For Quick Alerts
ALLOW NOTIFICATIONS  
For Daily Alerts

ಸಾವು ಬದುಕಿನ ಹೋರಾಟದಲ್ಲಿ, ಗೆದ್ದು ಬಂದವರ ರಿಯಲ್ ಸ್ಟೋರಿ

By Manu
|

ಚಿತ್ರನಟರನ್ನು ನಾವೆಲ್ಲಾ ಓರ್ವ ಆದರ್ಶಪುರುಷನೆಂದೇ ಭಾವಿಸಿದ್ದೇವೆ. ಕೆಲವು ರಾಜ್ಯಗಳಲ್ಲಂತೂ ನಟ ನಟಿಯರನ್ನು ದೇವರಿಗೆ ಸಮಾನವಾಗಿ ಕಾಣಲಾಗುತ್ತದೆ, ಗುಡಿ ಕಟ್ಟಿ ಪೂಜಿಸಲಾಗುತ್ತದೆ. ಇವರನ್ನು ತೆರೆಯ ಮೇಲೆ ಕಂಡಾಗ ಪಡುವ ಸಂಭ್ರಮಕ್ಕಿಂತಲೂ ಇವರನ್ನು ಮುಖತಃ ಭೇಟಿಯಾದಾಗ ಇನ್ನಷ್ಟು ಸಂಭ್ರಮಪಡುತ್ತೇವೆ. ವಾಸ್ತವವಾಗಿ ಖ್ಯಾತನಾಮರಿಗೆ ತಮ್ಮದೇ ಆದ ಅಡ್ಡಿ ಆತಂಕಗಳಿರುತ್ತವೆ. ಕೆಲವರಿಗೆ ಮಾರಣಾಂತಿಕ ಕಾಯಿಲೆಯೂ ಇರುತ್ತದೆ. ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!

ಆದರೆ ಕೆಲವು ನಟರು ತಮ್ಮ ಪ್ರಾಣಾಂತಿಕ ಕಾಯಿಲೆಯನ್ನು ಮೆಟ್ಟಿ ಯಶಸ್ಸಿನ ಉತ್ತುಂಗವನ್ನೇರಿದ್ದಾರೆ. ಕೆಲವರಿಗೆ ಅಪಘಾತವೂ ಆಗಿದೆ. ಉದಾಹರಣೆಗೆ ಅಪ್ರತಿಮ ನರ್ತತಿ ಸುಧಾಚಂದ್ರನ್ ಅಪಘಾತದಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡು ಗ್ಯಾಂಗ್ರೀನ್ ಆಗಿದ್ದು ಕತ್ತರಿಸಬೇಕಾದ ಅನಿವಾರ್ಯತೆ ಎದುರಾದರೂ ಕೃತಕ ಕಾಲನ್ನು ಬಳಸಿ ಮೊದಲಿನಷ್ಟೇ ಸುಂದರವಾಗಿ ನರ್ತಿಸಲು ತೊಡಗಿದ್ದುದು ಎಂತಹವರಿಗಾದರೂ ಬೆರಗು ಮೂಡಿಸುತ್ತದೆ. ಮಾರಣಾಂತಿಕ ಕಾಯಿಲೆ ಇದ್ದರೂ ಅದನ್ನು ಎದುರಿಸಿ ಯಶಸ್ಸಿನ ಉತ್ತುಂಗಕ್ಕೇರಿದ ಇಂತಹ ಖ್ಯಾತ ನಟರ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ

ಮನಿಷಾ ಕೊಯಿರಾಲ (ಗರ್ಭಕೋಶದ ಕ್ಯಾನ್ಸರ್)

ಮನಿಷಾ ಕೊಯಿರಾಲ (ಗರ್ಭಕೋಶದ ಕ್ಯಾನ್ಸರ್)

29ನೇ ನವೆಂಬರ್ 2012 ರಂದು ನೇಪಾಳದ ರಾಜಮನೆತನಕ್ಕೆ ಸೇರಿದ, ಖ್ಯಾತ ಹಿಂದಿ ಚಲನಚಿತ್ರ ನಟಿ ಮನಿಷಾ ಕೊಯಿರಾಲರವರಿಗೆ ಒಂದು ಆಘಾತಕಾರಿ ಸುದ್ದಿ ಬಡಿದಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಇವರ ಗರ್ಭಕೋಶಕ್ಕೆ ಕ್ಯಾನ್ಸರ್ ಆವರಿಸಿದ್ದು ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಿಷಾ ಕೊಯಿರಾಲ (ಗರ್ಭಕೋಶದ ಕ್ಯಾನ್ಸರ್)

ಮನಿಷಾ ಕೊಯಿರಾಲ (ಗರ್ಭಕೋಶದ ಕ್ಯಾನ್ಸರ್)

ಮುಂದಿನ ತಿಂಗಳು ಅಂದರೆ ಡಿಸೆಂಬರ್ ಹತ್ತರಂದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದು ಕ್ಯಾನ್ಸರ್‌ನಿಂದ ಮುಕ್ತಿ ಪಡೆದರು. ಬಳಿಕ ಅವರ ನಟನೆಯಲ್ಲಿ ಮತ್ತು ಭಾವನೆಗಳಲ್ಲಿ ಅದ್ಭುತ ಪರಿಣಾಮ ಕಂಡುಬಂದಿವೆ. ತಮ್ಮ ಕೀರ್ತಿಯನ್ನು ಉಳಿದ ಕ್ಯಾನ್ಸರ್ ರೋಗಿಗಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಬಳಸಿದರು. ಹಲವಾರು ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.2015ರ ನೇಪಾಲ ಭೂಕಂಪ ಪೀಡಿತರಿಗಾಗಿ ನೆರವು ನೀಡುವ ನಿಟ್ಟಿನಲ್ಲಿ ಈಗ ವ್ಯಸ್ತರಾಗಿದ್ದಾರೆ.

ಯುವರಾಜ್ ಸಿಂಗ್: ಪ್ರಥಮ ಹಂತದ ಕ್ಯಾನ್ಸರ್

ಯುವರಾಜ್ ಸಿಂಗ್: ಪ್ರಥಮ ಹಂತದ ಕ್ಯಾನ್ಸರ್

2011ರಲ್ಲಿ ಕ್ರಿಕೆಟ್ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಗೆ ಭಾಜನರಾದ ಯುವರಾಜ್ ರಿಗೆ ಅಂದಿನ ದಿನಗಳಲ್ಲಿ ರಕ್ತದ ವಾಂತಿ, ವಾಕರಿಕೆ, ಉಸಿರಾಟದಲ್ಲಿ ತೊಂದರೆ ಮೊದಲಾದವು ಎದುರಾಗಿದ್ದವು. ವೈದ್ಯಕೀಯ ತಪಾಸಣೆಯ ಬಳಿಕ ಇವರಿಗೆ ಶ್ವಾಸಕೋಶದಲ್ಲಿ ಕ್ಯಾನ್ಸರ್ ಇದ್ದು ಇನ್ನೂ ಪ್ರಥಮ ಹಂತದಲ್ಲಿದ್ದುದು ಕಂಡುಬಂದಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಯುವರಾಜ್ ಸಿಂಗ್: ಪ್ರಥಮ ಹಂತದ ಕ್ಯಾನ್ಸರ್

ಯುವರಾಜ್ ಸಿಂಗ್: ಪ್ರಥಮ ಹಂತದ ಕ್ಯಾನ್ಸರ್

ಬಳಿಕ ಅಮೇರಿಕಾದಲ್ಲಿ ಖೀಮೋಥೆರಪಿ ಚಿಕಿತ್ಸೆ ಪಡೆದು ಮಾರ್ಚ್ 2012ರಂದು ಹಿಂದಿರುಗಿದ ಯುವರಾಜ್ 2012ರ ಟಿ 20 ವಿಶ್ವಪಪ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮತ್ತೆ ತಮ್ಮ ಕ್ರಿಕೆಟ್ ಜೀವನವನ್ನು ಪುನರಾರಂಭಿಸಿದ್ದಾರೆ.

ಅಮಿತಾಭ್ ಬಚ್ಚನ್: (ಸ್ನಾಯುದೌರ್ಬಲ್ಯ )

ಅಮಿತಾಭ್ ಬಚ್ಚನ್: (ಸ್ನಾಯುದೌರ್ಬಲ್ಯ )

1982ರಲ್ಲಿ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡ ಅಮಿತಾಭ್ ರಿಗಾಗಿ ಇಡಿಯ ಭಾರತವೇ ಅಂದು ಪ್ರಾರ್ಥಿಸಿತ್ತು. ಕೂಲಿ ಚಿತ್ರದಲ್ಲಿನ ಹೊಡೆದಾಟದ ದೃಶ್ಯದಲ್ಲಿ ನಟ ಪುನೀತ್ ಇಸ್ಸಾರ್ ರವರು ಹೊಡೆದ ಹೊಡೆತದ ಕಾರಣ ಅಮಿತಾಭ್ ರವರ ಗುಲ್ಮ (spleen) ಒಡೆದು ಆಂತರಿಕ ರಕ್ತಸ್ರಾವವಾಗಿತ್ತು. ಆ ಸಮಯದಲ್ಲಿ ಪ್ರಜ್ಞಾಶೂನ್ಯರಾಗಿದ್ದ ಅಮಿತಾಭ್ ರನ್ನು ವೈದ್ಯಕೀಯವಾಗಿ ಮರಣಹೊಂದಿದ್ದರೆಂದೇ ಭಾವಿಸಲಾಗಿತ್ತು. ಆದರೆ ಜನರ ಪ್ರಾರ್ಥನೆಯ ಫಲವೋ ಈ ಮಾರಣಾಂತಿಕ ಹೊಡೆತದಿಂದ ಅವರು ಚೇತರಿಸಿಕೊಂಡು ಮತ್ತೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಮಿತಾಭ್ ಬಚ್ಚನ್: (ಸ್ನಾಯುದೌರ್ಬಲ್ಯ )

ಅಮಿತಾಭ್ ಬಚ್ಚನ್: (ಸ್ನಾಯುದೌರ್ಬಲ್ಯ )

1984ರಲ್ಲಿ ಇವರನ್ನು ತಪಾಸಣೆಗೊಳಿಸಿದಾಗ ಇವರಲ್ಲಿ ಸ್ನಾಯುದೌರ್ಬಲ್ಯ (myasthenia gravis) ಎಂಬ ತೊಂದರೆ ಇದ್ದುದು ಕಂಡುಬಂದಿತ್ತು. ಇದರಿಂದ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕುಗ್ಗಿದ ಅವರು ಖಿನ್ನತೆಗೂ ಒಳಗಾಗಿದ್ದರು. ಆದರೆ ಈ ತೊಂದರೆಗಳನ್ನು ಕೇವಲ ಅವರು ತಮ್ಮ ಮನೋಬಲ ಮತ್ತು ಮನೋಸ್ಥೈರ್ಯದಿಂದ ಎದುರಿಸಿ ಮತ್ತೆ ಮೊದಲಿನಂತಾದರು.ಇಂದಿಗೂ ತಮ್ಮ ವೃತ್ತಿಯಲ್ಲಿ ಅವರು ಅತ್ಯುತ್ತಮ ಸಾಧನೆ ತೋರುತ್ತಾ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.

ಸೈಫ್ ಅಲಿ ಖಾನ್ : ಹೃದಯ ಸ್ತಂಭನ

ಸೈಫ್ ಅಲಿ ಖಾನ್ : ಹೃದಯ ಸ್ತಂಭನ

2007ರ ಫೆಬ್ರವರಿಯಲ್ಲಿ ನಟ ಸೈಫ್ ಅಲಿ ಖಾನ್ ರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆತರಲಾಯಿತು. ಇವರಿಗೆ ಎದೆಯ ಬಳಿ ತೀವ್ರತರದ ನೋವು ಕಾಣಿಸಿಕೊಂಡು ಆತಂಕ ಎದುರಾಗಿತ್ತು. ಇದು ಲಘು ಹೃದಯಾಘಾತ ಎಂದು ವೈದ್ಯರು ಗುರುತಿಸಿ ತಕ್ಷಣ ಚಿಕಿತ್ಸೆ ನೀಡಲಾಯಿತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೈಫ್ ಅಲಿ ಖಾನ್ : ಹೃದಯ ಸ್ತಂಭನ

ಸೈಫ್ ಅಲಿ ಖಾನ್ : ಹೃದಯ ಸ್ತಂಭನ

ಈ ತೊಂದರೆ ನವಾಬ್ ಕುಟುಂಬದಲ್ಲಿ ವಂಶವಾಹಿಯ ಮೂಲಕ ಬಂದಿರುವ ತೊಂದರೆಯಾಗಿದ್ದು ಈ ಆಘಾತವನ್ನು ಎದುರಿಸಿಯೂ ಅವರು ಇಂದಿಗೂ ಕಾರ್ಯಪ್ರವೃತ್ತರಾಗಿದ್ದಾರೆ.

ಹೃತಿಕ್ ರೋಷನ್: ಮೆದುಳಿನಲ್ಲಿ ಮಡುಗಟ್ಟಿದ ರಕ್ತ

ಹೃತಿಕ್ ರೋಷನ್: ಮೆದುಳಿನಲ್ಲಿ ಮಡುಗಟ್ಟಿದ ರಕ್ತ

ಕ್ರಿಶ್ ಎಂಬ ಸುಪರ್ ಹೀರೋ ಪಾತ್ರವನ್ನು ನಿಭಾಯಿಸಿದ ಹೃತಿಕ್ ರೋಷನ್ ರನ್ನು 2013ರ ಜುಲೈ 7ರಂದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣಕ್ಕಾಗಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಅವರು ಕ್ರಿಶ್ 3 ಚಿತ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃತಿಕ್ ರೋಷನ್: ಮೆದುಳಿನಲ್ಲಿ ಮಡುಗಟ್ಟಿದ ರಕ್ತ

ಹೃತಿಕ್ ರೋಷನ್: ಮೆದುಳಿನಲ್ಲಿ ಮಡುಗಟ್ಟಿದ ರಕ್ತ

ನಮ್ಮ ಮೆದುಳಿನಲ್ಲಿ ತೂತಿದ್ದರೇನಾಯಿತು? ನನ್ನ ಚೇತನದಲ್ಲಲ್ಲ ಎಂದು ಆಶಾಭಾವದಿಂದ ನುಡಿಯುವ ಅವರು ಮನೋಸ್ಥೈರ್ಯಕ್ಕೊಂದು ಉದಾಹರಣೆಯಾಗಿದ್ದಾರೆ.

ರಜನೀಕಾಂತ್: ಶ್ವಾಸಕೋಶದ ತೊಂದರೆ ಮತ್ತು ವೈರಲ್ ಜ್ವರ

ರಜನೀಕಾಂತ್: ಶ್ವಾಸಕೋಶದ ತೊಂದರೆ ಮತ್ತು ವೈರಲ್ ಜ್ವರ

ತಮಿಳರ ಪಾಲಿನ ದೇವರೇ ಆಗಿರುವ ಕನ್ನಡಿಗ ರಜನೀಕಾಂತ್ ಸಹಾ 2011 ರಲ್ಲಿ ಸಿಂಗಾಪುರದ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲಾಗಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಜನೀಕಾಂತ್: ಶ್ವಾಸಕೋಶದ ತೊಂದರೆ ಮತ್ತು ವೈರಲ್ ಜ್ವರ

ರಜನೀಕಾಂತ್: ಶ್ವಾಸಕೋಶದ ತೊಂದರೆ ಮತ್ತು ವೈರಲ್ ಜ್ವರ

ಅಂದು ಅವರಿಗೆ 61 ವರ್ಷ ವಯಸ್ಸಾಗಿದ್ದು ಅತೀವ ಸುಸ್ತು ಮತ್ತು ತಲೆತಿರುಗುವಿಕೆ ಮೊದಲಾದ ತೊಂದರೆಗಳನ್ನು ಎದುರಿಸಿದ್ದರು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಅವರು ಮತ್ತೆ ವೃತ್ತಿರಂಗಕ್ಕೆ ಹಿಂದಿರುಗಿ ತಮ್ಮ ಅಭಿಮಾನಿಗಳಿಗೆ ಹರ್ಷ ಮೂಡಿಸಿದ್ದಾರೆ.

ಶಾರುಖ್ ಖಾನ್: ಎಂಟು ಶಸ್ತ್ರಚಿಕಿತ್ಸೆಗಳು

ಶಾರುಖ್ ಖಾನ್: ಎಂಟು ಶಸ್ತ್ರಚಿಕಿತ್ಸೆಗಳು

ತಮ್ಮ ಅಧ್ಬುತ ನಟನೆಯಿಂದ ಕಿಂಗ್ ಖಾನ್ ಎಂದೇ ಪರಿಚಿತರಾದ ಶಾರುಖ್ ಖಾನ್ ರಿಗೆ ಕಿಂಗ್ ಆಫ್ ಸರ್ಜರೀಸ್ ಅಥವಾ ಶಸ್ತ್ರಚಿಕಿತ್ಸೆಗಳ ರಾಜ ಎಂಬ ಅನ್ವರ್ಥನಾಮವನ್ನೂ ನೀಡಬಹುದು. ಏಕೆಂದರೆ ಇವರಿಗೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಎಂಟು ಶಸ್ತ್ರಚಿಕಿತ್ಸೆಗಳಾಗಿವೆ, ಅದೂ ದೇಹದ ವಿವಿಧ ಅಂಗಗಳಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಾರುಖ್ ಖಾನ್: ಎಂಟು ಶಸ್ತ್ರಚಿಕಿತ್ಸೆಗಳು

ಶಾರುಖ್ ಖಾನ್: ಎಂಟು ಶಸ್ತ್ರಚಿಕಿತ್ಸೆಗಳು

ಪಕ್ಕೆಲುಬು, ಮೊಣಕೈ, ಮೊಣಕಾಲು, ಕುತ್ತಿಗೆ, ಕಣ್ಣು ಮತ್ತು ಭುಜಕ್ಕೆ ಶಸ್ತ್ರಚಿಕಿತ್ಸೆಯಾಗಿವೆ. ಆದರೆ ಇವು ಯಾವುದಕ್ಕೂ ಇವರ ನಟನಾ ಕೌಶಲ್ಯ ಅಥವಾ ಮಾನಸಿಕ ಸ್ಥೈರ್ಯವನ್ನು ಉಡುಗಿಸಲು ಸಾಧ್ಯವಾಗಿಲ್ಲ.

ಸಲ್ಮಾನ್ ಖಾನ್ : ನಕ್ಕರೂ ನೋವು ಕೊಡುವ Trigeminal Neuralgia

ಸಲ್ಮಾನ್ ಖಾನ್ : ನಕ್ಕರೂ ನೋವು ಕೊಡುವ Trigeminal Neuralgia

ಹಿಂದಿ ಚಿತ್ರರಂಗದಲ್ಲಿ ಅತೀವ ಕುತೂಹಲ ಕೆರಳಿಸುವ, ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ, ಇನ್ನೂ ಏಕೆ ವಿವಾಹಿತರಾಗಿಲ್ಲ ಎಂಬ ಪ್ರಶ್ನೆಗೆ ಉತ್ತರವನ್ನೇ ನೀಡದ ನಟ ಎಂದರೆ ಸಲ್ಮಾನ್ ಖಾನ್. ತಮ್ಮ ಚಿತ್ರ ವಿಚಿತ್ರ ಭಂಗಿ, ನಟನಾ ಕೌಶಲ್ಯ, ನರ್ತನಾ ಶೈಲಿಗಳಿಂದ ಚಿತ್ರರಸಿಕರಿಗೆ ಅಪಾರ ಮನರಂಜನೆ ಉಂಟುಮಾಡಿದ್ದರೂ ಇವರಿಗೆ ತಮ್ಮದೇ ಆದ ಒಂದು ವಿಚಿತ್ರ ತೊಂದರೆ ಇದೆ. 2011ರಲ್ಲಿ ಇವರಿಗೆ Trigeminal Neuralgia ಎಂಬ ಕಾಯಿಲೆ ಇದ್ದುದು ಕಂಡುಬಂತಿದ್ದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲ್ಮಾನ್ ಖಾನ್ : ನಕ್ಕರೂ ನೋವು ಕೊಡುವ Trigeminal Neuralgia

ಸಲ್ಮಾನ್ ಖಾನ್ : ನಕ್ಕರೂ ನೋವು ಕೊಡುವ Trigeminal Neuralgia

ಇದರಲ್ಲಿ ಮುಖದ ಸ್ನಾಯುಗಳಿಗೆ ಯಾವುದೇ ಕೆಲಸ ನೀಡಿದರೂ, ಇದು ಮೆದುಳಿಗೆ ಅಪಾರ ನೋವು ನೀಡುತ್ತದೆ. ನಿತ್ಯದ ಅವಶ್ಯಕ ಕ್ರಿಯೆಗಳಾದ ಹಲ್ಲುಜ್ಜುವುದು, ನಗುವುದು, ಆಕಳಿಸುವುದು ಮೊದಲಾದವೆಲ್ಲಾ ಇವರಿಗೆ ನೋವು ತರುತ್ತಿದ್ದರೂ ಇದನ್ನು ಎಂದಿಗೂ ಯಾರಿಗೂ ಪ್ರಕಟಿಸದೇ ಮನೋಬಲವನ್ನು ಮೆರೆದಿರುವುದು ಅಚ್ಚರಿಯ ಸಂಗತಿಯಾಗಿದೆ.

English summary

Famous Celebrities Who Battled Serious Illnesses

Read on to find out some of the biggest names in Bollywood who have ... our Bollywood celebrities can suffer from a serious and scary illness.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more