ನೋಡಿ, ಇದೇ ಕಾರಣಕ್ಕೆ ಸೆಲೆಬ್ರಿಟಿಗಳ ಮದುವೆ ಮುರಿದು ಬೀಳುವುದು

By Manu

ಭಾರತದಲ್ಲಿ ಹಿಂದೊಮ್ಮೆ ವಿಫಲವಾದ ವಿವಾಹಗಳ ಬಗ್ಗೆ ಅಲ್ಲೊಂದು ಇಲ್ಲೊಂದು ಪ್ರಕರಣ ಕಂಡುಬರುತ್ತಿತ್ತು. ಆದರೆ ಇಂದು ಈ ಸಂಖ್ಯೆ ಅಗಾಧವಾದ ಪ್ರಮಾಣಕ್ಕೇರಿದೆ. ಅದರಲ್ಲೂ ಈ ವೈಫಲ್ಯದಲ್ಲಿ ಖ್ಯಾತನಾಮರ, ಸಿನೆಮಾ ತಾರೆಯರ ಪಾಲೇ ಹೆಚ್ಚು. ಭಾರತದಿಂದ ಹೊರಗೂ ಕೊಂಚ ಗಮನ ಹರಿಸಿದರೆ ಇತರ ರಾಷ್ಟ್ರಗಳಲ್ಲಿಯೂ ಖ್ಯಾತನಾಮರ ವಿವಾಹಗಳು ಗೋತಾ ಹೊಡೆದಿರುವ ಸ್ಪಷ್ಟ ಸೂಚನೆಗಳು ದೊರಕುತ್ತವೆ. ಹಾಗಾದರೆ ವಿದೇಶಗಳಂತೆಯೇ ನಮ್ಮ ದೇಶದಲ್ಲಿಯೂ ಖ್ಯಾತ ವ್ಯಕ್ತಿಗಳ ವಿವಾಹಗಳಲ್ಲಿ ಬಿರುಕು ಕಂಡುಬರುವುದೇಕೆ? ವಿಹಾಹ ದುಃಖಾಂತ ಪಡೆಯಲು ಕಾರಣಗಳೇನು? ಎಂಬ ಪ್ರಶ್ನೆಗಳು ಕುತೂಹಲ ಮೂಡಿಸುತ್ತವೆ. ಪತ್ನಿಯರಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿರುವ ಸೆಲೆಬ್ರಿಟಿಗಳು

ಈ ಬಗ್ಗೆಯೂ ಕೆಲವು ಸಮೀಕ್ಷೆಗಳು ನಡೆದಿವೆ. ನಿಮ್ಮ ಊಹೆಯಂತೆಯೇ ವಿವಾಹಕ್ಕೂ ಹೊರಗಿನ ಸಂಬಂಧಗಳೇ ಈ ಬಿರುಕಿಗೆ ಮುಖ್ಯ ಕಾರಣವಾಗಿವೆ. ಆದರೆ ಎಲ್ಲರಲ್ಲೂ ಅಲ್ಲ. ಇದರ ಆಳದಲ್ಲಿ ಬೇರಾವುದೋ ಕಾರಣಗಳಿವೆ. ಇಂದು ಇಂತಹ ಆಳದಲ್ಲಿ ಹುದುಗಿರುವ ಕೆಲವು ಕಾರಣಗಳನ್ನು ನಿಮ್ಮ ಮುಂದಿಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ. ಒಮ್ಮೆ ನೀವು ಈ ಕಾರಣಗಳ ಬಗ್ಗೆ ಅರಿತರೆ ಅವಿವಾಹಿತರು ವಿಚಲಿತರಾಗಿ ನಮಗೂ ಇಂತಹ ಪರಿಸ್ಥಿತಿ ಬರಬಹುದೇ ಎಂಬ ದುಗುಡದಿಂದ ತಮ್ಮ ಮದುವೆಯನ್ನೇ ಕೊಂಚ ದಿನಗಳ ಕಾಲ ತಡೆಹಿಡಿಯಬಹುದು.

ಒಂದು ವೇಳೆ ಕೆಳಗೆ ವಿವರಿಸಿದ ಮಾಹಿತಿಗಳಲ್ಲಿ ಕೆಲವಾದರೂ ನಿಮಗೆ ಕಾಡುತ್ತಿದ್ದರೆ ತಕ್ಷಣ ಈ ಬಗ್ಗೆ ಸೂಕ್ತ ಮತ್ತು ದಿಟ್ಟ ಕ್ರಮ ಕೈಗೊಂಡು ವಿಫಲತೆಯತ್ತ ಸಾಗುತ್ತಿರುವ ನಿಮ್ಮ ಬಂಧನವನ್ನು ಮತ್ತೊಮ್ಮೆ ಬಲಪಡಿಸಬಹುದು. ಆಧೋಗತಿಗಿಳಿಯುತ್ತಿರುವ ಪವಿತ್ರ ವೈವಾಹಿಕ ಬಂಧನ ಕಳಚದಂತೆ ತಡೆಯಬಹುದು. ಕ್ಷಣಿಕ ಆಕರ್ಷಣೆಯಿಂದ ತಪ್ಪು ಸಂಬಂಧಕ್ಕೆ ಒಳಗಾಗುವುದು ತಪ್ಪುತ್ತದೆ. ಬನ್ನಿ, ಚಕಿತಗೊಳಿಸುವ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಅನಿಶ್ಚಿತತೆ

ಅನಿಶ್ಚಿತತೆ

ಸಾಮಾನ್ಯ ಜನರಿಗಿಂತಲೂ ಖ್ಯಾತನಾಮರ ಜೀವನಸಂಗಾತಿಯರು ಹೆಚ್ಚು ಅನಿಶ್ಚಿತತೆಯನ್ನು ಅನುಭವಿಸುತ್ತಾರೆ. ಏಕೆಂದು ಗೊತ್ತೇ? ಇವರ ಸಂಗಾತಿ ಸದಾ ಕೆಲಸದ ನೆವದಲ್ಲಿ ದೇಶದ ಉದ್ದಗಲಕ್ಕೂ ಸುತ್ತುತ್ತಾ ವಿದೇಶ ಪ್ರವಾಸ ಮಾಡುತ್ತಾ ಇರುವುದರಿಂದ ಪರಸ್ಪರ ಜೊತೆಯಾಗಿರುವ ಅವಕಾಶವನ್ನು ಕಳೆದುಕೊಳ್ಳುತ್ತಾ ಇರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅನಿಶ್ಚಿತತೆ

ಅನಿಶ್ಚಿತತೆ

ಇದೇ ವೇಳೆ ದೂರದಲ್ಲಿ ಇರುವ ಸಂಗಾತಿಯ ಬಗ್ಗೆ ಅನುಮಾನ ಉಂಟಾಗುತ್ತದೆ. ಅದರಲ್ಲೂ ಮಾಧ್ಯಮಗಳಲ್ಲಿ ಬರುವ ಉಪ್ಪೂ ಖಾರ ಹಚ್ಚಿಕೊಂಡೇ ಬರುವ ವರದಿ ಮತ್ತು ಚಿತ್ರಗಳು ಇವರ ಚಿತ್ತ ಕ್ಷೋಭೆಯನ್ನು ಕದಡುತ್ತದೆ.

ಮಾಧ್ಯಮದ ಮಧ್ಯಸ್ಥಿಕೆ

ಮಾಧ್ಯಮದ ಮಧ್ಯಸ್ಥಿಕೆ

ನಿಮ್ಮ ಚಲನವಲನಗಳ ಬಗ್ಗೆ ಸದಾ ಯಾರಾದರೂ ನಿಗಾವಹಿಸಿ ಸತತವಾಗಿ ಹಿಂಬಾಲಿಸುತ್ತಿದ್ದರೆ ನಿಮಗೆ ಹೇಗಾಗಬಹುದು? ಖ್ಯಾತನಾಮರು ಮತ್ತು ಅವರ ಸಂಗಾತಿಯರೂ ಇದೇ ಮನಃಸ್ಥಿತಿಯನ್ನು ಅನುಭವಿಸುತ್ತಾರೆ. ಏಕೆಂದರೆ ಮಾಧ್ಯಮಗಳು ಸದಾ ಇವರ ಚಲನವಲನಗಳನ್ನು ಪ್ರಕಟಿಸುತ್ತಾ ಬರುವ ಕಾರಣ ಇವರ ಬಗ್ಗೆ ಸದಾ ಒಂದು ನಿಗಾ ಇಟ್ಟಿರಲು ಸಾಧ್ಯವಾಗುತ್ತದೆ. ಇದರಿಂದ ಕೆಲವೊಮ್ಮೆ ಸಂಗತಿಗಳು ವಿಕೋಪಕ್ಕೆ ತಿರುಗಬಹುದು.

 ಹೆಚ್ಚಿನ ಒತ್ತಡ

ಹೆಚ್ಚಿನ ಒತ್ತಡ

ಖ್ಯಾತನಾಮರನ್ನು ಹಲವಾರು ಕಣ್ಣುಗಳು ಸದಾ ಗಮನಿಸುತ್ತಿರುವ ಕಾರಣ ವಿವಾಹದ ಬಳಿಕ ಸಾಂಗತ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಒತ್ತಡವನ್ನು ದಂಪತಿಗಳು ಅನುಭವಿಸುತ್ತಾರೆ. ಕೆಲವೊಮ್ಮೆ ಈ ಒತ್ತಡ ಸಹನೆಯ ಮಿತಿಮೀರುವ ಮೂಲಕ ಚಿಕ್ಕ ಪುಟ್ಟ ಕ್ಲೇಶಗಳು ದಾಂಪತ್ಯದಲ್ಲಿ ಪುಟ್ಟ ಬಿರುಕು ಮೂಡಿಸುತ್ತವೆ. ಈ ಬಿರುಕು ದೊಡ್ಡದಾಗಿ ವಿಚ್ಚೇದನದತ್ತ ವಾಲಲು ಹೆಚ್ಚು ಸಮಯ ಬೇಕಾಗಿಲ್ಲ.

ದೂರವಿರುವ ಮೂಲಕ ವಿಚ್ಛೇದನಕ್ಕೆ ಪ್ರೇರಣೆ

ದೂರವಿರುವ ಮೂಲಕ ವಿಚ್ಛೇದನಕ್ಕೆ ಪ್ರೇರಣೆ

ದಾಂಪತ್ಯ ಉಳಿಯಲು ಮಾನಸಿಕವಾಗಿ ಪರಸ್ಪರ ಹತ್ತಿರವಿರುವುದು ಅತ್ಯಗತ್ಯ. ಪರಿಸ್ಥಿತಿಗೆ ಅನುಗುಣವಾಗಿ ಗಂಡ ಒಂದು ಊರಿನಲ್ಲಿದ್ದು ಹೆಂಡತಿ ಇನ್ನೊಂದು ಊರಿನಲ್ಲಿದ್ದರೂ ಸುಖದಾಂಪತ್ಯವನ್ನು ನಡೆಸಿಕೊಂಡು ಬರುತ್ತಿರುವ ಲಕ್ಷಾಂತರ ಕುಟುಂಬಗಳು ಭಾರತದಲ್ಲಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೂರವಿರುವ ಮೂಲಕ ವಿಚ್ಛೇದನಕ್ಕೆ ಪ್ರೇರಣೆ

ದೂರವಿರುವ ಮೂಲಕ ವಿಚ್ಛೇದನಕ್ಕೆ ಪ್ರೇರಣೆ

ಆದರೆ ಖ್ಯಾತನಾಮರ ಮಟ್ಟಿಗೆ ದೂರವಿರುವ ಮೂಲಕ ಇಬ್ಬರಿಗೂ ಪರಸ್ಪರರ ಹೊರತಾಗಿ ಇತರ ಆಕರ್ಷಣೆಗೆ ಒಳಗಾಗುವ, ಪರಿಣಾಮವಾಗಿ ಬಂಧನ ಸಡಿಲಗೊಳ್ಳುತ್ತಾ ವಿಚ್ಚೇದನದತ್ತ ಸಾಗುವುದು ಖಚಿತವಾಗಿರುವ ಮಾಹಿತಿಯಾಗಿದೆ.

ಹೊಸ ಸಾಂಗತ್ಯಗಳು

ಹೊಸ ಸಾಂಗತ್ಯಗಳು

ಜಗತ್ತಿನಲ್ಲಿ ಬಿಡುಗಡೆಯಾದ ಯಾವುದೇ ಹೊಸವಸ್ತುಗಳು ಮೊದಲಾಗಿ ಖ್ಯಾತನಾಮರಿಗೇ ಲಭ್ಯವಾಗುತ್ತದೆ. ವಸ್ತುಗಳೇ ಆಗಬೇಕೆಂದಿಲ್ಲ, ಸೇವೆಗಳು ಮತ್ತು ಆಕರ್ಷಣೆಗಳು ಸಹಾ ಇವರಿಗೇ ಮೊದಲು ಲಭ್ಯವಾಗುತ್ತದೆ. ಈ ಆಕರ್ಷಣೆಗಳು ಕ್ರಮೇಣ ಸಂಗಾತಿಯರಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ, ಇದರಿಂದ ದಾಂಪತ್ಯ ಸೊರಗುತ್ತದೆ.

ಕಳೆದುಕೊಳ್ಳಲಿಚ್ಛಿಸದ ಅಹಮ್ಮಿಕೆ, ಪ್ರತಿಷ್ಠೆ

ಕಳೆದುಕೊಳ್ಳಲಿಚ್ಛಿಸದ ಅಹಮ್ಮಿಕೆ, ಪ್ರತಿಷ್ಠೆ

ಪುರುಷರಿಗಿರುವ ಅಹಮ್ಮಿಕೆಯನ್ನು ಸಹಿಸಿಕೊಳ್ಳುವುದೇ ಯಾವುದೇ ವಿವಾಹಿತ ಮಹಿಳೆ ಎದುರಿಸಬೇಕಾದ ಕಠಿಣ ಸವಾಲಾಗಿದೆ. ಸಾಮಾನ್ಯವಾಗಿ ಭಾರತೀಯ ಮಹಿಳೆಯರು ತಮ್ಮ ಪತಿಯ ಮನೆಯ ಪರಿಸ್ಥಿತಿಗೆ ಅನುಗುಣವಾಗಿ ತನ್ನನ್ನು ಬದಲಿಸಿಕೊಳ್ಳುವ ಮೂಲಕ ಆ ಮನೆಯ ಸದಸ್ಯರೊಂದಿಗೆ ಹೊಂದಿಕೊಳ್ಳುವುದರಿಂದಲೇ ವಿಶ್ವಕ್ಕೇ ಭಾರತ ಮಾದರಿಯಾಗಿದೆ. ಆದರೆ ಖ್ಯಾತನಾಮರ ಸಂಗಾತಿಯರೂ ಸರಿಸಮನಾಗಿಯೇ ಇರುವ ಕಾರಣ ಇವರು ಪತಿಗಾಗಲಿ, ಪತಿಯ ಮನೆಯವರಿಗಾಗಲಿ ತಮ್ಮನ್ನು ಬದಲಿಸಿಕೊಳ್ಳಲು ಇಚ್ಛಿಸುವುದಿಲ್ಲ.

ಕಳೆದುಕೊಳ್ಳಲಿಚ್ಛಿಸದ ಅಹಮ್ಮಿಕೆ, ಪ್ರತಿಷ್ಠೆ

ಕಳೆದುಕೊಳ್ಳಲಿಚ್ಛಿಸದ ಅಹಮ್ಮಿಕೆ, ಪ್ರತಿಷ್ಠೆ

ಅಲ್ಲದೇ ಇವರ ದೈನಂದಿನ ಚಟುವಟಿಕೆಗಳೂ ಮನೆಯವರ ಇಚ್ಛೆಯಂತೆ ಇರುವುದಿಲ್ಲ. ಪರಿಸ್ಥಿತಿ ನಿಧಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆಯೇ ತನ್ನಿಂದ ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಪರಿಗಣಿಸುವ ಮಹಿಳೆ ಈ ಸಂಬಂಧದಿಂದ ಹೊರಬರುವತ್ತ ಯೋಚನೆ ಮಾಡತೊಡಗುತ್ತಾಳೆ.

ತಮ್ಮ ಕಾರ್ಯಕ್ಷೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆದಾಗ

ತಮ್ಮ ಕಾರ್ಯಕ್ಷೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆದಾಗ

ಖ್ಯಾತನಾಮನಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಿ ಗೆದ್ದು ಬಂದವರಿಗೆ ತಮ್ಮ ಕಾರ್ಯಕ್ಷೇತ್ರವೇ ಎಲ್ಲವೂ ಆಗಿರುತ್ತದೆ. ಇದಕ್ಕಾಗಿ ಅವರು ತಮ್ಮ ಸಂಗಾತಿಗಳನ್ನೇ ಕಡೆಗಣಿಸಲು ಸಿದ್ದರಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಮ್ಮ ಕಾರ್ಯಕ್ಷೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆದಾಗ

ತಮ್ಮ ಕಾರ್ಯಕ್ಷೇತ್ರವೇ ಹೆಚ್ಚಿನ ಪ್ರಾಮುಖ್ಯತೆ ಪಡೆದಾಗ

ಉದಾಹರಣೆಗೆ ಪತ್ನಿಯ ಹುಟ್ಟುಹಬ್ಬದ ದಿನವೂ ಕೆಲಸದ ನೆವ ತೆಗೆದು ಹೊರಗೇ ಇರುವುದು, ಮನೆ ತಲುಪಿದ ಬಳಿಕ ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆಯುವ ಮೂಲಕ ದಾಂಪತ್ಯದಲ್ಲಿ ಬಿರುಕು ಉಂಟಾಗುತ್ತದೆ. ಇದೇ ವೇಳೆ ಕೆಲಸಕ್ಕಿಂತಲೂ ತಮ್ಮ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಸಾಮಾನ್ಯ ಜನರ ವಿವಾಹಗಳು ಹೆಚ್ಚು ಯಶಸ್ವಿಯಾಗುತ್ತವೆ.

ಹೆಚ್ಚಿನ ವಯಸ್ಸಿನ ಅಂತರ

ಹೆಚ್ಚಿನ ವಯಸ್ಸಿನ ಅಂತರ

ಕೆಲವರಿಗೆ ವಯಸ್ಸು ಎಂದರೆ ಕೇವಲ ಒಂದು ಅಂಕೆಯೇ ಹೊರತು ಜೀವನದ ಪಕ್ವತೆಯಲ್ಲ. ಅಂತೆಯೇ ಅತಿ ಹೆಚ್ಚು ವಯಸ್ಸಿನ ಅಂತರವಿರುವ ಪತಿ ಪತ್ನಿಯರಲ್ಲಿ ಒಬ್ಬರು ಅಥವಾ ಇಬ್ಬರು ಖ್ಯಾತನಾಮರಾಗಿದ್ದರೆ ಜೀವನದ ಪಕ್ವತೆಯ ಕಾರಣ ಜೀವನವನ್ನು ನೋಡುವ ದೃಷ್ಟಿಕೋನ ಬೇರೆಬೇರೆಯಾಗಿರುತ್ತದೆ. ಇದು ನಿಧಾನವಾಗಿ ಬಂಧನದಲ್ಲಿ ಬಿರುಕು ಮೂಡಿಸುತ್ತದೆ.

English summary

Why are Celebrity Marriages failing right now?

In India, there has been a sudden increase in the divorce rates and the numbers are just astonishing. The main people who add up to the numbers are none other than our famous and very interesting celebrities. From around the world too, the divorce rate has been extremely high, which leaves us with a common question, what is the real reason behind the failure of a marriage?
Story first published: Tuesday, March 1, 2016, 12:18 [IST]
X
Desktop Bottom Promotion