಗೀತೆ ಹಾಡುವಾಗ ಎಂತಹವರ ಎದೆಯಲ್ಲಿಯೂ ರಾಷ್ಟ್ರದ ಕುರಿತಾದ ಹೆಮ್ಮೆ ಉಕ್ಕಿ ಹರಿಯುತ್ತದೆ.
ಭಾರತವು ಸ್ವಾತಂತ್ರ್ಯಗೊಂಡ ನಂತರ ನಮ್ಮ ದೇಶಕ್ಕೆ ನಮ್ಮದೆ ಆದ ಕಾನೂನು ಮತ್ತು ಸಂವಿಧಾನ ಇರಬೇಕು ಎಂದುಕೊಂಡು, ಅದನ್ನು ರಚಿಸಿ ಜಾರಿಗೆ ತಂದಿದ್ದು 1950 ಜನವರಿ 26 ರಂದು, ಅಂದಿನಿಂದ ಭಾರತ ಗಣರಾಜ್ಯವಾಗಿ ಘೋಷಣೆಗೊಂಡಿತು. ಬನ್ನಿ ಭಾರತದ ಗಣರಾಜ್ಯ ಮತ್ತು ಸಂವಿಧಾನದ ಹಿಂದಿನ ಆಸಕ್ತಿಕರ ವಿಚಾರಗಳನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ..

26 ನೇ ಜನವರಿ
26 ನೇ ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು ಮತ್ತು ಭಾರತ ಅಧಿಕೃತವಾಗಿ ಗಣರಾಜ್ಯವೆಂದು ಘೋಷಣೆಯಾಯಿತು.

ವಿಶ್ವದ ಅತ್ಯಂತ ದೊಡ್ಡ ಸಂವಿಧಾನ
ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವಾದ ಭಾರತದ ಸಂವಿಧಾನ, ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. 448 ವಿಧಿಗಳನ್ನು 22 ಭಾಗಗಳಲ್ಲಿಯೂ, 10 (ನಂತರ 12) ಅನುಚ್ಛೇದಗಳನ್ನೂ,, 118 ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು 1,17,369 ಶಬ್ಧಗಳನ್ನು ಹೊಂದಿದೆ.

2 ವರ್ಷ 11 ತಿಂಗಳು ಮತ್ತು 18 ದಿನ....
ಡಾ. ಬಿ.ಆರ್. ಅಂಬೇಡ್ಕರ್‌ರವರು ಭಾರತದ ಸಂವಿಧಾನದ ಕರಡನ್ನು ಸಿದ್ಧಪಡಿಸಲು, 2 ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡರು. ತದನಂತರ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಹಸ್ತಾಕ್ಷರದಲ್ಲಿ ಸಿದ್ಧಪಡಿಸಿದ ಸಂವಿಧಾನಗಳನ್ನು ಸಿದ್ಧಪಡಿಸಲಾಯಿತು.

ಇಡೀ ದೇಶದಲ್ಲಿ ಅನುಷ್ಟಾನಕ್ಕೆ....
ಈ ಎರಡೂ ಭಾಷೆಗಳಲ್ಲಿ ಸಿದ್ಧಪಡಿಸಿದ ಸಂವಿಧಾನದ ಪ್ರತಿಗಳಿಗೆ 24ನೇ ಜನವರಿ 1950 ರಂದು, ಸಭೆ ಮಾಡಿ 308 ಮಂದಿಗಳು ಸಹಿಯನ್ನು ಹಾಕಿದರು. ಅದಾಗಿ ಎರಡು ದಿನಗಳ ನಂತರ ಈ ಸಂವಿಧಾನವು ಜಾರಿಗೆ ಬಂದಿತು. ಆನಂತರ ಅದನ್ನು ಇಡೀ ದೇಶದಲ್ಲಿ ಅನುಷ್ಟಾನಕ್ಕೆ ತರಲಾಯಿತು.

ಹಸ್ತಾಕ್ಷರದಲ್ಲಿ ಬರೆದಿರುವ ಪ್ರತಿಗಳು
ಹಸ್ತಾಕ್ಷರದಲ್ಲಿ ಬರೆದಿರುವ ಭಾರತೀಯ ಸಂವಿಧಾನದ ಆ ಎರಡೂ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ಭರ್ತಿ ಮಾಡಿರುವ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಡಲಾಗಿದೆ. ಇದು ಅನುಷ್ಟಾನಕ್ಕೆ ಬಂದಾಗಿನಿಂದ ಇದುವರೆಗೂ 94 ತಿದ್ದುಪಡಿಗಳು ಆಗಿವೆ.

'ಸತ್ಯಮೇವ ಜಯತೇ'
ಮುಂಡಕ ಉಪನಿಷತ್ತಿನಿಂದ ಭಾರತದ ಧ್ಯೇಯವಾಕ್ಯ "ಸತ್ಯಮೇವ ಜಯತೇ" ಯನ್ನು ಆರಿಸಿಕೊಳ್ಳಲಾಗಿದೆ. ಅಲ್ಲದೆ ಮದನ್ ಮೋಹನ್ ಮಾಳವಿಯಾರವರು ಈ ಧೇಯವಾಕ್ಯವನ್ನು ಆರಿಸಿದ ಕೀರ್ತಿಗೆ ಪಾತ್ರರಾದರು.

ರವೀಂದ್ರನಾಥ್ ಠಾಗೂರರು ಜನ ಗಣ ಮನ
ರವೀಂದ್ರನಾಥ್ ಠಾಗೂರರು ಜನ ಗಣ ಮನವನ್ನು ಮೊದಲು ಬೆಂಗಾಳಿಯಲ್ಲಿ ಬರೆದರು. ಇದನ್ನು ಅಬಿದ್ ಅಲಿಯವರು 1911 ರಲ್ಲಿ ಹಿಂದಿಗೆ ಭಾಷಾಂತರ ಮಾಡಿದರು. 1950 ರಲ್ಲಿ ಇದನ್ನು ಅಧಿಕೃತವಾಗಿ ರಾಷ್ಟ್ರಗೀತೆ ಎಂದು ಘೋಷಣೆ ಮಾಡಲಾಯಿತು.

ಭಾರತದ ರಾಷ್ಟ್ರಗೀತೆ ಹಾಗೂ ರಾಷ್ಟ್ರೀಯ ಲಾಂಛನ
ಭಾರತದ ರಾಷ್ಟ್ರಗೀತೆಯನ್ನು 52 ಸೆಕೆಂಡ್‌ಗಳಲ್ಲಿ ಹಾಡಬೇಕು. ಅಲ್ಲದೆ ಭಾರತದ ರಾಷ್ಟ್ರೀಯ ಲಾಂಛನವಾಗಿರುವ ಅಶೋಕ ಸ್ತಂಭವನ್ನು ಸಾರನಾಥದಿಂದ ಆರಿಸಿಕೊಳ್ಳಲಾಗಿದೆ. ಸಾರನಾಥದ ಈ ಸ್ತಂಭವು ಕ್ರಿ.ಪೂ 250 ರಷ್ಟು ಹಳೆಯದು.

ಭಾರತದ ಧ್ವಜ
ಭಾರತದ ಧ್ವಜವನ್ನು ಮಚಲಿಪಟ್ಟಣದ ರೈತರಾದ ಪಿಂಗಳಿ ವೆಂಕಯ್ಯನವರು ವಿನ್ಯಾಸ ಮಾಡಿದರು. ಭಾರತದ ಧ್ವಜದ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿರಬೇಕು.

ಭಾರತದ ಧ್ವಜವನ್ನು ಖಾದಿಯಲ್ಲಿ ಮಾತ್ರ ತಯಾರಿಸಬೇಕು
ಕಾನೂನಿನ ಪ್ರಕಾರ ಭಾರತದ ಧ್ವಜವನ್ನು ಖಾದಿಯಲ್ಲಿ ಮಾತ್ರ ತಯಾರಿಸಬೇಕು, ಹಾಗೂ 9 ನಿರ್ದಿಷ್ಟ ಗಾತ್ರದಲ್ಲಿ ಮಾತ್ರ ತಯಾರಿಸಬೇಕು. ಖಾದಿಯನ್ನು ಹೊರತುಪಡಿಸಿ ಇತರೆ ಬಟ್ಟೆಯಲ್ಲಿ ತಯಾರಿಸಲಾದ ಧ್ವಜವನ್ನು ಆರಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕಾಗಿ, ದಂಡದ ಜೊತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಭಾರತದ ಧ್ವಜವನ್ನು ಖಾದಿಯಲ್ಲಿ ಮಾತ್ರ ತಯಾರಿಸಬೇಕು
ಅಲ್ಲದೆ,ಭಾರತದ ಧ್ವಜವು ನೆಲಕ್ಕೆ ಬೀಳಿಸಬಾರದು ಮತ್ತು ನೀರಿಗೆ ಹಾಕಿರಬೇಕು. ಜೊತೆಗೆ ಇದನ್ನು ಪರದೆಯಾಗಿ ಸಹ ಬಳಸಬಾರದು.

ಭಾರತದ ಧ್ವಜವನ್ನು ಖಾದಿಯಲ್ಲಿ ಮಾತ್ರ ತಯಾರಿಸಬೇಕು
ಡಾ.ರಾಜೇಂದ್ರ ಪ್ರಸಾದ್‌ರವರು ಸಹ ಭಾರತದ ಮೊದಲ ರಾಷ್ಟ್ರಪತಿಯಾಗಿ 26 ನೇ ಜನವರಿ 1950 ರಂದು ಅಧಿಕಾರವಹಿಸಿಕೊಂಡರು. ಭಾರತದ ರಾಷ್ಟ್ರಪತಿಯವರು ನಮ್ಮ ತ್ರಿವರ್ಣ ಧ್ವಜವನ್ನು ಆರಿಸುವಾಗ ನೌಕಾ ದಳ ಮತ್ತು ಭೂಸೇನೆಯ ಗೌರವವನ್ನು ಸೂಚಿಸುವ 21 ಕುಶಾಲ ತೋಪುಗಳನ್ನು ಹಾರಿಸಲಾಗುತ್ತದೆ.



Click it and Unblock the Notifications