Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯ್ಯೋ ದೇವ್ರೆ ಈ ರೀತಿಯ ಕಾನೂನು ಬೇಡಪ್ಪಾ ಬೇಡ!
ಮನುಷ್ಯನಿಗೆ ಸ್ವಾತಂತ್ರ್ಯವೆನ್ನುವುದು ತುಂಬಾ ಮುಖ್ಯ. ಅದು ಇಲ್ಲದೆ ಇದ್ದರೆ ಬದುಕು ನರಕಸದೃಶ ಎನ್ನಬಹುದು. ಭಾರತದಲ್ಲಿ ಹುಟ್ಟಿದಂತಹ ನಾವೇ ಧನ್ಯರು. ಯಾಕೆಂದರೆ ಭಾರತದಷ್ಟು ಜನರಿಗೆ ಸ್ವಾತಂತ್ರ್ಯವಿರುವಷ್ಟು ದೇಶ ಬೇರೊಂದಿಲ್ಲ. ಕೆಲವು ದೇಶಗಳಲ್ಲಿ ನೀವು ಏನು ತಿನ್ನಬೇಕು? ಏನು ತಿನ್ನಬಾರದು ಮತ್ತು ಯಾವ ಬಟ್ಟೆ ಧರಿಸಬೇಕು. ವಿಚಿತ್ರ, ಹುಚ್ಚು ಹುಚ್ಚಾದ, ತಲೆಚಿಟ್ಟು ಹಿಡಿಸುವ ಕಾನೂನು!
ಮೈಮೇಲೆ ಅಚ್ಚೆ ಹಾಕಿಸಿಕೊಳ್ಳಬೇಕಾದರೂ ಸರಕಾರದ ಅನುಮತಿಯನ್ನು ಪಡೆಯಬೇಕಾದಂತಹ ಪರಿಸ್ಥಿತಿ ಇವೆ. ಮನೆಯಲ್ಲಿ ಒಂದು ಔತಣಕೂಟ ಮಾಡಬೇಕಾದರೂ ಸರಕಾರ ಅನಮತಿ ಪಡೆಯಬೇಕಾದ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಇದೆ. ತಿನ್ನುವಂತಹ ಕೆಲವೊಂದು ಆಹಾರಗಳಿಗೂ ನಿಷೇಧ ಹೇರಲಾಗಿದೆ. ಅಲ್ಲಿನ ಜನರಿಗೆ ಈ ನಿಷೇಧದಿಂದ ಹೇಗಾಗಿರಬಹುದು ಎಂದು ನೀವೇ ಯೋಚಿಸಿ. ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!
ಭಾರತದಲ್ಲಿ ಚಪಾತಿ, ದೋಸೆಗೆ ನಿಷೇಧ ಹೇರಿದರೆ ಜನರು ದಂಗೆ ಏಳಬಹುದು. ಕೆಲವೊಂದು ಅಗತ್ಯತೆಗಳಿಗೆ ನಿಷೇಧ ಹೇರಿರುವಂತಹ ದೇಶಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದನ್ನು ಓದಿಕೊಳ್ಳಿ.....

ಫ್ರಾನ್ಸ್‌ನಲ್ಲಿ ಕೆಚಪ್ ನಿಷಿದ್ಧ
ಫ್ರಾನ್ಸ್‌ನಲ್ಲಿ ಅಲ್ಲಿನ ಸಾಂಪ್ರದಾಯಿಕ ಅಡುಗೆಗಳಿಗೆ ಅತಿಯಾಗಿ ಕೆಚಪ್ ಅನ್ನು ಬಳಸಿ ಅದರ ರುಚಿಯನ್ನು ಕೆಡಿಸುವ ಕಾರಣದಿಂದಾಗಿ ಸರಕಾರವು ಶಾಲೆಗಳಲ್ಲಿ ಕೆಚಪ್ ಗೆ ನಿಷೇಧ ಹೇರಿದೆ. ಫ್ರೆಂಚ್ ಫ್ರೈಯನ್ನು ತಿನ್ನುವಾಗ ಮಾತ್ರ ಕೆಚಪ್ ಅನ್ನು ಬಳಸಬಹುದಾಗಿದೆ. ಅಚ್ಚರಿ ಜಗತ್ತು: 'ಕೆಚಪ್' ಪ್ರಿಯರು ಓದಲೇಬೇಕಾದ ಲೇಖನವಿದು...

ಡೆನ್ಮಾರ್ಕ್‌ನಲ್ಲಿ ಮಗುವಿಗೆ ಹೆಸರಿಡುವಂತಿಲ್ಲ!
ಇದನ್ನು ಕೇಳಿ ಸ್ವಲ್ಪ ಅಚ್ಚರಿಯಾಗುವುದು ಸಹಜ. ಮಗುವಿಗೆ ಹೆಸರಿಡದಿದ್ದರೆ ಹೇಗೆ ಎನ್ನುವ ಪ್ರಶ್ನೆ ಬರಬಹುದು. ಆದರೆ ಸರಕಾರ ಆಯ್ಕೆ ಮಾಡಿರುವ 24 ಸಾವಿರ ಹೆಸರುಗಳನ್ನು ಬಿಟ್ಟು ಬೇರೆ ಯಾವುದೇ ಹೆಸರನ್ನು ಹೆತ್ತವರು ಮಗುವಿಗೆ ಇಡುವಂತಿಲ್ಲ. ಸರಕಾರದ ಪಟ್ಟಿಗಿಂತ ಹೊರಗಿನ ಹೆಸರಾದರೆ ಆಗ ಸರಕಾರದ ವಿಶೇಷ ಅನುಮತಿಯನ್ನು ಪಡೆಯಬೇಕಾಗಿದೆ.

ಹಳದಿ ಬಣ್ಣದ ಬಟ್ಟೆ
ಮಲೇಶಿಯಾದಲ್ಲಿ ಸರಕಾರದ ವಿರೋಧಿಗಳು ಹಳದಿ ಬಣ್ಣವನ್ನು ನೆಚ್ಚಿಕೊಂಡಿರುವ ಕಾರಣದಿಂದಾಗಿ 2011ರಲ್ಲಿ ಅಲ್ಲಿನ ಸರಕಾರವು ಹಳದಿ ಬಣ್ಣದ ಬಟ್ಟೆ ಧರಿಸುವುದಕ್ಕೆ ನಿಷೇಧ ಹೇರಿದೆ. ಹಳದಿ ಬಣ್ಣವಿರುವ ಯಾವುದೇ ಬಟ್ಟೆಯನ್ನು ನೀವು ಧರಿಸುವಂತಿಲ್ಲ.

ಚೀನಾದಲ್ಲಿ ಜಾಸ್ಮಿನ್

ಕೂದಲಿನ ವಿನ್ಯಾಸ
ವಿದೇಶಿ ಸಂಸ್ಕೃತಿಗೆ ಮಾರುಹೋಗಬಾರದೆಂಬ ಕಾರಣಕ್ಕಾಗಿ ಇರಾನ್‌ನಲ್ಲಿ ವಿದೇಶಿ ಶೈಲಿಯ ಕೂದಲಿನ ವಿನ್ಯಾಸಕ್ಕೆ ನಿಷೇಧ ಹೇರಲಾಗಿದೆ. ಅಲ್ಲಿ ಧೋನಿಯಂತೆ ಉದ್ದನೆಯ ಕೂದಲು ಬಿಡುವಂತಿಲ್ಲ. ರೊನಾಲ್ಡೊನಂತೆ ಕೂದಲನ್ನು ವಿನ್ಯಾಸ ಮಾಡುವಂತಿಲ್ಲ. ಹೆಚ್ಚಿನ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇಂತಹ ನಿಷೇಧಗಳಿವೆ.

ಗ್ರೀಸ್‌ನಲ್ಲಿ ವಿಡಿಯೋ ಗೇಮ್
ದೇಶದಲ್ಲಿ ವಿಡಿಯೋ ಗೇಮ್ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರೀಸ್ ಸರಕಾರವು ವೀಡಿಯೋ ಗೇಮ್ ಗಳಿಗೆ ನಿಷೇಧವನ್ನು ಹೇರಿದೆ. ಆದರೆ ಮಕ್ಕಳು ಆಡುವಂತಹ ವೀಡಿಯೋ ಗೇಮ್ ಮತ್ತು ಜೂಜಾಟದ ವೀಡಿಯೋ ಗೇಮ್ ಅನ್ನು ಪ್ರತ್ಯೇಕಿಸಲು ಅಲ್ಲಿನ ಸರಕಾರವು ವಿಫಲವಾಗಿದೆ. ಯಾವುದೇ ಸೈಬರ್ ಕೆಫೆಯಲ್ಲಿ ವೀಡಿಯೋ ಗೇಮ್ ಆಡುತ್ತಿರುವವರನ್ನು ಬಂಧಿಸಲಾಗುತ್ತದೆ.



Click it and Unblock the Notifications
