For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ..!ರಾತ್ರಿಯಲ್ಲೂ ನಿಮ್ಮ ಮೈ ನಡುಗಿಸುವ ದುಃಸ್ವಪ್ನಗಳು

By Super
|

ನಮ್ಮ ಕರಾವಳಿ ಒಂದು ಗ್ರಾಮದ ಕಥೆಯಂತೆ ಅಮೇರಿಕಾಕ್ಕೆ ಹೊರಟಿದ್ದ ತರುಣ ವೈದ್ಯರೊಬ್ಬರನ್ನು ತರುಣಿಯೊಬ್ಬಳು ತನ್ನ ಅನಾರೋಗ್ಯದ ನೆಪ ಹೇಳಿ ತಡೆದು ನಿಲ್ಲಿಸಿ ಊರಿಗೊಬ್ಬರೇ ಇರುವ ನೀವು ಹೋದರೆ ತನ್ನ ಪ್ರಾಣಕ್ಕೇ ಅಪಾಯ ಎಂದು ಹೇಳಿ ಆ ವಿಮಾನವನ್ನು ತಪ್ಪಿಸಿದ್ದಳಂತೆ.

ಮರುದಿನ ಪತ್ರಿಕೆಗಳಲ್ಲಿ ಆ ವೈದ್ಯರು ಹೋಗಬೇಕಾಗಿದ್ದ ವಿಮಾನ ಪತನಗೊಂಡು ಎಲ್ಲರೂ ತೀರಿಹೋಗಿದ್ದ ವರ್ತಮಾನ ಬಂತಂತೆ. ವಾಸ್ತವವಾಗಿ ಈ ವಿಮಾನಪತನದ ಬಗ್ಗೆ ದುಃಸ್ವಪ್ನದ ಮೂಲಕ ಮೊದಲೇ ತಿಳಿದಿದ್ದ ಆ ತರುಣಿ ಅನಾರೋಗ್ಯದ ನೆಪ ಹೇಳಿ ವೈದ್ಯರ ಪ್ರಾಣ ಉಳಿಸಿದಳಂತೆ. ಇದನ್ನು ಮೆಚ್ಚಿದ ಆ ವೈದ್ಯರು ಆ ತರುಣಿಯನ್ನೇ ಮದುವೆಯಾದರಂತೆ.

ಕಥೆ ಕೇಳಲಿಕ್ಕೆ ಕುತೂಹಲಕರವಾಗಿದ್ದರೂ ವಾಸ್ತವವಾಗಿ ನಮ್ಮೆಲ್ಲರಿಗೆ ಕೆಲವೊಮ್ಮೆ ಮುಂಬರುವ ಸೂಚನೆಗಳು ಕೆಲವು ರೂಪದಲ್ಲಿ ಪ್ರಕಟವಾಗುತ್ತವೆ. ಅವುಗಳಲ್ಲಿ ಒಳ್ಳೆಯ ಸುದ್ದಿಯೂ ಇರಬಹುದು, ಕೆಟ್ಟ ಸುದ್ದಿಯೂ ಇರಬಹುದು. ಒಳ್ಳೆಯ ಸುದ್ದಿ ಬಂದರೆ ಸಂತೋಷಗೊಳ್ಳುವ ನಾವು ಕೆಟ್ಟ ಸುದ್ದಿ (ಅದರಲ್ಲೂ ಸಾವಿನ ಸುದ್ದಿ) ಕೇಳಿದರೆ ಭಯಭೀತರಾಗುವ ನಾವು ಅದಕ್ಕೆ 'ದುಃಸ್ವಪ್ನ' ಎಂಬ ಹೆಸರು ಕೊಟ್ಟುಬಿಡುತ್ತೇವೆ.

ಇವುಗಳನ್ನು ಹೆಚ್ಚಿನವರು ಅಲಕ್ಷಿಸಿದರೂ, ಈ ದುಃಸ್ವಪ್ನಗಳ ಮೂಲಕ ಸತ್ಯವಾದ ಸಂಗತಿಗಳು ಹಲವು ಮನಃಶಾಸ್ತ್ರಜ್ಞರ ತಲೆ ಕೆಡಿಸಿದ್ದು ಮಾತ್ರ ನಿಜ. ಎಷ್ಟೋ ಉದ್ಯೋಗಗಳಲ್ಲಿ ಪರಿಣಿತಿ ಪಡೆಯುತ್ತಾ ಹೋದಂತೆ ಕೇವಲ ಪುಸ್ತಕದ ಬದನೇ ಕಾಯಿಗೆ ಮಿಗಿಲಾದ ಅನುಭವವನ್ನು ಪಡೆದವರು ತಮ್ಮ ಮನಸ್ಸಿಗೆ ಯಾವುದೋ ರೀತಿಯಲ್ಲಿ ತೋಚಿದ ಮಾಹಿತಿಗಳು ಹಲವು ಪ್ರಾಣಗಳನ್ನು ಉಳಿಸಿವೆ, ಹಲವು ಕ್ಲಿಷ್ಟಕರವಾದ ಸಮಸ್ಯೆಗಳನ್ನು ನಿವಾರಿಸಿವೆ. ಆರನೆಯ ಇಂದ್ರಿಯ ಎಂದು ಕರೆಯಬಹುದಾದ ಈ ಪರಿಯ ಅನುಭವದ ಕೆಲವು ಮಹತ್ವಕರ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ

ದುಃಸ್ವಪ್ನ ಎಂದರೇನು?

ದುಃಸ್ವಪ್ನ ಎಂದರೇನು?

ಅಂಗ್ಲಪದ nightmare ಎಂಬ ಪದ ಜರ್ಮನ್ ಭಾಷೆಯ mare ಎಂಬ ಪದದಿಂದ ರೂಪುಗೊಂಡಿದೆ. ಇದರ ಅರ್ಥ goblin ಎಂಬ ತುಂಟ ಹುಡುಗನೊಬ್ಬ ಜನರು ಮಲಗಿದ್ದಾಗ ಎದೆಯ ಮೇಲೆ ಕುಳಿತು ಕೊಲ್ಲಲು ಪ್ರಯತ್ನಿಸುವುದು ಎಂದಾಗಿದೆ.ಮಲಗುವ ಸಮಯ ರಾತ್ರಿಯಾದುದರಿಂದ ಇದರೊಂದಿಗೆ night ಎಂಬ ಪದ ಸೇರಿ nightmare ಆಗಿದೆ. ಕನ್ನಡದಲ್ಲಿ ಹೇಳುವುದಾದರೆ ರಾತ್ರಿ ಮಲಗಿದ್ದ ಸಮಯದಲ್ಲಿ ಕಂಡ ಕೆಟ್ಟ ಕನಸೇ ದುಃಸ್ವಪ್ನವಾಗಿದೆ.

ದುಃಸ್ವಪ್ನ ನಿಮ್ಮ ದಿನಚರಿಯನ್ನು ಬದಲಿಸಬಹುದು

ದುಃಸ್ವಪ್ನ ನಿಮ್ಮ ದಿನಚರಿಯನ್ನು ಬದಲಿಸಬಹುದು

ದುಃಸ್ವಪ್ನ ಕಂಡ ಹಿರಿಯರು ಈ ಕನಸಿನಲ್ಲಿ ತಮಗೆ ಅಥವಾ ತಮ್ಮ ಪರಿವಾರದ ಯಾರಿಗಾದರೂ ಅಪಾಯವನ್ನು ಗ್ರಹಿಸಿದರೆ ಅಂದು ಯಾರನ್ನೂ ಮನೆಯಿಂದ ಹೊರಹೋಗಲು ಬಿಡುವುದೇ ಇಲ್ಲ. ತಾನೊಂದು ದುಃಸ್ವಪ್ನ ಕಂಡಿದ್ದೇನೆ, ದಯವಿಟ್ಟು ನನಗಾಗಿ ಇಂದು ಮನೆಬಿಟ್ಟು ಹೋಗಬೇಡಿ ಎಂದು ಮಕ್ಕಳಂತೆ ರಚ್ಚೆ ಹಿಡಿಯುವುದನ್ನು ಪ್ರತಿ ಮನೆಯಲ್ಲೂ ನೋಡಿದ್ದೇವೆ.ದುಃಸ್ವಪ್ನವನ್ನು ನಂಬದವರು ಸಹಾ ತಮ್ಮ ಹಿರಿಯರಿಗಾಗಿ ತಮ್ಮ ದಿನಚರಿಯನ್ನು ಬದಲಿಸಬೇಕಾಗಿ ಬರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ದುಃಸ್ವಪ್ನವನ್ನು ಪದೇಪದೇ ಕಂಡವರು ಈ ಅಪಾಯದಿಂದ ತಪ್ಪಿಸಿಕೊಳ್ಳಲು ದೇವರು ನೀಡುತ್ತಿರುವ ಮುನ್ನೆಚರಿಕೆಗಳೆಂದು ಪರಿಗಣಿಸುವುದರಿಂದ ದಿನಚರಿಯನ್ನು ಬದಲಿಸುವಷ್ಟು ಆ ಸ್ವಪ್ನವನ್ನು ನಂಬುತ್ತಾರೆ. Lucid dreaming ಎಂದು ಕರೆಯುವ ಈ ಕನಸು ನಿಮ್ಮ ನೆದ್ದೆ, ನೆಮ್ಮದಿ ಮತ್ತು ಆರೋಗ್ಯವನ್ನು ಕೆಡಿಸಬಲ್ಲುದು.

ತಡರಾತ್ರಿ ಊಟ ಮಾಡಿದವರಲ್ಲಿ ದುಃಸ್ವಪ್ನ ಹೆಚ್ಚು

ತಡರಾತ್ರಿ ಊಟ ಮಾಡಿದವರಲ್ಲಿ ದುಃಸ್ವಪ್ನ ಹೆಚ್ಚು

ಮನಃಶಾಸ್ತ್ರಜ್ಞರು ಗಮನಿಸಿದ ಪ್ರಕಾರ ಕೆಲವು ಕಾರಣಗಳಿಂದ ಮನೆಗೆ ತಡವಾಗಿ ತಲುಪಿ ತಡವಾಗಿ ಊಟ ಮಾಡಿ ಮಲಗಿದವರಲ್ಲಿಯೇ ದುಃಸ್ವಪ್ನಗಳು ಹೆಚ್ಚು. ಏಕೆಂದರೆ ನಿದ್ದೆಯ ಮೂಲಕ ವಿಶ್ರಾಂತಿ ಪಡೆಯಬೇಕಾದ ಹೊತ್ತಿನಲ್ಲಿ ಊಟ ಮಾಡಿ ತಕ್ಷಣ ಮಲಗಿದ ಬಳಿಕ ಮೆದುಳಿಗೆ ಅನಗತ್ಯವಾಗಿ ಲಭ್ಯವಾಗುವ ರಕ್ತದ ಕಾರಣ ಮೆದುಳು ಅತ್ತ ವಿಶ್ರಾಂತಿಯೂ ಅಲ್ಲದ ಇತ್ತ ಪೂರ್ಣ ಚಟುವಟಿಕೆಯೂ ಅಲ್ಲದ ಸ್ಥಿತಿಯಲ್ಲಿ ಇಲ್ಲದ ಅಥವಾ ಹಿಂದಿನ ಅನುಭವಗಳ ಮೂಲಕ ಪಡೆದ ಮಾಹಿತಿಗಳ ಕಲಸು ಮೇಲೋಗರ ಮಾಡಿ ಕನಸುಗಳ ಮೂಲಕ ಪ್ರಕಟಿಸುವ ಸಂಭವ ಹೆಚ್ಚು. ಆದ್ದರಿಂದ ರಾತ್ರ್ತಿಊಟದ ಬಳಿಕ ಕೊಂಚ ದೂರ ನಡೆದ ಬಳಿಕ ಮಲಗುವುದು ಉತ್ತಮ. ದುಃಸ್ವಪ್ನದ ತೊಂದರೆ ಇರುವವರು ಮಲಗುವ ನಾಲ್ಕು ಘಂಟೆಗೂ ಮುನ್ನ ಊಟ ಮಾಡಲು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.

ನಿದ್ರಾಹೀನತೆ

ನಿದ್ರಾಹೀನತೆ

ದುಃಸ್ವಪ್ನದ ಪ್ರಮುಖ ತೊಂದರೆ ಎಂದರೆ ನಿದ್ದೆಯಿಂದ ಬೆಚ್ಚಿ ಬಿದ್ದು ಏಳುವುದು ನಂತರ ನಿದ್ದೆ ಬರದೇ ಹೊರಳಾಡುವುದು. ಈ ಪರಿಯನ್ನು ಚಲನಚಿತ್ರದ ಕಥೆ ಬರೆಯುವವರು ತಮ್ಮ ಕಲ್ಪನೆಗೆ ರೆಕ್ಕೆ ಮೂಡಿಸಿ ಚಿತ್ರಕಥೆ ಬರೆದು ಕೋಟಿ ಕೋಟಿ ಬಾಚಿದ್ದಾರೆ. ವಾಸ್ತವವಾಗಿ ಸುಮಾರು ಐದರಿಂದ ಆರು ಶೇಖಡಾ ಜನರು ದುಃಸ್ವಪ್ನದಿಂದ ಬಳಲುತ್ತಾರೆ. ಅದರಲ್ಲೂ ಮಕ್ಕಳು ಹೆಚ್ಚು ಬಳಲುತ್ತಾರೆ. ಈ ತೊಂದರೆಯಿಂದ ಬಳಲುವ ಮಕ್ಕಳು ಬೆಳೆಯುತ್ತಾ ಹೋದಂತೆ ನಿದ್ರಾಹೀನತೆಯ ತೊಂದರೆ ಹೆಚ್ಚುತ್ತಾ ಹೋಗುತ್ತದೆ. ಸೂಕ್ತ ಸಲಹೆ ಮತ್ತು ಆಪ್ತತೆಯಿಂದ ಇದು ಖಂಡಿತಾ ಗುಣವಾಗುವ ತೊಂದರೆಯಾಗಿದೆ.

ಬೇಗ ಮಲಗಿ ಬೇಗ ಏಳುವವರಿಗೆ ದುಃಸ್ವಪ್ನ ಕಡಿಮೆ

ಬೇಗ ಮಲಗಿ ಬೇಗ ಏಳುವವರಿಗೆ ದುಃಸ್ವಪ್ನ ಕಡಿಮೆ

ನಿಸರ್ಗ ನೀಡಿದ ರಾತ್ರಿ ಹಗಲಿನ ಪ್ರಕಾರ ತಮ್ಮ ದಿನಚರಿಯನ್ನು ಪಾಲಿಸುವವರು ಅಂದರೆ ಬೇಗನೇ ಮಲಗಿ ಬೇಗನೇ ಏಳುವವರಲ್ಲಿ ದುಃಸ್ವಪ್ನದ ಸಂಭವ ಕಡಿಮೆ ಎಂಬ ವಿಷಯವನ್ನು ಮನಃಶಾಸ್ತ್ರಜ್ಞರು ಗಮನಿಸಿದ್ದಾರೆ. ದುಃಸ್ವಪ್ನದ ತೊಂದರೆ ಇರುವವರು ಸಾಧ್ಯವಾದಷ್ಟು ಬೇಗ ಊಟ ಮಾಡಿ ಬಳಿಕ ಕೊಂಚ ನಡೆಗೆ, ಒಂದು ಲೋಟ ಹಾಲು, ಸಾಕಷ್ಟು ಗಾಳಿ, ನಿಶಬ್ದದೊಡನೆ ಬೇಗನೇ ಪವಡಿಸಿ ಸೂರ್ಯೋದಯಕ್ಕೂ ಮುನ್ನವೇ ಎದ್ದು ದಿನದ ಚಟುವಟಿಕೆಗಳನ್ನು ಪ್ರಾರಂಭಿಸುವ ಮೂಲಕ ದುಃಸ್ವಪ್ನದ ತೊಂದರೆಯನ್ನು ನಿವಾರಿಸಬಹುದು.

ರೋಮನ್ ಶಕೆಯಲ್ಲಿ ಅತಿ ಹೆಚ್ಚು ಪ್ರಕಟವಾದ ದುಃಸ್ವಪ್ನಗಳು

ರೋಮನ್ ಶಕೆಯಲ್ಲಿ ಅತಿ ಹೆಚ್ಚು ಪ್ರಕಟವಾದ ದುಃಸ್ವಪ್ನಗಳು

ನಾಗರಿಕತೆಯ ದಾಖಲೆ ಇದ್ದಂದಿನಿಂದಲೂ ದುಃಸ್ವಪ್ನಗಳು ಮಾನವರನ್ನು ಕಾಡುತ್ತಾ ಬಂದಿವೆ. ಆದರೆ ರೋಮನ್ ಶಕೆಯಲ್ಲಿ ಈ ಪರಿ ಅತ್ಯಂತ ಹೆಚ್ಚಾಗಿದ್ದುದು ದಾಖಲಿಸಲ್ಪಟ್ಟಿದೆ. ಏಕೆಂದರೆ ಆ ಸಮಯದಲ್ಲಿ ತಮ್ಮ ದುಃಸ್ವಪ್ನವನ್ನು ರಾಜರ ಆಸ್ಥಾನದಲ್ಲಿ ಪ್ರಕಟಿಸಿ ಇದಕ್ಕೆ ಪರಿಹಾರವನ್ನು ಒದಗಿಸುವ ವ್ಯವಸ್ಥೆ ಇದ್ದುದರಿಂದ ಜನರೆಲ್ಲರೂ ತಾಮುಂದು ನಾಮುಂದು ಎಂದು ಮುಂದೆ ಬಂದು ತಮ್ಮ ದುಃಸ್ವಪ್ನಗಳ ವರದಿ ಒಪ್ಪಿಸುತ್ತಿದ್ದರು.

ಸ್ವಪ್ನಗಳಲ್ಲಿ ಈಗಾಗಲೇ ನೋಡಿರುವ ವಿಷಯಗಳು ವಾಸ್ತವದಲ್ಲಿ ಪ್ರಕಟವಾಗುವುದು

ಸ್ವಪ್ನಗಳಲ್ಲಿ ಈಗಾಗಲೇ ನೋಡಿರುವ ವಿಷಯಗಳು ವಾಸ್ತವದಲ್ಲಿ ಪ್ರಕಟವಾಗುವುದು

Deja Vu ಎಂದು ಕರೆಯಲ್ಪಡುವ ಈ ವಿದ್ಯಮಾನ ನಿಜವಾಗಿ ಹಲವರ ತಲೆಕೆಡಿಸುತ್ತದೆ. ಏಕೆಂದರೆ ಎಷ್ಟೋ ವಿಷಯಗಳನ್ನು ಈಗಾಗಲೇ ಕನಸುಗಳಲ್ಲಿ ಅಥವಾ ದುಃಸ್ವಪ್ನಗಳಲ್ಲಿ ಕಂಡವರು ಈ ವಿಷಯಗಳು ಸಾಕ್ಷಾತ್ಕಾರವಾಗುತ್ತಿರುವುದನ್ನು ನೋಡಿ ಚಕಿತರಾಗುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮುಂದೇನಾಗುತ್ತದೆ ಎಂದು ಹೇಳಲೂ ಸಮರ್ಥರಿರುತ್ತಾರೆ. ಪುರುಷರಿಗಿಂತ ಈ ಸಾಮರ್ಥ್ಯ ಮಹಿಳೆಯರಲ್ಲಿಯೇ ಹೆಚ್ಚು. elm street ಎಂಬ ಪ್ರದೇಶದಲ್ಲಿ ಗಮನಿಸಲಾದ ಇಂತಹ ಪರಿಯನ್ನು ಆಧರಿಸಿ a nightmare in the elm street ಎಂಬ ಚಲನಚಿತ್ರ ಸರಣಿ ಯಶಸ್ವಿಯಾಗಿದೆ. ಆದರೆ ಬಳಿಕ ಈ ಮಹಿಳೆಯರು ಅತಿ ನಿತ್ರಾಣರಾಗುವುದು ಮತ್ತು ನಿಃಶಕ್ತರಾಗುವುದು ಕಂಡುಬಂದಿದೆ. ಮೆದುಳಿಗೆ ಅತಿ ಹೆಚ್ಚಿನ ತ್ರಾಸು ಆಗುವುದರಿಂದ ಹೀಗಾಗುತ್ತದೆ ಎಂದು ಮನಃಶಾಸ್ತ್ರಜ್ಞರು ತಿಳಿಸುತ್ತಾರೆ.

ವಾರಕ್ಕೊಂದಕ್ಕೂ ಹೆಚ್ಚು ದುಃಸ್ವಪ್ನವೇ, ತಕ್ಷಣ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ

ವಾರಕ್ಕೊಂದಕ್ಕೂ ಹೆಚ್ಚು ದುಃಸ್ವಪ್ನವೇ, ತಕ್ಷಣ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ

ಎಲ್ಲರಿಗೂ ಒಳ್ಳೆಯ ಮತ್ತು ಕೆಟ್ಟ ಸ್ವಪ್ನಗಳು ಪ್ರತಿದಿನ ಬೀಳುತ್ತಲೇ ಇರುತ್ತವೆ. ಆದರೆ ಇವುಗಳಲ್ಲಿ ಬಹುತೇಕ ಎದ್ದ ಬಳಿಕ ಕೆಲವು ಕ್ಷಣಗಳಲ್ಲಿಯೇ ನೆನಪಿನಿಂದ ಮರೆಯಾಗುತ್ತವೆ. ಇನ್ನುಳಿದವರು ನೆನಪಿನಲ್ಲಿ ಉಳಿದ ತುಣುಕು ಮಿಣುಕುಗಳಿಗೆ ತಮ್ಮ ಕಲ್ಪನೆಯನ್ನು ಸೇರಿಸಿ ರಸವತ್ತಾಗಿಸಲು (ಈ ಮೂಲಕ ತಮ್ಮ ಅಕ್ಕಪಕ್ಕದವರ ಸಹಾನುಭೂತಿ ಅಥವಾ ಗಮನ ಸೆಳೆಯುವ) ಪ್ರಯತ್ನಿಸುತ್ತಾರೆ. ಮಾನಸಿಕವಾಗಿ ಈ ರೀತಿಯಿಂದ ಕ್ಷೋಬೆಗೊಂಡ ಮನಸ್ಸು ನಿರಾಳವಾಗುವುದರಿಂದ ಅವರಿಗೆ ಹೇಳಲು ಬಿಡುವುದು ಮೇಲು. ಆದರೆ ದುಃಸ್ವಪ್ನ ವಾರಕ್ಕೊಂದು ಬಾರಿಯಾದರೂ ನಿಮ್ಮನ್ನು ಕಾಡಿದರೆ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಅವಶ್ಯವಾಗಿದೆ. ಮಕ್ಕಳಲ್ಲಿ ತಿಂಗಳಲ್ಲಿ ಒಂದು ದುಃಸ್ವಪ್ನ ಕಾಡಿದರೂ ಮನಃಶಾಸ್ತ್ರಜ್ಞರನ್ನು ಭೇಟಿ ಅವಶ್ಯವಾಗಿದೆ.

 ಕೆಲವು ಔಷಧಿಗಳ ಅಡ್ಡಪರಿಣಾಮವೂ ಇರಬಹುದು

ಕೆಲವು ಔಷಧಿಗಳ ಅಡ್ಡಪರಿಣಾಮವೂ ಇರಬಹುದು

ಅಸ್ತಮಾ, ಅಲರ್ಜಿ ಮತ್ತು ಪಾರ್ಶ್ವವಾಯು ಮೊದಲಾದ ತೊಂದರೆಗಳಿಗೆ ವೈದ್ಯರು ನೀಡುವ ಔಷಧಿಗಳ ಅಡ್ಡಪರಿಣಾಮವಾಗಿ ದುಃಸ್ವಪ್ನ ಕಾಡಬಹುದು. ಆದರೆ ಇವು ತಾತ್ಕಾಲಿಕವಾಗಿದ್ದು ಔಷಧಿಗಳನ್ನು ನಿಧಾನವಾಗಿ ಕಡಿಮೆಗೊಳಿಸುತ್ತಾ ಬರುವುದರಿಂದ ತೊಂದರೆ ನಿವಾರಣೆಯಾಗುತ್ತದೆ. ಆದರೆ ಕೆಲಕಾಲ ಸೇವಿಸುತ್ತಾ ಬಂದಿದ್ದ ಔಷಧಿಗಳನ್ನು ಒಮ್ಮೆಲೇ ನಿಲ್ಲಿಸುವುದರಿಂದ ದುಃಸ್ವಪ್ನಗಳು ಹೆಚ್ಚಾಗಬಹುದು!

ನಿದ್ದೆ ಬರದೇ ಇತರ ತೊಂದರೆ ಎದುರಾಗಬಹುದು

ನಿದ್ದೆ ಬರದೇ ಇತರ ತೊಂದರೆ ಎದುರಾಗಬಹುದು

ದುಃಸ್ವಪ್ನಗಳು ನಿದ್ರಾಹೀನತೆಗೆ ನೇರವಾದ ಕಾರಣವಾಗಿವೆ. ರಾತ್ರಿ ನಿದ್ದೆ ಬರಬೇಕಾದ ಹೊತ್ತಿನಲ್ಲಿ ನಿದ್ದೆ ಬರದೇ ಅತಿ ಹೆಚ್ಚು ಗಮನ ನೀಡಬೇಕಾದ ಹೊತ್ತಿನಲ್ಲಿ (ಉದಾಹರಣೆಗೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನ ತರಗತಿಗಳಲ್ಲಿ) ನಿದ್ದೆ ಬರುವುದು ನಿಜವಾಗಿ ಕಾಳಜಿಯ ವಿಷಯವಾಗಿದೆ. ದುಃಸ್ವಪ್ನಗಳು ಕಾಡದಿರಲು ಉತ್ತಮ ನಿದ್ದೆ, ನಿರಾಳವಾದ ಮನಸ್ಸು, ಮನೆಯವರು, ನೆರೆಹೊರೆಯವರೊಂದಿಗೆ ಸ್ನೇಹಪರ ಬಾಂಧವ್ಯ, ಉತ್ತಮ ಆಹಾರ, ಸಾಕಷ್ಟು ವ್ಯಾಯಾಮ, ವಿಶ್ರಾಂತಿ ಮತ್ತು ಮುಖ್ಯವಾಗಿ ನಿಮ್ಮ ನಿತ್ಯದ ಜವಾಬ್ದಾರಿಗಳು ಮತ್ತು ಉದ್ಯೋಗದ ಅಥವಾ ಶಿಕ್ಷಣದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುವುದು ಅಗತ್ಯವಾಗಿದೆ.

English summary

Scary Facts About Nightmares

Perception builds a human mind, soul and personality as a whole. So what does this word 'perception' exactly mean? It's just the way you look at things that get inked on your mind and heart leaving an imprint on your faith and beliefs. It's just the way you look at things that get inked on your mind and heart leaving an imprint on your faith and beliefs.
X
Desktop Bottom Promotion