For Quick Alerts
ALLOW NOTIFICATIONS  
For Daily Alerts

  ಅತಿಯಾದ ಆತ್ಮವಿಶ್ವಾಸ-ಕೊನೆಗೆ ಆಸ್ಪತ್ರೆ ಸೇರಿಕೊಂಡರು!

  By Manu
  |

  ಜಗತ್ತಿನಲ್ಲಿ ವಿಚಿತ್ರಗಳು ಯಾವಾಗಲು ನಡೆಯುತ್ತಿರುತ್ತವೆ, ಕೆಲವೊಂದು ನಗುವನ್ನು ತರಿಸಿದರೆ, ಕೆಲವೊಂದು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುತ್ತವೆ. ಒಂದು ಮಾತಿದೆ ಅಪಘಾತ ಮಾಡಿಕೊಂಡವನು ಬದುಕುಳಿದು ಬಿಡುತ್ತಾನೆ. ಎಡವಿ ಬಿದ್ದವನು ಸತ್ತು ಹೋಗುತ್ತಾನೆ ಎಂದು.

  ಕೆಲವರ ಜೀವನದಲ್ಲಿ ಇದು ನಿಜವಾಗುತ್ತದೆ. ಸಾವು ಮತ್ತು ಆಪತ್ತು ಎಷ್ಟು ವಿಚಿತ್ರವಾಗಿ ಬರುತ್ತದೆ ಎಂದರೆ ಯಾರೂ ಊಹಿಸಿ ಸಹ ನೋಡಿರುವುದಿಲ್ಲ. ಇಂದು ನಾವು ನಿಮ್ಮೊಂದಿಗೆ ಇಂತಹ ಕೆಲವೊಂದು ವಿಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇವೆ. ನೀವು ಸಹ ನೋಡಿ, ನಿಬ್ಬೆರಗಾಗುವಂತಹ ಅಂಶಗಳು ಇಲ್ಲಿವೆ. ಕಲ್ಪನೆಗೆ ನಿಲುಕದ, ನೆನೆಸಿಕೊಂಡರೆ ಮೈ ನಡುಗುವಂತಹ ಕೆಲವೊಂದು ಸಂದರ್ಭಗಳು ಹೇಗೆ ನಡೆದವು ಎಂಬುದನ್ನು ನೋಡೋಣ ಬನ್ನಿ.

  ಎಚ್ಚರ! ಈ ದೃಶ್ಯಗಳನ್ನು ನೋಡಿದ ಮೇಲೂ ಸಹ ನೀವು ನಿಮ್ಮ ಹುಷಾರಿನಲ್ಲಿ ಇರದೆ ಇದ್ದಲ್ಲಿ, ಅದಕ್ಕೆ ನಾವು ಜವಾಬ್ದಾರರಲ್ಲ, ಇಂತಹ ಘಟನೆಗಳು ನಡೆಯದೆ ಇದ್ದರೆ ಸಾಕು ಎಂದು ನೀವು ಸಹ ಅಂದುಕೊಳ್ಳುತ್ತೀರಿ...

  ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡ ಸವಾರ

  ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡ ಸವಾರ

  ಬೈಕ್‌ನಲ್ಲಿ ನನಗಿಂತ ಬುದ್ಧಿವಂತ ಯಾರೂ ಇಲ್ಲ ಎಂದುಕೊಂಡು ಶಾರ್ಟ್‌ಕಟ್‌ನಲ್ಲಿ ಬಂದ ಭೂಪನೊಬ್ಬ ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡನು. ರಕ್ಷಣೆಗೆ ಧಾವಿಸಿದ ಸಿಬ್ಬಂದಿ ಅವನನ್ನು ಮೋಟಾರ್ ಬೈಕಿನಿಂದ ಬೇರ್ಪಡಿಸಲು, ಸ್ವಲ್ಪ ದೇಹದ ಭಾಗವನ್ನು ಕತ್ತರಿಸಬೇಕಾಯಿತು. ಅವನ ಎರಡೂ ಕಾಲುಗಳಿಗೆ ಇದರಿಂದ ಮೂಳೆ ಮುರಿತವುಂಟಾಯಿತು. Image courtesy

  ತಪ್ಪಿಸಿಕೊಂಡ ಕಳ್ಳ, ಮೊಳೆಗೆ ಸಿಕ್ಕಿಹಾಕಿಕೊಂಡ

  ತಪ್ಪಿಸಿಕೊಂಡ ಕಳ್ಳ, ಮೊಳೆಗೆ ಸಿಕ್ಕಿಹಾಕಿಕೊಂಡ

  ಇದು ಮೂರ್ಖತನದ ಪರಮಾವಧಿ, ಕಳ್ಳತನ ಮಾಡಿಕೊಂಡು ಗೋಡೆ ಹಾರಲು ಹೋದ ಕಳ್ಳ, ಅದರಲ್ಲಿದ್ದ ಆರು ಇಂಚಿನ ಮೊಳೆಗೆ ಕಾಲು ಸಿಕ್ಕಿಸಿಕೊಂಡು ನೇತಾಡಿದ. ಇವನ ಕಷ್ಟಕ್ಕೆ ಧಾವಿಸಿದ ಪೋಲಿಸರು, ಇವನನ್ನು ಅಲ್ಲಿಂದ ಬಿಡಿಸಿ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಜೈಲಿಗೆ ತಳ್ಳಿದರು. Image courtesy

  ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡ ಸವಾರ

  ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡ ಸವಾರ

  ಬೈಕ್‌ನಲ್ಲಿ ನನಗಿಂತ ಬುದ್ಧಿವಂತ ಯಾರೂ ಇಲ್ಲ ಎಂದುಕೊಂಡು ಶಾರ್ಟ್‌ಕಟ್‌ನಲ್ಲಿ ಬಂದ ಭೂಪನೊಬ್ಬ ಗೋಡೆ ಮತ್ತು ಕಂಬದ ನಡುವೆ ಸಿಕ್ಕಿ ಹಾಕಿಕೊಂಡನು. ರಕ್ಷಣೆಗೆ ಧಾವಿಸಿದ ಸಿಬ್ಬಂದಿ ಅವನನ್ನು ಮೋಟಾರ್ ಬೈಕಿನಿಂದ ಬೇರ್ಪಡಿಸಲು, ಸ್ವಲ್ಪ ದೇಹದ ಭಾಗವನ್ನು ಕತ್ತರಿಸಬೇಕಾಯಿತು. ಅವನ ಎರಡೂ ಕಾಲುಗಳಿಗೆ ಇದರಿಂದ ಮೂಳೆ ಮುರಿತವುಂಟಾಯಿತು. Image courtesy

  ಚಿಮಣಿಯಲ್ಲಿ ಸಿಕ್ಕಿಕೊಂಡ ಚೆಲುವೆ

  ಚಿಮಣಿಯಲ್ಲಿ ಸಿಕ್ಕಿಕೊಂಡ ಚೆಲುವೆ

  ಇದಪ್ಪಾ ತಮಾಷೆಯೆಂದರೆ, ತನ್ನ ಹಳೆಯ ಬಾಯ್‌ಫ್ರೆಂಡ್ ಇದ್ದಕ್ಕಿದ್ದಂತೆ ಬೆಳ್ಳಂಬೆಳಗ್ಗೆ ಕನಸಿನಲ್ಲಿ ಬಂದಿರಬಹುದು. ಆಗ ಆಕೆ ಸೀದಾ ಅವನ ಮನೆಗೆ ಹೋದಾಗ, ಬಾಗಿಲು ಹಾಕಿತ್ತಂತೆ! ದಾರಿ ಕಾಣದೆ ಆಕೆ ಅವನ ಮನೆಯ ಚಿಮಣಿಯಿಂದ ಇಳಿದು ಸರ್‌ಪ್ರೈಸ್ ಮಾಡೋಣ ಎಂದುಕೊಂಡರೆ, ಚಿಮಣಿ ಆಕೆಯನ್ನು ಸರ್‌ಪ್ರೈಸ್ ಮಾಡಿಬಿಟ್ಟಿತು. ಚಿಮಣಿಯಲ್ಲಿ ಸಿಕ್ಕಿಕೊಂಡ ಆಕೆಯನ್ನು ಬಿಡಿಸಲು, ರಕ್ಷಣಾ ಸಿಬ್ಬಂದಿ ಬರಬೇಕಾಯಿತು. Image courtesy

  ನೀರಿನ ಪೈಪಿನಲ್ಲಿ ತಲೆ ಸಿಕ್ಕಿಸಿಕೊಂಡ ಬಾಲಕ

  ನೀರಿನ ಪೈಪಿನಲ್ಲಿ ತಲೆ ಸಿಕ್ಕಿಸಿಕೊಂಡ ಬಾಲಕ

  ತುಂಟತನ ಮಕ್ಕಳಿಗಲ್ಲದೆ ಯಾರಿಗೆ ಬರುತ್ತದೆ. ಐದು ವರ್ಷದ ಬಾಲಕನೊಬ್ಬ ಚೀನಾದಲ್ಲಿ ನೀರಿನ ಪೈಪನ್ನು ಕಿರೀಟದಂತೆ ಇಟ್ಟುಕೊಳ್ಳಲು ಹೋಗಿ ಅದರಲ್ಲಿ ತನ್ನ ತಲೆಯನ್ನು ಸಿಕ್ಕಿಸಿಕೊಂಡನು. ಮೊದಲು ಪ್ರಯತ್ನಿಸಿ ಸೋತಿದ್ದನಂತೆ, ನಂತರದ ಪ್ರಯತ್ನದಲ್ಲಿ ಗೆದ್ದು ಆಸ್ಪತ್ರೆಯ ಪಾಲಾದನು. Image Courtesy

  ಕ್ಲಾ ಮಷಿನ್‌ನಲ್ಲಿ ಸಿಕ್ಕಿಕೊಂಡ ಬಾಲಕಿ

  ಕ್ಲಾ ಮಷಿನ್‌ನಲ್ಲಿ ಸಿಕ್ಕಿಕೊಂಡ ಬಾಲಕಿ

  ಮೆಲಿಸಾ ಏಂಜೆಲ್ ವಿಲ್ಕರ್‌ಸನ್ ಎಂಬ ಆರು ವರ್ಷದ ಬಾಲಕಿ, ಕೆಲವೊಂದು ಸಣ್ಣ ಆಟದ ಸಾಮಾನುಗಳನ್ನು ತೆಗೆದುಕೊಡುವಂತೆ ಅಪ್ಪ-ಅಮ್ಮನನ್ನು ಕೇಳಿದಳಂತೆ. ಅವರು ತುಂಬಾ ಬ್ಯುಸಿಯಾಗಿದ್ದಾಗ, ಈಕೆಯೇ ಖುದ್ದಾಗಿ ಯಂತ್ರದ ಮೇಲೆ ಹತ್ತಿದಾಗ ಆಕಸ್ಮಿಕವಾಗಿ ಅದರೊಳಗೆ ಬಿದ್ದು ಬಿಟ್ಟಳಂತೆ. ಪುಣ್ಯಕ್ಕೆ ಆಕೆಗೆ ಏನೂ ಆಗಲಿಲ್ಲ. Image courtesy

  ಏರ್-ಕಂಡೀಶನಿಂಗ್ ವೆಂಟ್‌ನಲ್ಲಿ ಸಿಕ್ಕಿಹಾಕಿಕೊಂಡ ಆಸಾಮಿ

  ಏರ್-ಕಂಡೀಶನಿಂಗ್ ವೆಂಟ್‌ನಲ್ಲಿ ಸಿಕ್ಕಿಹಾಕಿಕೊಂಡ ಆಸಾಮಿ

  ಕಳ್ಳನೊಬ್ಬ ಏರ್-ಕಂಡೀಶನಿಂಗ್ ವೆಂಟ್‌ನಲ್ಲಿ ನುಸುಳಿ ಪಾರಾಗಲು ಹೋದಾಗ ಆತ ಅಲ್ಲಿ ಸಿಕ್ಕಿಹಾಕಿಕೊಂಡನಂತೆ. ಇವನು ಬರೀ ಒಳ ಉಡುಗೆಯಲ್ಲಿದ್ದ ಕಾರಣಕ್ಕೆ ಪೋಲಿಸರಿಗೆ ಅವನನ್ನು ಹಿಡಿಯಲು ಮುಜುಗರವಾಯಿತಂತೆ. Image courtesy

  ಕಂಬಕ್ಕೆ ನೇತಾಡಿದ ಕಾರ್

  ಕಂಬಕ್ಕೆ ನೇತಾಡಿದ ಕಾರ್

  ಕಾರೊಂದು ಕಾರು ಬಾರು ಮಾಡಲು ಹೋಗಿ ವಿದ್ಯುತ್ ಕಂಬಕ್ಕೆ ನೇತಾಡಿಬಿಟ್ಟ ಕತೆ ಇದು. ಡ್ರೈವರ್ ಸಮೇತ್ ವೇಗವಾಗಿ ಬಂದ ಕಾರೊಂದು, ಎಂಟು ಅಡಿ ಎತ್ತರಕ್ಕೆ ಏರಿ ವಿದ್ಯುತ್ ಕಂಬಕ್ಕೆ ನೇತಾಡತೊಡಗಿತು. ಎರಡು ಗಂಟೆಗಳ ನಂತರ ಡ್ರೈವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಕಾರು ಹಾನಿಗೊಂಡಿತು. Image courtesy

   

  English summary

  Bizarre Ways Of People Getting Stuck In Weird Places

  Trouble can happen anywhere and at any time. It is something that most of us do not wish to get into. But, what if you are trying to do something nasty or crazy while you get stuck into trouble?! Well, yes, in this article, we are here to share about the most bizarre ways of people getting stuck in weird and odd places.Read on to know more about these interesting places where people have been caught totally stuck.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more