For Quick Alerts
ALLOW NOTIFICATIONS  
For Daily Alerts

  ನಟನಟಿಯರ ಮಾತನ್ನ ಮಾತ್ರ ನಮ್ಮ ಜನ ತಪ್ಪದೇ ಕೇಳ್ತಾರೆ!

  By Hemanth
  |

  ನರೆಮನೆಯವರಿಗೆ ನೀವು ರಸ್ತೆಯಲ್ಲಿ ಕಸ ಹಾಕಬಾರದು. ಅದರಿಂದ ನಗರದ ಸೌಂದರ್ಯ ಹಾಳಾಗುತ್ತದೆ ಎಂದು ಹೇಳಿನೋಡಿ. ಆತ ನಿಮ್ಮ ಜತೆ ಜಗಳಕ್ಕೆ ನಿಲ್ಲುವುದು ಗ್ಯಾರಂಟಿ.  ಹೆಚ್ಚು ಶಿಕ್ಷಿತ ಬಾಲಿವುಡ್‌ನ ಸೆಲೆಬ್ರಿಟಿ ಸ್ಟಾರ್‌‪‎ಗಳು

  ನೀವು ಹೇಳಿದ ಮಾತನ್ನೇ ಯಾವುದೋ ನಟ ಅಥವಾ ನಟಿ ಬಂದು ಹೇಳಿದರೆ ಆಗ ಆತ ಖಂಡಿತವಾಗಿಯೂ ಕೇಳುತ್ತಾನೆ ಮತ್ತು ಅದನ್ನು ಶಿರಸವಹಿಸಿ ಪಾಲಿಸಿಕೊಂಡು ಹೋಗುತ್ತಾನೆ.     ಸಾವು ಬದುಕಿನ ಹೋರಾಟದಲ್ಲಿ, ಗೆದ್ದು ಬಂದವರ ರಿಯಲ್ ಸ್ಟೋರಿ

  ಇದಕ್ಕಾಗಿಯೇ ಸರಕಾರ ಕೂಡ ಕೆಲವೊಂದು ಅಭಿಯಾನಗಳಿಗೆ ಚಿತ್ರನಟರನ್ನು ಸೇರಿಸಿಕೊಳ್ಳುತ್ತಿರುವುದು. ಸಾಮಾನ್ಯ ವ್ಯಕ್ತಿ ಹೇಳಿದರೆ ಯಾರೂ ಕೂಡ ಕೇಳಲ್ಲ. ಅದೇ ಅಮಿತಾಭ್ ಬಚ್ಚನ್ ಅಥವಾ ಐಶ್ವರ್ಯ ರೈ ಹೇಳಿದರೆ ಅದನ್ನು ಜನರು ಕಿವಿಗೊಟ್ಟು ಕೇಳುತ್ತಾರೆ ಮತ್ತು ಪಾಲಿಸಿಕೊಂಡು ಹೋಗುತ್ತಾರೆ.  ಪತ್ನಿಯರಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿರುವ ಸೆಲೆಬ್ರಿಟಿಗಳು

  ಬಾಲಿವುಡ್ ನಟ ನಟಿಯರು ಕೆಲವೊಂದು ಅಭಿಯಾನಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿಯನ್ನು ತೋರಿಸುತ್ತಿರುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ, ಮುಂದೆ ಓದಿ...

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್

  ಬಾಲಿವುಡ್‌ನಲ್ಲಿ ತುಂಬಾ ಫಿಟ್ ಎಂದು ಪರಿಗಣಿಸಲಾಗಿರುವ ಅಕ್ಷಯ್ ಕುಮಾರ್ ಅವರು ಮುಂಬಯಿ ಮಹಾನಗರ ಪಾಲಿಕೆಯ `ಜಾನ್ ಬಚಾವೋ' ಅಭಿಯಾನದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯಕರ ಆಹಾರ ಸೇವನೆ ಮತ್ತು ಜೀವನಶೈಲಿಯಿಂದ ಮಧುಮೇಹ, ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಗಳನ್ನು ತಡೆಯಬಹುದು ಎನ್ನುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

  ಸೋನಂ ಕಪೂರ್

  ಸೋನಂ ಕಪೂರ್

  ಬಾಲಿವುಡ್‌ನ ಸುಂದರಿ ಸೋನಂ ಕಪೂರ್ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸರಕಾರೇತರ ಸಂಸ್ಥೆಗಳಾದ ಫೈಟ್ ಹಂಗರ್ ಫೌಂಡೇಶನ್ ಮತ್ತು ಕಡ್ಡಲ್ಸ್ ಫೌಂಡೇಶನ್‌ನ ರಾಯಭಾರಿಯಾಗಿ ಕೆಲಸ ಮಾಡುತ್ತಾ ಇದ್ದಾರೆ. ಪೌಷ್ಠಿಕಾಂಶಗಳ ಕೊರತೆ ಬಗ್ಗೆ ಇದು ಜಾಗೃತಿ ಮೂಡಿಸುತ್ತದೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವಂತಹ ಅನಾಥ ಮಕ್ಕಳಿಗೆ ಪೋಷಕಾಂಶ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

  ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್ ಅವರು ಮಹಾನ್ ನಟ ಮಾತ್ರವಲ್ಲ ಅವರೊಬ್ಬ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಕೂಡ. ಪೋಲಿಯೋ ಮತ್ತು ಕ್ಷಯ ರೋಗದಂತಹ ಜಾಗೃತಿ ಅಭಿಯಾನಗಳಲ್ಲಿ ಭಾಗಿಯಾಗಿರುವ ಅಮಿತಾಬ್ ಬಚ್ಚನ್ ಅವರು ಹೆಪಟೈಟಿಸ್ ನಿಂದ ಆಗುವಂತಹ ಅಪಾಯದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. ದೇಶದಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ಕಾರಣದಿಂದ ಮೋದಿ ಸರಕಾರವು ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನದಲ್ಲಿ ಅವರು ರಾಯಭಾರಿಯಾಗಿದ್ದಾರೆ.

  ಮಿಲಿಂದ್ ಸೋಮನ್

  ಮಿಲಿಂದ್ ಸೋಮನ್

  ಹಲವಾರು ಮ್ಯಾರಥಾನ್‌ಗಳಲ್ಲಿ ಸ್ಪರ್ಧಿಸಿ ಈಗಲೂ ಹಿಂದಿನ ಫಿಟ್ ನೆಸ್ ಅನ್ನು ಕಾಯ್ದುಕೊಂಡಿರುವ ಮಿಲಿಂದ್ ಸೋಮನ್ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಹೇಳಿದ್ದಾರೆ. ಮಹಿಳೆಯರ ಆರೋಗ್ಯಕರ ಜೀವನಶೈಲಿ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಸೋಮನ್ ಜಾಗೃತಿ ಮೂಡಿಸುತ್ತಾರೆ.

  ಅಮೀರ್ ಖಾನ್

  ಅಮೀರ್ ಖಾನ್

  ನೀರಿಲ್ಲದೆ ಹಲವಾರು ರೈತರು ಕೃಷಿಯಲ್ಲಿ ಕೈ ಸುಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಲವಾರು ಘಟನೆಗಳು ನಮ್ಮ ಮುಂದಿದೆ. ಇದನ್ನು ಹೋಗಲಾಡಿಸಲು ಬಾಲಿವುಡ್ ನಟ ಅಮೀರ್ ಖಾನ್ ಪಾನಿ ಫೌಂಡೇಶನ್ ಅನ್ನು ಆರಂಭಿಸಿದ್ದಾರೆ. ಇದರಿಂದ ಭಾರತದಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

   

  English summary

  celebrities who supported social health causes in 2016

  Every one of us can do our bit by spreading awareness about health and hygiene. But if you are a celebrity the impact is much more. And this is why these Bollywood actors have come forward for different social causes. Here are a few actors who supported noble causes this year.
  Story first published: Friday, December 2, 2016, 10:32 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more