ಕೋಪದಿಂದ ದುಃಖ, ಶಾಂತಿಯಿಂದ ಸಂತೋಷ ನೆನಪಿಡಿ!

By C.M. Prasad

ಕೋಪ ಎಂದ ಕೂಡಲೇ ನಮಗೆ ಸಿದ್ಧ ಪುರುಷ ಗೌತಮ ಬುದ್ಧ ಹೇಳಿದ ಮಾತೊಂದು ನೆನಪಾಗುತ್ತದೆ. 'ನೀವು ಕೋಪವನ್ನು ಇಟ್ಟುಕೊಂಡರೆ ನೀವೇ ವಿಷ ಕುಡಿದು, ಮತ್ತೊಬ್ಬರ ಸಾವನ್ನು ನಿರೀಕ್ಷಿಸಿದಂತೆ'. ಈ ಮಾತು ನಿಜಕ್ಕೂ ಎಷ್ಟು ಅರ್ಥಪೂರ್ಣವಾಗಿದೆ. ಕೋಪ ಮಾಡಿಕೊಳ್ಳುವುದು ಬೇರೊಬ್ಬರ ತಪ್ಪುಗಳಿಗೆ ನಿಮಗೆ ನೀವೇ ಶಿಕ್ಷಿಸಿಕೊಂಡಂತೆ.

ಕೋಪಗೊಳ್ಳಲು ಅನೇಕ ರೀತಿಯ ಕಾರಣಗಳಿರುತ್ತದೆ, ಮಾನಸಿಕವಾಗಿ ಅಸಮಾಧಾನಗೊಂಡಾಗ ಕೋಪ ಬರುವುದು ಸರ್ವೆ ಸಾಮಾನ್ಯ. ಇದು ಬೇರೊಬ್ಬರ ಭಾವನೆಗಳಿಗೆ ಹಾನಿ ಮಾಡುತ್ತದಲ್ಲದೇ ಇದರಿಂದ ಹೆಚ್ಚು ಉಪಯೋಗವೇನೂ ಇಲ್ಲ. ಹದಿಹರೆಯದವರಿಗೆ ಹೆಚ್ಚು ಕೋಪ ಬರುವುದು ಸಹಜ. ಆದರೆ ಇದು ಒಳ್ಳೆಯ ಲಕ್ಷಣವಲ್ಲ. ಅವರಿಗೆ ಬೇಕಾದ್ದನ್ನು ನಿರಾಕರಿಸಿದರೆ ಸಹಜವಾಗಿ ಕೋಪಕ್ಕೆ ಒಳಗಾಗುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ಕೋಪಪಡುವ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ದೀರ್ಘಕಾಲದವರೆಗೆ ಕೋಪಪಡದೇ ಇರುವುದು ಸಹ ಮಾನಸಿಕ ಖಿನ್ನತೆಗೆ ಒಳಪಡುವಂತಾಗುತ್ತದೆ. ಆದ್ದರಿಂದ ಸಂದರ್ಭಾನುಸಾರವಾಗಿ ನಿಮ್ಮ ವಿವೇಚನೆಗೆ ತಕ್ಕಂತೆ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಬೇರೊಬ್ಬರ ನಡವಳಿಕೆಗಳು ನಿಮ್ಮ ಮನಸ್ಸಿನ ಶಾಂತಿಯನ್ನು ಕದಡದಂತೆ ಎಚ್ಚರವಹಿಸಿ. ನೀವು ಸುಲಭವಾಗಿ ಕೋಪಕ್ಕೆ ಒಳಗಾಗುವಂತಹ ಕಾರಣಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂಗೋಪ ಒಳ್ಳೆಯದಲ್ಲವೆಂದು ನೀವೂ ಒಪ್ಪುತ್ತೀರಾ?

Different Forms Of Anger

ಸಂದರ್ಭದ ಅನುಸಾರವಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಇಡೀ ಸನ್ನಿವೇಶವನ್ನೇ ಬದಲಾಯಿಸಬಹುದು. ಕೋಪಕ್ಕೆ ನಿಜವಾದ ಕಾರಣವನ್ನು ಮೊದಲು ಅರಿಯಬೇಕು ನಂತರ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಅಭ್ಯಾಸವನ್ನು ಕಲಿತುಕೊಳ್ಳಬೇಕು. ಕೋಪಕ್ಕೆ ಪರಿಹಾರವನ್ನು ಕಂಡುಕೊಂಡರೆ ಸಮಸ್ಯೆ ತಾನಾಗೇ ಬಗೆಹರೆದಂತೆ. ಮೊದಲು ಕೋಪ ಪಡುವ ಬದಲು ಅದರ ಕಾರಣಕ್ಕೆ ಮೂಲವನ್ನು ಹುಡುಕಬೇಕು. ಸದರಿ ಕಾರಣಗಳ ಒಂದು ಮುನ್ನೋಟವನ್ನು ನಿಮಗಾಗಿ ನಾವು ನೀಡುತ್ತಿದ್ದೇವೆ. ಮುಂದೆ ಓದಿ. .

ಕೆರಳಿಸುವುದು
ಇದಕ್ಕೆ ಮುಖ್ಯ ಕಾರಣವೆಂದರೆ ಸನ್ನಿವೇಶವು ನಿಮ್ಮಂತೆ ಅನುಸರಿಸದಿರುವುದು. ಉದಾಹರಣೆಗೆ ನಿಮ್ಮ ಲ್ಯಾಪ್ ಟಾಪ್ ಒಮ್ಮೆಲೆ ದುರಸ್ಥಿಗೊಂಡರೆ ನಿಮ್ಮನ್ನು ಕೆರಳಿಸುತ್ತದೆ. ಇದು ಬಗೆಹರಿಯದ ಕಾರಣವೇನಲ್ಲ. ಕೆರಳಿಸುವಿಕೆಯು ಕೋಪಕ್ಕೆ ತಿರುಗದಂತೆ ಒಮ್ಮೆ ದೀರ್ಘವಾಗಿ ಉಸಿರು ಬಿಗಿ ಹಿಡಿದು ಒಂದರಿಂದ ಹತ್ತರವರೆಗೆ ಅಂಕಿಗಳನ್ನು ಎಣಿಸಿ. ಇದು ಒಳ್ಳೆಯ ಉಪಾಯ.

ಹತಾಶೆಗೊಳ್ಳುವುದು
ನಿಮ್ಮ ಯೋಜನೆಯಂತೆ ಸಂದರ್ಭಗಳು ನಿರ್ವಹಣೆಯಾಗದೆ ಏರುಪೇರಾದಲ್ಲಿ ಹತಾಶೆಗೆ ಒಳಗಾಗುವುದು ಸಹಜ ಪ್ರಕ್ರಿಯೆ. ಆದರೆ ಅದನ್ನು ಕೋಪಕ್ಕೆ ಬದಲಾವಣೆಯಾಗದಂತೆ ತಡೆಯಲು ನೀವು ಮೊದಲು ಬಂದದ್ದನ್ನು ಸ್ವೀಕರಿಸುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ಆರಾಮದಾಯಕ ಜೀವನ ನಡೆಸಲು ಹೆಚ್ಚು ಸಹಕಾರಿ. ಕೋಪವನ್ನು ನಿಯಂತ್ರಿಸಲು 4 ಮಂತ್ರ

ಅಸಮಾಧಾನಗೊಳ್ಳುವುದು
ಒಬ್ಬರ ಮೇಲೆ ದ್ವೇಷ ಸಾಧಿಸುವುದು ಇದಕ್ಕೆ ಮುಖ್ಯ ಕಾರಣ. ನೀವು ಅಸಮಾಧಾನಗೊಂಡಾಗ ಈ ಮಂತ್ರವನ್ನು ನೆನಪಿಸಿಕೊಳ್ಳಿ. 'ನೀವು ಮತ್ತೊಬ್ಬರ ಹೇಳಿಕೆಯನ್ನು ಹೆಚ್ಚು ನೆನಪಿಸಿಕೊಳ್ಳದೆ, ಅವರ ಹೇಳಿಕೆಗೆ ನೀವು ನಡೆದುಕೊಂಡ ರೀತಿಯ ಬಗ್ಗೆ ಒಮ್ಮೆ ಅವಲೋಕಿಸಿ' ಇದು ನಿಜಕ್ಕೂ ಒಳ್ಳೆಯ ಉಪಾಯ. ನೀವು ನಿಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಇದರಿಂದ ಹೆಚ್ಚು ಅಸಮಾಧಾನ ಉಂಟಾಗಲು ಕಾರಣವಾಗಿ ಕೋಪಕ್ಕೆ ದಾರಿ ಮಾಡಿಕೊಡುತ್ತದೆ.

ತಿರಸ್ಕಾರ
ಒಬ್ಬರ ಆಲೋಚನೆ ಅಥವಾ ಹೇಳಿಕೆಗಳನ್ನು ಒಪ್ಪದೇ ನಿಮ್ಮ ಮನೋಭಾವಕ್ಕೆ ಅನುಸಾರವಾಗಿ ನಿರ್ಧರಿಸುವುದು ಇದಕ್ಕೆ ನೇರ ಕಾರಣ. ನಿಮಗಿದೆ ತಿಳಿದಿರಲಿ, ನೀವು ಯಾರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ನಿಮ್ಮ ಕಾರ್ಯವು ಸುಸೂತ್ರವಾಗಬೇಕಾದರೆ ಬೇರೊಬ್ಬರನ್ನು ನಿಯಂತ್ರಿಸದೆ ಅವರನ್ನು ಪ್ರಭಾವಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಕೋಪ ಕಡಿಮೆಯಾಗುತ್ತದೆ. ಸೈತಾನನ ಸ್ವಭಾವದ ಕೋಪ, ನಮಗ್ಯಾಕೆ ಬೇಕು ಅಲ್ಲವೇ?

ದ್ವೇಷದ ಮನೋಭಾವ
ಇದು ಒಬ್ಬ ಮನುಷ್ಯನ ಪೈಶಾಚಿಕ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ತಡೆಯುವುದು ಅಷ್ಟು ಸುಲಭವಲ್ಲ. ಆದರೆ, ಇತರರನ್ನು ನೋವುಂಟು ಮಾಡದೆ ಪ್ರೀತಿಸುವುದನ್ನು ಕಲಿಯಿರಿ. ನೀವು ಬೇರೊಬ್ಬರನ್ನು ನಿಯಂತ್ರಿಸಲು ಪ್ರಯತ್ನಿಸುವುದನ್ನು ಬಿಟ್ಟು ನಿಮ್ಮನ್ನು ನೀವು ನಿಯಂತ್ರಿಸುವುದನ್ನು ರೂಢಿಸಿಕೊಳ್ಳಿ. ನಿಮ್ಮ ದ್ವೇಷ ಮನೋಭಾವವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ಬಾಳು ಸದಾ ಆನಂದದಿಂದಿರಲು ನೆರವಾಗುತ್ತದೆ. ಈ ಕಾರಣಗಳು ನಿಮ್ಮ ಕೋಪಕ್ಕೆ ನೇರವಾಗಿ ಪ್ರೇರೇಪಿಸುತ್ತವೆ. ಕೋಪ ಅನರ್ಥಕ್ಕೆ ಮೂಲ ಎನ್ನುವುದನ್ನು ಮರೆಯದಿರಿ.

X
Desktop Bottom Promotion