Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಪ್ರಸಿದ್ಧ ಹೋಟೆಲ್‌ಗಳು, ಈಗ ಭೂತದ ಕಾಟದಿಂದ ನಲುಗುತ್ತಿದೆ!
ವಿಶ್ವಪರ್ಯಟನೆಯ ಬಯಕೆಯೇ? ಭಾರತವನ್ನೊಂದು ಬಾರಿ ಸುತ್ತಿ, ಜಗತ್ತೇ ನಿಮ್ಮೆದುರು ತೆರೆದುಕೊಳ್ಳುತ್ತದೆ ಎನ್ನುತ್ತಾರೆ ಹಿರಿಯರು. ಭೌಗೋಳಿಕವಾಗಿ ಎಲ್ಲಾ ರೀತಿಯ ವೈಪರೀತ್ಯವನ್ನು ಹೊಂದಿರುವ ದೇಶ ಭಾರತ. ಸಾವಿರಾರು ಹಳ್ಳಿ ನಗರಗಳಿಂದ ಕೂಡಿದ ಭಾರತ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಮರೆಯದ ದೇಶ. ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ದೆವ್ವದ ಕಾಟವಿದೆಯಂತೆ!
ಅಂತೆಯೇ ಭೂತದ ವಿಷಯವನ್ನು ಹುಡುಕಿದರೆ ಭಾರತದ ಪ್ರತಿ ಊರಿನಲ್ಲಿಯೂ ಕನಿಷ್ಠ ನೂರು ಕಥೆಗಳು ಸಿಗುತ್ತವೆ. ಆದರೆ ಭಾರತದ ಕೆಲವು ಖ್ಯಾತ ಹೋಟೆಲುಗಳೂ ಭೂತದ ಕಾಟದಿಂದ ಕುಖ್ಯಾತಿ ಪಡೆದಿವೆ. ಈ ಹೋಟೆಲುಗಳಲ್ಲಿ ಭೂತದ ಕಾಟವಿರುವ ಕೋಣೆಗಳಲ್ಲಿ ವಾಸ್ತವ್ಯ ಹೊಂದಿದ್ದವರಿಗೆ ಭಯಭೀತರಾಗುವ ಅನುಭವಗಳಾಗಿವೆ. ಇವು ಯಾವುವು ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲ ತಣಿಸುವ ಬದಲು ಅಚ್ಚರಿಯ ಕಡಲಲ್ಲೇ ಮುಳುಗಿಸಬಹುದು...

ಮುಂಬೈಯ ಖ್ಯಾತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್
ಹೆಸರು ಕೇಳುತ್ತಿದ್ದಂತೆಯೇ ಬೆಚ್ಚಿಬಿದ್ದಿರಾ? ಹೌದು, ವಿಶ್ವವಿಖ್ಯಾತಿ ಪಡೆದಿರುವ ತಾಜ್ ಮಹಲ್ ಹೋಟೆಲಿನ ಕೆಲವು ಭಾಗಗಳೂ ಭೂತಗ್ರಸ್ತವಾಗಿವೆ ಎಂದು ನಂಬುತ್ತಾರೆ. ಏಕೆಂದರೆ ಈ ಹೋಟೆಲಿನ ನಿರ್ಮಾಣವಾಗುವ ಆ ದಿನಗಳಲ್ಲಿ ಹೋಟೆಲಿನ ಕಿಟಕಿಗಳನ್ನು ಸಮುದ್ರಕ್ಕೆ ವಿರುದ್ಧದಿಕ್ಕಿನಲ್ಲಿಡಲಾಗುತ್ತಿತ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಂಬೈಯ ಖ್ಯಾತ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್
ಆದರೆ ಇದರ ವಾಸ್ತುಶಿಲ್ಪಿ W. A. ಚೇಂಬರ್ಸ್ ಎಂಬಾತ ಈ ಹೋಟೆಲಿನ ಮುಂಭಾಗ ಸಮುದ್ರಕ್ಕೆದುರಾಗಿರುವಂತೆ ವಿನ್ಯಾಸಗೊಳಿಸಿದ್ದ. ಆದರೆ ಆತ ತನ್ನ ಸ್ವದೇಶ ಫ್ರಾನ್ಸ್‌ಗೆ ತೆರಳಿ ಹಿಂದಿರುಗಿದಾಗ ಆತನ ವಿನ್ಯಾಸಕ್ಕೆ ವಿರುದ್ಧವಾಗಿ ನಿರ್ಮಾಣವಾಗಿತ್ತು. ಮನನೊಂದ ಆ ವಾಸ್ತುಶಿಲ್ಪಿ ಹೋಟೆಲಿನ ಒಂದು ಭಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ನಂತರ ಆ ಭಾಗದಲ್ಲಿ ವಾಸ್ತುಶಿಲ್ಪಿಯ ಭೂತವನ್ನು ಕಂಡವರಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್
ಜೀವನದಲ್ಲಿ ಒಮ್ಮೆಯಾದರೂ ನೋಡಬೇಕಾದ ಸ್ಥಳ ಎಂಬ ಖ್ಯಾತಿ ಪಡೆದಿದ್ದ ರಾಮೋಜಿ ಫಿಲ್ಮ್ ಸಿಟಿ ಸಹಾ ಭೂತದ ಕಾಟಕ್ಕೆ ಒಳಗಾಗಿದೆ. ಏಕೆಂದರೆ ಈ ನಗರವನ್ನು ನಿರ್ಮಿಸಲಾಗಿರುವ ಸ್ಥಳ ಹಿಂದಿನ ನಿಜಾಮರು ಯುದ್ಧ ನಡೆಸಿ ವೀರಮರಣ ಪಡೆದ ಸ್ಥಳವಾಗಿತ್ತು. ಇಂದಿಗೂ ಅವರ ಆತ್ಮಗಳು ಆ ಸ್ಥಳದಲ್ಲಿಯೇ ಓಡಾಡಿಕೊಂಡಿವೆ ಎಂದು ಜನರು ನಂಬುತ್ತಾರೆ. ಈ ಸ್ಥಳದಲ್ಲಿ ಕೆಲವು ಹೋಟೆಲುಗಳನ್ನೂ ಪ್ರಾರಂಭಿಸಲಾಗಿದೆ.

ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್
ಈ ಹೋಟೆಲುಗಳ ಮೇಲ್ಭಾಗದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ದೊಪ್ಪನೆ ಬೀಳುವುದು, ರಿಪೇರಿ ಮಾಡುವವರನ್ನು ದೂಡಿದಂತಾಗುವುದು, ಕೋಣೆಯಲ್ಲಿ ಆಹಾರ ತಂದಿಟ್ಟ ಮರುಕ್ಷಣವೇ ಚಿಲ್ಲಾಪಿಲ್ಲಿಯಾಗುವುದು, ಕೋಣೆಯ ನಿಲುವುಗನ್ನಡಿಯ ಗಾಜಿನ ಮೇಲೆ ಅರ್ಥವಾಗದ ಪದಗಳನ್ನು ಬರೆದಿರುವುದು ಮೊದಲಾದವು ಕಂಡುಬಂದಿವೆ. ಅದರಲ್ಲೂ ವಿಶೇಷವಾಗಿ ಚಿಕ್ಕ ಹುಡುಗಿಯರು ಹೆಚ್ಚಿನ ಬಾಧೆಗೊಳಗಾಗಿದ್ದಾರೆ. ಅವರ ಬಟ್ಟೆಗಳನ್ನು ಹರಿಯುವುದು, ಶೌಚಾಲಯದಲ್ಲಿದ್ದಾಗ ಬಾಗಿಲು ಬಡಿಯುವುದು ಮೊದಲಾದ ಚೇಷ್ಟೆಗಳು ಕಂಡುಬಂದಿವೆ.

ಊಟಿಯ ಫರ್ನ್ ಹಿಲ್ ಹೋಟೆಲ್
ಭೂತದ ಕಾಟದಿಂದ ಬೇಸತ್ತು ಊಟಿಯ ಒಂದು ಸುಂದರ ಹೋಟೆಲನ್ನು ಮುಚ್ಚಲಾಗಿದೆ. ಆದರೆ ಇದಕ್ಕೂ ಮೊದಲು ಬಾಲಿವುಡ್ ನ 'ರಾಜ಼್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಹೋಟೆಲಿಗೆ ಉತ್ತಮ ವ್ಯಾಪಾರವಿತ್ತು. ನೃತ್ಯ ಸಂಯೋಜಕಿ ಸರೋಜ್ ಖಾನ್ ಮತ್ತು ಅವರ ತಂಡದ ಇತರ ಸದಸ್ಯರು ಈ ಹೋಟೆಲಿನಲ್ಲಿ ಕೆಲ ಸಮಯ ಉಳಿದಿದ್ದರು. ಇವರೆಲ್ಲರಿಗೂ ಅವರ ಕೋಣೆಯ ಮೇಲಿದ್ದ ಕೋಣೆಯಿಂದ ಚಿತ್ರ ವಿಚಿತ್ರ ಸದ್ದುಗಳು ಕೇಳಿಬಂದ ಕಾರಣ ಇಡಿಯ ರಾತ್ರಿ ನಿದ್ದೆ ಮಾಡಲಾಗಲಿಲ್ಲ.
courtesy: OKTATABYEBYE.com

ಊಟಿಯ ಫರ್ನ್ ಹಿಲ್ ಹೋಟೆಲ್
ರಾತ್ರಿ ಯಾರೂ ಮಂಚ ಕುರ್ಚಿಗಳನ್ನು ಎಳೆದಾಡುತ್ತಿರಬಹುದು, ಈ ಬಗ್ಗೆ ದೂರು ಕೊಡೋಣವೆಂದು ಫೋನ್ ಎತ್ತಿದರೆ ಫೋನ್ ಸಹಾ ಜೀವಂತ ಸ್ಥಿತಿಯಲ್ಲಿರಲಿಲ್ಲ. ಕಡೆಗೆ ಧೈರ್ಯಗೂಡಿಸಿ ಎಲ್ಲರೂ ಸ್ವಾಗರಕಾರರ ಬಳಿ ಹೋಗಿ ದೂರು ನೀಡಿದರೆ ಅಚ್ಚರಿ ಪಡಬೇಕಾದ ಸರದಿ ಇವರದ್ದೇ ಆಗಿತ್ತು. ಏಕೆಂದರೆ ಅವರ ಕೋಣೆಯೇ ತುತ್ತ ತುದಿಯದ್ದಾಗಿದ್ದು ಅದರ ಮೇಲೆ ಕೋಣೆಯೇ ಇರಲಿಲ್ಲ!
Courtesy-Wikipedia

ಮಸ್ಸೂರಿಯ ಸಾವೋಯ್ ಹೋಟೆಲ್
ತಂಪುತಾಣವಾದ ಮಸ್ಸೂರಿಯ ಈ ಹೋಟೆಲ್ ಒಂದು ಪಾರಂಪರಿಕ ಹೋಟೆಲ್ ಆಗಿದ್ದು ಹಿಂದೆ ಭಾರತದಲ್ಲಿ ವಾಸ್ತವ್ಯವಿದ್ದ ಬ್ರಿಟಿಷರ ಕಾಲದ್ದಾಗಿದೆ. ಅಂದು ಮಸ್ಸೂರಿಯಲ್ಲಿದ್ದ ಶ್ರೀಮತಿ ಗಾರ್ನೆಟ್ ಎಂಬುವರು ವಿಷಪ್ರಾಶನದ ಕಾರಣ ಈ ಸ್ಥಳದಲ್ಲಿ ಮೃತರಾಗಿದ್ದು ಅವರ ಭೂತ ಈ ಹೋಟೆಲಿನಲ್ಲಿ ಅಡ್ಡಾಡಿಕೊಂಡಿದೆ ಎಂದು ಹೇಳುತ್ತಾರೆ.
Image courtesy-http://pehchaanindia.com/

ಮಸ್ಸೂರಿಯ ಸಾವೋಯ್ ಹೋಟೆಲ್
ಹಲವರು ಹೋಟೆಲಿನಲ್ಲಿ ಮಹಿಳೆಯ ಅಳುವಿನ ಶಬ್ದವನ್ನು ಆಲಿಸಿದ್ದಾರೆ. ಈ ಸದ್ದು ಎಲ್ಲಿಂದ ಬರುತ್ತದೆ ಎಂದು ಕಂಡುಹಿಡಿಯಲು ಹೋದರೆ ಖಾಲಿಜಾಗ ಅವರನ್ನು ಅಣಕಿಸುತ್ತದೆ.
Image courtesy- Daily bhaskar

ಕೋಟಾ, ರಾಜಸ್ಥಾನದ ಬ್ರಿಜ್ ರಾಜ್ ಭವನ್
ಇದು ಈಗ ಹೋಟೆಲ್ ರೂಪದಲ್ಲಿದ್ದರೂ ಹಿಂದೆ ರಾಜಸ್ಥಾನದ ರಾಜಮನೆತನಕ್ಕೆ ಸೇರಿದ ಅರಮನೆಯಾಗಿತ್ತು. 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಬ್ರಿಟಿಷ್ ಸೇನಾಧಿಕಾರಿ ಮೇಜರ್ ಬರ್ಟನ್ ಮತ್ತು ಆತನ ಇಬ್ಬರು ಪುತ್ರರನ್ನು ಈ ಸ್ಥಳದಲ್ಲಿ ವಧಿಸಲಾಗಿತ್ತು.
Image courtesy- Daily bhaskar

ಕೋಟಾ, ರಾಜಸ್ಥಾನದ ಬ್ರಿಜ್ ರಾಜ್ ಭವನ್
ಆ ಬಳಿಕ ಈ ಸ್ಥಳದಲ್ಲಿ ಕೋಪಗ್ರಸ್ತ ಭೂತಗಳು ಇಲ್ಲಿ ಮಲಗಿದ್ದವರನ್ನು ರಾತ್ರಿ ಗಾಢ ನಿದ್ದೆಯಲ್ಲಿದ್ದಾಗ ಕೆನ್ನೆಗೆ ಛಟಾರನೆ ಹೊಡೆಯುತ್ತವೆ ಎಂದು ಕೇಳಿಬರುತ್ತದ. ಇದುವರೆಗೆ ಭೂತದಿಂದ ಹೊಡೆಸಿಕೊಂಡವರಿದ್ದಾರೆಯೇ ಹೊರತು ಯಾರನ್ನೂ ಭೂತ ಸಾಯಿಸಿದ ಬಗ್ಗೆ ವರದಿಗಳಿಲ್ಲ. ಆದರೂ ಭೂತದಿಂದ ಹೊಡೆಸಿಕೊಳ್ಳಲಿಚ್ಛಿಸದೇ ಈ ಹೋಟೆಲಿನ ಕೆಲವು ಭಾಗ ಖಾಲಿಯಾಗಿಯೇ ಇರುತ್ತದೆ.
Image courtesy- Brijraj Bhawan Palace, Kota



Click it and Unblock the Notifications











