Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಈ ಊರಿನಲ್ಲಿ ಬರೋಬ್ಬರಿ ಮೂರು ಬಾರಿ ಮದುವೆ ಆಗುತ್ತಾರಂತೆ!
ಮುಂಬೈಯಿಂದ ಸುಮಾರು ನೂರೈವತ್ತು ಕಿ.ಮೀ ದೂರವಿದ್ದು ಕೇವಲ ಐನೂರು ಜನಸಂಖ್ಯೆ ಇರುವ ಈ ಪುಟ್ಟ ಊರು ಇತ್ತೀಚೆಗೆ ವಿಶ್ವದ ಗಮನ ಸೆಳೆಯುತ್ತಿದೆ. ಏಕೆಂದರೆ ಇಲ್ಲಿನ ಪುರುಷರು ಒಂದಕ್ಕಿಂತ ಹೆಚ್ಚು ಬಾರಿ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ....
ಭಾರತವೊಂದು ಅಚ್ಚರಿಯ ನಾಡಾಗಿದ್ದು ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಶಿಷ್ಟವೊಂದು ಇದ್ದೇ ಇರುತ್ತದೆ. ಮಹಾರಾಷ್ಟ್ರದ "ದೆಂಗನ್ಮಲ್" ಎಂಬ ಗ್ರಾಮ ಮುಂಬೈಯಿಂದ ಸುಮಾರು ನೂರೈವತ್ತು ಕಿ.ಮೀ ದೂರವಿದ್ದು ಕೇವಲ ಐನೂರು ಜನಸಂಖ್ಯೆ ಇರುವ ಈ ಪುಟ್ಟ ಊರು ಇತ್ತೀಚೆಗೆ ವಿಶ್ವದ ಗಮನ ಸೆಳೆಯುತ್ತಿದೆ. ಅಚ್ಚರಿಯಾದರೂ ಸತ್ಯ, ಈ ರೀತಿಯೂ ಮದುವೆ ನಡೆಯುತ್ತೆ!

Image Courtesy
ಏಕೆಂದರೆ ಈ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿರುವ ವಿಧಿ ಕೊಂಚ ವಿಚಿತ್ರವಾಗಿದ್ದು ಇಲ್ಲಿನ ಪುರುಷರು ಒಂದಕ್ಕಿಂತ ಹೆಚ್ಚು ಬಾರಿ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಇದಕ್ಕೆ ಕಾರಣವೂ ಇದೆ. ಇದು ಯಾವ ಕಾರಣ ಎಂಬ ಕುತೂಹಲ ನಿಮಗೆ ಮೂಡಿದ್ದರೆ ಕೆಳಗೆ ನೀಡಿರುವ ಮಾಹಿತಿ ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಬಹುದು ಅಷ್ಟಕ್ಕೂ ಒಂದಕ್ಕಿಂತ ಹೆಚ್ಚು ಬಾರಿ, (ಮೂರು ಬಾರಿ) ಮದುವೆಯಾಗಲು ಕಾರಣವೇನು ಗೊತ್ತೇ? ಮನೆಗೆ ಸಾಕಾಗುವಷ್ಟು ನೀರು ಪಡೆಯುವುದು!
ಮನೆಗೆ ನೀರು ಪಡೆಯಲು ಹೆಚ್ಚು ಮದುವೆಯಾಗುವುದು ಎಂದರೆ ಏನರ್ಥ? ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಈ ಗ್ರಾಮದ ಇತಿಹಾಸವನ್ನು ಕೊಂಚ ಅರಿಯಬೇಕು. ಈ ಗ್ರಾಮದಲ್ಲಿ ಅಂತರ್ಜಲ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇದ್ದು ಕುಡಿಯುವ ನೀರು ಕಡಿಮೆ ಲಭ್ಯವಿರುತ್ತದೆ.
ಬೇಸಿಗೆಯಲ್ಲಂತೂ ಬಾವಿಗಳೆಲ್ಲಾ ತಳ ಹಿಡಿದು ದೂರದ ಸ್ಥಳದಿಂದ ಸೇದಿ ತರಬೇಕಾಗುತ್ತದೆ. ಅಂದರೆ ಈ ಕೆಲಸಕ್ಕೆ ಮನೆಯ ಒಬ್ಬಿಬ್ಬರು ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಪ್ರತಿ ಪುರುಷ ಇಬ್ಬರು ಅಥವಾ ಮೂವರನ್ನು ಮದುವೆಯಾಗುತ್ತಾರೆ.
ಇನ್ನೂ ಅಚ್ಚರಿ ಎಂದರೆ ಇವರೆಲ್ಲಾ ನೀರು ತರುವ ವಿಷಯಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕಾರಣ ಪರಸ್ಪರ ಜಗಳವಾಡದೇ ಅನ್ಯೋನ್ಯತೆಯಿಂದ ಇರುತ್ತಾರೆ.
ಬೇಸಿಗೆಯಲ್ಲಿ ಈ ಊರಿನಂತೆಯೇ ಅಕ್ಕಪಕ್ಕದ ಹಳ್ಳಿಗಳ ಹೆಚ್ಚಿನ ಬಾವಿಗಳೆಲ್ಲಾ ಒಣಗುವ ಕಾರಣ ಹಳ್ಳಿಗಳ ಜನತೆ ವಲಸೆ ಹೋಗುತ್ತಾ ಪರಸ್ಪರ ದೂರಾಗುವ ಕಾರಣ ಹೆಚ್ಚೂ ಕಡಿಮೆ ಈ ಗ್ರಾಮ ಒಂಟಿಯಾಗಿಬಿಡುತ್ತದೆ.
ಈ ಗ್ರಾಮದವರು ಮಾತ್ರ ಗ್ರಾಮವನ್ನು ತೊರೆಯದೇ ತಮ್ಮ ಕೆಲಸವನ್ನು ಮಾಡುತ್ತಾ ನೀರಿಗಾಗಿ ಮೈಲುಗಟ್ಟಲೆ ನಡೆಯುತ್ತಾ ಹೊತ್ತು ತರುತ್ತಾರೆ. ಪ್ರತಿ ಮಹಿಳೆಯೂ ಸರಿಸುಮಾರು ಹದಿನೈದು ಲೀಟರ್ ನೀರು ತರಲಿಕ್ಕೆ ಹನ್ನೆರಡು ಗಂಟೆಗಳಾದರೂ ನಡೆಯಬೇಕಾಗುತ್ತದೆ. ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?
ಅಂದರೆ ಒಂದು ಹಗಲು ನಡೆಯಲು, ಮತ್ತು ರಾತ್ರಿ ವಿಶ್ರಮಿಸಲು ಬಳಕೆಯಾಗುವ ಕಾರಣ ಉಳಿದ ಕೆಲಸಗಳಿಗಾಗಿ ಇಬ್ಬರಿಗಿಂತ ಹೆಚ್ಚಿನ ಮಹಿಳೆಯರನ್ನು ಮದುವೆಯಾಗದೇ ಈ ಪುರುಷರಿಗೆ ಗತ್ಯಂತರವೇ ಇಲ್ಲ! ಮನೆಯಲ್ಲಿ ಹೆಚ್ಚು ಜನರಿದ್ದಷ್ಟೂ ಹೆಚ್ಚು ನೀರಿನ ಮಡಕೆಗಳು ತುಂಬುತ್ತವೆ ಎಂದು ಈ ಜನರು ಭಾವಿಸುತ್ತಾರೆ.
ಅಂತೆಯೇ ಮನೆಯ ಕೆಲಸಗಳನ್ನೆಲ್ಲಾ ಹಂಚಿಕೊಂಡು ಅನ್ಯೋನ್ಯತೆಯಿಂದ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಒಂದು ವೇಳೆ ನಿಮ್ಮಲ್ಲಿ ಇಂತಹ ಅಚ್ಚರಿಯ ಮಾಹಿತಿ ಇದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications




