Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಹಾಡಿಗೆ ಕಣ್ಣೀರಿಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು: ಕಣ್ಣೀರ ಹಿಂದಿದೆ ಹೃದಯ ಹಿಂಡುವ ಕಥೆ!
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹುಟ್ಟುಹಬ್ಬದ ದಿನದಂದು ವಿಶೇಷ ಚೇತನ ಮಕ್ಕಳ ಹಾಡು ಕೇಳಿ ಅವರು ಭಾವುಕರಾಗಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ತಮ್ಮ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದು, ಈ ವೇಳೆ ಪ್ರತಿಭಾನ್ವಿತ ಮಕ್ಕಳ ಹಾಡಿಗೆ ಭಾವುಕರಾದರು.
ಅವರು ತಮ್ಮ ಹುಟ್ಟುಹಬ್ಬವನ್ನು ದೃಷ್ಟಿ ವಿಕಲಚೇತನ ಮಕ್ಕಳೊಂದಿಗೆ ಆಚರಿಸಲು ಮುಂದಾದರು. ದೃಷ್ಟಿ ವಿಕಲಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆಯ ಅನೇಕ ದೃಷ್ಟಿಹೀನ ವಿದ್ಯಾರ್ಥಿಗಳು ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹಾಡು ಹಾಡಿದರು. ಬಾರ್ ಬಾರ್ ದಿನ್ ಯೇ ಆಯೇ ಎಂಬ ಹಿಂದಿ ಹಾಡಿನ ಮೂಲಕ ರಾಷ್ಟ್ರಪತಿ ಮುರ್ಮು ಅವರಿಗೆ ಶುಭ ಕೋರಿದರು.

ಮಕ್ಕಳ ಮುದ್ದಾದ ಈ ಹಾಡು ಕೇಳಿದ ಮುರ್ಮು ಅವರು ವೇದಿಕೆ ಮೇಲೆ ಕಣ್ಣೀರಿಟ್ಟರು. ಮಕ್ಕಳ ವಿಶೇಷ ಚೇತನ ಮಕ್ಕಳಾದರು ಕೂಡ ಅವರ ಧ್ವನಿ ಕೇಳಿದ ಅವರು ಭಾವುಕರಾದರು. ಮೂರು ದಿನಗಳ ಡೆಹ್ರಾಡೂನ್ ಪ್ರವಾಸದಲ್ಲಿರುವ ಮುರ್ಮು ಅವರನ್ನು ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ವಾಗತಿಸಿದ್ದರು.
ಈ ಪ್ರವಾಸದ ಸಮಯದಲ್ಲೇ ದ್ರೌಪದಿ ಮುರ್ಮು ಅವರ ಹುಟ್ಟು ಹಬ್ಬ ಸಹ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಈ ನಡುವೆ 100ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಅವರಿಗಾಗಿ ಹಾಡು ಹಾಡಿದ್ದರು. ಈ ಸಮಯದಲ್ಲಿ ಮುರ್ಮು ಅವರು ಭಾವುಕರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ಎಕ್ಸ್‌ನ 'theprayagtiwari' ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಇದಕ್ಕೆ ಪ್ರತಿಕ್ರಿಯಿಸಿರುವುದು ನೋಡಬಹುದು. ಹಲವರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆ ದ್ರೌಪದಿ ಮುರ್ಮು ಅವರ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಚಿನ್ನದಂತಗ ಹೃದಯವಿದೆ, ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಅವರು ತಮ್ಮ ಮಕ್ಕಳನ್ನು ನೆನಪಿಸಿಕೊಂಡಿರಬಹುದು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಅವರು ಬಹಳ ಕಷ್ಟದ ಕುಟುಂಬದ ಹಿನ್ನೆಲೆಯಿಂದ ಬಂದಿರುವವರು, ಹೀಗಾಗಿ ಮಕ್ಕಳ ಕಷ್ಟಗಳ ನೆನೆದು ಅವರು ಕಣ್ಣೀರಿಟ್ಟಿದ್ದಾರೆ. ಭಾರತದಂತಹ ದೇಶಕ್ಕೆ ಇಂತಹ ಜನಪ್ರತಿನಿಧಿಗಳ ಅಗತ್ಯ ಬಹಳಷ್ಟಿದೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ವಿಶ್ವದ ಅತ್ಯಂತ ಶಕ್ತಿಶಾಲಿ ಅಧ್ಯಕ್ಷರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ವಿಡಿಯೋ ಈಗ ಬಹಳ ವೈರಲ್ ಆಗುತ್ತಿದೆ, ನೋಡಿದವರ ಕಣ್ಣಿನಲ್ಲೂ ನೀರು ತರಿಸುತ್ತಿದೆ.
ರಾಷ್ಟ್ರಪತಿ ಮುರ್ಮು ಜೀವನದಲ್ಲೂ ನಡೆದಿದೆ ಕಹಿ ಘಟನೆಗಳು
ದ್ರೌಪದಿ ಮುರ್ಮು ಅನೇಕ ವೈಯಕ್ತಿಕ ದುರಂತಗಳ ಅನುಭವಿಸಿದ್ದಾರೆ. ಹಲವು ರೀತಿಯ ಏಳು ಬೀಳುಗಳಿಂದ ಅವರು ಮೇಲೆ ಬಂದವರು. ಜೀವನದ ಉದ್ದಕ್ಕೂ ಸೋಲು, ನೋವು ನೋಡಿದವರು. 2009 ಮತ್ತು 2014 ರ ನಡುವೆ ಅವರು ತಮ್ಮ ಪತಿ, ಇಬ್ಬರು ಗಂಡು ಮಕ್ಕಳು, ತಾಯಿ ಮತ್ತು ಸಹೋದರನನ್ನು ಕಳೆದುಕೊಂಡರು. 2009 ರಲ್ಲಿ ಅವರ ಪುತ್ರ ಅನಾರೋಗ್ಯದಿಂದ ಮೃತಪಟ್ಟರು. ಹಾಗೆ ಪತಿ ಶ್ಯಾಮ್ ಚರಣ್ ಮುರ್ಮು 2014ರಲ್ಲಿ ಹೃದಯಾಘಾತದಿಂದ ಮೃತಪಟ್ಟರು.
2012ರಲ್ಲಿ ದ್ರೌಪದಿ ಮುರ್ಮು ಎರಡನೇ ಪುತ್ರ ರಸ್ತೆ ಅಪಘಾತದಲ್ಲಿ ಮೃತಪಟ್ಟನು. ಇದು ಅವರನ್ನು ಕುಗ್ಗಿಸಿತ್ತು. ಬಳಿಕ ಮಗಳನ್ನು ವಿವಾಹ ಮಾಡಿಕೊಟ್ಟರು. ಅಲ್ಲದೆ ಅವರು ಕಷ್ಟದ ದಿನಗಳ ಎದುರಿಸಿದರು, ಕಡಿಮೆ ವೇತನದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೆ ಅವರು ಬಹಳ ಕಷ್ಟಪಟ್ಟು ಮೇಲೆ ಬಂದವರಾಗಿದ್ದು, ಬಳಿಕ ಭಾರತದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರು.



Click it and Unblock the Notifications