Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ನಾವೇಕೆ ನಮ್ಮ ದೇಶವನ್ನು ಹೆಮ್ಮೆಯಿಂದ ನೋಡುವುದಿಲ್ಲ?
"ಭಾರತ" ನಮ್ಮ ದೇಶ, ಇದನ್ನು ಕೇವಲ ಇಷ್ಟೇ ಎಂದು ಬಣ್ಣಿಸಲು ಸಾಧ್ಯವಾಗುವುದಿಲ್ಲ. ಆದರೆ ನಾವು ಭಾರತೀಯರು ಯಾವಾಗಲು ಅಮೆರಿಕಾ, ಯೂರೋಪ್ ಎಂದು ಪಾಶ್ಚಿಮಾತ್ಯ ದೇಶಗಳ ಕುರಿತು ಮಾತನಾಡುತ್ತಿರುತ್ತೇವೆ. ಅವು ತಮ್ಮ ಶ್ರೀಮಂತಿಕೆಯಿಂದ, ವೈವಿಧ್ಯಮಯ ಆಧುನಿಕ ತಂತ್ರಜ್ಞಾನಗಳ ದೆಸೆಯಿಂದ ಇಂದು ನಮ್ಮ ಭಾರತೀಯರ ಗಮನ ಸೆಳೆಯುತ್ತಿವೆ. ಯಾರಾದರು ಮುಂದುವರಿದ ರಾಷ್ಟ್ರಗಳ ಐದು ರಾಜಧಾನಿಗಳ ಬಗ್ಗೆ ಕೇಳಿ ನೋಡಿ. ಅವರು ಆ ನಗರಗಳ ಬಗ್ಗೆ ಭಾರೀ ಮಾತನಾಡುತ್ತಾರೆ. ಇತಿಹಾಸದ ಪುಟಗಳಲ್ಲಿ ಅಜರಾಮರರಾದ ವೀರರತ್ನಗಳು
ಆದರೆ, ಅದೇ ಜನರನ್ನು ನಮ್ಮ ದೇಶದ ಬಗ್ಗೆ ಕೇಳಿ ನೋಡಿ, ತುಟಿ ಎರಡು ಮಾಡುವುದಿಲ್ಲ. ನಾವೇಕೆ ನಮ್ಮ ದೇಶವನ್ನು ಹೀಗೆ ಕೆಳಮಟ್ಟದಲ್ಲಿ ಕಾಣುತ್ತೇವೆ? ನಾವೇಕೆ ನಮ್ಮ ದೇಶವನ್ನು ಹೆಮ್ಮೆಯಿಂದ ನೋಡುವುದಿಲ್ಲ? ನಮ್ಮ ದೇಶದ ಆಂತರಿಕ ಶಕ್ತಿಯನ್ನು ನಾವೇಕೆ ಕಡೆಗಣಿಸಿದ್ದೇವೆ? ಬನ್ನಿ ನಮ್ಮ ದೇಶದ ಕುರಿತು ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಿ. ಇದು ಕಥೆಯಲ್ಲ ನಮ್ಮ 'ವೀರ ಯೋಧರ' ನಿಜ ಸಂಗತಿ!

ವಿಶ್ವದ ಅತ್ಯಂತ ದೊಡ್ಡ ಜನ ಸೇರುವ ಕಾರ್ಯಕ್ರಮ
"ಕುಂಭ ಮೇಳ" ಎನ್ನುವ ಹನ್ನೆರಡು ವರ್ಷಕ್ಕೆ ಒಮ್ಮೆ ನಡೆಯುವ ಕಾರ್ಯಕ್ರಮದಲ್ಲಿ ಕೋಟಿಗಟ್ಟಲೆ ಜನ ಬಂದು ಸೇರುತ್ತಾರೆ. ಇಂತಹ ಜನದಟ್ಟಣೆಯನ್ನು ನಾವು ಬಾಹ್ಯಾಕಾಶದಿಂದ ಸಹ ನೋಡಬಹುದು!

ಅತ್ಯಂತ ದೊಡ್ಡ ಹೈನು ಉತ್ಪಾದಕ ರಾಷ್ಟ್ರ
ನಮ್ಮಲ್ಲಿರುವ ಬೃಹತ್ ರೈತಾಪಿ ವರ್ಗದ ದೆಸೆಯಿಂದಾಗಿ ನಾವು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹೈನು ಉತ್ಪಾದಕ ರಾಷ್ಟ್ರವಾಗಿ ಗುರುತಿಸಲ್ಪಟ್ಟಿದ್ದೇವೆ.

ಏಕೈಕ ವ್ಯಕ್ತಿಗಾಗಿ ಒಂದು ಮತ ಕೇಂದ್ರ!
2004ರ ನಂತರ ಬಂದ ಎಲ್ಲಾ ಚುನಾವಣೆಗಳಲ್ಲಿ ಭಾರತೀಯ ಚುನಾವಣಾ ಆಯೋಗವು ಗುಜರಾತಿನ ಗೀರ್ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಏಕೈಕ ಮತದಾರ ಮಹಾಂತ್ ಭರತ್‌ದಾಸ್ ದರ್ಶನ್‌ದಾಸ್‌ರವರಿಗಾಗಿ ಒಂದು ಮತಕೇಂದ್ರವನ್ನು ಸ್ಥಾಪಿಸಿದೆ. ಇದರ ಮೂಲಕ ಪ್ರತಿಯೊಬ್ಬರ ಮತವು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ರವಾನಿಸಿದೆ.

ವಜ್ರಗಳು ಮೊದಲು ಕಂಡು ಬಂದಿದ್ದು ಭಾರತದಲ್ಲಿ
ಕೃಷ್ಣ ನದಿಯ ದಂಡೆಯಲ್ಲಿ ನೆಲೆಗೊಂಡಿರುವ ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ವಿಶ್ವದಲ್ಲಿಯೇ ಮೊಟ್ಟ ಮೊದಲ ವಜ್ರದ ಗಣಿಗಾರಿಕೆಯನ್ನು ನಡೆಸಲಾಯಿತು.

ವಿಶ್ವದ ಅತ್ಯಂತ ಹಳೆಯ ಪೋಲೋ ಕ್ಲಬ್
ಬಹುತೇಕ ಭಾರತೀಯರಿಗೆ ತಿಳಿಯದೆ ಇರುವ ವಿಚಾರವೆಂದರೆ, ಅದು ಕೊಲ್ಕಟಾದಲ್ಲಿ ವಿಶ್ವದ ಅತ್ಯಂತ ಹಳೆಯ ಪೋಲೋ ಕ್ಲಬ್ ಒಂದು ಇದೆ ಎಂಬ ವಿಚಾರ!

ಚೆಸ್ ಕಂಡು ಹಿಡಿದವರು ನಾವೇ...
ಚದುರಂಗ ಅಥವಾ ಚೆಸ್ ಕಂಡು ಹಿಡಿದವರು ಭಾರತೀಯರು. ಚೆಸ್ ಪದದ ಮೂಲವೇ ಈ "ಚದುರಂಗ" ಎಂಬ ಸಂಸ್ಕೃತ ಪದ. ಅಂದರೆ ಆನೆ, ಕುದುರೆ ,ರಥ ಮತ್ತು ಪದಾತಿ ದಳವನ್ನು ಹೊಂದಿರುವ (ಚದುರಂಗ ಬಲ) ಸೈನ್ಯ ಎಂಬುದು ಇದರ ಅರ್ಥ.

ಪ್ರಾಚೀನ ಅಸ್ಥಿಪಂಜರಗಳ ಕೆರೆ
ಇಂಡೋ-ಚೀನಾ ಗಡಿಯಲ್ಲಿ ಒಂದು ಕೆರೆಯಿದೆ. ಬೇಸಿಗೆ ಕಾಲದಲ್ಲಿ ಅದರಲ್ಲಿರುವ ನೀರು ಬತ್ತಿಹೋದಾಗ ಅದರಲ್ಲಿ ನೂರಾರು ಮಾನವನ ಅಸ್ಥಿ ಪಂಜರಗಳು ಕಾಣಿಸುತ್ತವೆ. ಇವುಗಳು ಸುಮಾರು 1200 ವರ್ಷ ಹಳೆಯವು ಎಂಬುದು ಪ್ರತೀತಿ.

ವಿಶ್ವದ ಅತಿ ದೊಡ್ಡ ಶಾಖಾಹಾರಿಗಳಿರುವ ದೇಶ
ನಮ್ಮ ದೇಶದಲ್ಲಿರುವ 20-40% ಜನಸಂಖ್ಯೆಯು ಶಾಖಾಹಾರಿಗಳು. ಈ ಸಂಖ್ಯೆಯು ನಮ್ಮ ದೇಶವನ್ನು ವಿಶ್ವದ ಅತ್ಯಂತ ದೊಡ್ಡ ಶಾಖಾಹಾರಿಗಳ ದೇಶವನ್ನಾಗಿ ಮಾಡಿ. ಹೌದು ಪ್ರಾಣಿ ದಯೆ ಎನ್ನುವುದು ಭಾರತದ ಒಂದು ಹೆಚ್ಚುಗಾರಿಕೆ.

ವಿಶ್ವದ ಮೂರನೆ ಅತಿದೊಡ್ಡ ಸಕ್ರಿಯ ಸೈನ್ಯ
ಚೀನಾ ಮತ್ತು ಅಮೆರಿಕಾವನ್ನು ಹೊರತುಪಡಿಸಿದರೆ ಭಾರತ ದೇಶವು ವಿಶ್ವದ ಅತ್ಯಂತ ದೊಡ್ಡ ಸಕ್ರಿಯ ಸೈನ್ಯವನ್ನು ಹೊಂದಿದೆ. ಜೊತೆಗೆ ಸ್ವಯಂಸೇವೆಯ ಸೈನ್ಯವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸೈನ್ಯ ಭಾರತದ್ದು.



Click it and Unblock the Notifications
