Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಉದ್ಯೋಗದಲ್ಲಿ ಸಂತೋಷವಾಗಿರಲು ಕೆಲವು ಮಾರ್ಗಗಳು
ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಉದ್ಯೋಗವೆನ್ನುವುದು ಅತೀ ಅಗತ್ಯ. ಒಮ್ಮೆ ನೀವು ಉದ್ಯೋಗ ಪಡೆದ ಬಳಿಕ ಕೆಲಸ ಮಾಡುವ ವಾತಾವರಣ ಮತ್ತು ಸ್ಥಳದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದರಿಂದಾಗಿ ಕೆಲಸ ಮಾಡುವ ಸ್ಥಳ ನಿಮಗೆ ಸಂತೋಷ ನೀಡಬೇಕು ಅಥವಾ ನಿಮಗೆ ಅದರಿಂದ ಸಂತೋಷ ಸಿಗಬೇಕು. ಹಿತಕಾರಿ ಕೆಲಸದ ಸ್ಥಳವಿದ್ದರೆ ಆಗ ನಿಮ್ಮ ಪ್ರದರ್ಶನ ಮತ್ತು ಫಲಿತಾಂಶಕ್ಕೆ ನೆರವಾಗುತ್ತದೆ. ಕೆಲವರು ತಮ್ಮ ಕೆಲಸದ ಸ್ಥಳದ ಪರಿಸ್ಥಿತಿ ಮತ್ತು ಒತ್ತಡದ ಬಗ್ಗೆ ಮಾತನಾಡುತ್ತಿರುತ್ತಾರೆ.
ಇದು ಇಂದಿನ ದಿನಗಳಲ್ಲಿ ಸಾಮಾನ್ಯ ಕೂಡ. ಆದರೆ ಕೆಲಸದ ಸ್ಥಳದಲ್ಲಿ ಸಂತೋಷವಾಗಿರಲು ಕೆಲವೊಂದು ವಿಷಯಗಳನ್ನು ನೀವು ಮಾಡಬಹುದು. ಕೆಲಸದ ಸ್ಥಳದಲ್ಲಿ ಸಂತೋಷವಾಗಿರುವುದು ತುಂಬಾ ಸುಲಭ. ನೀವು ಬಾಸ್ ನ್ನು ನಿಭಾಯಿಸುವ ಬಗ್ಗೆ ಅಥವಾ ಹಿಂದಿನಿಂದ ಇರಿಯುವ ಸಹೋದ್ಯೋಗಿಗಳ ಬಗ್ಗೆ ಚಿಂತಿಸುತ್ತಿರಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಹಿಳೆಯರಿಗೆ ತಿಳಿದಿರಲೇಬೇಕಾದ ಆಫೀಸ್ ನಿಯಮಗಳಿವು
ಆದರೆ ಇದು ನಿಮ್ಮ ಮೇಲೆ ಮತ್ತಷ್ಟು ಹೊರೆ ಹಾಕಲಿದೆ. ಇಂತಹ ವಿಷಯಗಳ ಬಗ್ಗೆ ನೀವು ಯಾವಾಗಲೂ ಚಿಂತಿಸುತ್ತಿದ್ದರೆ ಆಗ ಅದು ನಿಮ್ಮ ಪ್ರದರ್ಶನದ ಮೇಲೆ ಮಾತ್ರವಲ್ಲದೆ ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಲಿದೆ. ಇದರಿಂದ ನೀವು ಮತ್ತೊಂದು ಕೆಲಸ ಹುಡುಕಲು ಆರಂಭಿಸುತ್ತೀರಿ.

ಉದ್ಯೋಗ ಬದಲಾಯಿಸುವುದು ಆರೋಗ್ಯಕರ ಪರಿಹಾರವೇ? ನೀವು ಕೆಲಸದ ಸ್ಥಳದಲ್ಲಿ ಸಂತೋಷದಿಂದ ಇಲ್ಲವೆಂದಾದರೆ ಆಗ ನೀವು ಒಳ್ಳೆಯ ಪರಿಹಾರದ ಬಗ್ಗೆ ಪ್ರಯತ್ನಿಸಬೇಕು. ಯಾವತ್ತೂ ಸೋಲಬೇಡಿ. ಯೋಚಿಸಿ. ನಿಮ್ಮ ಸುತ್ತಲಿನ ವಾತಾವರಣದ ಹೊರತಾಗಿಯೂ ಕೆಲಸದ ಸ್ಥಳದಲ್ಲಿ ನೀವು ಹೇಗೆ ಸಂತೋಷವಾಗಿರಬಹುದು ಎಂದು ಕೆಲವೊಂದು ಟಿಪ್ಸ್ ನೀಡಲಾಗಿದೆ. ಓದಿ ಮತ್ತು ಇದರ ಲಾಭ ಪಡೆಯಿರಿ.
1. ಒಂದೇ ಗೂಡಿನ ಹಕ್ಕಿಗಳು
ಕೆಲಸದ ಸ್ಥಳದಲ್ಲಿರುವಾಗ ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸುವುದು ತುಂಬಾ ಮುಖ್ಯ ಮತ್ತು ಒಂದೇ ಗೂಡಿನ ಹಕ್ಕಿಗಳಂತೆ ನೀವಿರಬೇಕು. ಇದು ನಿಮಗೆ ನೆರವಾಗುತ್ತದೆ. ಯಾವಾಗಲೂ ಮನೆಯಲ್ಲೇ ಊಟ ಮಾಡುವ ಬದಲು ನಿಮ್ಮ ಸಹೋದ್ಯೋಗಿಗಳೊಂದಿಗೆ ಹೊರಗಡೆ ಹೋಗಿ ತಿನ್ನಿ ಅಥವಾ ಮನೆಯಿಂದ ಊಟ ತಂದರೆ ಅದನ್ನು ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಲು ನೆರವಾಗುತ್ತದೆ. ಕೆಲಸದ ಸ್ಥಳದಲ್ಲಿ ಸಂತೋಷವಾಗಿರಲು ಇದು ಒಂದು ಟಿಪ್ಸ್.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಫೀಸ್‌ನಲ್ಲಿ ಆಲಸ್ಯ ಓಡಿಸುವುದು ಹೇಗೆ?
2. ವೈಯಕ್ತಿಕ ಯಾವತ್ತಿಗೂ ವೈಯಕ್ತಿಕ
ಕೆಲಸ ಸ್ಥಳದಲ್ಲಿ ಸಂತೋಷವಾಗಿರಲು ನೀವು ವಿಷಯವನ್ನು ಮೊದಲು ಕಲಿತುಕೊಳ್ಳಬೇಕು. ವೈಯಕ್ತಿಕ ಸಮಸ್ಯೆ ಯಾವಾಗಲೂ ವೈಯಕ್ತಿಕ. ಇದನ್ನು ಕೆಲಸದೊಂದಿಗೆ ಬೆರೆಸಬೇಡಿ. ಇದು ಪ್ರತಿಯೊಂದು ವಿಧದಲ್ಲೂ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ಕೆಲಸದ ಸ್ಥಳದಲ್ಲಿ ಸಂತೋಷವಾಗಿರಬೇಕೆಂದರೆ ಆಗ ನೀವು ವೈಯಕ್ತಿಕ ಸಮಸ್ಯೆಗಳನ್ನು ಮನೆಯಲ್ಲೇ ಬಿಡಿ.
3. ವರ್ತನೆ ನಿಮ್ಮ ಹಿರಿಮೆ ಔನತ್ಯ ತೋರಿಸುತ್ತದೆ
ಕೆಲವೊಂದು ಸಂದರ್ಭದಲ್ಲಿ ನೀವು ಕೆಲಸ, ಹುದ್ದೆ ಮತ್ತು ಪ್ರತಿಯೊಂದನ್ನು ದ್ವೇಷಿಸಬಹುದು. ಆದರೆ ನಿಮ್ಮ ವರ್ತನೆಯು ನಿಮ್ಮ ಔನತ್ಯವನ್ನು ನಿರ್ಧರಿಸುತ್ತದೆ. ನೀವು ದ್ವೇಷಿಸಿದರೂ ಪ್ರತಿಯೊಂದರಲ್ಲೂ ಏನಾದರೂ ಪಡೆಯಿರಿ. ಇದು ಕೆಲಸದ ಸ್ಥಳದಲ್ಲಿ ಸಂತೋಷವಾಗಿರಲು ಒಳ್ಳೆಯ ವಿಧಾನ ಮತ್ತು ಕೆಲಸದ ಸ್ಥಳದಲ್ಲಿ ಸಂತೋಷವಾಗಿರಲು ಇದು ಮುಖ್ಯ ಟಿಪ್ಸ್.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಫೀಸಿನಲ್ಲಿ ಕೂತು ಬೊಜ್ಜು ಬರುತ್ತಿದೆಯೆ?
4. ಪ್ರತ್ಯೇಕವಾಗಿ ಉಳಿಯುವುದನ್ನು ನಿಲ್ಲಿಸಿ
ಕೆಲಸದ ಸ್ಥಳದಲ್ಲಿ ಸಂತೋಷವಾಗಿರಲು ನೀವು ಮಾರ್ಗ ಹುಡುಕುತ್ತಿದ್ದೀರಾ? ಹಾಗಾದರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಸ್ನೇಹಪರ ಬಂಧನ ಬೆಳೆಸಬೇಕು. ನಿಮ್ಮ ಸ್ನೇಹಪರ ಮನೋಭಾವವು ಒತ್ತಡದ ಸಮಯದಲ್ಲಿ ನಿಮಗೆ ನೆರವಾಗಲಿದೆ. ನೀವು ಪ್ರತ್ಯೇಕವಾಗಿ ಉಳಿದರೆ ಆಗ ಒಂದೇ ಸ್ಥಳದಲ್ಲಿ ನೀವಿರುತ್ತೀರಿ ಮತ್ತು ಕೆಲಸದ ಸ್ಥಳದಲ್ಲಿ ಸಂತೋಷವಾಗಿರುವುದು ಕಷ್ಟವಾಗಬಹುದು.
5. ಧನ್ಯವಾದ ಹೇಳಿ
ನಿಮಗೆ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಯಾಕೆಂದರೆ ನಿಮಗೆ ಕೆಲಸವಿದೆ. ನೀವು ಕೋಪದಲ್ಲಿ ಕೀ ಬೋರ್ಡ್ ನ್ನು ಜೋರಾಗಿ ಒತ್ತುವುದು, ಕಚೇರಿಯ ಫೋನ್ ಮೇಲೆ ಕೋಪ ತೋರಿಸುವುದು ಮತ್ತು ಬಾಗಿಲನ್ನು ಜೋರಾಗಿ ಹಾಕುವ ಮೂಲಕ ಸಿಟ್ಟು ಹೊರಹಾಕುವುದು...ಹೀಗೆ ಹಲವಾರು. ಆದರೆ ಕೆಲವು ಮಂದಿ ಕೆಲಸ ಸಿಗದೆ ಪರದಾಡುತ್ತಿದ್ದಾರೆ ಎನ್ನುವುದು ನಿಮಗೆ ನೆನಪಿರಲಿ. ನಿಮಗೆ ಕೆಲಸ ಸಿಕ್ಕಿದೆ ಮತ್ತು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಕೆಲಸ ಸ್ಥಳದಲ್ಲಿ ಸಂತೋಷವಾಗಿರಲು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸಿ.
6. ಧನಾತ್ಮಕವಾಗಿರಿ
ಪ್ರತಿಯೊಬ್ಬರಿಗೂ ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿರುತ್ತದೆ. ಧನಾತ್ಮಕವಾಗಿರಿ. ಪರಿಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ ಎಂದು ಭಾವಿಸಿ. ಭರವಸೆಯಿರಲಿ. ಪ್ರತಿಯೊಂದಕ್ಕೂ ಅದರ ಸಮಯ ನೀಡಿ.



Click it and Unblock the Notifications