Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗಣೇಶ ಚತುರ್ಥಿಯಂದು ಪಠಿಸಲು ಶ್ರೀ ಗಣಪತಿಯ ಪವರ್‌ಪುಲ್ ಮಂತ್ರಗಳು
ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು, ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಮಾಡಲಾಗುವುದು, ಏಕೆಂದರೆ ಗಣೇಶನನ್ನು ಆರಾಧನೆ ಮಾಡುವುದರಿಂದ ಎಲ್ಲಾ ವಿಘ್ನಗಳು ದೂರಾಗುವುದು. ಗಣೇಶನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಗಣಪ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಎಂಬ ಬಲವಾದ ನಂಬಿಕೆ ಗಣೇಶ ಹಬ್ಬ ಅಚರಿಸುವ ಭಕ್ತರಲ್ಲಿದೆ.
ಗಣೇಶನ ಶಕ್ತಿ ಎಂಬುವುದು ಆತನನ್ನು ಬಲವಾಗಿ ನಂಬಿದರೆ ಖಂಡಿತ ಅನುಭವಕ್ಕೆ ಬಂದೇ ಬರುತ್ತದೆ ಎಂದು ಹೇಳಲಾಗುವುದು. ಗನೇಶನ ಚತುರ್ಥಿಯಂದು ಈ ಪವರ್‌ಫುಲ್ ಮಂತ್ರ ಪಠಣೆ ಮಾಡುವುದರಿಂದ ಬದುಕಿನಲ್ಲಿನ ವಿಘ್ನಗಳು ದೂರಾಗುವುದು, ಕೆಲಸ-ಕಾರ್ಯಗಳಲ್ಲಿ ಪ್ರಗತಿ ಸಿಗುವುದು, ಆರ್ಥಿಕ ಸಮಸ್ಯೆಗಳು ದೂರಾಗುವುದು.
ಓಂ ಗಂ ನಮಃ'
ಇದು ಗಣಪತಿಯ ಬೀಜ ಮಂತ್ರವಾಗಿದೆ.ಈ ಮಂತ್ರ ಪಠಣೆ ಮಾಡುವುದರಿಂದ ಗಣಪತಿಯ ಅಶೀರ್ವಾದ ಸಿಗಲಿದೆ.

ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ"
ಗಣಪತಿ ದೇವಾಲಯಕ್ಕೆ ಹೋದಾಗ ಈ ಮಂತ್ರ ಬರೆದಿರುತ್ತಾರೆ.ಈ ಮಂತ್ರ ಪಠಣೆ ಮಾಡುವುದರಿಂದ ಎಲ್ಲಾ ಅಡೆತಡೆಗಳು ದೂರಾಗುವುದು, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.
ಪ್ರಣಮ್ಯ ಶಿರಸಾ ದೇವಂ ಗೌರೀ ಪುತ್ರಂ ವಿನಾಯಕಂ
ಜೀವನದ ಸವಾಲುಗಳನ್ನು ಎದುರಿಸುತ್ತಿದ್ದರೆ ಈ ಮಂತ್ರವನ್ನು ಪಠಣೆ ಮಾಡುವುದರಿಂದ ಸವಾಲುಗಳು ಎದುರಾಗುವುದು, ಈ ಮಂತ್ರ ಪಠನೆ ಮಾಡುವುದರಿಂದಸವಾಲುಗಳನ್ನು ಎದುರಿಸುವ ಶಕ್ತಿ ಸಿಗುವುದು, ಆತ್ಮವಿಶ್ವಾಸ ಹೆಚ್ಚಾಗುವುದು.
''ಓಂ ಶ್ರೀಂ ಗಂ ಸೌಭ್ಯಾಯ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ''
ಈ ಮಂತ್ರ ಪಠಣೆ ಮಾಡುವುದರಿಂದ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು, ಆರ್ಥಿಕವಾಗಿ ಪ್ರಯೊಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ಈ ಮಂತ್ರ ಪಠಣೆ ಮಾಡಿ.
ಔಂ ಏಕದಂತಾಯ ವಿದ್ಧಾಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಾಂತಿ ಪ್ರಚೋದಯಾತ್
ಇದು ಶ್ರೀ ಕೃಷ್ಣ ಗಾಯತ್ರಿ ಮಂತ್ರವಾಗಿದೆ, ಎಲ್ಲಾ ದೇವರುಗಳಿಗೆ ಒಂದೊಂದು ಗಾಯತ್ರಿ ಮಂತ್ರವಿದೆ, ಗಾಯತ್ರಿ ಮಂತ್ರ ಪಠಣೆ ಮಾಡುವುದರಿಂದ ಅವ್ಯಕ್ತ ಭಯ ದೂರಾಗುವುದು, ಬದುಕಿನಲ್ಲಿನ ಅಡೆತಡೆಗಳು ದೂರಾಗುವುದು.
ಓಂ ಗನ್ ಗಣಪತಯೇ ನಮಃ
ಈ ಸರಳ ಮಂತ್ರ ಪಠಣೆ ಮಾಡುವುದರಿಂದ ಗಣಪತಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ, ಎಲ್ಲಾ ಅಡೆತಡೆಗಳು ದೂರಾಗುವುದು
ಓಂ ನಮೋ ಸಿದ್ಧಿ ವಿನಾಯಕಾಯ ಸರ್ವ ಕಾರ್ಯ ಕರ್ತ್ರೇ ಸರ್ವ ವಿಘ್ನ
ಈ ಮಂತ್ರ ಪಠಣೆ ಮಾಡುವುದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು, ನಿಮ್ಮ ಸರ್ವ ಕಾರ್ಯಗಳಲ್ಲಿ ಯಶಸ್ಸು ದೊರೆಯಲು ಈ ಮಂತ್ರ ಪಠಣೆ ಮಾಡಿ.
ಗಣೇಶ ಮಂತ್ರ ಪಠಣೆ ಮಾಡುವುದು ಹೇಗೆ?
ಗಣೇಶನ ಮಂತ್ರ ಪಠಣೆ ಮಾಡಲು ಕಠಿಣ ನಿಯಮವೇನೂ ಇಲ್ಲ, ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ನಂತರ ಶುದ್ಧ ಮನಸ್ಸಿನಿಂದ ಮಂತ್ರವನ್ನು ಪಠಿಸಿದರೆ ಮಾತ್ರ ಮಂತ್ರ ಪರಿಣಾಮಕಾರಿಯಾಗುವುದು.
ಗಣೇಶ ಮಂತ್ರ ಪಠಣೆ ಮಾಡುವುದರಿಂದ ವಿಘ್ನಗಳು ದೂರಾಗುವುದು
ಮನೆಯಲ್ಲಿ ಸಂತೋಷ ನೆಮ್ಮದಿ ಇರಲಿದೆ
ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ
ಆರೋಗ್ಯ ಸಮಸ್ಯೆಗಳಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಗಣೇಶನನ್ನು ಭಕ್ತಿಯಿಂದ ಬೇಡಿದರೆ ಅದು ಈಡೇರುತ್ತೆ ಎಂಬ ನಂಬಿಕೆ ಬಲವಾಗಿದ್ದರೆ ಅದು ಕಂಡಿತ ನೆರವೇರುವುದು, ಅಂಥ ಪವಾಡ ಗಣೇಶ ಭಕ್ತರ ಬದುಕಿನಲ್ಲಿ ನಡೆದಿದೆ ಎಂಬುವುದು ಗಣೇಶ ಭಕ್ತರ ಬಳಿ ಕೇಳಿದರೆ ಖಂಡಿತ ಹೇಳುತ್ತಾರೆ, ಏಕೆಂದರೆ ಗಣಪನ ನಂಬಿದರೆ ಗಣಪ ನಮ್ಮ ಬದುಕಿನಲ್ಲಿ ಎಲ್ಲವೂ ಒಳಿತೇ ಮಾಡಲಿದೆ.



Click it and Unblock the Notifications





