Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬದುಕು ಸೈಕಲ್ ಮೇಲಿನ ಪ್ರಯಾಣ ಏರು ತಗ್ಗು ಇದ್ದೇ ಇದೆ!
ಸಂತೋಷವನ್ನು ಇತರರಿಂದ ಅಪೇಕ್ಷಿಸದೇ ತಾನೇ ಕಂಡುಕೊಳ್ಳುವವನು ನಿಜವಾದ ಸಂತೃಪ್ತಿ ಹೊಂದಿದ ಮನುಷ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಸಂತೋಷವನ್ನು ಹುಡುಕುತ್ತಾ ತಪ್ಪು ದಾರಿಗಳನ್ನು ಆರಿಸಿಕೊಂಡು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ಅತೃಪ್ತನಾಗಿದ್ದರೂ, ಕೋಪ, ವಿಷಾದ ಮತ್ತು ಅಸೂಯೆಯಿಂದಿದ್ದರೂ ಆತನ ಮೆದುಳು ಮಾತ್ರ ಅವನನ್ನು ಜಾಗೃತಗೊಳಿಸಿ, ಸಕಾರಾತ್ಮಕ ಚಿಂತನೆಗಳತ್ತ ಹೊರಳುವಂತೆ ಮಾಡುತ್ತದೆ. ಈ ನಕಾರಾತ್ಮಕ ಗುಣಗಳು ನಿಧಾನವಾಗಿ ಮನುಷ್ಯನನ್ನು ಹಾನಿಮಾಡಲು ಪ್ರಯತ್ನಿಸುತ್ತಿರುತ್ತದೆ. ಯಾವುದೇ ವಿಷಾದವಿಲ್ಲದೆ ಸಂತೋಷದಿಂದ ಹಾಗೂ ತೃಪ್ತಿಯಿಂದ ತನ್ನ ಜೀವನದ ಎಲ್ಲಾ ಹಂತಗಳನ್ನು ಅನುಭವಿಸಲು ಮನುಷ್ಯನನ್ನು ಸೃಷ್ಟಿಸಲಾಗಿದೆ. ಜೀವನದಲ್ಲಿ ಗುರಿ ಎಂಬುದು ದಾರಿ ತೋರುವ ಗುರುವಿನಂತೆ
ಹೀಗಿದ್ದೂ, ಕೆಲವರು ತಮ್ಮ ಜೀವನದಲ್ಲಿ ದು:ಖವನ್ನು ತಂದುಕೊಂಡು ನಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡಿರುತ್ತಾರೆ. ಮಗು ಹುಟ್ಟಿದ ಸಂದರ್ಭದಲ್ಲಿ, ಮಗುವಿಗೆ ನಗುವಂತೆ ಯಾರೂ ಹೇಳಿಕೊಡುವುದಿಲ್ಲ. ಅದು ನಗುವುದನ್ನು ತಾನಾಗೇ ಆಯ್ದುಕೊಂಡು ನಗಲು ಆರಂಭಿಸುತ್ತದೆ ಹಾಗೆಯೇ ಅಳುವುದನ್ನು ಸಹ ತಾನೇ ಆರಂಭಿಸುತ್ತದೆ. ಇದು ಪ್ರಾಕೃತಿಕದತ್ತವಾಗಿ ಬಂದಂತಹ ವಾಡಿಕೆ. ಅಸಂತೋಷ ಹಾಗೂ ನಕಾರಾತ್ಮಕ ಚಿಂತನೆಗಳು, ಮಾನವನು ತಾನೇ ಆಹ್ವಾನಿಸಿಕೊಂಡ ಬಹುದೊಡ್ಡ ಶಾಪವೆಂದರೆ ತಪ್ಪಾಗಲಾರದು. ಶಾಂತಿ ನೆಮ್ಮದಿಗಿಂತ ದೊಡ್ಡ ಆಸ್ತಿ ಇನ್ನೇನು ಬೇಕು?
ಆತನಿಗೆ ಸಂತೋಷದಿಂದಿರಲು ಯಾರೂ ತರಬೇತಿ ನೀಡಿದ್ದಾಲೀ ಅಥವಾ ಆತನೇ ಕಲಿತ ಗುಣವಾಗಲಿ ಅಲ್ಲ. ಹಾಗೆಯೇ ಅತೃಪ್ತನಾಗಿರುವವ ಹೆಚ್ಚು ವಿಷಾದ ಹೊಂದಿ ದು:ಖದಿಂದ ಅಳುವುದನ್ನು ಹೆಚ್ಚು ಅಪೇಕ್ಷಿಸುತ್ತಾನೆ. ಆತ/ಆಕೆಯು ಉಜ್ವಲ ಬದುಕಿನ ಕಡೆ ಗಮನಹರಿಸುವುದೇ ಇಲ್ಲ. ಹೀಗಿರಲು ಹಲವಾರು ಕಾರಣಗಳೂ ಸಹ ಅವರನ್ನು ಕಾಡುತ್ತವೆ. ಪ್ರತಿಯೊಬ್ಬರೂ ಅವರ ನಡವಳಿಕೆಗೆ ಹಾಗೂ ಅಸಂತೃಪ್ತಿಗೆ ಅವರೇ ಹೊಣೆಯಾಗಿರುತ್ತಾರೆ. ಮಾನವರ ಅಸಂತೃಪ್ತಿಗೆ ಕಾರಣವಾಗುವ ಹಾಗೂ ಅಸಂತೋಷದಿಂದಿರಲು ಕಾರಣವಾಗುವ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಒಮ್ಮೆ ನೋಡಿ...

ದಿನನಿತ್ಯ ಖರ್ಚುಗಳಿಂದ ಒತ್ತಡಕ್ಕೆ ಒಳಗಾಗುವುದು
ಬದುಕಿನಲ್ಲಿ ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಸ್ವಲ್ಪ ಆರಾಮದಾಯಕವಲ್ಲದ ಸನ್ನಿವೇಶಗಳನ್ನು ಅನುಭವಿಸುವುದು ಜೀವನದ ಒಂದು ಭಾಗವೆಂದು ಅಸಂತೃಪ್ತ ಜನರು ತಿಳಿದುಕೊಳ್ಳಲು ವಿಫಲರಾಗಿರುತ್ತಾರೆ. ಬದುಕು ಎಂಬುದು ನಾಜೂಕಿನ ಐಸ್ ಕ್ರೀಂನಂತೆ ಹಾಗೂ ಕೆಲವು ಸಂದರ್ಭಗಳಲ್ಲಿ ತೆಂಗಿನಕಾಯಿಯ ಒರಟಿನಂತೆ ಇರುತ್ತದೆ. ಈ ಎರಡೂ ಸನಿವೇಶಗಳು ಬದುಕಿನಲ್ಲಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ವಾಸ್ತವ ಸಂಗತಿಗಳನ್ನು ನಂಬದೇ ಇರುವವರು ಸಂತೋಷದಿಂದಿರಲು ಅಸಾಧ್ಯ. ಕಠಿಣ ಸನ್ನಿವೇಶಗಳನ್ನು ಸಹ ಆನಂದದಿಂದ ಅನುಭವಿಸಬೇಕು.

ನಕಾರಾತ್ಮಕವಾಗಿ ಚಿಂತಿಸುವುದು
ಮನುಷ್ಯರು ವಿಶಾಲವಾಗಿ ಚಿಂತಿಸದೆ, ಒಂದು ಹಂತದವರೆಗೆ ತಮ್ಮ ಚಿಂತನೆಗಳನ್ನು ಸೀಮಿತಗೊಳಿಸುತ್ತಾರೆ. ಕೆಲವು ಸಂದಿಗ್ಧ ಪರಿಸ್ಥಿತಿಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಅದನ್ನು ಜಟಿಲಗೊಳಿಸುತ್ತಾರೆ. ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕದೇ ದೂರುವುದರಲ್ಲೇ ಕಾಲ ಕಳೆಯುತ್ತಾರೆ. ಇದರಿಂದ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ.

ಅನಾವಶ್ಯಕವಾಗಿ ದೂರುವುದು
ಈ ಜನರು ದೂರುವುದನ್ನೇ ಪ್ರವೃತ್ತಿ ಮಾಡಿಕೊಂಡಿರುತ್ತಾರೆ. ಋತುಗಳು ಅಥವಾ ಹವಾಮಾನ ಅವರಿಗೆ ಹೇಗಿದ್ದರೂ ಅವರು ಸಹಿಸುವುದಿಲ್ಲ. ಚಳಿಯಿರಲಿ, ಬಿಸಿಲಿರಲಿ ಅಥವಾ ಮಳೆಯಿರಲಿ ದೂರುತ್ತಲೇ ಇರುತ್ತಾರೆ. ಅವರ ಜೀವನದಲ್ಲಿ ಬರುವ ಎಲ್ಲಾ ಸನ್ನಿವೇಶಗಳಿಗೂ ದೂರುತ್ತಲೇ ಇರುತ್ತಾರೆ. ನಮ್ಮ ಪರಿಮಿತಿಯಲ್ಲಿರದ ಕೆಲವು ಸನ್ನಿವೇಶಗಳನ್ನು ಸಹ ಅವರು ಸರಿಯಾಗಿ ಅರ್ಥೈಸಿಕೊಳ್ಳದೆ ದೂರಿಕೊಳ್ಳುತ್ತಿರುತ್ತಾರೆ. ಈ ಆಲೋಚನೆಗಳಿಂದ ಅವರ ಮನಸ್ಸು ಒಂದು ಕಸದ ಬುಟ್ಟಿಯಂತೆ ಅಥವಾ ದೂರಿನ ಪೆಟ್ಟೆಗೆಯಾಗಿ ಪರಿವರ್ತನೆಯಾಗಿರುತ್ತದೆ. ಅವರು ಕ್ರಿಯಾತ್ಮಕವಾಗಿರದೇ ಚಿಕ್ಕ ಸಮಸ್ಯೆಗಳಿಗೂ ಒತ್ತಡ ಅನುಭವಿಸುತ್ತಾರೆ.

ಸುಲಭದ ದಾರಿಯನ್ನೇ ಹುಡುಕುತ್ತಿರುತ್ತಾರೆ
ಎರಡು ಮಾರ್ಗಗಳಲ್ಲಿ ಸುಲಭದ ಮಾರ್ಗವನ್ನೇ ಹೆಚ್ಚೆಚ್ಚು ಜನರು ಆರಿಸಿಕೊಳ್ಳಲು ಬಯಸುತ್ತಾರೆ. ಆದರೆ ಸುಲಭದ ಮಾರ್ಗದಲ್ಲಿ ಪಡೆಯುವ ಫಲಿತಾಂಶಗಳು ಸಾರ್ಥಕತೆಯ ತೃಪ್ತಿ ನೀಡುವುದಿಲ್ಲ. ಕಷ್ಟದ ದಾರಿಗಳು ನಿಮ್ಮ ತಾಳ್ಮೆಯನ್ನು ಪರಿಶೀಲಸುವುದೇ ಹೊರತು ಅಂತಿಮವಾಗಿ ಹೆಚ್ಚು ಫಲಿತಾಂಶಗಳನ್ನು ನಿಮಗೆ ನೀಡುತ್ತದೆ. ನೀವು ಮಾಡುವ ಪರಿಶ್ರಮ ಅಂತಿಮವಾಗಿ ನಿಮಗೆ ಸಾರ್ಥಕತೆಯನ್ನು ಹಾಗು ಆನಂದವನ್ನು ನೀಡುತ್ತದೆ. ಹೀಗಿದ್ದೂ ಇದನ್ನು ಅಸಂತೃಪ್ತ ಜನರು ಅರ್ಥಮಾಡಿಕೊಳ್ಳಲು ವಿಫಲ ಹೊಂದುತ್ತಾರೆ.

ಸಂತಸ ಜೀವನದಿಂದ ದೂರವುಳಿಯುವುದು
ಕೆಲವು ಸಂದರ್ಭಗಳಲ್ಲಿ ಉತ್ಸಾಹದಿಂದ ಕೆಲವು ಕಾರ್ಯಗಳನ್ನು ಮಾಡುವುದು ಹಾಗೂ ಸುಮ್ಮನೆ ಕುಳಿತು ಕಾಲಕಳೆಯುವುದನ್ನು ಖಡ್ಡಾಯವಾಗಿ ಮಾಡುವುದು. ಆದರೆ ಅಸಂತೃಪ್ತ ಜನರು ಹೀಗೆಲ್ಲಾ ಮಾಡುವುದಿಲ್ಲ ಹಾಗೂ ಒಂದು ಸೆಕೆಂಡ್ ಕೂಡ ತಮಗಾಗಿಯೂ ಸಮಯವನ್ನು ವ್ಯರ್ಥಮಾಡುವುದೇ ಇಲ್ಲ. ಮಕ್ಕಳೊಂದಿಗೆ ಆನಂದದಿಂದ ಆಟ ಆಡುತ್ತಾ ಜೀವನದ ಆನಂದವನ್ನು ಒಮ್ಮೆಯಾದರೂ ಅನುಭವಿಸಲೇ ಬೇಕು. ಇದು ನಿಮ್ಮನ್ನು ಖಂಡಿತವಾಗಿ ಉಲ್ಲಸಿತಗೊಳಿಸುತ್ತದೆ.



Click it and Unblock the Notifications









