Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಾಂತಿ ನೆಮ್ಮದಿಗಿಂತ ದೊಡ್ಡ ಆಸ್ತಿ ಇನ್ನೇನು ಬೇಕು?
ಮನುಷ್ಯ ಪ್ರಾಣಿಗಳಿಗಿಂತ ಭಿನ್ನ, ಏಕೆಂದರೆ ಅವುಗಳಿಗಿಂತ ಹೆಚ್ಚಿನ ಭಾವನೆಗಳು ನಮ್ಮನ್ನು ಕಾಡುತ್ತವೆ. ನಮ್ಮ ಭಾವನೆಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಆ ಭಾವನೆಗಳು ಸಂತೋಷ, ದುಃಖ, ಉದ್ವೇಗ, ಆವೇಶ, ಉಲ್ಲಾಸ ಮುಂತಾದ ಸಂದರ್ಭಗಳ ಮೂಲಕ ನಮ್ಮ ಜೀವನವನ್ನು ಚೇತೋಹಾರಿ ಅನುಭವವನ್ನಾಗಿಸುತ್ತದೆ. ಈ ಎಲ್ಲಾ ಭಾವನೆಗಳು ನಾವು ಮಾನವರಾಗಿರುವುದಕ್ಕೆ ಒಂದು ಬಗೆಯ ಸಾರ್ಥಕತೆಯನ್ನು ನೀಡುತ್ತದೆ. ಆದರೆ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಇಲ್ಲಿ ಯಾರೂ ಯಾರನ್ನು ನಿಯಂತ್ರಿಸುತ್ತಾರೆ? ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸುತ್ತೀರಾ ಅಥವಾ ನಿಮ್ಮ ಭಾವನೆಗಳೇ ನಿಮ್ಮನ್ನು ನಿಯಂತ್ರಿಸುತ್ತವೆಯೇ? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ನಮ್ಮ ಸುತ್ತ ಮುತ್ತ ನಡೆಯುವ ಸನ್ನಿವೇಶಗಳನ್ನು ನಾವು ಸರಿಯಾಗಿ ಅರ್ಥೈಯಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸಬೇಕು ಮತ್ತು ಜೀವನದಲ್ಲಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದಾದಲ್ಲಿ, ಅದಕ್ಕೆ ನಾವು ಸ್ಥಿತಪ್ರಜ್ಞೆಯನ್ನು ಹೊಂದಿರಬೇಕಾಗುತ್ತದೆ. ಭಾವನೆಗಳ ಮೇಲೆ ನಾವು ಹೊಂದಿರುವ ನಿಯಂತ್ರಣವೇ, ನಮ್ಮನ್ನು ಸರಿ ದಾರಿಯಲ್ಲಿ ನಡೆಯಲು ಸಹಕರಿಸುತ್ತದೆ. ನಾವು ಸರಿಯಾದ ದಾರಿಯಲ್ಲಿ ಇದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ನಮ್ಮ ಭಾವನೆಗಳು ನಿಯಂತ್ರಿಸುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಕೆಲವೊಮ್ಮೆ ಪರಿಸ್ಥಿತಿಯು ನಾವು ಅಂದುಕೊಂಡಂತೆ ನಡೆಯುತ್ತದೆ ಮತ್ತು ಕೆಲವೊಮ್ಮೆ ನಾವು ಅಂದುಕೊಂಡಂತೆ ನಡೆಯುವುದಿಲ್ಲ.
ಒಮ್ಮೊಮ್ಮೆ ಕ್ಷುಲ್ಲಕ ಘಟನೆಗಳು ಕ್ಷಣಾರ್ಧದಲ್ಲಿ ನಡೆದುಬಿಡುತ್ತವೆ. ಅದಕ್ಕಾಗಿ ನಾವು ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರಬೇಕಾದುದು ಅತ್ಯಗತ್ಯ. ಅದಕ್ಕಾಗಿ ನಮಗೆ ಆಂತರಿಕ ಶಾಂತಿ ಅತ್ಯಗತ್ಯ. ಇದಕ್ಕಾಗಿ ನಮಗೆ ಕೆಲವು ಸಹಾಯ ಬೇಕಾಗುತ್ತದೆ. ಈ ಸಹಾಯದ ಅಗತ್ಯ ನಿಮಗೆ ಇದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಲು ಈ ಕೆಳಗಿನ ಸಂಕೇತಗಳ ಕುರಿತು ಒಮ್ಮೆ ಗಮನಹರಿಸಿ, ಇವುಗಳು ನಿಮ್ಮಲ್ಲಿ ಕಂಡು ಬಂದರೆ, ನಿಮಗೆ ಮಾನಸಿಕ ಶಾಂತಿಯ ಅಗತ್ಯ ಇದೆ ಎಂದರ್ಥ.

ನೀವು ನಂಬಿಕೆ ಹಾಗೂ ಪ್ರೀತಿ ಎರಡನ್ನೂ ಕಳೆದುಕೊಳ್ಳುತ್ತೀರಿ!
ಇದು ನಿಮ್ಮಲ್ಲಿ ಆಂತರಿಕ ಶಾಂತಿ ಇಲ್ಲದಿದ್ದಾಗ ಕಾಣಿಸಿಕೊಳ್ಳುವ ಅತಿ ದೊಡ್ಡ ಸಮಸ್ಯೆಯಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ನೀವು ಯಾರನ್ನೂ ನಂಬುವುದಿಲ್ಲ ಮತ್ತು ಪ್ರೀತಿಸುವುದೂ ಇಲ್ಲ. ಜನರಲ್ಲಿ ನೀವು ನಂಬಿಕೆಯನ್ನು ಕಳೆದುಕೊಂಡಿರುತ್ತೀರಿ. ಇದಕ್ಕೆ ಕಾರಣ ನೀವು ಕೆಲವೊಂದು ಇತ್ಯರ್ಥಗೊಳ್ಳದ ಮಾನಸಿಕ ತೊಳಲಾಟಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತೀರಿ. ನಿಮಗೆ ಉಂಟಾದ ಮಾನಸಿಕ ನೋವು ಮತ್ತು ಅನ್ಯಾಯಗಳಿಂದಾಗಿ ನೀವು ಜನರ ವಿರುದ್ಧ ಒಂದು ರಕ್ಷಣಾತ್ಮಕ ತಂತ್ರವನ್ನು ಅನುಸರಿಸುತ್ತಿರುತ್ತೀರಿ. ಈ ರಕ್ಷಣಾ ತಂತ್ರವು ನಿಮ್ಮನ್ನು ಜನರಿಂದ ದೂರ ಮಾಡುತ್ತಾರೆ.

ಪ್ರಕ್ಷುಬ್ಧ ಮನಸ್ಸು
ನಿಮ್ಮ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಎಂದು ಕರೆಯಬಹುದಾದಷ್ಟು ಚಿಂತೆಗಳು, ಆಲೋಚನೆಗಳು ನಡೆಯುತ್ತಿರುತ್ತವೆ. ಅದು ಒಂದು ಕ್ಷಣ ಸಹ ಶಾಂತವಾಗಿರುವುದಿಲ್ಲ. ಇದು ಒಂದು ಪರಿಸ್ಥಿತಿಯಿಂದ ಮತ್ತೊಂದು ಪರಿಸ್ಥಿತಿಯನ್ನು ಪರಾಮರ್ಶೆ ಮಾಡಲು ಹೋಗುತ್ತಿರುತ್ತದೆ. ನೀವು ಈ ಸಮಯದಲ್ಲಿ ಹಗಲುಗನಸು ಕಾಣುತ್ತಾ ಇರುತ್ತಿರಿ ಅಥವಾ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂದು ಪ್ರಸಕ್ತ ಸನ್ನಿವೇಶದಿಂದ ಪಲಾಯನ ಮಾಡುತ್ತಿರುತ್ತಿರಿ. ಇಲ್ಲವೇ ಹಿಂದೆ ನಡೆದುದಕ್ಕೆ ಪಶ್ಚಾತ್ತಾಪ ಪಡುತ್ತ, ಇಂದಿನ ದಿನವನ್ನು ಹಾಳು ಮಾಡಿಕೊಳ್ಳುತ್ತಿರುತ್ತೀರಿ. ನಿರ್ಧಾರಗಳನ್ನು ತೆಗೆದುಕೊಳ್ಳದೆ ಪರಿಸ್ಥಿತಿ ಕೈಜಾರಿ ಹೋಗಲು ಸಹ ಬಿಟ್ಟು ಬಿಡುತ್ತೀರಿ.

ಅಂತಃ ಪ್ರಜ್ಞೆಯ ಕೊರತೆ
ಭಾವನಾತ್ಮಕವಾಗಿ ನೊಂದಾಗ ಅಥವಾ ಆಘಾತಗೊಂಡಾಗ ಯಾರೇ ಆಗಲಿ, ಅವರಿಗೆ ಭಾವನೆಗಳಿಗೆ ಮತ್ತು ಭಾವೋದ್ವೇಗಗಳಿಗೆ ನಡುವಿನ ವ್ಯತ್ಯಾಸ ಕಾಣದೆ ಹೋಗುತ್ತದೆ. ಭಾವನೆಗಳು ನಿಮಗೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುತ್ತವೆ. ಆದರೂ ಯಾವಾಗ ನಿಮ್ಮ ಕ್ರಿಯೆಗಳು ಭಾವೋದ್ವೇಗಗಳಿಂದ ನಿರ್ದೇಶಿಸಲ್ಪಡುತ್ತವೆಯೋ, ಆಗ ನೀವು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಒಳನೋಟವನ್ನು ಕಳೆದುಕೊಳ್ಳುತ್ತೀರಿ. ಇಂತಹ ಸಂದರ್ಭದಲ್ಲಿ ನಿಮಗೆ ಆಂತರಿಕ ಶಾಂತಿಯ ಅಗತ್ಯವಿರುತ್ತದೆ.

ನೀವು ಆಲೋಚನೆ ಮಾಡದೆ ಪ್ರತಿಕ್ರಿಯಿಸುತ್ತೀರಿ
ನಿಮಗೆ ಎದುರಾಗುವ ಅಥವಾ ನಿಮ್ಮ ಜೀವನದಲ್ಲಿ ಘಟಿಸುವ ಘಟನೆಗಳಿಗೆ ನೀವು ಹಿಂದೆ-ಮುಂದೆ ನೋಡದೆ ಅದಕ್ಕೆ ನೀವು ಪ್ರತಿಕ್ರಿಯಿಸುತ್ತೀರಿ. ಏಕೆಂದರೆ ಘಟನೆಗಳನ್ನು ವಿಶ್ಲೇಷಿಸಿ ಅದಕ್ಕೆ ನೀವು ಪ್ರತಿಕ್ರಿಯಿಸಲು ತಾರ್ಕಿಕ ಚಿಂತನೆ ಅತ್ಯಗತ್ಯವಾಗಿರುತ್ತದೆ. ನಿಮ್ಮ ಭಾವೋದ್ವೇಗಗಳು ಒಂದು ಹಾಡು, ಅನುಭವ, ಪದಗಳು ಇತ್ಯಾದಿ ಸಣ್ಣ ವಿಚಾರಗಳಿಗೆ ವಿಪರೀತವಾಗಿ ಪ್ರತಿಕ್ರಿಯಿಸಲು ಆರಂಭಿಸುತ್ತವೆ. ಇದರಿಂದ ನೀವು ದುಃಖಗೊಳ್ಳುತ್ತೀರಿ, ಇಲ್ಲವೇ ಪರಿಸ್ಥಿತಿಯಿಂದ ಪಲಾಯನ ಹೊಂದುತ್ತೀರಿ, ಅದು ಇಲ್ಲವಾದಲ್ಲಿ ಇತರರ ಜೊತೆಗೆ ಒರಟಾಗಿ ಮತ್ತು ಕೋಪದಿಂದ ನಡೆದುಕೊಳ್ಳುತ್ತೀರಿ.ಇಂತಹ ಸಂದರ್ಭದಲ್ಲಿ ನಿಮಗೆ ಆಂತರಿಕ ನೆಮ್ಮದಿ, ಸಂತೋಷಕ್ಕಾಗಿ ಸಹಾಯ ಅಗತ್ಯವಾಗಿರುತ್ತದೆ ಎಂದು ಭಾವಿಸಿ. ಆ ಸಹಾಯವನ್ನು ಪಡೆಯಿರಿ.



Click it and Unblock the Notifications









