ಮೈಯಲ್ಲಿ ನಡುಕ ಹುಟ್ಟಿಸುವ ವಿಲಕ್ಷಣ ಆಹಾರ ಪದ್ಧತಿ

By Deepu

ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಗಳನ್ನು ಒಳಗೊಂಡಿದೆ. ಇತರೆ ದೇಶಗಳ ಆಹಾರ ಪದ್ಧತಿಯನ್ನು ನಾವು ಹೆಚ್ಚು ಇಷ್ಟಪಡುತ್ತೇವೆ ಮತ್ತು ಆ ದೇಶದವರೂ ನಮ್ಮ ಆಹಾರ ಪದ್ಧತಿಗಳನ್ನು ಮೆಚ್ಚಿಕೊಳ್ಳುತ್ತಾರೆ. ಚೈನೀಸ್, ಕಾಂಟಿನೆಂಟಲ್, ಥಾಯ್ ಆಹಾರಗಳೆಂದರೆ ನಾವು ಹೆಚ್ಚು ಇಷ್ಟಪಡುತ್ತೇವೆ. ಇದನ್ನು ತಯಾರಿಸುವ ಬಗೆಯನ್ನು ನಾವು ಹೆಚ್ಚು ಮೆಚ್ಚಿಕೊಳ್ಳುತ್ತಿದ್ದು ಯಾವುದೇ ರೆಸ್ಟೋರೆಂಟ್‌ನಲ್ಲಿ ಈ ಬಗೆಯ ಆಹಾರಗಳನ್ನು ನಾವು ಪ್ರಯತ್ನಿಸುವುದೇ ಬಿಡುವುದಿಲ್ಲ. ಭಾರತದಲ್ಲಿಯೂ ವಿಚಿತ್ರವಾದ ಆಹಾರ ಪದ್ಧತಿ ಇದೆ!

ಆದರೆ ಪ್ರಪಂಚದ ಕೆಲವು ಕಡೆಗಳಲ್ಲಿ ವಿಚಿತ್ರ ಆಹಾರ ಪದ್ಧತಿಗಳನ್ನು ರೂಢಿಸಿಕೊಂಡವರಿದ್ದಾರೆ, ಎಂದರೆ ನಿಮಗೆ ಅಚ್ಚರಿಯಾಗಬಹುದು..! ಕಾಡು ಮನುಷ್ಯರಂತೆ ಹಸಿಹಸಿಯಾಗಿ, ಜೀವಂತವಾಗಿ ಪ್ರಾಣಿಗಳನ್ನು ಸೇವಿಸುವ ಚಿತ್ರವಿಚಿತ್ರ ಜನರು ಪ್ರಪಂಚದ ಮೂಲೆಗಳಲ್ಲಿದ್ದು ಅವರು ಸೇವಿಸುವ ಆಹಾರ ಪದ್ಧತಿ ಮೈಯಲ್ಲಿ ನಡುಕವನ್ನುಂಟು ಮಾಡುತ್ತದೆ. ಅಚ್ಚರಿ, ಆದರೂ ಸತ್ಯ-ಈ ಆಹಾರಗಳು ವಿಷದಷ್ಟೇ ಅಪಾಯಕಾರಿ!

ಕೆಲವೊಂದು ಟಿವಿ ಶೋಗಳಲ್ಲಿ ನೀವು ನೋಡಿರುವಂತೆ ಕಾಡಿನಲ್ಲಿ ಬದುಕಲು ಆತ ಸಿಕ್ಕಿದ ಪ್ರಾಣಿಗಳನ್ನೆಲ್ಲಾ ಹಸಿಯಾಗಿಯೇ ಸೇವಿಸುತ್ತಾನೆ. ತನ್ನ ಮೂತ್ರವನ್ನೇ ತಾನು ಸೇವಿಸುತ್ತಾನೆ ಆದರೆ ಇದೆಲ್ಲಾ ಕಾಡಿನಲ್ಲಿ ಸಿಕ್ಕಿಹಾಕಿಕೊಂಡಾಗ ಹೊಟ್ಟೆ ಹೊರೆಯಲು ಆತ ಅನುಸರಿಸುವ ವಿಧಾನವಾಗಿದೆ. ಆದರೆ ನಿಜ ಜೀವನದಲ್ಲಿ ಇಂತಹುದೇ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡವರನ್ನು ಕುರಿತು ಇಂದಿನ ವಿಶೇಷ ಲೇಖನದಲ್ಲಿ ನಿಮ್ಮನ್ನು ಅಚ್ಚರಿಗೊಳಿಸಲಿದ್ದೇವೆ.

ಹಸಿ ರಕ್ತ ಸೂಪ್

ಹಸಿ ರಕ್ತ ಸೂಪ್

ಈ ಸೂಪ್ ಅನ್ನು ಬಾತುಕೋಳಿಯ ರಕ್ತದಿಂದ ತಯಾರಿಸಲಾಗಿದೆ ಹಾಗೂ ಕೋಳಿಯ ಭಾಗಗಳು ಮತ್ತು ಹೊಟ್ಟೆಯನ್ನು ಬಳಸಿಕೊಳ್ಳಲಾಗಿದೆ. ವಿಯೆಟ್ನಾಂನಲ್ಲಿ ತಯಾರಾಗುವ ಈ ಸೂಪ್‌ನ ಹೆಸರು ಟಯಟ್ ಖಾನ್ ಎಂದಾಗಿದೆ. ಸೂಪ್ ರುಚಿ ಹೆಚ್ಚಿಸಲು ಕೆಲವು ಗಿಡಮೂಲಿಕೆಗಳು ಮತ್ತು ನಟ್ಸ್‌ಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಈ ಸೂಪ್ ಹೆಪ್ಪುಗಟ್ಟಿ ಜೆಲ್ಲಿ ರೂಪದಲ್ಲಿ ಬರುವವರೆಗೆ ಇದನ್ನು ಶೀತಲೀಕರಣ ನಡೆಸುತ್ತಾರೆ.

ಹುರಿದ ಜೇಡ

ಹುರಿದ ಜೇಡ

ಕಾಂಬೋಡಿಯಾದಲ್ಲಿ ಹುರಿದ ಜೇಡನನ್ನು ಸೇವಿಸುವುದು ಸಾಮಾನ್ಯವಾಗಿದೆ. ಸುವಾಸಿತ ಪರಿಮಳ ಮತ್ತು ಗರಿಗರಿಯಾಗಿರಲು ಬೆಳ್ಳುಳ್ಳಿ ಎಣ್ಣೆಯಲ್ಲಿ ಜೇಡನನ್ನು ಹುರಿಯಲಾಗುತ್ತದೆ. ಹೆಚ್ಚು ರುಚಿಕರ ಮತ್ತು ಪೌಷ್ಠಿಕ ಆಹಾರ ಎಂಬುದಾಗಿ ಇದನ್ನು ಪರಿಗಣಿಸಲಾಗುತ್ತದೆ. ವಿಷಕಾರಿ ಜೇಡನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಬೇಕು!

ಹಕ್ಕಿಗಳ ಗೂಡಿನ ಸೂಪ್

ಹಕ್ಕಿಗಳ ಗೂಡಿನ ಸೂಪ್

ಜನರು ತಿನ್ನುವ ವಿಲಕ್ಷಣ ಆಹಾರಗಳಲ್ಲಿ ಹಕ್ಕಿಗಳ ಗೂಡಿನ ಸೂಪ್ ಕೂಡ ಒಂದು. ಚೀನಾ ಮತ್ತು ಹಾಂಗ್‌ಕಾಂಗ್‌ನಲ್ಲಿ ಈ ಸೂಪ್ ಅನ್ನು ಹೆಚ್ಚು ರುಚಿಕರವಾದುದು ಎಂದು ನಂಬುತ್ತಾರೆ. ಈ ದೇಶಗಳಲ್ಲಿ ಈ ಸೂಪ್ ಖರೀದಿಗಾಗಿ ಜನರು 100 ಡಾಲರ್‌ಗಳನ್ನು ಖರ್ಚು ಮಾಡುತ್ತಾರೆ. ಪಕ್ಷಿಯ ಜೊಲ್ಲು ಈ ಗೂಡುಗಳಲ್ಲಿ ಇರುವುದರಿಂದ ಇದನ್ನು ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕಾಂಶಭರಿತ ಎಂದು ಪರಿಗಣಿಸಲಾಗುತ್ತದೆ.

ನಾರುವ ಹಣ್ಣು (ಡುರಿಯನ್)

ನಾರುವ ಹಣ್ಣು (ಡುರಿಯನ್)

ಆಗ್ನೇಯ ಏಷ್ಯಾದ ಜನರು ಡುರಿಯನ್ ಹಣ್ಣನ್ನು ತಿನ್ನುತ್ತಾರೆ. ಹಣ್ಣಿನ ಕಂಗೆಡಿಸುವ ಮತ್ತು ಆಕ್ರಮಣಕಾರಿ ವಾಸನೆಯಿಂದ ವಿಮಾನ ನಿಲ್ದಾಣಗಳು, ಹೋಟೆಲ್‌ಗಳಲ್ಲಿ ಈ ಹಣ್ಣನ್ನು ನಿಷೇಧಿಸಲಾಗಿದೆ. ಈ ಹಣ್ಣನ್ನು ತುಂಡು ಮಾಡಿದಾಗ, ಇದು ಕೊಳೆತ ಮಾಂಸ ವಾಸನೆಯನ್ನು ಬೀರುತ್ತದೆ. ಇದರ ವಾಸನೆ ಜನರಲ್ಲಿ ಅಸಹ್ಯವನ್ನು ತರಿಸಬಹುದು. ಆದರೆ ಆಗ್ನೇಯ ಏಷ್ಯಾ ಭಾಗಗಳಲ್ಲಿ ಡುರಿಯನ್ ಹಣ್ಣುಗಳ ರಾಜನೆಂದೇ ಪ್ರಸಿದ್ಧ.

ವಿಷಪೂರಿತ ಮೀನು

ವಿಷಪೂರಿತ ಮೀನು

ಜಪಾನ್‌ನಲ್ಲಿ ವಿಷಕಾರಿ ಮೀನಾದ ಫುಗುವಿನ ಖಾದ್ಯವನ್ನು ತಯಾರಿಸಲು ಹಲವಾರು ವರ್ಷಗಳ ತರಬೇತಿಯನ್ನು ಬಾಣಸಿಗರಿಗೆ ನೀಡಲಾಗುತ್ತದೆ. ಈ ಮೀನನ್ನು ಸಿದ್ಧಪಡಿಸುವಾಗ ಮಾಡುವ ಸಣ್ಣ ತಪ್ಪು ಕೂಡ ಜೀವಕ್ಕೆ ಹಾನಿಯನ್ನು ತಂದೊಡ್ಡಬಹುದು. ಅದಕ್ಕಾಗಿ ಈ ಮೀನಿನ ಖಾದ್ಯವನ್ನು ತಯಾರಿಸುವಾಗ ಬಾಣಸಿಗರು ಪರೀಕ್ಷೆಯಲ್ಲಿ ಪಾಸಾಗಬೇಕು. ಈ ಮೀನಿನ ಒಳಭಾಗದಲ್ಲಿರುವ ಸ್ವಲ್ಪ ವಿಷದೊಂದಿಗೆ ಇದನ್ನು ಸೇವಿಸಲಾಗುತ್ತದೆಯಂತೆ. ತುಟಿ ಮತ್ತು ನಾಲಗೆಗೆ ಈ ವಿಷ ಒಂದು ಅಸಾಮಾನ್ಯ ರುಚಿಯನ್ನು ನೀಡುತ್ತದೆ.

ಜೀವಂತ ಅಕ್ಟೋಪಸ್

ಜೀವಂತ ಅಕ್ಟೋಪಸ್

ದಕ್ಷಿಣ ಕೊರಿಯಾದಲ್ಲಿ ಜೀವಂತ ಮರಿ ಅಕ್ಟೋಪಸ್ ಅನ್ನು ಹಿಡಿದು ತಿನ್ನುತ್ತಾರೆ. ಇದನ್ನು ದಕ್ಷಿಣ ಕೊರಿಯಾದಲ್ಲಿ ಸನಕ್ಜಿ ಎಂದು ಕರೆಯುತ್ತಾರೆ. ನಿಮ್ಮ ಬಾಯಿಯ ಮೇಲ್ಭಾಗವನ್ನು ಅಕ್ಟೋಪಸ್ ಕಚ್ಚಿ ಹಿಡಿಯುವ ಸಾಧ್ಯತೆ ಇರುವುದರಿಂದ ಇದನ್ನು ಸೇವಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದರೂ ಜೀವದ ಹಂಗು ತೊರೆದು ಇದರ ರುಚಿಗೆ ಮಾರುಹೋಗಿದ್ದಾರೆ ಎಂದರೆ ಅಚ್ಚರಿ ಅನಿಸುತ್ತದೆ.

ಗೂಳಿಗಳ ವೃಷಣಗಳು

ಗೂಳಿಗಳ ವೃಷಣಗಳು

ಕೆನಡಾದಲ್ಲಿ ಗೂಳಿಗಳ ವೃಷಣಗಳನ್ನು ಅದ್ಭುತ ಸ್ವಾದಕರ ಆಹಾರವೆಂದು ಪರಿಗಣಿಸಲಾಗುತ್ತದೆಯಂತೆ...! ಜನರು ಇದನ್ನು ಎಣ್ಣೆಯಲ್ಲಿ ಹುರಿದು, ಮಸಾಲೆಗಳನ್ನು ಸೇರಿಸಿ ಆನಂದದಿಂದ ತಿನ್ನುತ್ತಾರೆ.

Story first published: Thursday, December 3, 2015, 13:05 [IST]
X
Desktop Bottom Promotion