For Quick Alerts
ALLOW NOTIFICATIONS  
For Daily Alerts

ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

By Deepu
|

ಮದುವೆ ಎಂದರೆ ಒಂದು ಹಬ್ಬದ ಸಡಗರ, ಸಂಭ್ರಮದ ವಾತಾವರಣ. ಪ್ರತಿ ಧರ್ಮದಲ್ಲಿಯೂ ವಿವಾಹಗಳಿಗೆ ತಮ್ಮದೇ ಆದ ಶಾಸ್ತ್ರಗಳಿವೆ. ಆದರೆ ಕೆಲವು ಶಾಸ್ತ್ರಗಳು ಅ ಪಂಗಡದ ಹೊರಗಿನವರಿಗೆ ಅತಿ ವಿಚಿತ್ರ ಎನ್ನಿಸುತ್ತದೆ.

ಈ ಚಿತ್ರವಿಚಿತ್ರ ಸಂಪ್ರದಾಯಗಳನ್ನು ಆಚರಿಸಿದ ಬಳಿಕವೇ ದಂಪತಿಗಳನ್ನು ಸಮಾಜ ಸ್ವಾಗತಿಸುತ್ತದೆ. ಉದಾಹರಣೆಗೆ ಭಾರತದ ಕೆಲವು ಕಡೆಗಳಲ್ಲಿ ಇಂದಿಗೂ ಮಹಿಳೆಯರನ್ನು ಮರಗಳಿಗೆ ಮತ್ತು ಪ್ರಾಣಿಗಳಿಗೆ ಮದುವೆ ಮಾಡಿಕೊಡುವ ವಿಚಿತ್ರ ಸಂಪ್ರದಾಯವಿದೆ. ಬಳಿಕವೇ ಅವರನ್ನು ಪುರುಷರಿಗೆ ವಿವಾಹ ಮಾಡಿಕೊಡಲಾಗುತ್ತದೆ.

ಮರಕ್ಕೆ ಮದುವೆ ಮಾಡಿಕೊಡುವ ಈ ಸಂಪ್ರದಾಯಕ್ಕೆ ಕುಂಭ ವಿವಾಹವೆಂದು ಕರೆಯುತ್ತಾರೆ. ಖ್ಯಾತ ತಾರೆ ಐಶ್ವರ್ಯಾ ರೈ ಸಹಾ ಅಭಿಶೇಕ್ ಬಚ್ಚನ್‪ ರೊಂದಿಗೆ ವಿವಾಹವಾಗುವ ಮೊದಲು ಅರಳಿ ಮರವನ್ನು ಮದುವೆಯಾಗಿದ್ದರು. ಇದರಿಂದ ಅವರು ಮಾಂಗಳಿಕ ದೋಷದಿಂದ ಮುಕ್ತರಾದರು ಎಂದು ಅವರಿಗೆ ಮದುವೆ ಮಾಡಿಸಿದ ಅರ್ಚಕರು ತಿಳಿಸುತ್ತಾರೆ.

ಭಾರತದಂತೆಯೇ ವಿಶ್ವದ ಇತರ ಕಡೆಯಲ್ಲಿಯೂ ಇಂತಹ ಚಿತ್ರವಿಚಿತ್ರವಾದ ವಿವಾಹ ಸಂಪ್ರದಾಯಗಳಿದ್ದು ಇವುಗಳಲ್ಲಿ ಪ್ರಮುಖವಾದವುಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ.

ಸೂಡಾನ್

ಸೂಡಾನ್

ಆಫ್ರಿಕಾದ ಸೂಡಾನ್ ನಲ್ಲಿ ಮದುವೆ ಸಂಪನ್ನಗೊಳ್ಳಲು ಬೇಕಾಗುವ ಅರ್ಹತೆ ಎಂದರೆ ಇಬ್ಬರು ಮಕ್ಕಳನ್ನು ಹೆತ್ತು ಕೊಡುವುದು.ಒಂದು ವೇಳೆ ಮದುವೆಯಾದ ಬಳಿಕ ಎರಡು ಮಕ್ಕಳನ್ನು ಹೆರದೇ ಇದ್ದರೆ ವರನಿಗೆ ಈ ಮದುವೆಯಿಂದ ಮುಕ್ತಿ ದೊರೆತು ಇನ್ನೊಂದು ಮದುವೆಯಾಗಲು ಪೂರ್ಣ ಅವಕಾಶವಿದೆ. ವಿಚಿತ್ರವಾದ ಈ ಸಂಪ್ರದಾಯ ಸೂಡಾನ್‌ನಲ್ಲಿ ಇಂದಿಗೂ ಜೀವಂತವಾಗಿದೆ.

ಆಫ್ರಿಕಾದಲ್ಲಿ

ಆಫ್ರಿಕಾದಲ್ಲಿ

ಆಫ್ರಿಕಾದ ಸಾವಿರಾರು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ವಿವಾಹದ ಬಳಿಕ ಪ್ರಸ್ತವು ಹಿರಿಯ ಮಹಿಳೆಯ ಸಮ್ಮುಖದಲ್ಲಿ ನಡೆಸಬೇಕಾಗುತ್ತದೆ. ಪ್ರಥಮ ರಾತ್ರಿಯಂದು ಆ ಬುಡಕಟ್ಟಿನ ಅತ್ಯಂತ ಹಿರಿಯ ಮಹಿಳೆಯೂ ವಧೂವರರೊಂದಿಗೆ ಕೋಣೆಯೊಳಕ್ಕೆ ನಡೆದು ಮುಂದಿನ ಎಲ್ಲಾ ವಿಧಾನಗಳನ್ನು ಹೇಳಿಕೊಡುವ ಪರಿಪಾಠವಿದೆ.

ಕೊರಿಯ

ಕೊರಿಯ

ಮದುವೆಯಾಗಿ ಇನ್ನೇನು ಪ್ರಥಮ ರಾತ್ರಿಗಾಗಿ ಹೊರಡಬೇಕು ಎನ್ನುವಾಗ ವರನ ಶೂ ಮತ್ತು ಕಾಲುಚೀಲಗಳನ್ನು ಕಳಚುವ ಆತನ ಸ್ನೇಹಿತರು ಹಸಿಮೀನಿನಿಂದ ಆತನ ಪಾದಗಳಿಗೆ ರಪರಪನೇ ಬಾರಿಸುತ್ತಾರೆ. ಬೇರೆಲ್ಲರೂ ನಗುತ್ತಾ ಮೋಜು ಅನುಭವಿಸಿದರೆ ವರ ಮಾತ್ರ ಪಾಪ ನೋವನ್ನನುಭವಿಸಬೇಕು. ಕೊರಿಯಾದ ಸಂಪ್ರದಾಯದ ಪ್ರಕಾರ ಈ ರೀತಿ ಮಾಡುವುದರಿಂದ ಆತನನ್ನು ಪ್ರಥಮ ರಾತ್ರಿಗೆ ಸಜ್ಜುಗೊಳಿಸಿದಂತಾಗುತ್ತದೆ. ಹಸಿ ಮೀನು ಸಿಗದಿದ್ದರೆ ಬೆತ್ತದಿಂದಲೇ ಬಾರಿಸಲಾಗುತ್ತದೆ, ಪಾಪ.

ಫ್ರಾನ್ಸ್

ಫ್ರಾನ್ಸ್

ಪ್ಯಾರಿಸ್ ಎಂದರೆ ಪ್ರೇಮಿಗಳ ನಗರ ಎನ್ನುತ್ತಾರೆ. ಆದರೆ ಫ್ರಾನ್ಸ್ ದೇಶದಲ್ಲಿ ವಿವಾಹವಾದ ಬಳಿಕ ವಧೂವರರಿಗೆ ಲಭ್ಯವಾದ ಉಡುಗೊರೆಗಳನ್ನೆಲ್ಲಾ ವಧೂವರರ ಸ್ನೇಹಿತರು ಮತ್ತು ಸಂಬಂಧಿಕರು ಸೇರಿ ಎಲ್ಲರ ಸಮ್ಮುಖದಲ್ಲಿ ಒಡೆದು ಚಿಂದಿ ಮಾಡುತ್ತಾರೆ. ಒಡೆಯಲಾಗದ ವಸ್ತುಗಳನ್ನು ಗರಗಸದಿಂದ ಕೊಯ್ದು ಹಾಕಲಾಗುತ್ತದೆ. ಒಡೆಯುವಾಗ ಎಲ್ಲರೂ ಹೊಡೆಯುವ ಬೊಬ್ಬೆ ಇಡಿಯ ಊರನ್ನೇ ಬೆಚ್ಚಿ ಬೀಳಿಸುತ್ತದೆ. ಇದನ್ನು ಪ್ರಥಮ ರಾತ್ರಿಯ ಸಮಾಗಮದ ಮೊದಲು ಆಚರಿಸುತ್ತಾರೆ. ಇದರಿಂದ ವಧೂವರರಿಗೆ ಜೀವನದಲ್ಲಿ ಎದುರಾಗಬಹುದಾದ ಸಂಕಷ್ಟಗಳನ್ನೆಲ್ಲಾ ನಾಶ ಮಾಡಿದಂತೆ ಎಂದು ಅವರು ನಂಬುತ್ತಾರೆ.

ಫ್ರಾನ್ಸ್‌ನ ಕೆಲವು ಪ್ರದೇಶಗಳಲ್ಲಿ

ಫ್ರಾನ್ಸ್‌ನ ಕೆಲವು ಪ್ರದೇಶಗಳಲ್ಲಿ

ವಿವಾಹದ ಬಳಿಕ ವಧೂವರರ ಸ್ನೇಹಿತರು ಮತ್ತು ಸಂಬಂಧಿಕರು ಔತಣದ ಬಳಿಕ ಉಳಿದ ಎಲ್ಲಾ ಆಹಾರವನ್ನು ಶೌಚಾಲಯದ ಕಮೋಡ್‌ನಲ್ಲಿ ಹಾಕಿ ತುಂಬಿಸಿಡುತ್ತಾರೆ. ವಿವಾಹದ ಸಂಭ್ರಮವೆಲ್ಲಾ ಮುಗಿದ ಬಳಿಕ ವಧೂವರರು ಈ ಕಮೋಡ್‌ನಲ್ಲಿದ್ದ ಆಹಾರವನ್ನು ಸೇವಿಸಿದರೆ ವಿವಾಹ ಸಂಪೂರ್ಣವಾದಂತೆ.

English summary

Weird Marriage Traditions Around The World

Every marriage which is celebrated around the world is beautiful in its own little way. Every religion has its own way of celebrating marriage and some, which have been listed below, are pretty weird. Then take a look at the list we have shared with you.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more