Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವಯನಾಡ್ ದುರಂತದಲ್ಲಿ ನೂರಾರು ಜನರ ರಕ್ಷಣೆ ಮಾಡಿ ಅಮರರಾದರು ಪ್ರಜೇಶ್
ಪ್ರಜೇಶ್.. ಈ ಹೆಸರು ಹೇಳಿ ವಯನಾಡ್‌ನ ಜನತೆ ಕಣ್ಣೀರು ಹಾಕುತ್ತಿದ್ದರೆ, ಆತನ ಸ್ನೇಹಿತರಂತೂ ಇಲ್ಲಿನ ಹೀರೋ ಅವನು ಎಂದು ಹೆಮ್ಮೆಯಿಂದ ಹೇಳುವಾಗ ಅವರಿಗೆ ಕಣ್ಣೀರು ತಡೆಹಿಡಿಯೋಕೆ ಆಗ್ತಾ ಇಲ್ಲ. ಜನರ ನೋವಿಗೆ ಸ್ಪಂದಿಸಿದ ಜನರ ರಕ್ಷಣೆಗೆ ತನ್ನ ಪ್ರಾಣವನ್ನು ಪಣಕಿಟ್ಟ ಆ ವ್ಯಕ್ತಿಯನ್ನು ಮರೆಯೋಕೆ ಆ ಭಾಗದ ಜನರಿಗೆ ಎಂದೆಂದಿಗೂ ಸಾಧ್ಯವಿಲ್ಲ, ಏಕೆಂದರೆ ಪ್ರಜೇಶ್‌ನಿಂದಾಗಿ ನೂರಾರು ಜೀವಗಳು, ಎದ್ದು ನಡೆದಾಡುವುದಕ್ಕೆ ಸಾಧ್ಯವಿಲ್ಲದ ರೋಗಿಗಳು ಜೀವ ಉಳಿಸಿಕೊಳ್ಳಲು ಸಾಧ್ಯವಾಗಿದೆ, ಆದರೆ ಆ ಕ್ರೂರಿ ವಿಧಿ ಪ್ರಜೇಶ್‌ನ ಜೀವ ತೆಗೆದಿದೆ.

ಯಾರು ಈ ಪ್ರಜೇಶ್, ಇವರು ಈ ಕೇರಳದ ಅಮರ ಹೀರೋ ಆದದ್ದು ಹೇಗೆ?
ಪ್ರಜೇಶ್ ಚೂರಲ್‌ಮಲೆಯ ಯುವಕ, ಎಲ್ಲಾ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದ, ಆರ್‌ಎಸ್‌ಎಸ್‌ನ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದ, ಯಾರೇ ಏನೇ ಕಷ್ಟ ಎಂದರು ಅವರಿಗೆ ತನ್ನ ಕೈಯಿಂದಾಗುವ ಪ್ರಜೇಶ್‌ನ ಕಂಡರೆ ಪ್ರೀತಿ, ಹೀಗಾಗಿಯೇ ವಯನಾಡ್‌ನಲ್ಲಿ ಮೊದಲ ಗುಡ್ಡ ಕುಸಿತಾದಾಗ ಜನರು ಪ್ರಜೇಶ್‌ನ ಸಹಾಯ ಕೋರಿದ್ದಾರೆ, ಪ್ರಜೇಶ್ ಕೂಡ ಅಷ್ಟೇ ಹಿಂದು ಮುಮದು ಯೋಚಿಸಿದೆ ಜನರ ಸಹಾಯಕ್ಕೆ ಬಂದಿದ್ದಾರೆ. ಅ ಗುಡ್ಡಗಾಡಿನಲ್ಲಿನಲ್ಲಿ ತನ್ನ ಜೀಪ್ ಓಡಿಸಿ ಅದರಲ್ಲಿ ಎಷ್ಟು ಜನ ಸಾಧ್ಯವೋ ಅಷ್ಟು ಜನರನ್ನು ತುಂಬಿ ಸುರಕ್ಷತೆ ತಾಣಕ್ಕೆ ಬಿಟ್ಟು ಬರುತ್ತಿದ್ದರು. ಈರೀತಿ 9-10 ಟ್ರಿಪ್ ಹೊಡೆದಿದ್ದಾರೆ.
ತನ್ನ ಸ್ನೇಹಿತರಿಗೆ ಕರೆ ಮಾಡಿ ನೀವು ನಿದ್ದೆ ಮಾಡಿದ್ದು ಸಾಕು, ಈ ಭಾಗದಲ್ಲಿ ಗುಡ್ಡ ಕುಸಿಯುತ್ತಿದೆ ಜನರ ನೆರವಿಗೆ ಬನ್ನಿ ಎಂದು ಕರೆದಿದ್ದಾರೆ. ಅಲ್ಲದೆ ಪ್ರತಿಬಾರಿ ಟ್ರಿಪ್ ಹೊಡೆಯುವಾಗಲೂ ತನ್ನ ಸ್ನೇಹಿತರಿಗೆ ಕರೆ ಮಾಡಿ ಬೇಗ ಬನ್ನಿ ಈಗ ನಾನು ಈ ಸ್ಥಳದಿಂದ ಜನರನ್ನು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದೆಲ್ಲಾ ಮಾಹಿತಿ ನೀಡಿದ್ದಾರೆ.
ಅಲ್ಲಿಯ ನಾಸಿರ್ ಬಿ ಎರ್ಕಾಡನ್ ಹಾಗೂ ಅವರ ಪತ್ನಿ ರೆಜಿನಾ ಅಪಾಯದಲ್ಲಿದ್ದಾರೆ ಅವರಿಗೆ ಮನೆಯಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ, ರಕ್ಷಣೆ ಮಾಡಿ ಎಂದು ಕರೆ ಬರುತ್ತದೆ. ಅವರ ರಕ್ಷಣೆಗೆ ಪ್ರಜೇಶ್ ಹೋಗಿದ್ದಷ್ಟೇ, ಈ ವಿಷಯವನ್ನು ಫೋನ್‌ನಲ್ಲಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಹೇಳುತ್ತಿದ್ದರು, ಅವರ ಸ್ನೇಹಿತ ಫೋನ್‌ನಲ್ಲಿಯೇ ಇದ್ದರು, ಅತ್ತ ಕಡೆಯಿಂದ ದೊಡ್ಡ ಶಬ್ದ ಕೇಳುತ್ತದೆ, ಮತ್ತೆ ಪ್ರಜೇಶ್ ಮಾತು ಕೇಳಿಸಲಿಲ್ಲ.
ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗುತ್ತಿದ್ದಾಗ ಅವರ ಕೈಯೊಂದು ಮೇಲಕ್ಕಿ ಬಂತು, ಆ ವ್ಯಕ್ತಿ ಕೈಯಲ್ಲಿದ್ದ ಟಾರ್ಚ್ ಬಿಟ್ಟಿರಲಿಲ್ಲ, ಟಾರ್ಚ್ ಉರಿಯುತ್ತಲೇ ಇತ್ತು ಎಂದು ಆ ದೃಶ್ಯ ನೋಡಿದ ಬೇರೆ ವ್ಯಕ್ತಿಗಳು ಹೇಳಿದ್ದಾರೆ, ಆ ಕೈ ಬೇರೆ ಯಾರದ್ದೂ ಅಲ್ಲ ನಮ್ಮ ಪ್ರಜೇಶ್‌ನದ್ದೇ ಎಂದು ಸ್ನೇಹಿತರು ಕಣ್ಣೀರು ಹಾಕುತ್ತಿದ್ದಾರೆ.
ಏಕೆಂದರೆ ಸ್ನೇಹಿತನ ಕೈಯಲ್ಲಿ ದೊಡ್ಡ ಟಾರ್ಚ್ ಇತ್ತು ಮೊದಲ ಬಾರಿ ಗುಡ್ಡ ಕುಸಿದಾಗ ಕರೆಂಟ್ ಹೋಗಿತ್ತು, ತನ್ನ ಕೈಯಲ್ಲಿದ್ದ ಟಾರ್ಚ್ ಬೆಳಕಿನಲ್ಲಿಯೇ ಜನರ ಪ್ರಾಣ ರಕ್ಷಣೆ ಮಾಡಿದ್ದರು, ಪ್ರಜೇಶ್ ಜೀಪ್ ನಿಲ್ಲಿಸಿ ನಾಸಿರ್ ಅವರ ಮನೆ ಪಕ್ಕ ಬಂದಿದ್ದೇನೆ ಎಂದು ಸ್ನೇಹಿತನಿಗೆ ಫೋನ್ ಮಾಡಿ ವಿವರಿಸುತ್ತಲೇ ಇನ್ನೇನು ನಾಸಿರ್ ಕುಟುಂಬವನ್ನು ರಕ್ಷಣೆ ಮಾಡಬೇಕು ಅಷ್ಟರಲ್ಲಿ ಎರಡನೇ ಭಾರಿ ಬಾರೀ ಗುಡ್ಡ ಕುಸಿತ ಉಂಟಾಗಿದೆ, ಅದರಲ್ಲಿ ಮತ್ತಷ್ಟು ಜನರು ಕೆಸರು ನೀರಿನಲ್ಲಿ ಕೊಚ್ಚಿ ಹೋದರು, ಜನರ ಪ್ರಾಣ ರಕ್ಷಣೆಗೆ ಬಂದಿದ್ದ ಪ್ರಾಜೇಶ್‌ನ ಪ್ರಾಣವೂ ಹಾರಿ ಹೋಯ್ತು....
ಪ್ರಾಣಗಳನ್ನು ಕಳೆದುಕೊಂಡ ಶರತ್
ಪ್ರಜೇಶ್‌ನಂತೆಯೇ ಶರತ್ ಎಂಬ ಬಿಜೆಪಿ ಕಾರ್ಯಕರ್ತ ಜನರ ರಕ್ಷಣೆ ಮಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ.
ಇಂಥ ಹೀರೋಗಳನ್ನು ಪ್ರತಿ ದುರಂತದಲ್ಲಿ ಕಾಣಬಹುದು
ಎಲ್ಲರೂ ಸ್ವಾರ್ಥಿಗಳಲ್ಲ, ನಾನು-ನನ್ನ ಕುಟುಂಬ ಅಂತ ಇರುವವರ ಮಧ್ಯ ಬೇರೆಯವರ ನೋವಿಗೆ ಸ್ಪಂದಿಸುವ ಎಷ್ಟೋ ಜೀವಗಳು ನಮ್ಮ ನಡುವೆ ಇದ್ದಾರೆ. ಪ್ರಜೇಶ್‌ನ ಕಾರ್ಯ ಯುವಕರಿಗೆ ಸ್ಪೂರ್ತಿ, ಎಂದೆಂದಿಗೂ ಜನರ ಮನಸ್ಸಿನಲ್ಲಿ ಹೀರೋ ಅಗಿಯೇ ಉಳಿಯುತ್ತಾರೆ ಪ್ರಜೇಶ್... ಪ್ರಜೇಶ್ ಇಲ್ಲದಿರಬಹುದು.. ಆದರೆ ಪ್ರಜೇಶ್ ಕಾರ್ಯಕ್ಕೆ ವಿ ಸಲ್ಯೂಟ್ ಯೂ ಪ್ರಜೇಶ್, ನಿಮ್ಮಂಥ ಒಳ್ಳೆಯ ಮನಸ್ಸಿನವರ ಸಂಖ್ಯೆ ಹೆಚ್ಚಾಗಲಿ.



Click it and Unblock the Notifications
