Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಿತೃಪಕ್ಷ ಆಚರಣೆಗೆ ಪ್ರಧಾನಿ ಮೋದಿ ಗಯಾಗೆ ಭೇಟಿ: ಈ ದೇವಾಲಯದ ವಿಶೇಷ ಗೊತ್ತಾ?
ಹಿಂದೂಗಳ ಆಚರಣೆಗಳಲ್ಲಿ ಒಂದಾದ ಪಿತೃ ಪಕ್ಷ ಆರಂಭಗೊಂಡಿದೆ. ಸುಮಾರು 16 ದಿನಗಳ ಕಾಲ ಪಿಂಡ ಪ್ರದಾನ, ಶ್ರಾದ್ಧ ಸಂಪ್ರದಾಯ ನೆರವೇರಲಿದೆ. ಬಹುತೇಕರು ಪೂರ್ವಜರಿಗೆ ಅನ್ನ ಆಹಾರ ನೀಡುವ ವಿಶಿಷ್ಟ ಸಂಪ್ರದಾಯ ಇದಾಗಿದೆ. ಹಾಗೆ ಕೊನೆಯ ದಿನದಂದು ಮಹಾಲಯ ಅಮಾವಾಸ್ಯೆಯಾಗಿ ಆಚರಿಸುವುದು ನೋಡಬಹುದು.
ಈ ದಿನಗಳಲ್ಲಿ ಪೂರ್ವಜನರಿಗೆ ಅನ್ನ ನೀಡುವುದು ಅವರ ಆತ್ಮಕ್ಕೆ ತೃಪ್ತಿ ತರಲಿದೆ ಹಾಗೆ ನಿಮಗೆ ಅವರಿಂದ ಆಶೀರ್ವಾದ ಒಲಿಯಲಿದೆ ಎಂದು ಹೇಳಲಾಗಿದೆ. ಹಾಗೆ ಸಾಮಾನ್ಯವಾಗಿ ಹಲವರು ಪುಣ್ಯ ಕ್ಷೇತ್ರಗಳು, ನದಿ ದಡದಂತಹ ಸ್ಥಳದಲ್ಲಿ ಪಿಂಡ ದಾನ ಮಾಡುತ್ತಾರೆ. ಹಾಗೆ ಮನೆಯಲ್ಲಿ ಅನ್ನ ನೀಡುವ ಪ್ರಕ್ರಿಯೆ ಮಾಡುವುದು ನೋಡಬಹುದು.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ತಾಯಿಯ ಆಶೀರ್ವಾದ ಪಡೆಯಲು ಶ್ರಾದ್ಧ ಪ್ರಕ್ರಿಯೆ ನೆರವೇರಿಸಲಿದ್ದಾರೆ. ಸದ್ಯ ಅವರು ಬಿಹಾರ ಚುನಾವಣೆ ಸಂಬಂಧ ಪ್ರಚಾರ ಕಾರ್ಯದಲ್ಲಿದ್ದಾರೆ ಹೀಗಾಗಿ ಪ್ರಚಾರದ ನಡುವೆ ವಿಶೇಷ ಸ್ಥಳದಲ್ಲಿ ಅವರು ತಮ್ಮ ತಾಯಿಯ ಕಾರ್ಯ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಗಯಾಗೆ ಭೇಟಿ ನೀಡಲಿದ್ದಾರೆ. ಗಯಾ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಗಯಾದಲ್ಲಿನ ವಿಷ್ಣುಪಾದ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರು ಅವರ ತಾಯಿ ಹಿರಾಬೆನ್ ಮೋದಿ ಅವರಿಗೆ ಪಿಂಡ ದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಈ ಪಿತೃ ಪಕ್ಷದ ಸಮಯದಲ್ಲಿ ಲಕ್ಷಾಂತರ ಮಂದಿ ಗಯಾಗೆ ಭೇಟಿ ನೀಡುತ್ತಾರೆ. ಏಕೆಂದರೆ ಈ ವಿಷ್ಣುಪಾದ ದೇವಾಲಯವು ಹಿಂದೂ ಧರ್ಮದಲ್ಲಿ ಪಿಂಡ ದಾನಕ್ಕೆ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಪಿಂಡ ದಾನದಿಂದ ಪೂರ್ವಜರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಈ ನಂಬಿಕೆ ಮತ್ತು ಆಚರಣೆಯ ಪ್ರಕಾರ, ಪ್ರಧಾನಿ ಮೋದಿ ಈ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ತಮ್ಮ ತಾಯಿಯ ಪಿಂಡ ದಾನ ಮಾಡುತ್ತಿದ್ದಾರೆ. ಇದೇ ದೇವಾಲಯದಲ್ಲಿ ಲಾಲು ಪ್ರಸಾದ್ ಯಾದ್ ಕೂಡ ಇಂದು ಪಿಂಡ ಪ್ರದಾನ ಕಾರ್ಯ ಮಾಡಿದ್ದಾರೆ.
ಗರುಡ ಪುರಾಣ, ವಿಷ್ಣು ಪುರಾಣ ಮತ್ತು ವಾಯು ಪುರಾಣದಂತಹ ಪ್ರಾಚೀನ ಹಿಂದೂ ಗ್ರಂಥಗಳು ಪಿಂಡ ದಾನಕ್ಕಾಗಿ ಗಯಾ ದೇವಾಲಯದ ಮಹತ್ವವನ್ನು ಉಲ್ಲೇಖಿಸಿವೆ. ಪ್ರಸಿದ್ಧ ಪಿತೃ ಪಕ್ಷ ಮೇಳವನ್ನು ಗಯಾ ಜಿಯಲ್ಲಿ ಆಯೋಜಿಸಲಾಗುತ್ತದೆ. ಪ್ರಪಂಚದಾದ್ಯಂತದ ಲಕ್ಷಾಂತರ ಹಿಂದೂಗಳು, ಮೇಳದಲ್ಲಿ ಭಾಗವಹಿಸಲು ಮತ್ತು ಪಿಂಡ ದಾನವನ್ನು ಅರ್ಪಿಸಲು ಈ ಯಾತ್ರೆಗೆ ಭೇಟಿ ನೀಡುತ್ತಾರೆ. ಫಾಲ್ಗು ನದಿ, ವಿಷ್ಣುಪಾದ ದೇವಸ್ಥಾನ ಮತ್ತು ಅಕ್ಷಯವತ್ ಮರವು ಆಚರಣೆಯ ಪ್ರಮುಖ ಸ್ಥಳವಾಗಿರಲಿದೆ.
ಹಿಂದೂ ಧರ್ಮದಲ್ಲಿ ವ್ಯಕ್ತಿಯ ಜೀವಿತಾವಿಯಲ್ಲಿ ಮೂರು ಋಣಗಳನ್ನು ಆತ ತೀರಿಸಬೇಕಂತೆ ಇಲ್ಲದಿದ್ದರೆ ಆತನಿಗೆ ಮೋಕ್ಷದ ದಾರಿ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ದೇವರ ಋಣ, ಋಷಿ ಋಣ ಹಾಗೆ ಪೂರ್ವಜರ ಋಣ. ಪಿತೃಪಕ್ಷದಲ್ಲಿ ಪೂರ್ವಜರ ಋಣ ತೀರಿಸಲು ಅನ್ನ ನೀಡುವ ಸಂಪ್ರದಾಯವಿದೆ. ಈ ಸಂಪ್ರದಾಯ ಮಾಡಡಿದ್ದರೆ ಈ ಪೀಳಿಗೆಯ ಜನರು ಸಮಸ್ಯೆಗಳ ಎದುರಿಸುತ್ತಾರೆ ಎಂದು ಕೂಡ ಹೇಳಲಾಗಿದೆ.
ವಿಷ್ಣುಪಾದ ದೇವಸ್ಥಾನದೊಳಗಿನ ಕಲ್ಲಿನ ಮೇಲೆ ಅಚ್ಚೊತ್ತಿರುವ ಭಗವಾನ್ ವಿಷ್ಣುವಿನ ಹೆಜ್ಜೆಗುರುತು ಈ ಪ್ರದೇಶವನ್ನು ಪವಿತ್ರಗೊಳಿಸುತ್ತದೆ ಎಂಬ ನಂಬಿಕೆ ಇದೆ. ವಿಷ್ಣುಪಾದ ದೇವಸ್ಥಾನದಲ್ಲಿ ಪಿಂಡ ದಾನ ಮಾಡುವುದರಿಂದ ಅಗಲಿದ ಪೂರ್ವಜರು ಸಂತೃಪ್ತರಾಗುತ್ತಾರೆ ಎಂದು ನಂಬಲಾಗಿದೆ. ಇಲ್ಲಿ ಶ್ರಾದ್ಧವನ್ನು ಅರ್ಪಿಸುವುದರಿಂದ ಪೂರ್ವಜರಿಗೆ ಪುನರ್ಜನ್ಮದ ಚಕ್ರವನ್ನು ಮುರಿಯುವ ಮೂಲಕ ಮೋಕ್ಷ ಪಡೆಯುತ್ತಾರೆ ಎಂದು ಕೂಡ ಹೇಳಲಾಗಿದೆ.



Click it and Unblock the Notifications
