For Quick Alerts
ALLOW NOTIFICATIONS  
For Daily Alerts

ಅಚ್ಚರಿಗೆ ತಳ್ಳುವ 'ಇಂಟರ್ನೆಟ್' ಹಿಂದಿರುವ ಕರಾಳ ಸತ್ಯಗಳು

ತೊಂಬತ್ತರ ದಶಕದಲ್ಲಿ ಅಂಬೆಗಾಲಿಕ್ಕುತ್ತಾ ಭಾರತಕ್ಕೆ ಆಗಮಿಸಿದ ಇಂಟರ್ನೆಟ್ ಪ್ರಾರಂಭದ ದಿನಗಳಲ್ಲಿ ಕೇವಲ ಶ್ರೀಮಂತರಿಗೆ ಸೀಮಿತವಾಗಿತ್ತು. 2000 ಇಸವಿ ದಾಟಿದ ಬಳಿಕ ಅಂತರ್ಜಾಲ ಬೆಳೆದು ಬಂದ ಪರಿ ವಿಶ್ವದಲ್ಲಿಯೇ ಹಿಂದೆಂದೂ ನಡೆಯದ ಕ್ರಾಂತಿಯಾಗಿದೆ

By Manu
|

ಸುಮಾರು ತೊಂಬತ್ತರ ದಶಕದಲ್ಲಿ ಅಂಬೆಗಾಲಿಕ್ಕುತ್ತಾ ಭಾರತಕ್ಕೆ ಆಗಮಿಸಿದ ಅಂತರ್ಜಾಲ (ಇಂಟರ್ನೆಟ್) ಪ್ರಾರಂಭದ ದಿನಗಳಲ್ಲಿ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಎರಡು ಸಾವಿರ ಇಸವಿ ದಾಟಿದ ಬಳಿಕ ಅಂತರ್ಜಾಲ ಬೆಳೆದು ಬಂದ ಪರಿ ವಿಶ್ವದಲ್ಲಿಯೇ ಹಿಂದೆಂದೂ ನಡೆಯದ ಕ್ರಾಂತಿಯಾಗಿದೆ.

ಇಂದು ಜನಸಾಮಾನ್ಯರಿಗೂ ಕೈಯಳತೆಯಲ್ಲಿಯೇ ಜಗತ್ತನ್ನೇ ತೆರೆದಿಡುವ ಅವಕಾಶವನ್ನು ನೀಡಿದೆ, ಅದೂ ಕೈಗೆಟುಕುವ ಬೆಲೆಯಲ್ಲಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳೆಲ್ಲವೂ ಸತ್ಯವೇ ಎಂದು ಹಿರಿಯರೊಬ್ಬರು ಕೇಳಿದ ಪ್ರಶ್ನೆಗೆ ವೃತ್ತಿಪರರು ನೀಡಿದ ಉತ್ತರವೆಂದರೆ ಅಂತರ್ಜಾಲ ಮುಕ್ತವಾಗಿದ್ದು ಇದನ್ನು ನಮ್ಮ ನಿಮ್ಮಂತಹ ಜನಸಾಮಾನ್ಯರೇ ಇದನ್ನು ಅಂತರ್ಜಾಲದಲ್ಲಿ ಇನ್ನೊಬ್ಬರ ನೆರವಿಗಾಗಿ ಸೇರಿಸಿರುತ್ತಾರೆ. ವಿಚಿತ್ರ ಜನರ ವೈವಿಧ್ಯ ಇಂಟರ್‌ನೆಟ್‌ ಬಳಕೆ...

ಒಂದೇ ವಿಷಯವನ್ನು ಹತ್ತು ಜನರು ಸರಿ ಎಂದಿದ್ದರೆ ಅದು ಸತ್ಯವೇ ಆಗುತ್ತದೆ. ಆದರೆ ಹತ್ತಕ್ಕೆ ಹತ್ತೂ ಜನರು ತಪ್ಪು ಎಂದಾದರೆ ಮಾತ್ರ ತಪ್ಪಾಗುತ್ತದೆ..! ಆದರೆ ಇದು ವಿಕಿಪೀಡಿಯಾದಂತಹ ಮುಕ್ತ ತಂತ್ರಾಂಶಗಳ ಮಟ್ಟಿಗೆ ಸರಿ. ಸೂಕ್ಷ್ಮ ಅಥವಾ ವೈಯಕ್ತಿಕ ದಾಖಲೆಗಳಿರುವುದಾದರೆ? ಇದನ್ನು ಕಾಪಾಡಲು ಪಾಸ್ ವರ್ಡ್ ಮೊದಲಾದ ತಂತ್ರಜ್ಞಾನಗಳನ್ನು ಒದಗಿಸಲಾಗಿದೆ. ಆದರೆ ಇದನ್ನು ಒದಗಿಸಿದವರೇ ಹಿಂಬಾಗಿಲಿನಿಂದ ಖಾತೆಯನ್ನು ತೆರೆಯುವ ಕಳ್ಳಕೀಲಿಕೈಯನ್ನು ಮೊದಲೇ ತಯಾರಿಸಿಟ್ಟುಕೊಂಡಿದ್ದರೆ? ಹೌದು, ಇಂತಹ ಕೆಲವು ಗೋಪ್ಯವಾದ ಕೀಲಿಕೈಗಳನ್ನು ಮಾಡಿ ಇಡಲಾಗಿದೆ ಎಂದು ಗೂಗಲ್ ನಂತಹ ದೊಡ್ಡ ಸಂಸ್ಥೆಗಳೇ ಹೇಳಿವೆ. ನೀವು ತಿಳಿದಿರದ ಫೇಸ್‌ಬುಕ್‌ನ 10 ಆಶ್ಚರ್ಯಕರ ಸಂಗತಿಗಳಿವು

ಅಂದರೆ ದೇಶದ ಭದ್ರತೆಯ ಮಾಹಿತಿ ಇರುವ ಖಾತೆಗಳೂ ಈಗ ಸುರಕ್ಷಿತವಲ್ಲ! ಅಷ್ಟೇ ಏಕೆ, ನಿಮ್ಮ ಮನೆಯ ಸಾಮಾನ್ಯ ಲಾಪ್ ಟಾಪ್ ನಲ್ಲಿರುವ ವೆಬ್ ಕ್ಯಾಮ್ ಆನ್ ಆಗಿಲ್ಲವೆಂದು ಕಂಡಿದ್ದರೂ ಕೆಲವು ತಂತ್ರಜ್ಞಾನಗಳ ಮೂಲಕ ಈ ಕ್ಯಾಮ್ ಮೂಲಕ ಇಣುಕಿ ನೋಡುವವರಿದ್ದಾರೆ.

ಫೇಸ್ ಬುಕ್‌ನ ನಿರ್ದೇಶಕರಾದ ಮಾರ್ಕ್‌ ಜುಕರ್‌ಬರ್ಗ್‌ರವರೇ ತಮ್ಮ ಲ್ಯಾಪ್ ಟಾಪ್‌ನ ವೆಬ್ ಕ್ಯಾಮ್ ಮತ್ತು ಮೈಕ್ ಇರುವ ಕಿಂಟಿಯ ಮೇಲೆ ಅಂಟುಪಟ್ಟಿಯನ್ನು ಅಂಟಿಸಿ ಕುರುಡಾಗಿಸಿದ್ದಾರೆ ಅಂದ ಮೇಲೆ ಜನಸಾಮಾನ್ಯರ ಪಾಡೇನು? ಬನ್ನಿ, ಇಂತಹ ಕೆಲವು ಕರಾಳ ಸತ್ಯಗಳ ಬಗ್ಗೆ ಎಲ್ಲರೂ ತಿಳಿದಿರಬೇಕಾದ ಪ್ರಮುಖ ಮಾಹಿತಿಗಳನ್ನು ನೋಡೋಣ........

ರಹಸ್ಯ#1

ರಹಸ್ಯ#1

ನಿಮ್ಮ ಕಂಪ್ಯೂಟರಿನ ವೆಬ್‌ಕ್ಯಾಮ್ ಆಫ್ ಇದ್ದರೂ ಹ್ಯಾಕರ್ ಅಥವಾ ಅಂತರ್ಜಾಲ ಕಳ್ಳರು ಇದರ ಮೂಲಕ ನಿಮ್ಮ ಮನೆಯೊಳಗೆ ಇಣುಕಿ ನೋಡಬಲ್ಲರು. ಇದರ ಮೂಲಕ ಚಿತ್ರಗಳನ್ನೂ ತೆಗೆಯಬಲ್ಲರು. ನಿಮಗೆ ಗೊತ್ತೇ ಇಲ್ಲದಂತೆ ನೀವು ಮನೆಯಲ್ಲಿ ಏಕಾಂತದಲ್ಲಿ ಇರುವ ಯಾವುದೇ ಸ್ಥಿತಿಯನ್ನು ಅವರು ದಾಖಲಿಸಬಲ್ಲರು. ವಿಶೇಷವಾಗಿ ವೀಡಿಯೋ ಕಾಲ್ ನಲ್ಲಿದ್ದಾಗ ಇಬ್ಬರು ವ್ಯಕ್ತಿಗಳ ಸಂವಾದವನ್ನೂ ಇವರು ನೋಡಬಲ್ಲರು.

ರಹಸ್ಯ#2

ರಹಸ್ಯ#2

ನಿಮ್ಮ ಖಾಸಗಿ ವಿವರಗಳೆಲ್ಲವನ್ನೂ ಈಗ 'ಕ್ಲೌಡ್' ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ ಸ್ಥಳದಲ್ಲಿ ಸಂರಕ್ಷಿಸಿಡಬಹುದು. ಆದರೆ ಇದೂ ಸಹಾ ಸುರಕ್ಷಿತವಲ್ಲ. ಹ್ಯಾಕರ್‌ಗಳು ಇಲ್ಲಿಯೂ ಲಗ್ಗೆಯಿಟ್ಟು ನಿಮ್ಮ ಖಾಸಗಿ ವಿವರಗಳನ್ನು ಪಡೆಯಬಹುದು.

ರಹಸ್ಯ#3

ರಹಸ್ಯ#3

ನೀವು ಕೀಬೋರ್ಡ್‌ನಲ್ಲಿ ಯಾವ ಕೀ ಒತ್ತಿದ್ದೀರಿ ಎಂಬುದನ್ನೂ ಕಂಡುಹಿಡಿಯುವ ತಂತ್ರಜ್ಞಾನವನ್ನು ಕೆಲವು ಹ್ಯಾಕರ್ ಗಳು ಅಭಿವೃದ್ಧಿಪಡಿಸಿದ್ದಾರೆ. ಅಂದರೆ ನಿಮ್ಮ ಪಾಸ್ ವರ್ಡ್ ಸಹಾ ಈಗ ಸುರಕ್ಷಿತವಲ್ಲ! ವೈರ್ ಲೆಸ್ ಕೀಬೋರ್ಡ್ ಮೂಲಕ ಸಿಪಿಯು ಗೆ ತಲುಪುವ ಸಂಕೇತಗಳನ್ನು ಇವರು ಮಾರ್ಗಮಧ್ಯೆ ಕದ್ದು ನೋಡುತ್ತಾರೆ.....

ರಹಸ್ಯ#3

ರಹಸ್ಯ#3

ಪಾಸ್ ವರ್ಡ್ ದಾಖಲಿಸಿದಾಗ ಮಾನಿಟರ್‌ನಲ್ಲಿ ನೀವು ಯಾವ ಅಕ್ಷರ ಒತ್ತಿದ್ದೀರಿ ಎಂದು ಕಾಣುವುದಿಲ್ಲ, ಬದಲಿಗೆ ಎಲ್ಲಾ ಅಕ್ಷರಕ್ಕೂ ಸಕ್ಷತ್ರವೇ ಮೂಡುತ್ತದೆ. ಆದರೆ ಈ ಹ್ಯಾಕರ್ ಗಳು ನೀವು ಕೀ ಬೋರ್ಡ್ ಒತ್ತದೆಯೇ ನಿಮ್ಮ ಪಾಸ್ ವರ್ಡ್ ಅನ್ನು ತಮ್ಮ ಕೀಬೋರ್ಡ್ ಮೂಲಕ ನಿಮ್ಮ ಪರದೆಯ ಮೇಲೆ ಮೂಡಿಸಬಲ್ಲರು.

ರಹಸ್ಯ #4

ರಹಸ್ಯ #4

ನೂರಾರು ಸಾವಿರಾರು ಉದ್ಯೋಗಿಗಳನ್ನು ಒಳಗೊಂಡ ದೊಡ್ಡ ಸಂಸ್ಥೆಗಳ ಅಪಾರ ಮಾಹಿತಿಯನ್ನು ಹೊಂದಿರುವ ಸರ್ವರ್ ಅನ್ನೂ ಈ ಹ್ಯಾಕರುಗಳು ಕದ್ದು ಒಳಹೋಗಬಲ್ಲರು. ಸುಲಭವಾಗಿ ಇವರು ಲಕ್ಷಾಂತರ ಖಾತೆಗಳ ಪಾಸ್ ವರ್ಡ್ ಗಳನ್ನು ಕದ್ದು ಸಂಸ್ಥೆಯ ಅಂಕಿ ಅಂಶ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿಸಬಲ್ಲರು.

ರಹಸ್ಯ #5

ರಹಸ್ಯ #5

ಫ್ರೀ ಇಂಟರ್ನೆಟ್ ಸಿಕ್ಕಿತು ಎಂದು ಖುಷಿಯಾಗಬೇಡಿ. ಯಾವುದೇ ವಸ್ತುವನ್ನು ಫ್ರೀ ಅಥವಾ ಉಚಿತ ಎಂದು ನೀಡುವ ಹಿಂದೆ ಸಂಸ್ಥೆಗಳ ಬೇರಾವುದೋ ಉದ್ದೇಶವಿದ್ದೇ ಇರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇದು ಜಾಹೀರಾತಾಗಿರುತ್ತದೆ.

ರಹಸ್ಯ #5

ರಹಸ್ಯ #5

ಆದರೆ ಹ್ಯಾಕರುಗಳು ಜಾಹೀರಾತು ಇಲ್ಲದ ಅಥವಾ ಕಡಿಮೆ ಜಾಹೀರಾತು ಇರುವ ಉಚಿತ ಅಂತರ್ಜಾಲ ನೀಡಿದರೆ ಪಡೆದುಕೊಳ್ಳುವುದು ಅಪಾಯಕರ. ಏಕೆಂದರೆ ಈ ಅಂತರ್ಜಾಲದ ಮೂಲಕ ನೀವು ದಾಖಲಿಸುವ ಎಲ್ಲಾ ಮಾಹಿತಿಗಳನ್ನು ಇವರು ತದ್ರೂಪುಗೊಳಿಸಿ ಬಳಿಕ ನಿಮ್ಮ ವೈಯಕ್ತಿಕ ಖಾತೆಗಳಿಗೆ ಕನ್ನ ಹಾಕುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

Dark Truths About The Internet That We Wouldn't Know!

These are the dark secrets about internet which are kept hidden for strategical purposes. After all, most of the world's population has a significant online presence! These hidden secrets will totally amaze you. Check out these interesting things that you need to know about the internet.
X
Desktop Bottom Promotion