Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನೀವು ತಿಳಿದಿರದ ಫೇಸ್‌ಬುಕ್‌ನ 10 ಆಶ್ಚರ್ಯಕರ ಸಂಗತಿಗಳಿವು
ಇಂಟರ್‌ನೆಟ್ ಬರುವವರೆಗೆ ಸೋಶಿಯಲ್ ಮೀಡಿಯಾ (ಸಾಮಾಜಿಕ ಜಾಲತಾಣ) ಎಂಬ ಪದವನ್ನೇ ಯಾರೂ ಸಹ ಕೇಳಿರಲಿಲ್ಲ ಎಂದು ಅನಿಸುತ್ತೆ. ಅದರಲ್ಲೂ ಫೇಸ್‍ಬುಕ್ ಎಂಬ ಪದವು ಸಹ ಅಷ್ಟೇನು ಪರಿಚಿತವಾದ ಪದವಾಗಿರಲಿಲ್ಲ. ಆದರೆ ಇಂಟರ್‌ನೆಟ್ ಕ್ಷೇತ್ರದಲ್ಲಾದ ಕ್ರಾಂತಿಯಲ್ಲಿ ಇಡೀ ಪ್ರಪಂಚವೇ ತಮಗೆ ಗೊತ್ತಿಲ್ಲದೆ ಒಂದು ಬದಲಾವಣೆಗೆ ಒಳಪಟ್ಟರು, ಈಗ ಅದೇ ಜನ ಇದೇ ಇಂಟರ್‌ನೆಟ್ ಮೂಲಕ ಪರಸ್ಪರ ಸಂಪರ್ಕಿತರಾಗಿದ್ದಾರೆ. ಇದಕ್ಕೆಲ್ಲ ಕಾರಣ ಸೋಶಿಯಲ್ ಮೀಡಿಯಾ ಎಂದೇ ಹೇಳಬಹುದು.
ಪ್ರತಿ ಕ್ಷಣದಲ್ಲು ವಿಶ್ವದಾದ್ಯಂತ ಸುಮಾರು ಕೋಟಿಗಳಷ್ಟು ಜನ ಫೇಸ್‍ಬುಕ್‍ನಲ್ಲಿ ತಮ್ಮ ಭಾವನೆಗಳನ್ನು ಮತ್ತು ಆಲೋಚನೆಗಳನ್ನು ಮತ್ತು ಸಂದೇಶಗಳ ವಿನಿಮಯವನ್ನು ಮಾಡಿಕೊಳ್ಳುತ್ತಿರುತ್ತಾರೆ. ಇಲ್ಲಿ ನಾವು ಇಂದು ನಿಮಗಾಗಿ ಫೇಸ್‍ಬುಕ್ ಕುರಿತಾಗಿ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇವೆ ಓದಿಕೊಳ್ಳಿ.
ವಿಫಲತೆಯು ಕಲಿಸುವ 10 ಮಹತ್ತರ ಜೀವನ ಪಾಠಗಳು
ಈ ಅಂಕಣದಲ್ಲಿ ನಾವು ಸೋಶಿಯಲ್ ಮೀಡಿಯಾದ ಅನಭಿಷಿಕ್ತ ದೊರೆ ಫೇಸ್‍ಬುಕ್ ಬಗ್ಗೆ ಇರುವ ರೋಚಕ, ಕುತೂಹಲಕರ ಮತ್ತು ಚಕಿತಗೊಳಿಸುವಂತಹ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಒಂದು ಸಣ್ಣ ಆಲೋಚನೆಯಾಗಿ ಜನಿಸಿದ ಇದು, ಮುಂದೆ ಕೋಟ್ಯಾಂತರ ರೂಪಾಯಿಯ ಸಂಸ್ಥೆಯಾಗಿ ಬೆಳೆದು ನಿಂತಿದ್ದು ಮಾತ್ರ ಇಂಟರ್‌ನೆಟ್ ಜಗತ್ತಿನ ಅಚ್ಚರಿ. ಇದು ಹೇಗೆ ಸಾಧ್ಯ ಎಂದು ತಿಳಿಯಬೇಕೆಂದರೆ ನಾವು ಫೇಸ್‍ಬುಕ್ ಬಗೆಗಿನ ಕುತೂಹಲಕಾರಿ ವಿಚಾರಗಳನ್ನು ತಿಳಿದುಕೊಂಡಾಗ ಮಾತ್ರ ಅರ್ಥವಾಗುತ್ತದೆ.
ಇಲ್ಲಿನ ಕೆಲವೊಂದು ಅಂಶಗಳು ಫೇಸ್‍ಬುಕ್‍ನ ರಹಸ್ಯಗಳತ್ತ ಸಹ ಗಮನ ಹರಿಸಿವೆ. ಬನ್ನಿ ನಾವು ಫೇಸ್‍ಬುಕ್‍ನ ಕುರಿತಾದ ಕುತೂಹಲಕಾರಿ ವಿಚಾರಗಳತ್ತ ಗಮನ ಹರಿಸೋಣ. ಇಲ್ಲಿ ನಿಮಗಾಗಿ ಅಂತಹ 10 ವಿಚಾರಗಳು ಕಾದು ಕುಳಿತಿವೆ.

ಆರಂಭದಲ್ಲಿ
ಫೇಸ್‍ಬುಕ್ ಆರಂಭಗೊಂಡ ಮೊದಲ ಬೇಸಿಗೆಯಲ್ಲಿ ಜುಕರ್‌ಬರ್ಗ್ ಕುಟುಂಬವು ಈ ಯೋಜನೆಯನ್ನು ಜೀವಂತವಾಗಿರಿಸಲು 85,000 ಡಾಲರ್‌ಗಳನ್ನು ವಿನಿಯೋಗಿಸಿದರು. ಈ ಮಹತ್ವದ ಹೂಡಿಕೆಯು ಈ ಹೊಸ ಬಗೆಯ ಉದ್ಯಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿತು. ಆದರೆ ಇಂದು ಫೇಸ್‍ಬುಕ್ ಸುಮಾರು 20 ಬಿಲಿಯನ್ ಯುಎಸ್ ಡಾಲರ್‌ಗಳ ಮೊತ್ತದ ಉದ್ಯಮವಾಗಿದೆ.

ಮೊದಲ ಷೇರು ಮಾರಾಟ
ಫೇಸ್‍ಬುಕ್ ಸ್ಟಾಕ್ ಎಕ್ಸ್‌ಚೆಂಜ್‌ನಲ್ಲಿ ತನ್ನ ಮೊದಲ ಷೇರನ್ನು ಮಾರಾಟ ಮಾಡಿದ್ದು, ಕೇವಲ 38ಡಾಲರ್‌ಗಳಿಗೆ. ನಂಬಲಸಾಧ್ಯವಾದರು ಇದು ಸತ್ಯ. ಇಂದು ಇದರ ಮಾರುಕಟ್ಟೆ ಮೌಲ್ಯ 100 ಬಿಲಿಯನ್ ಯುಎಸ್ ಡಾಲರ್‌ಗಳಾಗಿವೆ. ಇದು ಯಾಹೂ (yahoo), ಗ್ರೂಪ್‍ಆನ್, ಲಿಂಕ್‍ಡ್‍ಇನ್, ನೆಟ್‍ಫಿಕ್ಸ್ ಮತ್ತು ಐಎಸಿಗಳ ಒಟ್ಟಾರೆ ಮೊತ್ತಕ್ಕೆ ಸಮನಾಗಿದೆ.

ಫೇಸ್‍ಬುಕ್ ಜೊತೆಗೆ ಸಹಭಾಗಿತ್ವವನ್ನು ಹೊಂದಿರುವ ಸೈಟ್‍ಗಳು
ಸುಮಾರು 7 ಮಿಲಿಯನ್ ಸೈಟ್‍ಗಳು ಫೇಸ್‍ಬುಕ್ ಜೊತೆಗೆ ಲಿಂಕ್ ಹೊಂದಿವೆ.

20 ನಿಮಿಷದಲ್ಲಿ ಏನಾಗುತ್ತದೆ ಎಂಬುದು ನಿಮಗೆ ಅಚ್ಚರಿಯನ್ನು ತರುತ್ತದೆ
ಪ್ರತಿದಿನದ 20 ನಿಮಿಷದಲ್ಲಿ ಏನಾಗುತ್ತದೆ. ನಂಬಲಸಾಧ್ಯವಾದರು ಸತ್ಯ, 2 ಮಿಲಿಯನ್ ಜನರು ಫ್ರೆಂಡ್ ರಿಕ್ವೆಸ್ (Request) ಕಳುಹಿಸುತ್ತಾರೆ, 3 ಮಿಲಿಯನ್ ಜನರು ಸಂದೇಶವನ್ನು ರವಾನಿಸುತ್ತಾರೆ ಮತ್ತು 1 ಮಿಲಿಯನ್ ಜನರು ಲಿಂಕ್‍ಗಳ ವಿನಿಮಯ ಮಾಡಿಕೊಳ್ಳುತ್ತಾರೆ.

ಒಂದು ದಿನದ ಜರ್ನಿ
ಒಂದು ದಿನದಲ್ಲಿ ಸುಮಾರು 350 ಮಿಲಿಯನ್ ಫೋಟೋಗಳು ಈ ಸೈಟ್‍ನಲ್ಲಿ ಅಪ್‍ಲೋಡ್ ಆಗುತ್ತವೆ. ಜೊತೆಗೆ 450 ಲೈಕ್‍ಗಳು ಜರುಗುತ್ತವೆ.

ಚೀನಾ
ಚೀನಾದಲ್ಲಿ ಫೇಸ್‍ಬುಕ್‍ಗೆ ನಿಷೇಧವನ್ನು ಹೇರಲಾಗಿದೆ. ಆದರೂ ಚೀನಾದಲ್ಲಿ 95 ಮಿಲಿಯನ್ ಫೇಸ್‍ಬುಕ್ ಬಳಕೆದಾರರು ಇದ್ದಾರೆ ಎಂದರೆ, ಅಚ್ಚರಿಯಾಗದೆ ಮತ್ತೇನಾದೀತು?

ಕಂಟೆಂಟ್ ಪೀಸ್‍ಗಳು
ಸಕ್ರಿಯ ಫೇಸ್‍ಬುಕ್ ಬಳಕೆದಾರರು ಪ್ರತಿದಿನ 1400-1500 ಕಂಟೆಂಟ್‍ಗಳನ್ನು ಅಂದರೆ ವಿಷಯಗಳ ಬಗೆಗೆ ಬೆಳಕನ್ನು ಚೆಲ್ಲುತ್ತಾರೆ!

500 ಡಾಲರ್ ಬಹುಮಾನ
ಫೇಸ್‍ಬುಕ್ ತನ್ನ ಸುರಕ್ಷತಾ ನೀತಿಯ ಭಾಗವಾಗಿ, ಬಳಕೆದಾರರಿಗೆ ಗರಿಷ್ಟ ಭದ್ರತೆಯನ್ನು ಒದಗಿಸುತ್ತದೆ. ಹೀಗಿದ್ದು ಯಾವುದಾದರು ಬಗ್‍ಗಳು ಫೇಸ್‍ಬುಕ್‍ನ ಅಸಂಖ್ಯಾತ ಫ್ರೋಗ್ರಾಮ್‍ಗಳಿಗೆ ನುಸುಳಿರುವುದನ್ನು ಕಂಡು ಹಿಡಿದು, ಅದರ ಮಾಹಿತಿಯನ್ನು ನೀಡಿದವರಿಗೆ ಫೇಸ್‍ಬುಕ್ 500 ಡಾಲರ್ ಬಹುಮಾನವನ್ನು ನೀಡುತ್ತದೆ.

ಹಲವಾರು ಭಾಷೆಗಳು
ಇದು ಸಹ ನಂಬಲಸಾಧ್ಯ, ಫೇಸ್‍ಬುಕ್ ತನ್ನ ಬಳಕೆದಾರರಿಗಾಗಿ ಸುಮಾರು 70 ಭಾಷೆಗಳಲ್ಲಿ ಲಭ್ಯವಿದೆ.

ಫೇಸ್‍ಬುಕ್‍ನ ಬಳಕೆದಾರರಲ್ಲಿ ಗಣನೀಯವಾಗಿ ಏರಿಕೆ
2012 ರಿಂದ 2013ರ ನಡುವಿನ ಒಂದು ವರ್ಷದಲ್ಲಿ ಅವಧಿಯಲ್ಲಿ, ಫೇಸ್‍ಬುಕ್‍ನ ಬಳಕೆದಾರರ ಪ್ರಮಾಣವು ಸುಮಾರು ಶೇ.22 ರಷ್ಟು ಏರಿಕೆ ಕಂಡು ಬಂದಿತ್ತು.



Click it and Unblock the Notifications











