For Quick Alerts
ALLOW NOTIFICATIONS  
For Daily Alerts

ನೆರೆಹೊರೆಯವರ ವಿಶ್ವಾಸಗಳಿಸುವುದು ಸುಲಭದ ಮಾತಲ್ಲ!

|

ಪ್ರಪಂಚದಲ್ಲಿ ಯಾರು ತಾನೇ ನೆರೆಹೊರೆಯವರಲ್ಲಿದೆ ಬದುಕಬಲ್ಲರು? ಏಕೆಂದರೆ ನಾವೆಲ್ಲರೂ ಮೂಲತಃ ಸಂಘ ಜೀವಿಗಳು. ನಾವು ಈ ಸಮಾಜದಲ್ಲಿ ಬದುಕಲು ನಮಗೆ ಇತರರ ನೆರವು ಖಂಡಿತ ಬೇಕು. ನಾವು ಒಬ್ಬರೇ ಈ ಪ್ರಪಂಚದಲ್ಲಿ ಬದುಕಲು ಸಾಧ್ಯವಿಲ್ಲ. ಯಾರಾದರು ಜೊತೆಗೆ ಇದ್ದರೆ ಮಾತ್ರ ನಮಗೆ ಭದ್ರತೆ ಇದೆ ಎಂದು ಭಾವಿಸುತ್ತೇವೆ.

ಅದರಲ್ಲಿಯೂ ನೆರೆ ಹೊರೆಯವರು ನಮಗೆ ಪ್ರೀತಿ ವಿಶ್ವಾಸ ಮತ್ತು ಬಂಧು ಮಿತ್ರರಿಗಿಂತ ಬೇಗ ನಮ್ಮ ಕಷ್ಟಗಳಿಗೆ ಧಾವಿಸಿ ಬರುವವರಾಗಿರುತ್ತಾರೆ. ಅದಕ್ಕಾಗಿಯೇ ನಾವು ನೆರೆ ಹೊರೆಯವರು ಇರುವ ಕಡೆಯಲ್ಲಿ ವಾಸ ಮಾಡಲು ಇಷ್ಟಪಡುತ್ತೇವೆಯೇ ಹೊರತು ದೂರದಲ್ಲಿ ಒಂಟಿಯಾಗಿ ಬದಕಲು ಅಲ್ಲ.

ನಿಮ್ಮ ಪಕ್ಕದ ಮನೆಯವರು ಒಳ್ಳೆಯವರಾಗಿರಬೇಕು ಎಂದು ನೀವು ಬಯಸುತ್ತಿರಲ್ಲವೇ? ಇದು ನೀವು ಹೇಳಿದಷ್ಟು ಸುಲಭವಲ್ಲ ಬಿಡಿ. ನೀವು ಎಷ್ಟೇ ಗಾಢವಾದ ಸ್ನೇಹವನ್ನು ಹೊಂದಿದ್ದರೂ, ಒಂದು ಸಣ್ಣ ಕೆಟ್ಟ ಘಟನೆಯು ನಿಮ್ಮ ಸಂಬಂಧವನ್ನು ಹಾಳು ಮಾಡುವುದಿಲ್ಲವೇನು?

 How To Be A Good Neighbour

ಹಾಗೆಯೇ ನಿಮ್ಮ ನೆರೆ ಹೊರೆಯವರ ಜೊತೆಗೆ ನೀವು ಎಷ್ಟೇ ಆತ್ಮೀಯ ಸಂಬಂಧವನ್ನು ಹೊಂದಿದ್ದರೂ, ಅವರ ಜೊತೆಗೆ ನೀವು ಸ್ನೇಹಮಯ ಸಂಬಂಧವನ್ನು ಮುಂದುವರೆಸಿ ಕೊಂಡು ಹೋಗಲು, ಉತ್ತಮವಾದ ಕಾಳಜಿಯನ್ನು ಹೊಂದಿರಬೇಕು. ಒಳ್ಳೆಯ ಹೆಸರು ಸಂಪಾದಿಸಲು ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಒಮ್ಮೆ ಆ ಹೆಸರು ಬಂದ ಮೇಲೆ ನೀವು ಅವರ ಹೃದಯದಲ್ಲಿ ಸ್ಥಾನವನ್ನು ಸಂಪಾದಿಸುತ್ತೀರಿ.

ಹಾಗಾದರೆ ಒಳ್ಳೆಯ ನೆರೆಹೊರೆಯವರಾಗುವುದು ಹೇಗೆ ಎಂಬುದು ಹಲವರ ಪ್ರಶ್ನೆಯಾಗಿರುತ್ತದೆ. ಕೆಲವೊಂದು ಪ್ರಾಯೋಗಿಕ ಮತ್ತು ಸಾಂಪ್ರದಾಯಿಕ ಮಾರ್ಗಗಳನ್ನು ಪಾಲಿಸುವ ಮೂಲಕ ನಾವು ಈ ಗುರಿಯನ್ನು ತಲುಪಬಹುದು. ಇದಕ್ಕಾಗಿ ನಿಮಗೆ ಹಲವಾರು ಸಲಹೆಗಳು ದೊರೆಯುತ್ತವೆ, ಅದನ್ನು ಪಾಲಿಸಿದರೆ ಸಾಕು. ಸ್ನೇಹದಿಂದ ಮತ್ತು ಎಲ್ಲರಿಗೂ ದೊರೆಯುವ ಗುಣವನ್ನು ನೀವು ಹೊಂದಿದ್ದರೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದು ಕಷ್ಟವಾಗಲಾರದು.

ಇದರಿಂದ ನಿಮ್ಮ ಕುಂಟುಂಬ ಮತ್ತು ಮಕ್ಕಳಿಗೆ ಪ್ರಯೋಜನವುಂಟಾಗುತ್ತದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಪತ್ತು ಒದಗಿದಾಗ ನೆರೆ ಹೊರೆಯವರು ತಕ್ಷಣದ ನೆರವಿಗೆ ಬರುತ್ತಾರೆ. ಇದು ನಿಮ್ಮಲ್ಲಿ ಒಂದು ಭದ್ರತೆಯನ್ನು ಮೂಡಿಸುತ್ತದೆ. ಬನ್ನಿ ಒಬ್ಬ ಒಳ್ಳೆಯ ನೆರೆಹೊರೆಯವರಾಗುವುದು ಹೇಗೆ ಎಂಬುದರ ಕುರಿತು ತಿಳಿದುಕೊಳ್ಳೋಣ.

ಸ್ನೇಹಮಯ ವಾತಾವರಣವನ್ನು ರಚಿಸಿ
ಒಳ್ಳೆಯ ನೆರೆ ಹೊರೆಯವರಾಗಲು ಮಾಡಬೇಕಾದ ಮೊದಲ ಕೆಲಸವೇನೆಂದರೆ ಸ್ನೇಹಮಯ ವಾತಾವರಣವನ್ನು ನಿರ್ಮಿಸುವುದು. ಒಂದು ನಮಸ್ಕಾರ, ಹಾಯ್, ಗುಡ್ ಮಾರ್ನಿಂಗ್ ಇವುಗಳೇ ದೊಡ್ಡ ಮಟ್ಟದ ಬದಲಾವಣೆಗಳಿಗೆ ಕಾರಣವಾಗುತ್ತದೆ. ಒಂದು ವೇಳೆ ನಿಮ್ಮ ನೆರೆ ಹೊರೆಯವರು ಹೊಸಬರಾಗಿದ್ದಲ್ಲಿ, ಅವರಿಗೆ ಕಸ ಎಲ್ಲಿ ಹಾಕಬೇಕು, ನೀರು ಎಲ್ಲಿ ದೊರೆಯುತ್ತದೆ ಮುಂತಾದ ವಿಚಾರಗಳನ್ನು ತಿಳಿಸಿಕೊಡಿ.

ಶಬ್ದ ಮಾಲಿನ್ಯ ಮಾಡಬೇಡಿ
ಸಂಗೀತವು ಕೇಳಲು ಒಳ್ಳೆಯದು, ಆದರೆ ಅದನ್ನು ಕೇಳುವುದರಿಂದ ಇತರರಿಗೆ ತೊಂದರೆಯಾಗಬಾರದು ಎಂಬುದನ್ನು ನೀವು ಯಾವಾಗಲು ನೆನಪಿನಲ್ಲಿಡಬೇಕು. ಬಹುತೇಕ ಜನ ತಮ್ಮ ಪಕ್ಕದ ಮನೆಯಲ್ಲಿರುವವರು ಮಾಡುವ ಗದ್ದಲಕ್ಕೆ ಬೇಸತ್ತು ಮನೆ ಖಾಲಿ ಮಾಡಿರುತ್ತಾರೆ. ನೀವು ಒಂದು ಸಂಗೀತದ ಪಾರ್ಟಿಯನ್ನು ಆಯೋಜಿಸಲು ಮನಸ್ಸು ಮಾಡಿದ್ದೀರಾ? ದಯವಿಟ್ಟು ಮೊದಲು ನಿಮ್ಮ ಪಕ್ಕದ ಮನೆಯವರಿಗೆ ಇದರ ಕುರಿತು ಮಾಹಿತಿ ನೀಡಿ, ಅವರ ಸಮ್ಮತಿಯು ನಿಮಗೆ ಸಿಕ್ಕರೆ ನಿಮ್ಮ ಸಂಬಂಧ ಮತ್ತಷ್ಟು ಗಾಢವಾಗುತ್ತದೆ.

ನಿಮ್ಮ ನಾಯಿಗಳನ್ನು ನಿಯಂತ್ರಿಸಿ

ಹೌದು, ನಿಮ್ಮ ನಾಯಿಗಳು ಬೊಗಳುತ್ತವೆ; ಅದನ್ನು ಹಗಲು-ರಾತ್ರಿ ಬೊಗಳಲು ಬಿಟ್ಟರೆ ನಿಮ್ಮ ನೆರೆಹೊರೆಯವರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅದನ್ನು ಸ್ವಲ್ಪ ನಿಯಂತ್ರಣದಲ್ಲಿ ಇಡಿ. ಅವರು ಬೆಳಗೆಯಿಂದ ಸಂಜೆಯವರೆಗೆ ಅದೆಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೋ, ಅದೆಷ್ಟು ಆಯಾಸಗೊಂಡಿದ್ದಾರೋ, ನಮಗೆ ಗೊತ್ತಿಲ್ಲವಲ್ಲ. ಒಂದು ವೇಳೆ ನಿಮಗೆ ನಿಮ್ಮ ನಾಯಿಯನ್ನು ನಿಯಂತ್ರಣ ಮಾಡಲು ಸಾಧ್ಯವಾಗದಿದ್ದಲ್ಲಿ, ಒಬ್ಬ ಪಶುವೈದ್ಯರನ್ನು ಭೇಟಿ ಮಾಡಿ.

ಸ್ವಚ್ಛತೆ
ಇದು ಸಹ ಒಬ್ಬ ಒಳ್ಳೆಯ ನೆರೆಹೊರೆಯವರ ಪ್ರಮುಖ ಲಕ್ಷಣ, ನಿಮಗೆ ಒಂದು ಒಳ್ಳೆಯ ಸಲಹೆಯಾಗಿರುತ್ತದೆ. ನಿಮ್ಮ ಮನೆ ಮುಂದೆ ಮತ್ತು ಹಿಂದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಇದರಿಂದ ನಿಮ್ಮ ಕುರಿತಾಗಿ ನಿಮ್ಮ ನೆರೆ ಹೊರೆಯವರಿಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡುತ್ತದೆ. ಸ್ವಚ್ಛತೆ ಕಾಪಾಡಿಕೊಳ್ಳದ ನೆರೆ ಹೊರೆಯವರನ್ನು ಯಾರು ತಾನೇ ಸಹಿಸಿಕೊಳ್ಳುತ್ತಾರೆ.

ಡ್ರೈವಿಂಗ್ ಮತ್ತು ಪಾರ್ಕಿಂಗ್
ನೀವು ವಾಹನ ಚಲಾಯಿಸುವಾಗ ಮತ್ತು ಅದನ್ನು ಪಾರ್ಕ್ ಮಾಡುವಾಗ ಶಿಷ್ಟ ನಡವಳಿಕೆಯನ್ನು ಪಾಲಿಸುವುದು ಒಳ್ಳೆಯದು. ಜೋರಾಗಿ ಹಾರ್ನ್ ಮಾಡುವುದು, ಸಂಗೀತವನ್ನು ಕೇಳುವುದು ಮತ್ತು ಪ್ರಖರವಾದ ಹೆಡ್ ಲೈಟ್ ಹಾಕಿ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯುಂಟು ಮಾಡುವುದನ್ನು ತಪ್ಪಿಸಿ. ಇತರರಿಗೆ ತೊಂದರೆಯಾಗದ ರೀತಿ ಪಾರ್ಕಿಂಗ್ ಮಾಡಿ. ಇದರಿಂದ ಸಹ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುತ್ತದೆ.

English summary

How To Be A Good Neighbour

Can anyone in this world live without a neighbour? We are all social beings and it is hard to survive alone. So, we need some good companions to feel secure. They are the ones who can come out to help you quicker than a good friend or a relative staying far. The way you expect a good next door, it is equally important to be a good neighbour for others.
Story first published: Saturday, August 8, 2015, 18:49 [IST]
X
Desktop Bottom Promotion