Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗ್ರಹಗತಿಗಳ ಆಧಾರ ಮೇಲೆ ಸಿದ್ದರಾಮಯ್ಯ ರಾಜಕೀಯ ವೃತ್ತಿ ಜೀವನ ಭವಿಷ್ಯ
ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡೆಯುತ್ತಿರುವ ಸ್ಪರ್ಧೆ ತುಂಬಾನೇ ರೋಚಕವಾಗಿದೆ. ಇವರಿಬ್ಬರ ರಾಶಿಭವಿಷ್ಯ ನೋಡಿದರೆ ಸಿದ್ಧರಾಮಯ್ಯ ಕಡೆ ಗ್ರಹಗತಿಗಳ ಪ್ರಭಾವ ಅನುಕೂಲಕರವಾಗಿದೆ.

ಸಿದ್ಧರಾಮಯ್ಯರವರ ಜನನ ಜನ್ಮ ದಿನಾಂಕ
ಆಗಸ್ಟ್ 3 1947 (ಕೆಲವು ಕಡೆ ಆಗಸ್ಟ್ 12 ಎಂಬುದಿದೆ, ಆದರೆ ಸಿದ್ಧರಾಮೋತ್ಸವ ಕಾರ್ಯಕ್ರಮವನ್ನು ಆಗಸ್ಟ್ 3ರಂದು ಆಯೋಜಿಸಲಾಗಿತ್ತು)
ಇದರ ಪ್ರಕಾರ ಜನ್ಮ ನಕ್ಷತ್ರ ಧನಿಷ್ಠ
ರಾಶಿ: ವೃಶ್ಚಿಕ ರಾಶಿ
ಜನನ ಸ್ಥಳ: ಮೈಸೂರು
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಸೂರ್ಯ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪಾಲುದಾರರ ಜೊತೆಗಿನ ಸಂಬಂಧ ಹಾಳಾಗಬಹುದು. ಮುಖ್ಯಮಂತ್ರಿ ಪಟ್ಟ ಸಿದ್ಧರಾಮಯ್ಯರವರಿಗೆ ದೊರಕಿದರೆ ಡಿಕೆಶಿಗೆ ಅಸಮಧಾನ ಹೆಚ್ಚಾಗಲಿದೆ, ಈ ಅವಧಿಯಲ್ಲಿ ವೃತ್ತಿಪರ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುವುದು. ಆದರೆ ಸ್ಥಾನಮಾನ ಹೆಚ್ಚಾಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ.
ವೃಶ್ಚಿಕ ರಾಶಿ ಮೇಲೆ ಗುರುವಿನ ಪ್ರಭಾವ ಹೇಗಿದೆ?
ಗುರು ವೃಶ್ಚಿಕ ರಾಶಿಯವರ 6ನೇ ಮನೆಯಲ್ಲಿರುವುದರಿಂದ ಈ ಅವಧಿ ಸಿದ್ಧರಾಮಯ್ಯ ಅವರಿಗೆ ಅನುಕೂಲಕರವಾಗಿದೆ. ಹಾಗಂತ ತುಂಬಾ ಅನುಕೂಲಕರ ಎಂದು ಹೇಳಲು ಸಾಧ್ಯವಿಲ್ಲ, ಕೆಲವು ಅಡೆತಡೆ ಎದುರಾಗುವುದು. ಆದರೂ ಖಂಡಿತವಾಗಿಯೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಿಂದ, ಕ್ರಮೇಣ ಪರಿಸ್ಥಿತಿಯು ನಿಮ್ಮ ಪರವಾಗಿ ತಿರುಗುತ್ತದೆ ಮತ್ತು ನವೆಂಬರ್-ಡಿಸೆಂಬರ್‌ನಲ್ಲಿ ರಾಜಕೀಯದಲ್ಲಿ ಮತ್ತಷ್ಟು ಹೆಸರು ಗಳಿಸಲು ಸಾಧ್ಯವಾಗುವುದು.
ಕುಂಭ ರಾಶಿಯಲ್ಲಿ ಶನಿ ಸಂಚಾರ
ಇನ್ನು ಶನಿಯ ಸ್ಥಾನ ನೋಡುವುದಾದರೆ ಶನಿ ನಾಲ್ಕನೇ ಮನೆಯಲ್ಲಿ ಇರುವುದರಿಂದ ಈ ಸಂಚಾರ ನಿಮಗೆ ಅಷ್ಟು ಅನುಕೂಲಕರವಾಗಿಲ್ಲ.ಶನಿ ದೆಸೆಯಿಂದ ಮಾನಸಿಕ ಒತ್ತಡ ಹೆಚ್ಚಿರಲಿದೆ. ಚುನಾವಣೆ ಫಲಿತಾಂಶ ಖುಷಿ ನೀಡಿದರೂ ಸಿಎಂ ಪಟ್ಟದ ಹೋರಾಟದಿಂದಾಗಿ ಸಿದ್ಧರಾಮಯ್ಯರವರ ಮಾನಸಿಕ ಒತ್ತಡ ಹೆಚ್ಚಾಗಿದೆ. ಶನಿಯ ಈ ಸ್ಥಾನದಿಂದಾಗಿ ತುಂಬಾ ಮಾನಸಿಕ ಒತ್ತಡ ಅನುಭವಇಸಬೇಕಾಗುತ್ತದೆ. ಕಾರ್ಯಗಳಲ್ಲಿ ವಿಳಂಬದಿಂದಾಗಿ ನಿಮ್ಮ ಮನಸ್ಸು ಕಿರಿಕಿರಿಯುಂಟುಮಾಡುತ್ತದೆ.
ಈ ಮೂರು ಪ್ರಮುಖ ಗ್ರಹಗತಿಗಳ ಆಧಾರದ ಮೇಲೆ ಹೇಳುವುದಾದರೆ ಸಿದ್ಧರಾಮಯ್ಯರವರ ರಾಜಕೀಯ ಭವಿಷ್ಯದಲ್ಲಿ ಮಿಶ್ರಫಲ. ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅಡೆತಡೆಗಳು ಉಂಟಾಗುವುದು. ಆದರೂ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ, ಸಿದ್ಧರಾಮಯ್ಯ ರಾಶಿಫಲ ನೋಡುವುದಾದರೆ ಅವರಿಗೆ ಸಿಎಂ ಪಟ್ಟ ಒಲಿದು ಬರಲಿದೆ, ಆದರೆ ಸವಾಲುಗಳು ತುಂಬಾನೇ ಇದೆ.



Click it and Unblock the Notifications
