For Quick Alerts
ALLOW NOTIFICATIONS  
For Daily Alerts

ಸಕಾರಾತ್ಮಕ ಮನೋಭಾವವೇ ಜೀವನದ ಸಾಕ್ಷಾತ್ಕಾರ

By Deepu
|

ಜೀವನದಲ್ಲಿ ನಾವು ಹಲವಾರು ಸಂದರ್ಭದಲ್ಲಿ ನಕಾರಾತ್ಮಕವಾಗಿ ಆಲೋಚಿಸುತ್ತೇವೆ. ಅಲ್ಲದೆ ನಮ್ಮ ಸುತ್ತ ಇರುವವರು ಸಹ ನಮ್ಮನ್ನು ನಕಾರಾತ್ಮಕವಾಗಿ ಚಿಂತಿಸುವಂತೆ ಮಾಡುವಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಮಾಡುತ್ತಾರೆ. ಕೆಲವೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ನಾವು ನಕಾರಾತ್ಮಕವಾಗಿ ಚಿಂತಿಸಲು ಆರಂಭಿಸಿಬಿಟ್ಟಿರುತ್ತೇವೆ. ಒಮ್ಮೊಮ್ಮೆ ಪರಿಸ್ಥಿತಿಗಳು ನಮ್ಮನ್ನು ನಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತವೆ. "ಚಿತೆಗಿಂತ ಚಿಂತೆಯೇ ಮನುಷ್ಯನನ್ನು ಹೆಚ್ಚು ಸುಡುತ್ತದೆ" ಎಂಬ ಮಾತು ಇದಕ್ಕಾಗಿಯೇ ಜನಸಿರಬೇಕು.

ಕೆಲವೊಮ್ಮೆ ನಕಾರಾತ್ಮಕವಾಗಿ ನಮ್ಮ ಜೀವನದಲ್ಲಿ ನಡೆದಾಗ ಅದನ್ನು ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತದೆ. ಇದರ ಬಗ್ಗೆ ನಿಮಗೆ ಅನುಮಾನಗಳಿದ್ದಲ್ಲಿ, ಒಮ್ಮೆ ಟಿವಿ ಆನ್ ಮಾಡಿ ನೋಡಿ, ಅತ್ಯಾಚಾರ, ಸುಲಿಗೆ, ಭಯೋತ್ಪಾದನೆ ಇತ್ಯಾದಿಗಳ ಸುದ್ದಿಯು ನಿಮಗೆ ಬೇಡ ಬೇಡವೆಂದರು ಕಣ್ಣಿಗೆ ಬೀಳುತ್ತದೆ. ಕಚೇರಿಯಲ್ಲಿ ನೀವು ಎಷ್ಟೇ ಕಷ್ಟಪಟ್ಟರು ನಮ್ಮ ಮೇಲೆ ನಕಾರಾತ್ಮಕ ಅಭಿಪ್ರಾಯಗಳು ಬರುತ್ತವೆ. ಜೀವನದಲ್ಲಿ ಗುರಿ ಎಂಬುದು ದಾರಿ ತೋರುವ ಗುರುವಿನಂತೆ

ಇವೆಲ್ಲ ಘಟನೆಗಳು ಮತ್ತು ಅಭಿಪ್ರಾಯಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ನಮ್ಮ ಮನಸ್ಸಿಗೆ ಘಾಸಿಯಾಗುವಂತಹ ಘಟನೆಗಳು ನಡೆದು ಬಿಡುತ್ತವೆ ಮತ್ತು ಅಭಿಪ್ರಾಯಗಳು ಬರುತ್ತವೆ. ಆಗ ಅವುಗಳಿಂದ ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಂತಹ ಸನ್ನಿವೇಶಗಳಿಂದ ನಾವು ಪಾರಾಗಬೇಕಾಗುತ್ತದೆ.

ಇದಕ್ಕೆ ಇರುವುದು ಒಂದೇ ಮಾರ್ಗ ನಾವು ಧನಾತ್ಮಕವಾಗಿ ಬದುಕುವುದು. ಏಕೆಂದರೆ ಪ್ರಪಂಚದಲ್ಲಿ ಅಸಾಧ್ಯವೆನ್ನುವುದು ಯಾವುದು ಇಲ್ಲ. ಧನಾತ್ಮಕವಾಗಿ ಇರುವುದರಿಂದ ಅದರದೇ ಆದ ಪ್ರಯೋಜನಗಳು ನಮಗೆ ಲಭಿಸುತ್ತವೆ. ನೀವು ಧನಾತ್ಮಕವಾಗಿ ಇದ್ದಲ್ಲಿ, ನಕಾರಾತ್ಮಕವಾಗಿ ಇರುವವರಿಗಿಂತ ಚೆನ್ನಾಗಿ ಬಾಳಬಹುದು. ಅದರ ಜೊತೆಗೆ ನಿಮ್ಮ ಜೀವನದಲ್ಲಿ ನೀವು ಉತ್ತಮವಾದ ಬದಲಾವಣೆಗಳನ್ನು ಇದರಿಂದ ನೀವು ಕಾಣಬಹುದು. ಬನ್ನಿ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿ...

ಸಂಪರ್ಕ ಕಡಿದು ಕೊಳ್ಳಿ

ಸಂಪರ್ಕ ಕಡಿದು ಕೊಳ್ಳಿ

ಇದು ತುಂಬಾ ಒಳ್ಳೆಯ ಮಾರ್ಗ, ಎಲ್ಲಿ ನಕಾರಾತ್ಮಕತೆ ಇರುತ್ತದೆಯೋ ಅದರೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳಿ. ಜೀವನದ ಕಷ್ಟಗಳು ಇದ್ದಿದ್ದೆ, ಅದರಿಂದ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಿಮಗೆ ತೀರಾ ಕಾಟವಿದ್ದಲ್ಲಿ ಮೊಬೈಲ್ ಇನ್ನಿತರ ಗ್ಯಾಡ್ಜೆಟ್‌ಗಳನ್ನು ಆಫ್ ಮಾಡಿ. ಈ ಯೋಜನೆಯು ನಿಮ್ಮನ್ನು ಧನಾತ್ಮಕಗೊಳಿಸುವುದರ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಜೊತೆಗೆ ನಿಮ್ಮ ಭಾಂದವ್ಯವನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಒಂದು ಗಂಟೆಯವರೆಗೆ ಪಾಲಿಸಿ, ಆಗ ನೋಡಿ ಅದರ ಪವಾಡವನ್ನು!.

ನಕಾರಾತ್ಮಕ ಸುದ್ದಿಗಳನ್ನು ನೋಡಬೇಡಿ

ನಕಾರಾತ್ಮಕ ಸುದ್ದಿಗಳನ್ನು ನೋಡಬೇಡಿ

ನಿಮ್ಮ ಸೋಶಿಯಲ್ ನೆಟ್‍ವರ್ಕ್ ಸೈಟ್ ನೋಡಿ. ಅದರಲ್ಲಿ ಯಾವಾಗಲು ಧನಾತ್ಮಕ ಅಂಶಗಳ ಕುರಿತು ಹೆಚ್ಚಿಗೆ ಹಾಕಿರುತ್ತಾರೆ, ಇಲ್ಲವೇ ಚಿತ್ರ-ವಿಚಿತ್ರ ಸುದ್ದಿಗಳ ಕುರಿತು ಮಾಹಿತಿ ಇರುತ್ತದೆ. ಅವು ನಿಮ್ಮನ್ನು ನಕಾರಾತ್ಮಕ ಚಿಂತನೆಯಿಂದ ದೂರವಿರಿಸಿ, ಸಂತೋಷಗೊಳಿಸುತ್ತದೆ. ಹಾಗೆಂದು ನಿಮ್ಮ ಸುತ್ತ ನಡೆಯುತ್ತಿರುವ ಕೆಟ್ಟ ಸಂಗತಿಗಳನ್ನು ನೀವು ಕಣ್ಣೆತ್ತಿ ಸಹ ನೋಡಬೇಡಿ ಎಂದು ನಾವು ಹೇಳುತ್ತಿಲ್ಲ. ಆದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಎಂದು ಹೇಳುತ್ತಿದ್ದೇವೆ.

ನಕಾರಾತ್ಮಕ ಜನರ ಸಹವಾಸವನ್ನು ಬಿಡಿ

ನಕಾರಾತ್ಮಕ ಜನರ ಸಹವಾಸವನ್ನು ಬಿಡಿ

ಯಾವಾಗ ನೀವು ನಕಾರಾತ್ಮಕ ಜನರ ಮಾತುಗಳನ್ನು ಹೆಚ್ಚಿಗೆ ಕೇಳುತ್ತೀರೋ, ಆಗ ನೀವು ಸಹ ನಕಾರಾತ್ಮಕವಾಗಿ ಆಲೋಚಿಸಲು ಶುರು ಮಾಡುತ್ತೀರಿ. ಹೀಗೆ ನೀವು ಸಹ ನಕಾರಾತ್ಮಕವಾದಿಗಳಾಗಿಬಿಡುತ್ತೀರಿ. ಆದ್ದರಿಂದ ನಕಾರಾತ್ಮಕ ಜನರಿಂದ ದೂರವಿರಿ. ನಿಮ್ಮನ್ನು ನಕಾರಾತ್ಮಕತೆಗೆ ದೂಡಲು ಜನರಿಗೆ ಯಾವತ್ತಿಗು ಅವಕಾಶ ಮಾಡಿಕೊಡಬೇಡಿ. ಇದು ನಿಮ್ಮ ಪ್ರಗತಿಯನ್ನು ಹಾಳು ಮಾಡುತ್ತದೆ.

ಕೃತಜ್ಞತೆಯನ್ನು ಅಭ್ಯಾಸ ಮಾಡಿ

ಕೃತಜ್ಞತೆಯನ್ನು ಅಭ್ಯಾಸ ಮಾಡಿ

ನಿಮ್ಮ ಸುತ್ತ ಇರುವ ಜನರನ್ನು ಅಭಿನಂದಿಸಿ. ವಿಶೇಷವಾಗಿ ಅವರು ನಿಮಗೆ ಎಂದಾದರು ಸಹಾಯ ಮಾಡಿದ್ದಲ್ಲಿ, ತಪ್ಪದೆ ಅವರನ್ನು ಹೊಗಳಿ, ಧನ್ಯವಾದ ಹೇಳಿ. ನಿಮಗಾಗಿ ಬಾಗಿಲು ತೆಗೆದವರಿಗೆ, ಕಾಫಿಯನ್ನು ತಂದುಕೊಟ್ಟವರಿಗೆ, ನಿಮಗೆ ದಾರಿ ಮಾಡಿಕೊಟ್ಟವರಿಗೆ, ಹೀಗೆ ನಾನಾ ರೀತಿಯ ಸಣ್ಣ ಸಣ್ಣ ಸಹಾಯಕ್ಕೂ ಸಹ ಧನ್ಯವಾದ ತಿಳಿಸಿ.

ಕೃತಜ್ಞತೆಯನ್ನು ಅಭ್ಯಾಸ ಮಾಡಿ

ಕೃತಜ್ಞತೆಯನ್ನು ಅಭ್ಯಾಸ ಮಾಡಿ

ಆಗ ನೋಡಿ ನೀವು ಪ್ರಪಂಚದಲ್ಲಿ ಗುರುತು ಪರಿಚಯ ಇಲ್ಲದಿದ್ದವರಿಗೂ ಸಹ ಹೇಗೆ ಕೃತಜ್ಞರಾಗಿದ್ದೀರಿ ಎಂದು ತಿಳಿಯುತ್ತದೆ. ಈ ಅಂಶವು ನಿಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಹುಟ್ಟು ಹಾಕುತ್ತದೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯಗಳಿದ್ದಲ್ಲಿ, ನಮಗೆ ಈ ಕೆಳಗೆ ಬರೆದು ತಿಳಿಸಿ.

English summary

Ways To Stay Positive In A Negative World

When there is a lot of negativity around us, we tend to get influenced by it knowingly or unknowingly. We need to control the negativity around us, otherwise it can have an impact on our minds. It can be hard sometime to digest the negativity around us. Turn on the TV and you hear about rape cases and terrorist attacks, at office you hear somebody making an ill comment about your work, etc.
Story first published: Sunday, December 20, 2015, 11:00 [IST]
X
Desktop Bottom Promotion