Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಭಾಸ್ ನಟನೆಯ ಕಲ್ಕಿ ತೆರೆಗೆ: ಪುರಾಣಗಳ ಕಲ್ಕಿ ಯಾರು.? ವಿಷ್ಣು ಕಲ್ಕಿ ಅವತಾರ ಎತ್ತುವುದು ಯಾವಾಗ?
ಭಾರತದ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 AD ತೆರೆಗಪ್ಪಳಿಸಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಲೇ ಇದೆ. ಸದ್ಯ ಪ್ರಭಾಸ್ ನಟನೆಯ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೂ ಮೊದಲು ಈ ಚಿತ್ರ ಗಮನ ಸೆಳೆಯಲು ಆರಂಭಿಸಿದ್ದು ಅದರ ಹೆಸರಿನಿಂದ ಕಲ್ಕಿ 2898 ಎಡಿ ಅಂದರೆ ಏನು? ಇದಕ್ಕೂ ಹಿಂದೂ ಪುರಾಣಗಳ ಕಲ್ಕಿ ಅವತಾರಕ್ಕೂ ಇರುವ ಸಂಬಂಧವೇನು ಎಂಬುದು ಕುತೂಹಲ ಮೂಡಿಸಿದೆ.
ಹಿಂದೂ ಧಾರ್ಮಿಕತೆ ಹಾಗೂ ಅಲ್ಲಿನ ಪುರಾಣಗಳ ಹಿನ್ನಲೆಯನ್ನು ತಿಳಿದಿದ್ದರೆ ಅಲ್ಲಿ ಕಲ್ಕಿ ಪಾತ್ರ ಬರುತ್ತದೆ ಈ ಕುರಿತು ಸಹ ನಿಮಗೆ ತಿಳಿದಿರಬಹುದು. ಕಲ್ಕಿ ಅವತಾರ ಭಗವಾನ್ ವಿಷ್ಣುವಿನ ಕೊನೆಯ ಅವತಾರ ಎಂದು ನಂಬಲಾಗಿದೆ. ಭೂಮಿಯಲ್ಲಿ ಅಥವಾ ಕಲಿಯುಗದಲ್ಲಿ ಪಾಪ ಕರ್ಮಗಳು ಹೆಚ್ಚಾಗಿ ಅಧರ್ಮ ತಾಂಡವವಾಡುವಾಗ ವಿಷ್ಣು ಕಲ್ಕಿ ಅವತಾರ ಎತ್ತಿ ಕಲಿಯುವ ಅಂತ್ಯ ಮಾಡುತ್ತಾನೆ ಎಂದು ನಂಬಲಾಗಿದೆ.

ಅಂದರೆ ನಾವಿಲ್ಲಿ ಕಲ್ಕಿಯನ್ನು ದುಷ್ಟರ ಸಂಹಾರ ಅಂತಲೂ ಭಾವಿಸಬಹುದು. ಕಲ್ಕಿ ಅವತಾರ ಎಂದರೆ ಅಲ್ಲಿ ಅಧರ್ಮ ನಾಶಕ್ಕೆ ತಾಳುವ ಅವತಾರ, ಅಲ್ಲಿ ನಾಯಕನ ದೃಷ್ಟಿಯಲ್ಲಿ ಆತ ಕಲ್ಕಿ ಅವತಾರ ಎತ್ತಬಹುದು. ಕಲ್ಕಿ ಅವತಾರವು ವಿಷ್ಣುವಿನ 10ನೇಯ ಹಾಗೂ ಕೊನೆಯ ಅವತಾರ ಎಂದು ನಂಬಲಾಗಿದೆ. ಕೃತ ಕಾಲದಲ್ಲಿ ಕೊನೆಯ ಯುವವಾಗಿರುವ ಕಲಿಯುಗವು ಕಲ್ಕಿಯ ಆಗಮನದಿಂದ ಅಂತ್ಯವಾಗಲಿದೆ ಎಂದು ನಂಬಲಾಗಿದೆ.
ಹಾಗಾದ್ರೆ ಈ ಕಲ್ಕಿ ಯಾರು? ವಿಷ್ಣು ಕಲ್ಕಿ ಅವತಾರ ತಾಳುವುದು ಯಾವಾಗ? ಕಲಿಯುವ ಅಂತ್ಯದ ಸಮಯ ಯಾವಾಗ? ಕಲ್ಕಿ ಕಲಿಯುಗವನ್ನು ಅಂತ್ಯಗೊಳಿಸಿ ಸತ್ಯಯುಗದ ಸ್ಥಾಪನೆಗೆ ಮುಂದಾಗುತ್ತಾನಂತೆ. ಕಲಿ ಎಂದರೆ ಕೆಟ್ಟ ಯುವ ಅಂತಲೂ ಹೇಳಲಾಗುತ್ತದೆ. ಈ ಯುಗ ಅಂತ್ಯವಾಗಬೇಕಾದರೆ ಅದು ವಿಷ್ಣವಿನಿಂದ ಮಾತ್ರ ಸಾಧ್ಯವಂತೆ. ಅದರಲ್ಲೂ ಆತ ಕಲ್ಕಿ ಅವತಾರ ಎತ್ತಿ ಭೂಮಿಗೆ ಬರುತ್ತಾನಂತೆ. ಹೀಗಾದಾಗ ಮಾತ್ರ ಅಧರ್ಮ ನಾಶವಾಗಿ ಸತ್ಯಯುಗ ಆರಂಭವಾಗಲಿದೆಯಂತೆ.
ಸಂಸ್ಕೃತದಲ್ಲಿ ಕಲ್ಕಾ ಎಂಬ ಪದವು ಕೊಳಕು, ಕೊಳೆ ಎಂಬ ಅರ್ಥ ನೀಡುತ್ತದೆ. ಇಲ್ಲಿ ಕೊಳೆ ಅಂದರೆ ಅಧರ್ಮ, ಕೆಟ್ಟತನ ಎಂಬುದಾಗಿ ಅರ್ಥೈಸಬಹುದು. ಪ್ರಪಂಚವು ಅತ್ಯಂತ ಕಠೋರ ಘಟನೆಗಳಿಗೆ, ಅಮಾನವೀಯ ಕೃತ್ಯಗಳಿಗೆ ಒಳಗಾಗುತ್ತದೆ. ಅಲ್ಲಿ ಸತ್ಯ ನಾಶವಾಗಿರುತ್ತದೆ. ಅಧರ್ಮ ಸ್ಥಾಪನೆಗಾಗಿ ಅಲ್ಲಿ ದುಷ್ಟರು ಹುಟ್ಟಿಕೊಂಡಿರುತ್ತಾರೆ. ಇದನ್ನು ನಾಶ ಮಾಡಲು ಕಲ್ಕಿ ಅವತಾರ ತಾಳಬೇಕಂತೆ. ಹಲವಾರು ಪುರಾತನ ಗ್ರಂಥಗಳು ಪುರಾತನ ಕಲ್ಕಿಯ ಆಗಮನ ಮತ್ತು ಅವನ ಸಾಕಾರ ಅವಧಿಯನ್ನು ಉಲ್ಲೇಖಿಸಿವೆ. ವಿಷ್ಣು ಪುರಾಣವು ಕಲ್ಕಿಯ ಮೊದಲ ಉಲ್ಲೇಖವನ್ನು ಮಾಡಿದೆ ಎಂದು ನಂಬಲಾಗಿದೆ. ಬೌದ್ಧರ ಪವಿತ್ರ ಗ್ರಂಥ ಭಗವಾನ್ ಕಲ್ಕಿಯ ಕುರಿತಾದ ಭವಿಷ್ಯವಾಣಿಗಳನ್ನು ಒಳಗೊಂಡಿವೆ.
ಕಲಿಯುಗ ಕ್ರಿ. ಪೂ 3102ರಲ್ಲಿ ಆರಂಭವಾಯಿತು ಎಂದು ನಂಬಲಾಗಿದ್ದು, ಇದು 4,32,000 ವರ್ಷಗಳ ವರೆಗೂ ಮುಂದುವರೆಯುತ್ತದೆ. ಆದರೆ ಅದಕ್ಕು ಮೊದಲೇ ವಿಷ್ಣು ಕಲ್ಕಿ ಅವತಾರದಲ್ಲಿ ಈ ಯುಗವನ್ನು ನಾಶ ಮಾಡಿ ಸತ್ಯಯುವ ಸ್ಥಾಪಿಸುತ್ತಾನೆ ಎಂದು ಹೇಳಲಾಗುತ್ತದೆ, ಆತ ಸ್ವರ್ಣ ಖಚಿತ ಬಿಳಿ ಕುದುರೆಯ ಮೇಲೆ ಕುಳಿತು ಖಡ್ಗ ಝಳಪಿಸುತ್ತಾ ಆಗಮಿಸುತ್ತಾನೆ ಎಂಬ ವಾದವಿದೆ.
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಯಾಗಿದ್ದರು. ಈ ದೇವಾಲಯವನ್ನು ವಿಶ್ವದ ಅತ್ಯಂತ ವಿಶೇಷವಾದ ದೇವಾಲಯವೆಂದು ಪರಿಗಣಿಸಲಾಗಿದೆ ಏಕೆಂದರೆ ಇದು ದೇವರ ದೇವಾಲಯವನ್ನು ಅವನ ಅವತಾರಕ್ಕಿಂತ ಮೊದಲು ಸ್ಥಾಪಿಸಿದ ಮೊದಲ 'ಧಾಮ' ಎಂದು ಹೇಳಲಾಗುತ್ತದೆ. ಈ ದೇವಾಲಯದ ಹತ್ತು ಗರ್ಭಗುಡಿಗಳು ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತಿನಿಧಿಸುತ್ತವೆ.
ಕಲ್ಕಿ ಧಾಮ್ ದೇವಾಲಯವನ್ನು ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಪೂರ್ಣಗೊಳ್ಳಲು ಸುಮಾರು ಐದು ವರ್ಷಗಳನ್ನು ತೆಗೆದುಕೊಳ್ಳುತ್ತದೆ.



Click it and Unblock the Notifications











