For Quick Alerts
ALLOW NOTIFICATIONS  
For Daily Alerts

ಜೀನ್ಸ್‌ನಲ್ಲಿರುವ ಸಣ್ಣ ಜೇಬಿನ ಹಿಂದಿರುವ ರಹಸ್ಯಗಳು!

By Hemanth
|

ಬಟ್ಟೆಗಳ ವಿನ್ಯಾಸದಲ್ಲಿ ವರ್ಷಗಳು ಉರುಳಿದಂತೆ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಮಹಿಳೆಯರ ಬಟ್ಟೆಗಳಂತೆ ಪುರುಷರ ಬಟ್ಟೆಗಳಲ್ಲೂ ಬದಲಾವಣೆಗಳು ಇವೆ. ನಮ್ಮ ಅಣ್ಣವರು ಡಾ. ರಾಜ್ ಕುಮಾರ್ ಧರಿಸುತ್ತಿದ್ದ ಪ್ಯಾಂಟ್ ಮತ್ತು ಈಗಿನ ಯಶ್ ಧರಿಸುವ ಪ್ಯಾಂಟ್‌ಗೂ ತುಂಬಾ ವ್ಯತ್ಯಾಸವಿದೆ.

ಅದರಲ್ಲೂ ಜೀನ್ಸ್ ಬಂದ ಕಾಲದಲ್ಲಿ ಅದರ ಬಗ್ಗೆ ಹೆಚ್ಚಿನವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಸಮಯ ಕಳೆದಂತೆ ಮಹಿಳೆಯರೂ ಜೀನ್ಸ್ ಧರಿಸಲು ಆರಂಭಿಸಿದರು. ನೀವು ಜೀನ್ಸ್ ಧರಿಸುತ್ತಾ ಇದ್ದರೆ ಅದರಲ್ಲಿ ಚಿಕ್ಕ ಕಿಸೆ ಇರುವುದು ಯಾಕೆಂದು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಕಾರಣ ಏನಿರಬಹುದು? ಅಥವಾ ಈ ಉಪಾಯ ಬರಲು ಕಾರಣವೇನು? ದುಬಾರಿ ಮತ್ತು ಪ್ರಸಿದ್ಧವಾಗಿರುವ ಟಾಪ್ 5 ಜೀನ್ಸ್ ಬ್ರಾಂಡ್

ಇದರ ಹಿಂದೆ ಹಲವಾರು ಐತಿಹಾಸಿಕ ಕಾರಣಗಳು ಇವೆ. ಜೀನ್ಸ್ ನಲ್ಲಿ ಮಾತ್ರ ಈ ರೀತಿಯ ಕಿಸೆ ಇಡಲು ಕಾರಣವೇನೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ. ಸಣ್ಣ ಕಿಸೆಯು ಯಾವುದೇ ಮೌಲ್ಯವಾದ ವಸ್ತುಗಳನ್ನು ಇಡುವ ಸ್ಥಳವಲ್ಲ. ಜೀನ್ಸ್ ಪ್ಯಾಂಟ್‌ಗೆ ಮರುಳಾಗದವರು ಯಾರು ಇದ್ದಾರೆ ಹೇಳಿ?

ಯಾಕೆಂದರೆ ಇದು ತುಂಬಾ ಸಣ್ಣದಾಗಿದೆ. ಯಾವುದೇ ಉದ್ದೇಶವಿಲ್ಲದೆ ಈ ಕಿಸೆಗಳನ್ನು ಇಡಲು ಸಾಧ್ಯವಿಲ್ಲ. ಇದರ ಹಿಂದಿನ ಕಾರಣ ಕೇಳಿ ನಿಮಗೆ ಅಚ್ಚರಿಯಾಗಬಹುದು. ಜೀನ್ಸ್‌ನಲ್ಲಿ ಈ ಸಣ್ಣ ಕಿಸೆ ಇಡಲು ಕಾರಣವೇನೆಂದು ತಿಳಿದುಕೊಳ್ಳಲು ಮುಂದಕ್ಕೆ ಓದಿ...

ಕೌಬಾಯ್

ಕೌಬಾಯ್

1800ರಲ್ಲಿ ಕೌಬಾಯ್‌ನ ಬಟ್ಟೆಗಳ ವಿನ್ಯಾಸವು ಹೆಚ್ಚಿನ ಕಡೆಗಳಲ್ಲಿ ಎಲ್ಲರನ್ನು ಆಕರ್ಷಿಸಿದ್ದವು. ಒಂದು ಟೋಪಿ, ಜಾಕೆಟ್, ಶೂ ಇತ್ಯಾದಿಗಳನ್ನು ಧರಿಸುವುದು ಕೌಬಾಯ್ ಸ್ಟೈಲ್ ಎನ್ನಲಾಗುತ್ತಿತ್ತು. ಇದೇ ವಿನ್ಯಾಸಗಳು ಇಂದಿನ ದಿನಗಳಲ್ಲಿ ಸ್ವಲ್ಪ ಮಾರ್ಪಾಡಾಗಿದೆ. ಜೀನ್ಸ್ ನ ಸಣ್ಣ ಕಿಸೆಗಳು ಕೂಡ ಇದರಲ್ಲಿ ಒಂದಾಗಿದೆ.

ಪಾಕೆಟ್ ವಾಚ್‌ಗಾಗಿ

ಪಾಕೆಟ್ ವಾಚ್‌ಗಾಗಿ

ಹಿಂದಿನ ಕಾಲದಲ್ಲಿ ಹೆಚ್ಚಿನ ಜನರು ಕೈಗೆ ವಾಚ್ ಕಟ್ಟಿಕೊಳ್ಳುತ್ತಾ ಇರಲಿಲ್ಲ. ಕಿಸೆಯಲ್ಲಿಯೇ ವಾಚ್ ಇಟ್ಟುಕೊಳ್ಳುತ್ತಾ ಇದ್ದರು. ಇದನ್ನು ಇಡಲು ಈ ಕಿಸೆ ಮಾಡಲಾಗಿತ್ತು. ಇದನ್ನು ಅಧಿಕೃತವಾಗಿ ವಾಚ್ ಪಾಕೆಟ್ ಎನ್ನಲಾಗುತ್ತದೆ.

ಬಸ್ ಟಿಕೆಟ್ ಇಡಲು

ಬಸ್ ಟಿಕೆಟ್ ಇಡಲು

ಪಾಕೆಟ್ ವಾಚ್ ಕಾಲವು ದಾಟಿದ ಬಳಿಕ ಹೆಚ್ಚಿನ ಜನರು ಈ ಕಿಸೆಯನ್ನು ಬಸ್ ಹಾಗೂ ಇತರ ಟಿಕೆಟ್ ಇಡಲು ಬಳಸಲು ಆರಂಭಿಸಿದರು. ಯಾಕೆಂದರೆ ಇದರಲ್ಲಿ ಸುಲಭವಾಗಿ ಟಿಕೆಟ್ ಇಡಬಹುದಾಗಿತ್ತು.

ಕಾಂಡೊಮ್!

ಕಾಂಡೊಮ್!

ಈ ಕಿಸೆಯು ಕಾಂಡೊಮ್ ಇಡಲು ಪ್ರಸಕ್ತ ಜಾಗವಾಗಿತ್ತು. ಇದರಿಂದಾಗಿ ಇದನ್ನು ಕಾಂಡೊಮ್ ಇಡಲು ಕೆಲವರು ಬಳಸಲು ಅರಂಭಿಸಿದ್ದರು.

ನಾಣ್ಯಗಳಿಗಾಗಿ

ನಾಣ್ಯಗಳಿಗಾಗಿ

ಈ ಎಲ್ಲಾ ಉಪಯೋಗಕ್ಕಿಂತ ಹೆಚ್ಚಾಗಿ ನಾಣ್ಯಗಳನ್ನು ಇಡಲು ಈ ಕಿಸೆಯನ್ನು ಬಳಸುತ್ತಾ ಇದ್ದರು. ಈ ಕಿಸೆಯಲ್ಲಿ ನಾಣ್ಯಗಳನ್ನು ಇಟ್ಟರೆ ಅದನ್ನು ಸುಲಭವಾಗಿ ತೆಗೆಯಬಹುದಾಗಿತ್ತು. ಇದರಿಂದಾಗಿ ಈ ಕಿಸೆ ಇಂದಿಗೂ ಜೀನ್ಸ್ ನಲ್ಲಿದೆ.

English summary

Here's Why Your Jeans Have That Tiny Front Pocket

You must have noticed your jeans having a tiny pocket in the front, isn't it? Have you ever wondered why? What can be the reason for its existence? Or where the idea has originated from? Well, there could be several historical reasons for the same. Here, in this article, we are about to share details on some of the reasons why your pair of jeans contain a tiny pocket in the front.
Story first published: Thursday, September 1, 2016, 20:04 [IST]
X
Desktop Bottom Promotion