ವಿಚಿತ್ರ ಜನರ ವೈವಿಧ್ಯ ಇಂಟರ್‌ನೆಟ್‌ ಬಳಕೆ...

By Deepu

ಇಂದಿನ ಆಧುನಿಕ ಯುಗದಲ್ಲಿ ನಾವು ಸೌಲಭ್ಯಗಳಿಗೆ ಹೆಚ್ಚು ಹೆಚ್ಚು ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದೇವೆ. ಕಾಲ ಬದಲಾದಂತೆ ನಾವು ಬದಲಾಗುತ್ತಿದ್ದು ನಮ್ಮ ಜೀವನ ಶೈಲಿಯನ್ನು ಇದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದೇವೆ. ಅಂತಹ ಸೌಲಭ್ಯಗಳಲ್ಲಿ ಒಂದಾಗಿದೆ ಅಂತರ್ಜಾಲ. ಈ ಸೌಕರ್ಯವು ದಿನದಿಂದ ದಿನಕ್ಕೆ ನವೀಕರಣವನ್ನು ಪಡೆದುಕೊಳ್ಳುತ್ತಿದ್ದು ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಪಡೆದುಕೊಳ್ಳುತ್ತಿದೆ. ಜೊತೆಗೆ ಹಳ್ಳಿ ಹಳ್ಳಿಗೂ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಬೇಕು ಎಂಬ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಸರಕಾರ ಕೂಡ ಜಾರಿಗೊಳಿಸುತ್ತಿದ್ದು ಅಂತರ್ಜಾಲ ಕ್ಷಿಪ್ರ ಗತಿಯಲ್ಲಿ ಎಲ್ಲೆಡೆಯೂ ಪಸರುತ್ತಿದೆ.

ಇಂದಿನ ಕಾಲಮಾನದಲ್ಲಿ ಅತ್ಯಗತ್ಯ ಮೂಲಾಧಾರವಾಗಿ ಮಾರ್ಪಟ್ಟಿರುವ ಅಂತರ್ಜಾಲವನ್ನು ವಿಷಯದ ಹುಡುಕಾಟಕ್ಕೆ, ಹೆಚ್ಚಿನ ಮಾಹಿತಿ ಸಂಗ್ರಹಣೆಗೆ, ಹೊಸ ಸ್ಥಳದ ಮಾಹಿತಿಗೆ ಹೀಗೆ ಹಲವಾರು ಅಂಶಗಳಿಗಾಗಿ ಬಳಸಲಾಗುತ್ತಿದೆ. ಅಂತರ್ಜಾಲ ಆಧುನಿಕ ಸೌಲಭ್ಯವಾಗಿದ್ದರೂ ನಮಗೆ ಅಪಾಯವನ್ನು ತಂದೊಡ್ಡುತ್ತಿದೆ ಅದಾಗ್ಯೂ ಅಂತರ್ಜಾಲದ ಬಳಕೆಯನ್ನು ನಾವು ಬಿಡುತ್ತಿಲ್ಲ. ಈ ವ್ಯವಸ್ಥೆಯನ್ನು ಬಹುವಾಗಿ ಬಳಸಿದಷ್ಟೂ ನಾವು ಅದರ ಕೈಗೊಂಬೆಗಳಾಗುತ್ತಿದ್ದೇವೆ. ಇದೊಂದು ವರವಾಗಿದ್ದರೂ ನಮ್ಮನ್ನು ಹೆಚ್ಚು ಅದರ ಮೇಲೆ ಅವಲಂಬಿತವಾಗಿರುವಂತೆ ಮಾಡಿದೆ.

ಅಂತರ್ಜಾಲವಿಲ್ಲದೆ ನಮ್ಮ ಜೀವನ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಅದಕ್ಕೆ ಹೊಂದಿಕೊಂಡುಬಿಟ್ಟಿದೆ. ಆದರೆ ಅಂತರ್ಜಾಲವನ್ನು ಮೋಜಿಗಾಗಿ ಬಳಸಿಕೊಳ್ಳುವವರೂ ಇದ್ದು ಈ ವಿಷಯವನ್ನು ನೋಡಿದಾಗ ನಿಮಗೆ ಮನರಂಜನೆಯಾಗುವುದು ಖಂಡಿತ. ನಿಮ್ಮ ಮುಖದಲ್ಲಿ ನಗುವನ್ನು ಚಿಮ್ಮಿಸುವ ಜನರ ಈ ವಿಚಿತ್ರ ಸ್ವಭಾವಗಳು ನಮಗೆ ಮೋಜನ್ನು ಉಂಟುಮಾಡುವುದು ನಿಜ. ಬನ್ನಿ ವಿಚಿತ್ರ ಜನರ ಚಿತ್ರವಿಚಿತ್ರ ಪ್ರಶ್ನೆಗಳು ಯಾವುದು ಎಂಬುದನ್ನು ನಾವು ಸಹ ನೋಡಿಕೊಂಡು ಬರೋಣ...

ಹೇಗೆ ಜೋರಾಗಿ ಅಪಾನವಾಯು ಬಿಡುವುದು?

ಹೇಗೆ ಜೋರಾಗಿ ಅಪಾನವಾಯು ಬಿಡುವುದು?

ಊಸು ಎಂದು ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಅಪಾನವಾಯುವಿನ ಕುರಿತು ಮತ್ತು ಅದನ್ನು ಸೃಜನಶೀಲತೆಯಿಂದ! ಹೇಗೆ ಗಟ್ಟಿಯಾಗಿ ಮತ್ತು ಜೋರಾಗಿ ಬಿಡುವುದು ಎಂಬ ಕುರಿತು ಸಹ ಇಂಟರ್‌ನೆಟ್‌‌ನಲ್ಲಿ ಸಂಶೋಧನೆ ನಡೆಸಿದ್ದಾರೆ ನಮ್ಮ ಮಹಾನುಭಾವರು. ಇನ್ನೂ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಹೇಗೆ ಯಾರಿಗೂ ಗೊತ್ತಾಗದಂತೆ ಅಪಾನ ವಾಯು ಬಿಡುವುದು ಎಂದು ಹುಡುಕಿದ್ದಾರೆ.

ಬೋರ್ ಆದಾಗ ಏನು ಮಾಡುವುದು?

ಬೋರ್ ಆದಾಗ ಏನು ಮಾಡುವುದು?

ಇದು ಭಯಂಕರವಾಗಿ ಬೋರ್ ಹೊಡೆಯುವಾಗ ಜನ ಹುಡುಕುವ ಮೊದಲ ಪ್ರಶ್ನೆಯಾಗಿದೆ ಎಂದು ಇಂಟರ್‌ನೆಟ್‌ ಹೇಳುತ್ತದೆ. ಬೋರ್ ಆಯಿತೆ ಏನು ಮಾಡುವುದು ಎಂದು ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಇಂಟರ್‌ನೆಟ್‌ ಹಲವಾರು ಮಾರ್ಗಗಳನ್ನು ತೋರಿಸುತ್ತದೆಯಂತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೋರ್ ಆದಾಗ ಏನು ಮಾಡುವುದು?

ಬೋರ್ ಆದಾಗ ಏನು ಮಾಡುವುದು?

ಇದು ವಿಚಿತ್ರವಾದರು ಸತ್ಯ. ಅದನ್ನು ಮಾಡಿ ತಮ್ಮ ಬೇಸರವನ್ನು ತೀರಿಸಿಕೊಂಡವರು ಮತ್ತೆ ಬೇಸರವಾದಾಗ ಇದೇ ಪ್ರಶ್ನೆಯನ್ನು ಕೇಳಿ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತಾರೆ. ಈ ಹುಡುಕಾಟವೇ ಅವರ ಬೇಸರವನ್ನು ಸಹ ಕಳೆಯುತ್ತದೆ ಎಂದು ಕೆಲವರು ಹೇಳುತ್ತಾರೆ. ಜನ ಗೂಗಲ್ ಅನ್ನು ಹೇಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಅಲ್ಲವೇ?

ಮಿಲನ ಕ್ರಿಯೆಯನ್ನು ಹೇಗೆ ನಡೆಸಬೇಕು?

ಮಿಲನ ಕ್ರಿಯೆಯನ್ನು ಹೇಗೆ ನಡೆಸಬೇಕು?

ಇದು ಇಂಟರ್‌ನೆಟ್‌‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆದಿರುವ ಪ್ರಶ್ನೆಯಾಗಿದೆ. ಗೂಗಲ್‌ನಲ್ಲಿ ಹೌ ಟು ಎಂದು ಟೈಪ್ ಮಾಡಿದ ತಕ್ಷಣ ಅದೇ ಈ ಪ್ರಶ್ನೆಯನ್ನು ನಿಮಗೆ ತೋರಿಸುವ ಮಟ್ಟಿಗೆ ಇದು ಪ್ರಸಿದ್ಧ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಿಲನ ಕ್ರಿಯೆಯನ್ನು ಹೇಗೆ ನಡೆಸಬೇಕು?

ಮಿಲನ ಕ್ರಿಯೆಯನ್ನು ಹೇಗೆ ನಡೆಸಬೇಕು?

ಲೈಂಗಿಕ ಕ್ರಿಯೆಯ ಬಗ್ಗೆ ಮಾನವನಿಗೆ ಆಸಕ್ತಿ ಹೆಚ್ಚು. ಇದು ಅವನ ಜನ್ಮಜಾತವಾಗಿ ಬಂದಿರುತ್ತದೆ. ಈ ಕೂತೂಹಲವೇ ಈ ಪ್ರಶ್ನೆಯ ಮೂಲ. ಪ್ರಾಣಿಗಳಿಗೆ ಇದನ್ನು ಯಾರು ಕೊಟ್ಟರು ಎಂದು ನಿಮಗೆ ಅಚ್ಚರಿಯಾಗುತ್ತಿದೆಯೇ?

ಆತ್ಮಹತ್ಯೆಗೆ ಮಾರ್ಗ..!

ಆತ್ಮಹತ್ಯೆಗೆ ಮಾರ್ಗ..!

ಆತ್ಮಹತ್ಯೆ ಮಾಡಿಕೊಳ್ಳಲು ಸಹ ಇಂಟರ್‌ನೆಟ್‌ ಸಹಾಯವನ್ನು ಪಡೆಯುತ್ತಾರೆ. ಜೀವನ ಅಮೂಲ್ಯವಾದುದು ಆದರೆ ಅದನ್ನೇ ಮುಗಿಸಲು ಇಂಟರ್‌ನೆಟ್‌‌ನಲ್ಲಿ ಹುಡುಕಾಟ ನಡೆದ ದುರದೃಷ್ಟಕಾರಿ ಘಟನೆಗಳು ನಡೆದಿವೆ. ಹೀಗೆ ಆತ್ಮಹತ್ಯೆಗೆ ಮಾರ್ಗವನ್ನು ಹುಡುಕುವ ಬದಲಿಗೆ ಹೇಗೆ ಬದುಕಬೇಕು ಎಂದು ತಿಳಿಸುವ ಕೋಟಿ ಪುಟಗಳು ಸಹ ಇವೆ ಎಂಬುದನ್ನು ಮರೆಯಬಾರದು. ಒಂದು ವೇಳೆ ನಿಮಗೆ ಇಂತಹ ಅನುಭವ ಆದಲ್ಲಿ, ಇಂಟರ್‌ನೆಟ್‌‌ನಲ್ಲಿ ಮನಃಶಾಸ್ತ್ರಜ್ಞರ ಸಲಹೆಯನ್ನು ಪಡೆಯಿರಿ.

ಗಂಡು ಮಗುವಿಗೆ ಹೇಗೆ ಜನ್ಮವನ್ನು ನೀಡುವುದು?

ಗಂಡು ಮಗುವಿಗೆ ಹೇಗೆ ಜನ್ಮವನ್ನು ನೀಡುವುದು?

ತಾಯಂದಿರದಷ್ಟೇ ಅಲ್ಲ, ತಂದೆಯರು ಸಹ ಇದನ್ನೇ ಹುಡುಕುತ್ತಾರಂತೆ. ಹೆಣ್ಣು ಮಗುವಿನ ಮೇಲಿನ ದೌರ್ಜನ್ಯವನ್ನು ಇಂಟರ್‌ನೆಟ್‌‌ನಲ್ಲಿ ಸಹ ಮುಂದುವರಿಸುವಂತಿದೆ ಈ ಪ್ರಶ್ನೆ. ಇಂತಹ ವಿಚಾರಗಳನ್ನು ಹುಡುಕದೆ ಮಕ್ಕಳೇ ದೇವರು ಎಂದು, ಹುಟ್ಟಿದ ಮಗುವನ್ನು ಮತ್ತು ಹುಟ್ಟುವ ಮಗುವನ್ನು ಸ್ವಾಗತಿಸುವುದು ಒಳ್ಳೆಯದು. ಲಿಂಗ ತಾರತಮ್ಯವನ್ನು ಎಲ್ಲಿಯೂ ಸಹ ಮಾಡಬಾರದು.

ಹೇಗೆ ಚುಂಬಿಸುವುದು ?

ಹೇಗೆ ಚುಂಬಿಸುವುದು ?

ರೋಮಾಂಚನಕಾರಿಯಾದ ಈ ಮಾಹಿತಿಯನ್ನು ಹುಡುಕುವವರಿಗೆ ಮುತ್ತು ನೀಡುವುದರಲ್ಲಿ ಯಾವ ಯಾವ ಬಗೆಗಳಿವೆ ಎಂದು ತಿಳಿಯುವ ಕುತೂಹಲ. ಭಾರತೀಯ ಮುತ್ತು, ಫ್ರೆಂಚ್ ಕಿಸ್ ಹೀಗೆ ನಾನಾ ರೀತಿಯ ಚುಂಬನಗಳ ಬಗ್ಗೆ ಹುಡುಕಾಟಗಳು ನಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೇಗೆ ಚುಂಬಿಸುವುದು ?

ಹೇಗೆ ಚುಂಬಿಸುವುದು ?

ಚುಂಬಿಸುವುದು ಭಾವನಾತ್ಮಕ ವಿಷಯ, ಆದರೆ ಅದನ್ನು ಸಹ ಸೃಜನಶೀಲತೆಯಿಂದ ಮಾಡುವ ಹೆಬ್ಬಯಕೆ ಹಲವಾರು ಸಾಹಸಿಗಳಲ್ಲಿ ಇದೆ. ಅದಕ್ಕಾಗಿ ಅವರು ಹುಡುಕಾಟವನ್ನು ನಡೆಸುತ್ತಾರೆ. ಹೀಗೆ ಮುತ್ತು ನೀಡಿ ಎಂದು ನಾವು ಹೇಳುವುದಿಲ್ಲ. ಅದನ್ನು ಒಂದು ಸ್ವಾಭಾವಿಕ ಕ್ರಿಯೆಯಾಗಿ ಮಾಡಬಹುದಲ್ಲವೆ ಎನಿಸುತ್ತದೆ.

X
Desktop Bottom Promotion