Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನೆರವೇರಿತು ಪೂಜೆ..! 30 ವರ್ಷದ ವನವಾಸ ಅಂತ್ಯ..!
ವಾರಣಾಸಿಯ ಜ್ಞಾನವಾಪಿ ಮಸೀದಿಯ ಕೆಳಗಿರುವ ನೆಲ ಮಾಳಿಗೆಯಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಕೋರ್ಟ್ ನಿನ್ನೆ ತೀರ್ಪು ನೀಡಿತ್ತು. ಸುಮಾರು 30 ವರ್ಷದಿಂದಲೂ ಬೀಗ ಹಾಕಲಾಗಿದ್ದ ನೆಲಮಾಳಿಗೆಯನ್ನು ಇಂದು ತೆರೆಯಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಅಲ್ಲಿ ಪೂಜೆಯೂ ನೆರವೇರಿದೆ.
ಜ್ಞಾನವಾಪಿ ಮಸೀದಿಯ ಕೆಳಗಿರುವ ನೆಲ ಮಾಳಿಗೆಯಲ್ಲಿ ಹಿಂದೂ ಅರ್ಚಕರ ಕುಟುಂಬದ ಸದಸ್ಯರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನೆಲ ಮಾಳಿಗೆಯ ಬೀಗ ಮುದ್ರೆಯನ್ನು ತೆರವುಗೊಳಿಸಬೇಕು ಎಂದು ಬುಧವಾರ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ನಂತರ ಇದೀಗ ಬೀಗ ಮುದ್ರೆಯನ್ನು ತೆರವುಗೊಳಿಸಲಾಗಿದೆ.

ದಕ್ಷಿಣದ ನೆಲಮಾಳಿಗೆಯ ಬಾಗಿಲುಗಳ ಬಳಿ ಸ್ಟೀಲ್ ಗ್ರಿಲ್‌ಗಳನ್ನು ಕತ್ತರಿಸಿದ ನಂತರ ಗೇಟ್ ಅನ್ನು ಸಹ ಸ್ಥಾಪಿಸಲಾಗಿದೆ. ಗುರುವಾರ ಮುಂಜಾನೆ ಮಂಗಳಾರತಿ ಕಾರ್ಯಕ್ರಮವೂ ನೆರವೇರಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬುಧವಾರ ಮಧ್ಯಾಹ್ನ, ಜಿಲ್ಲಾ ನ್ಯಾಯಾಧೀಶರು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ (ಎಸ್‌ಕೆವಿಟಿಟಿ) ಮಂಡಳಿಯಿಂದ ನೇಮಕಗೊಳ್ಳಲು ಅರ್ಚಕರಿಂದ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯೊಳಗೆ ದೇವತೆಗಳ ಪೂಜೆಗೆ ಅನುಮತಿ ನೀಡಿದ್ದರು.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಶೃಂಗಾರ ಗೌರಿ ಮತ್ತು ಇತರ ದೇವತೆಗಳನ್ನು ಪೂಜಿಸುವಂತೆ ಕೋರಿ ಆಚಾರ್ಯ ವೇದವ್ಯಾಸ ಪೀಠದ ದೇವಾಲಯದ ಪ್ರಧಾನ ಅರ್ಚಕ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರ ಮನವಿಯ ಮೇರೆಗೆ ನ್ಯಾಯಾಲಯವು ಈ ಆದೇಶ ನೀಡಿದೆ. ಇದಕ್ಕೂ ಮೊದಲು, ನ್ಯಾಯಾಲಯವು ಈಗಾಗಲೇ ಜನವರಿ 17 ರಂದು ಜ್ಞಾನವಾಪಿಯ ದಕ್ಷಿಣ ನೆಲಮಾಳಿಗೆಯ ರಿಸೀವರ್ ಆಗಿ ಡಿಎಂ ಅವರನ್ನು ನೇಮಿಸಿತ್ತು ಮತ್ತು ನಂತರದವರು ಜನವರಿ 23 ರಂದು ಈ ನೆಲಮಾಳಿಗೆಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ನೆಲಮಾಳಿಗೆಯನ್ನು ಸ್ವಚ್ಛಗೊಳಿಸಿದ ನಂತರ, ಲಕ್ಷ್ಮಿ ದೇವಿ ಮತ್ತು ಗಣೇಶನ ಆರತಿಯನ್ನು ಮಾಡಲಾಗಿದೆ. ಈ ಪೂಜೆಯ ವಿಡಿಯೋಗಳು ಸಹ ಹರಿದಾಡಿವೆ.
ಬೀಗ ಹಾಕಲು ಸೂಚಿಸಿದ್ದ ಮುಖ್ಯಮಂತ್ರಿ ಯಾದವ್
ಬಾಬ್ರಿ ಮಸೀದಿ ಧ್ವಂಸಗೊಂಡ ಕೆಲ ಸಮಯದ ನಂತರ ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಆದೇಶದ ಮೇರೆಗೆ ಈ ಮಳಿಗೆಗ ಬೀಗ ಹಾಕಲಾಗಿತ್ತು. ಇದೀಗ ಬರೋಬ್ಬರಿ 30 ವರ್ಷಗಳ ನಂತರ ವಾರಣಾಸಿಯ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯನ್ನು ಜಿಲ್ಲಾ ನ್ಯಾಯಾಲಯವು ಆಡಳಿತಕ್ಕೆ ಆದೇಶಿಸಿದ ನಂತರ ಹಿಂದೂ ಪುರೋಹಿತರ ಕುಟುಂಬದ ಸದಸ್ಯರು ಪ್ರಾರ್ಥನೆ ಆರಂಭಿಸಿದ್ದಾರೆ.
ರಾತ್ರೋರಾತ್ರಿ ಜಮಾಯಿಸಿದ ಭಕ್ತರು
ಮಸೀದಿ ನೆಲಮಳಿಗೆಯಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಮಸೀದಿ ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಲು ಆರಂಭಿಸಿದರು. ಈ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜೊತೆಗೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಪೂಜೆ ನಡೆಸಲಾಗಿದೆ ಎಂದು ಸಹ ವರದಿಯಾಗಿದೆ.
ಮಸೀದಿಯು ತನ್ನ ನೆಲಮಾಳಿಗೆಯಲ್ಲಿ ನಾಲ್ಕು ನೆಲಮಾಳಿಗೆಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಅಲ್ಲಿ ವಾಸಿಸುತ್ತಿದ್ದ ಪುರೋಹಿತರ ಕುಟುಂಬದ ವಶದಲ್ಲಿತ್ತು. ಅರ್ಜಿದಾರರು ಮತ್ತು ಕುಟುಂಬದ ಸದಸ್ಯರಾದ ಶೈಲೇಂದ್ರ ಪಾಠಕ್ ಅವರ ಮನವಿಯ ಪ್ರಕಾರ, ವ್ಯಾಸ ಕುಟುಂಬದ ಸದಸ್ಯರಾದ ಸೋಮನಾಥ್ ವ್ಯಾಸ್ ಅವರು 1993 ರಲ್ಲಿ ಮೊಹರು ಮಾಡುವ ಮೊದಲು ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಂಶಪಾರಂಪರ್ಯವಾಗಿ ಅರ್ಚಕರಾದ ತಮಗೆ ಕಟ್ಟಡ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಒಂದು ವಾರದೊಳಗೆ ನೆಲಮಾಳಿಗೆಯೊಳಗೆ ಪ್ರಾರ್ಥನೆಯನ್ನು ನಡೆಸಬಹುದು ಎಂದು ಖಚಿತಪಡಿಸಿಕೊಳ್ಳಲು ನಿನ್ನೆ ನ್ಯಾಯಾಲಯವು ಜಿಲ್ಲಾಡಳಿತವನ್ನು ಕೇಳಿದೆ.
ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಮಸೀದಿ ಸಮಿತಿ ಹೇಳಿದೆ. "ರಾಜಕೀಯ ಲಾಭ ಪಡೆಯಲು ಇದು ನಡೆಯುತ್ತಿದೆ. ಬಾಬರಿ ಮಸೀದಿ ಪ್ರಕರಣದಲ್ಲಿ ಅದೇ ವಿಧಾನವನ್ನು ಅನುಸರಿಸಲಾಗುತ್ತಿದೆ" ಎಂದು ಅವರ ವಕೀಲ ಮೆರಾಜುದ್ದೀನ್ ಸಿದ್ದಿಕಿ ಹೇಳಿದರು.



Click it and Unblock the Notifications
