Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಡಿಜಿಟಲ್ ಅರೆಸ್ಟ್ ತಡೆಯಲು 3 ಸೂತ್ರ ವಿವರಿಸಿದ ಪ್ರಧಾನಿ ಮೋದಿ..! ಏನದು?
ಇತ್ತೀಚಿಗೆ ಆನ್‌ಲೈನ್ ವಂಚನೆ ಪ್ರಕರಣಗಳ ನಾವು ಹೆಚ್ಚು ಹೆಚ್ಚು ನೋಡುತ್ತಿದ್ದೇವೆ. ಅದರಲ್ಲೂ ಆನ್‌ಲೈನ್ ಪೊಲೀಸ್ ಹೆಸರಲ್ಲಿ ಹೆದರಿಸಿ ಹಣ ಗಳಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ರೀತಿಯ ವಿಧಾನಕ್ಕೆ ಆನ್‌ಲೈನ್ ಅರೆಸ್ಟ್ ಎನ್ನಲಾಗುತ್ತಿದೆ. ಈ ರೀತಿಯ ಪ್ರಕರಣಗಳು ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ. ಈ ಕುರಿತು ಜನರಲ್ಲಿ ಅರಿವು ಇಲ್ಲದ ಕಾರಣ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಸೈಬರ್ ಕ್ರೈಮ್ ವಿಭಾಗದಲ್ಲಿ ಈ ಡಿಜಿಟಲ್ ಅರೆಸ್ಟ್ ಕುರಿತ ಹಲವು ಪ್ರಕರಣಗಳು ದಾಖಲಾಗುತ್ತಲೇ ಇವೆ. ಸಿಬಿಐ, ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಜನರಿಂದ ಹಣ ಕೀಳುತ್ತಲೇ ಇದ್ದಾರೆ. ಆಧ್ರೆ ಈಗ ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 115ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಭಾರತದಲ್ಲಿ ಡಿಜಿಟಲ್ ಅರೆಸ್ಟ್‌ಗೆ ಜಾಗವೇ ಇಲ್ಲ ಎಂದಿದ್ದಾರೆ.

ಕಾನೂನಿನಲ್ಲಿ ಡಿಜಿಟಲ್ ಬಂಧನದಂತಹ ವ್ಯವಸ್ಥೆ ಇಲ್ಲ, ಇದು ಕೇವಲ ವಂಚನೆ, ಇದು ಅಪರಾಧಿಗಳ ಕೆಲಸ ಎಂದು ನಾನು ಮತ್ತೊಮ್ಮೆ ಹೇಳುತ್ತೇನೆ. ಇದರಲ್ಲಿ ತೊಡಗಿರುವವರು ಸಮಾಜದ ಶತ್ರುಗಳಾಗಿದ್ದಾರೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ಈ ವಂಚನೆಗಳ ವಿರುದ್ಧ ವಿವಿಧ ತನಿಖಾ ಸಂಸ್ಥೆಗಳು ಸರ್ಕಾರದ ಜೊತೆಗೆ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾವು ಈ ವಂಚನೆಯಿಂದ ದೂರ ಇರಲಿ 3 ಹಂತ ಪಾಲಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ. ಅವರು ನಿಮ್ಮ ಹಂತ ಹಂತವಾಗಿ ಚಾಲದಲ್ಲಿ ಬೀಳಿಸಿಕೊಳ್ಳುತ್ತಾರೆ. ಆದ್ರೆ ಇದಕ್ಕೆ ನಾವು 3 ಹಂತಗಳ ಪಾಲಿಸಬೇಕು ಎಂದಿದ್ದಾರೆ. ನಿಲ್ಲಿಸಿ, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ. ಈ ಮೂರು ಸೂತ್ರಗಳನ್ನು ಪಾಲಿಸಿದರೆ ಇಂತಹ ಜಾಲದಿಂದ ನಾವು ಪಾರಾಗಬಹುದು ಎಂದಿದ್ದಾರೆ.
ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಅವರು ಆರ್‌ಬಿಐ, ಸಿಐಡಿ, ನಾರ್ಕೋಟಿಕ್ಸ್ ಅಧಿಕಾರಿಗಳು ಎಂದು ಬಿಂಬಿಸುತ್ತಾರೆ. ನಿಮ್ಮಲ್ಲಿ ವಿಶ್ವಾಸ ಮೂಡುವಂತೆ ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಿಮಗೆ ಎಂದಾದರೂ ಈ ರೀತಿಯ ಕರೆ ಬಂದರೆ ಭಯಪಡಬೇಡಿ. ಯಾವುದೇ ತನಿಖಾ ಸಂಸ್ಥೆಯು ಫೋನ್ ಅಥವಾ ವೀಡಿಯೊ ಕರೆ ಮೂಲಕ ಅಂತಹ ವಿಚಾರಣೆಯನ್ನು ಮಾಡುವುದಿಲ್ಲ ಎಂದು ನೀವು ತಿಳಿದಿರಬೇಕು, ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ರೆಕಾರ್ಡಿಂಗ್ ಮಾಡಿ, ಯಾವುದೇ ಸರ್ಕಾರಿ ಸಂಸ್ಥೆಗಳು ಫೋನ್‌ನಲ್ಲಿ ಇಂತಹ ಬೆದರಿಕೆಗಳನ್ನು ನೀಡುವುದಿಲ್ಲ ಅಥವಾ ಅವರು ಹಣಕ್ಕೆ ಬೇಡಿಕೆಯಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಈ ವಂಚನೆಯಿಂದ ಪಾರಾಗಲು ಜಾಗೃತಿ ವಹಿಸುವುದು ಮೊದಲ ಕಾರ್ಯವಾಗಬೇಕಿದೆ ಎಂದಿದ್ದಾರೆ.
ಏನಿದು ಡಿಜಿಟಲ್ ಅರೆಸ್ಟ್.?
'ಡಿಜಿಟಲ್ ಅರೆಸ್ಟ್ ಎಂಬುದು ಹೊಸ ವಿಧಾನದ ಸೈಬರ್ ವಂಚನೆಯಾಗಿದೆ. ಇಲ್ಲಿ ವಂಚಕರು ನಿಮಗೆ ನೇರವಾಗಿ ಭೇಟಿಯಾಗುವುದಿಲ್ಲ. ಅಥವಾ ಕರೆ ಮಾಡುವುದಿಲ್ಲ. ಇಲ್ಲಿ ವಿಡಿಯೋ ಕರೆಯ ಮೂಲಕ ಸರ್ಕಾರಿ ಅಧಿಕಾರಿಗಳು ಎಂದು ಪರಿಚಯ ಮಾಡಿಕೊಂಡು ನಿಮ್ಮ ದೂರವಾಣಿ ಸಂಖ್ಯೆಯಿಂದ ವಂಚನೆಗಳಾಗುತ್ತಿವೆ ಎಂಬ ಸುಳ್ಳು ಮಾಹಿತಿ ನಿಮ್ಮ ಬಳಿ ಹಂಚಿಕೊಳ್ಳುತ್ತಾರೆ.
ಹಾಗೆ ಈ ಕೂಡಲೆ ನಿಮ್ಮ ಮೇಲೆ ವಿಚಾರಣೆ ನಡೆದು ಪ್ರಕರಣ ದಾಖಲಾಗುತ್ತದೆ, ಇದಕ್ಕಾಗಿ ನೀವು ಪೊಲೀಸ್ ಠಾಣೆಗೆ ಹಾಜರಾಗಬೇಕು ಎನ್ನುತ್ತಾರೆ. ಹಾಗೆ ನಿಮ್ಮ ಬ್ಯಾಂಕ್ ಖಾತೆಯ ಮೇಲೆ ನಾವು ಮೇಲ್ವಿಚಾರಣೆ ಮಾಡಬೇಕಿದೆ. ನೀವು ಆರ್‌ಬಿಐ ಖಾತೆಗೆ ನಿಮ್ಮ ಹಣ ವರ್ಗಾಯಿಸಬೇಕಾಗುತ್ತದೆ ಎಂಬ ಮಾಹಿತಿ ಹಂಚಿಕೊಂಡು ಒಂದಿಷ್ಟ ಹಣವನ್ನು ಹಾಕಿಸಿಕೊಳ್ಳುತ್ತಾರೆ. ಆದ್ರೆ ಈ ಹಣ ಮತ್ತೆಂದು ವಾಪಾಸು ಬರುವುದಿಲ್ಲ.



Click it and Unblock the Notifications