Latest Updates
-
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ
ಹಣ ಒಂದಿದ್ದರೆ ಸಾಕು, ಜಗತ್ತೇ ನಮ್ಮ ಕೈಯಲ್ಲಿ!
ಇಂದಿನ ದಿನಗಳಲ್ಲಿ ಧನಸಂಪತ್ತೇ ನಿಜವಾದ ಸಂಪತ್ತು ಎಂದು ಹೆಚ್ಚಿನವರು ನಂಬಿದ್ದಾರೆ. ಒಂದರ್ಥದಲ್ಲಿ ಇದು ನಿಜವೂ ಸಹಾ. ಏಕೆಂದರೆ ಜೀವನವನ್ನು ಸುಖಮಯವಾಗಿಸಿರುವ ಸವಲತ್ತುಗಳು ಲಭ್ಯವಾಗುವುದು ಧನದಿಂದಲೇ! ಹಣವನ್ನಾಧರಿಸಿದ ವ್ಯವಸ್ಥೆಯಿಂದ ಒಬ್ಬರು ಅತಿ ಶ್ರೀಮಂತರಾಗಿದ್ದರೆ ಉಳಿದವರು ಸಾಮಾನ್ಯಜೀವನವನ್ನು ನಡೆಸುತ್ತಾರೆ. ಆದರೆ ಧರ್ಮಗ್ರಂಥಗಳ ಪ್ರಕಾರ ನಿಜವಾದ ಸಂಪತ್ತು ಐಶ್ವರ್ಯವಲ್ಲ, ನೆಮ್ಮದಿ ಮತ್ತು ಜ್ಞಾನವಾಗಿದೆ. ಆದ್ದರಿಂದಲೇ ಪುರಾಣಗಳಲ್ಲಿ ಕುಬೇರನಲ್ಲಿ ಯಾವುದೇ ವಿದ್ಯೆ ಅಥವಾ ನಿಪುಣತೆ ಇಲ್ಲದ್ದರಿಂದಲೇ ಧನಸಂಪತ್ತನ್ನು ನೀಡಲಾಯಿತು ಎಂದು ಹೇಳಲಾಗಿದೆ.
ಧನಸಂಪಾದನೆ ಎಷ್ಟು ಮುಖ್ಯವೋ ಅಷ್ಟೇ ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳುವುದೂ ಆಗಿದೆ. ಆರ್ಥಿಕತಜ್ಞರ ಪ್ರಕಾರ ನೀವು ಗಳಿಸಿದ ಧನದಲ್ಲಿ ಒಂದು ಪಾಲನ್ನು ನಿಯಮಿತವಾಗಿ ಉಳಿಸುತ್ತಾ ಬರುವ ಶಿಸ್ತನ್ನು ಮೂಡಿಸಿಕೊಂಡರೆ ಜೀವನ ಸುಲಲಿತವಾಗುತ್ತದೆ. ಇದಕ್ಕವರು ಆರ್ಥಿಕ ಶಿಸ್ತು ಎಂದು ಕರೆಯುತ್ತಾರೆ. ಇದು ನಾಳೆಯ ನೆಮ್ಮದಿಗೆ ಇಂದಿನ ಅಡಿಪಾಯವಾದರೆ ಇಂದಿನ ನೆಮ್ಮದಿಗೆ ಇಂದು ನಾವು ಹೇಗೆ ನಮ್ಮ ಆದಾಯವನ್ನು ಬಳಸಿಕೊಳ್ಳುತ್ತಿದ್ದೇವೆ ಎನ್ನುವುದು ಮುಖ್ಯ. ಹಣ ಉಳಿತಾಯದ ಅಭಿಯಾನಕ್ಕಾಗಿ 5 ಸೂಕ್ತ ಸಲಹೆಗಳು
ಉದಾಹರಣೆಗೆ ಪ್ರಖ್ಯಾತ ಹೋಟೆಲೊಂದರಲ್ಲಿ ಇಬ್ಬರು ಊಟ ಮಾಡಿ ಸಾವಿರ ರೂಪಾಯಿ ಖರ್ಚು ಮಾಡಿದುದನ್ನು ಹೆಮ್ಮೆಯಿಂದ ಮನೆಯ ಹಿರಿಯರಿಗೆ ತಿಳಿಸಿದರೆ ಅವರಿಂದ ಈ ಪ್ರತ್ಯುತ್ತರ ಬರುತ್ತದೆ:"ಇದರ ಬದಲಿಗೆ ಸಾಮಾನ್ಯ ಹೋಟೆಲಿನಲ್ಲಿ ಈ ದುಡ್ಡಿನಲ್ಲಿ ಹತ್ತು ಜನರಿಗೆ ಊಟ ಹಾಕಿಸಬಹುದಿತ್ತು" ಅಂದರೆ ದೊಡ್ಡ ಹೋಟೆಲಿನ ದೊಡ್ಡ ಬಿಲ್ ನಿಮ್ಮಲ್ಲಿ ನೆಮ್ಮದಿಯ ಭಾವ ಮೂಡಿಸಿದರೆ ಅದೇ ನಿಮ್ಮ ಹಿರಿಯರ ದೃಷ್ಟಿಯಲ್ಲಿ ದುಂದುವೆಚ್ಚವಾಗಿದ್ದು ಇದರಲ್ಲಿ ಹಸಿದವರಿಗೆ ಉಣಿಸಿದ್ದರೆ ನೆಮ್ಮದಿ ಇರುತ್ತಿತ್ತು.
ಅಂತೆಯೇ ಹಣವನ್ನು ಖರ್ಚು ಮಾಡುವಾಗ ಅದರಲ್ಲೊಂದು ನೆಮ್ಮದಿಯ ಭಾವ ಇರಬೇಕು. ಯಾರಿಗಾದರೂ ಸಹಾಯ ಮಾಡಿದ ತೃಪ್ತಿ, ನಮ್ಮ ಹಣದ ಸದುಪಯೋಗವಾದ ಅನುಭಾವ ಮೂಡಬೇಕು. ಆಗಲೇ ನಮ್ಮ ಹಣಕ್ಕೆ ನಿಜವಾದ ಮೌಲ್ಯ ದೊರಕುತ್ತದೆ. "ಹಣ ಔಷಧವನ್ನು ಕೊಳ್ಳಬಹುದು, ಆರೋಗ್ಯವನ್ನಲ್ಲ, ಹಣ ಸವಲತ್ತನ್ನು ಕೊಳ್ಳಬಹುದು ನೆಮ್ಮದಿಯನ್ನಲ್ಲ...." ಎಂಬ ಹಲವು ಉಕ್ತಿಗಳಿವೆ. ಇವೆಲ್ಲಾ ನಿಜ. ಆದರೆ ಹಣವನ್ನು ನಿಜವಾದ ರೂಪದಲ್ಲಿ ವಿನಿಯೋಗಿಸಿದಾಗ ಮಾತ್ರ ಅದರ ನಿಜವಾದ ಸಂತೋಷ ದೊರಕುತ್ತದೆ. ಇಂತಹ ಹತ್ತು ಕೊಂಚ ವಿಚಿತ್ರವಾದರೂ ಸಂತೋಷ ನೀಡುವ ವಿಷಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತಾಪಿಸಲಾಗಿದೆ.

ಉಡುಗೊರೆ ನೀಡುವುದು
ಸಾಮಾನ್ಯವಾಗಿ ಮಕ್ಕಳು ಅತಿ ಹೆಚ್ಚಾಗಿ ಉಡುಗೊರೆಗಳನ್ನು ನಿರೀಕ್ಷಿಸುತ್ತಾರೆ. ಏಕೆಂದರೆ ಹಿರಿಯರ ಬಳಿ ಇದ್ದಷ್ಟು ವಸ್ತುಗಳು ಅವರಲ್ಲಿರುವುದಿಲ್ಲ. ಆದರೆ ಇವುಗಳನ್ನು ಹೊಂದುವ ಬಯಕೆ ಮಾತ್ರ ಇರುತ್ತದೆ. ಹುಟ್ಟಿದ ಹಬ್ಬ, ಪ್ರಮುಖ ಹಬ್ಬಗಳು, ಕುಟುಂಬದ ಹಿರಿಯರು ಪರವೂರಿನಿಂದ ಬಂದಿರುವುದು, ವಿದೇಶದಿಂದ ನೆಂಟರಿಷ್ಟರು ಆಗಮಿಸಿರುವುದು ಅವರಲ್ಲಿ ಉಡುಗೊರೆಯ ಬಯಕೆಯನ್ನು ಹೆಚ್ಚಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಹಿರಿಯರೂ ಉಡುಗೊರೆಯ ನಿರೀಕ್ಷೆಯಲ್ಲಿಯೇ ಇರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಡುಗೊರೆ ನೀಡುವುದು
ಈ ನಿರೀಕ್ಷೆಯನ್ನು ಹುಸಿಯಾಗಿಸದೇ ಯಾವುದಾದರೂ ಉಡುಗೊರೆ ನೀಡಿದಾಗ ಅವರು ಪಡುವ ಸಂಭ್ರಮ, ಹರ್ಷ ಆ ಉಡುಗೊರೆಗೆ ವಿನಿಯೋಗಿಸಿದ ಹಣಕ್ಕೆ ಸಾರ್ಥಕ ಭಾವನೆಯನ್ನು ಮೂಡಿಸುತ್ತದೆ. ಇನ್ನು ವಿಚಿತ್ರವೆಂದರೆ ಯಾವುದಾದರೂ ಕೆಲಸ ಮಾಡಲು ಸ್ವಪ್ರೇರಣೆ ನೀಡಲು ತಮಗೆ ತಾವೇ ಉಡುಗೊರೆ ಕೊಟ್ಟುಕೊಳ್ಳುವುದು. ಇದು ಎಂತೆಂಥಾ ದೊಡ್ಡದೊಡ್ಡ ಪವಾಡಗಳನ್ನೇ ಸಾಧ್ಯವಾಗಿಸಿದೆ. ಯಾವಾಗಲು ಢುಮ್ಕಿ ಹೊಡೆಯುತ್ತಿದ್ದ ಸ್ನೇಹಿತರೊಬ್ಬರು ಎಂಬಿಎ ಓದಿ ಪಾಸಾದರೆ ಐಫೋನ್ ಕೊಂಡುಕೊಳ್ಳುವೆ ಎಂದು ತಮಗೆ ತಾವೇ ಹೇಳಿಕೊಂಡಿದ್ದ ಪರಿಣಾಮವಾಗಿ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆಯಾಗಿದ್ದಾರೆ (ಐಫೋನ್ ಸಹಾ ಕೊಂಡಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ)

ಧರ್ಮಾರ್ಥ ಸಂಸ್ಥೆಗಳಿಗೆ ನೆರವಾಗುವುದು
ಜಗತ್ತಿನಲ್ಲಿ ನೂರಾರು ಧರ್ಮಾರ್ಥ ಸಂಸ್ಥೆಗಳಿವೆ. ರೆಡ್ ಕ್ರಾಸ್, ಯೂನಿಸೆಫ್ ಮೊದಲಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತಾದರೆ ಇನ್ನೂ ಕೆಲವು ರಾಷ್ಟ್ರಮಟ್ಟದಲ್ಲಿ, ರಾಜ್ಯ, ಅಷ್ಟೇ ಏಕೆ ಒಂದು ಪುಟ್ಟ ಊರಿನಲ್ಲಿಯೂ ಒಂದು ಒಳ್ಳೆಯ ಕಾರ್ಯದ ಉದ್ದೇಶದಿಂದ ಪ್ರಾರಂಭವಾಗಿರುವ ಸಂಸ್ಥೆಗಳಿವೆ. ಉದಾಹರಣೆಗೆ ವಿಶೇಷ ಆದ್ಯತೆಯುಳ್ಳ ಮಕ್ಕಳ ಶಾಲೆಯೊಂದು ಉಡುಪಿ ಜಿಲ್ಲೆಯ ಶಿರೂರಿನಲ್ಲಿದೆ. (ದೀನಾ ವಿಶೇಷ ಮಕ್ಕಳ ಶಾಲೆ).

ಧರ್ಮಾರ್ಥ ಸಂಸ್ಥೆಗಳಿಗೆ ನೆರವಾಗುವುದು
ಇಂತಹ ಯಾವುದೇ ಸಂಸ್ಥೆಗೆ ನೀಡುವ ಧನಸಹಾಯ ಆ ಉದ್ದೇಶಕ್ಕೆ ಸದ್ಬಳಕೆಯಾಗುವ ಖಾತರಿಯಿಂದ ಮನಕ್ಕೆ ಅಪಾರವಾದ ನೆಮ್ಮದಿ ದೊರಕುತ್ತದೆ. ಇದರ ನೆರವನ್ನು ಪಡೆದವರು ನೀಡುವ ಆಶೀರ್ವಾದ ಮತ್ತು ಹಾರೈಕೆಗಳು ಎಂದಿಗೂ ನಿಮ್ಮ ಜೀವನದಲ್ಲಿ ಸುಖ ಮತ್ತು ನೆಮ್ಮದಿಯನ್ನೇ ತರುತ್ತವೆ.

ಹಿಂದಿನ ಕಾರಿಗೆ ಸುಂಕ ತೆರುವುದು!
ಹೆದ್ದಾರಿಗಳಲ್ಲಿ ವಿಧಿಸುವ ವಾಹನಗಳ ಸುಂಕ ತೆರುವುದು ಒಂದರ್ಥದಲ್ಲಿ ಆ ರಸ್ತೆಯ ನಿರ್ಮಾಣಕ್ಕೆ ನೀಡಿದ ಸಹಾಯವೆಂದೇ ಪರಿಗಣಿತವಾಗುತ್ತದೆ. ಸುಂಕ ತೆರುವ ಮೂಲಕ ಧನ್ಯತಾಭಾವವನ್ನು ಪಡೆದವರು ಒಂದು ವೇಳೆ ತಮ್ಮ ಹಿಂದಿನ ವಾಹನದ ಸುಂಕವನ್ನೂ ತೆರುವ ಮೂಲಕ ಪಡೆಯುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲಾಗದು. ಏಕೆಂದರೆ ನಿಮ್ಮಿಂದ ಪ್ರಾರಂಭವಾದ ಉತ್ತಮ ಕಾರ್ಯ ಮುಂದುವರೆಯುವ ಭರವಸೆ ನಿಮಗಿರುತ್ತದೆ. ನಿಮ್ಮಿಂದ ಸಹಾಯ ಪಡೆದವರು ಮುಂದೆ ಇನ್ನೊಬ್ಬರಿಗೂ ಸಹಾಯ ಮಾಡುವರು, ಅವರು ಇನ್ನೊಬ್ಬರಿಗೆ, ಅಂತೆಯೇ ಜಗತ್ತು ಒಬ್ಬರಿಂದಿನ್ನೊಬ್ಬರ ಸಹಕಾರದಿಂದ ಸುಖಮಯವಾಗುವುದು ಎಂಬ ಯೋಚನೆಯೇ ನಿಮಗೆ ಅಪಾರ ನೆಮ್ಮದಿ ನೀಡುತ್ತದೆ.

ಭವಿಷ್ಯಕ್ಕಾಗಿ ಹಣ ಹೂಡುವುದು
ಸಾಮಾನ್ಯವಾಗಿ ಭಾರತೀಯರು ನಾಳೆಗಳಲ್ಲಿ ಬದುಕುತ್ತಾರೆ ಎಂದು ವಿದೇಶೀಯರು ಲೇವಡಿ ಮಾಡುತ್ತಾರೆ. ಏಕೆಂದರೆ ನಾಳೆಗಾಗಿ ಉಳಿಸಿಡುವುದು ನಮ್ಮ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವಂತಹ ಪ್ರಜ್ಞೆ. ಏಕೆಂದರೆ ವೃದಾಪ್ಯದಲ್ಲಿ ನಮಗೆ ಆಸರೆ ನೀಡುವ ಯಾವುದಾದರೊಂದು ಆಶ್ರಯವನ್ನು ಯೌವನವಿದ್ದಾಗಲೇ ರೂಪಿಸಿಕೊಳ್ಳುವುದು ಜಾಣತನ.

ಭವಿಷ್ಯಕ್ಕಾಗಿ ಹಣ ಹೂಡುವುದು
ಈ ಜಾಣತನವನ್ನು ಧನದ ಸಮರ್ಪಕ ಹೂಡಿಕೆಯಿಂದ ಸಾಧಿಸಬಹುದು. ವಿದೇಶೀಯರ ದೃಷ್ಟಿಯಲ್ಲಿ ವಿಚಿತ್ರ ಎನಿಸಿದರೂ ನಾಳೆಗಾಗಿ ಯಾವುದಾದರೊಂದು ಸ್ಥ್ರಿರಾಸ್ತಿಯಲ್ಲಿ ಹಣ ಹೂಡುವುದು ಆರ್ಥಿಕ ತಜ್ಞರ ಪ್ರಕಾರ ಸೂಕ್ತವಾದ ನಿರ್ಧಾರವಾಗಿದೆ.

ಕೊಳ್ಳುಬಾಕತನ
ಇತ್ತೀಚೆಗೆ ಜನಪ್ರಿಯತೆಯ ಉತ್ತುಂಗಕ್ಕೇರಿದ ಆನ್ಲೈನ್ ಮಳಿಗೆಗಳ ಯಶಸ್ಸಿಗೆ ಮೂಲವೇನು ಗೊತ್ತೇ? ಅದೇ ಕೊಳ್ಳುಬಾಕತನ. ನಮ್ಮೆಲ್ಲರಲ್ಲಿಯೂ ಕೊಳ್ಳುಬಾಕತನವಿದೆ. ಅಂದರೆ ಯಾವುದೇ ವಸ್ತುವನ್ನು ನಾವು ಇನ್ನೊಬ್ಬರಲ್ಲಿ ಕಂಡರೆ ಅದರ ಅಗತ್ಯವಿದೆಯೋ ಇಲ್ಲವೋ, ಒಟ್ಟಾರೆ ಅದು ನಮಗೆ ಬೇಕಾಗುತ್ತದೆ. ಇದನ್ನು ಮನಗಂಡ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ವಿವಿಧ ರೀತಿಯಲ್ಲಿ ಪ್ರಸ್ತುತಪಡಿಸುತ್ತವೆ. ಆದರೆ ಯಾವುದೇ ಉತ್ಪನ್ನದಲ್ಲಿ ಅಗತ್ಯವಾದ ಕೆಲವು ಸೇವೆಗಳಿದ್ದರೆ ಅನಗತ್ಯವಾದ ದುಪ್ಪಟ್ಟು ಸೇವೆಗಳಿರುತ್ತವೆ. ಒಂದರಲ್ಲಿರುವ ಸೇವೆ ಇನ್ನೊಂದರಲ್ಲಿರುವುದಿಲ್ಲ.

ಕೊಳ್ಳುಬಾಕತನ
ಈ ಸೇವೆಗಳಿರುವ ದುಬಾರಿ ವಸ್ತುಗಳನ್ನು ಕೊಂಡು ಉಪಯೋಗಿಸುವ ಮೂಲಕ ನಾವೆಲ್ಲರೂ ಧನ್ಯತಾಭಾವವನ್ನು ಪಡೆಯುತ್ತೇವೆ. ಆದರೆ ಇದರಲ್ಲಿ ನಮಗೆ ಅನಗತ್ಯವಾದ ಸೇವೆಗಳಿಗೂ ಹಣ ಕೊಟ್ಟಿರುತ್ತೇವೆ ಎಂಬುದನ್ನು ಮರೆತೇ ಬಿಡುತ್ತೇವೆ. ನಾಳೆ ಇನ್ನೊಬ್ಬರ ಕೈಯಲ್ಲಿ ಇದಕ್ಕೂ ಉತ್ತಮ ವಸ್ತು ಕಂಡರೆ ಈಗ ನಮ್ಮಲ್ಲಿರುವ ವಸ್ತು ನಿಕೃಷ್ಟವಾಗಿ ಕಾಣುತ್ತದೆ. ಆ ವಸ್ತು ಬೇಕು ಎಂದು ಮನ ಮಿಡಿಯುತ್ತದೆ. ಆ ವಸ್ತು ಕೊಂಡ ಬಳಿಕ ಈಗಿರುವುದು ಮೂಲೆಗುಂಪಾಗುತ್ತದೆ. ಆದರೆ ಮನ ಹೊಸ ವಸ್ತುವನ್ನು ಪಡೆದ ಧನ್ಯತಾಭಾವ ಪಡೆಯುತ್ತದೆ.

ದುಬಾರಿ ಹೋಟೆಲುಗಳಲ್ಲಿ ಊಟ
ತಿಂಗಳಿಗೊಂದು ಅಥವಾ ಎರಡು ಬಾರಿ ದುಬಾರಿ ಹೋಟೆಲೊಂದರಲ್ಲಿ ಊಟ ಮಾಡುವ ಮೂಲಕವೂ ನಾವು ಹೆಚ್ಚಿನ ಸಂತೃಪ್ತಿಯನ್ನು ಅನುಭವಿಸುತ್ತೇವೆ. ಅದರಲ್ಲೂ ನಮ್ಮ ಪ್ರೀತಿಪಾತ್ರರನ್ನು, ಕುಟುಂಬ ಸದಸ್ಯರನ್ನು, ಜೀವನಸಂಗಾತಿಯಾಗುವವರನ್ನು ದುಬಾರಿ ಹೋಟೆಲು ಅಥವಾ ರೆಸ್ಟೋರೆಂಟುಗಳಲ್ಲಿ ಊಟಕ್ಕೆ ಆಹ್ವಾನಿಸಿದರೇ ನಮಗೆ ತೃಪ್ತಿ.

ಸಿನಿಮಾ ನೋಡುವುದು
ಈಗ ಮನೆಯ ಟೀವಿ, ಕಂಪ್ಯೂಟರುಗಳಲ್ಲಿಯೇ ಅಗ್ಗವಾಗಿ ಅಥವಾ ಉಚಿತವಾಗಿ ಸಿನೆಮಾಗಳು ಲಭ್ಯವಿದ್ದರೂ ತಿಂಗಳಿಗೊಂದರಡಾದರೂ ಚಲನಚಿತ್ರಗಳನ್ನು ದುಬಾರಿ ಹಣ ಕೊಟ್ಟು ಚಿತ್ರಮಂದಿರಗಳಲ್ಲಿ ದೊಡ್ಡ ಪರದೆಯ ಮೇಲೇ ನೋಡುವುದರ ಮೂಲಕ ಧನ್ಯತಾ ಭಾವವನ್ನು ಅನುಭವಿಸುತ್ತೇವೆ. ನಿತ್ಯದ ಜಂಜಾಟಗಳಿಂದ ಕೊಂಚ ಆರಾಮ ಪಡೆಯಲು ಸ್ನೇಹಿತರೊಡನೆ ಅಥವಾ ಏಕಾಂಗಿಯಾದರೂ ಚಲನಚಿತ್ರವನ್ನು ನೀಡುವುದು ಹೆಚ್ಚಿನವರಿಗೆ ಸಂತೋಷ ತರುವ ಸಂಗತಿಯಾಗಿದೆ.

ಚಾಕಲೇಟು ತಿನ್ನುವುದು
ಚಾಕಲೇಟು ತಿನ್ನುವುದು ಮಕ್ಕಳು ಎನ್ನುವ ಕಾಲ ಹೋಯಿತು. ಈಗ ಚಾಕಲೇಟುಗಳು ಸಹಾ ವಿವಿಧ ರೂಪದಲ್ಲಿ ದುಬಾರಿ ಬೆಲೆಯಲ್ಲಿ ದೊರಕುತ್ತಿವೆ. ಇವನ್ನು ತಿನ್ನುವ ಮೂಲಕವೂ ಹೆಚ್ಚಿನವರು ನೆಮ್ಮದಿಯನ್ನು ಅನುಭವಿಸುತ್ತಾರೆ. ಚಾಕಲೇಟಿನಲ್ಲಿರುವ ಪೋಷಕಾಂಶಗಳ ಕಾರಣ ಮೆದುಳು ಖಿನ್ನತೆಯಿಂದ ದೂರವಾಗುವುದೂ ಇದಕ್ಕೆ ಕಾರಣವಿರಬಹುದು. ಆದರೆ ಮುಖ್ಯವಾಗಿ ಇದರ ಬೆಲೆಯೇ ತಿಂದವವಿಗೆ ಸಂತೃಪ್ತಿ ನೀಡುವ ಅಂಶವಾಗಿದೆ.

ಸೆಲೂನ್ ಮತ್ತು ಸ್ಪಾ ಗಳಿಗೆ ಭೇಟಿ ನೀಡುವುದು
ಇಂದು ಶರೀರಕ್ಕೆ ಮಸಾಜ್, ಹಬೆಸ್ನಾನ ಮೊದಲಾದ ಸೇವೆಗಳನ್ನು ನೀಡುವ ವಿವಿಧ ಸೆಲೂನ್ ಮತ್ತು ಸ್ಪಾಗಳು ನಗರಗಳಲ್ಲಿ ಪ್ರಾರಂಭವಾಗಿವೆ. ಇವುಗಳಲ್ಲಿ ಒಂದು ದಿನದ ಸೇವೆಯನ್ನು ದುಬಾರಿ ದರ ನೀಡಿ ಖರೀದಿಸಿ ಇಡಿಯ ದಿನದಲ್ಲಿ ಚಿತ್ರವಿಚಿತ್ರವಾದ ಸೇವೆಗಳನ್ನು ಪಡೆಯುವ ಮೂಲಕ ಧನ್ಯತೆಯನ್ನು ಅನುಭವಿಸುವವರಿದ್ದಾರೆ.

ವರ್ಷಕ್ಕೊಂದು ಪ್ರವಾಸ
ಹಿಂದೆಲ್ಲಾ ಪ್ರವಾಸವೆಂದರೆ ಮೈಸೂರು, ದೂರವೆಂದರೆ ಹಂಪೆ, ಇದಕ್ಕೂ ದೂರ ಹೋಗುವುದನ್ನು ಯೋಚಿಸುತ್ತಲೂ ಇರಲಿಲ್ಲ. ಆದರೆ ಇಂದು ಭಾರತದ ರಾಜ್ಯಗಳೇ ಏಕೆ ವಿದೇಶಗಳಲ್ಲಿಯೂ ಪ್ರವಾಸ ಮಾಡಿಸಿ ಸುಖವಾಗಿ ಹಿಂದೆ ಕರೆತರುವ ಪ್ರವಾಸಿ ಸಂಸ್ಥೆಗಳಿವೆ. ಇವುಗಳ ದುಬಾರಿ ಬೆಲೆಯ ಪ್ರವಾಸಗಳನ್ನು ಖರೀದಿಸಿ ಕೆಲದಿನಗಳ ಮಟ್ಟಿಗೆ ದೂರಪ್ರಯಾಣ ಮುಗಿಸಿ ಬರುವ ಮೂಲಕವೂ ಧನ್ಯತೆಯನ್ನು ಅನುಭವಿಸಬಹುದು.



Click it and Unblock the Notifications











